ಬ್ರೇಕಿಂಗ್ ನ್ಯೂಸ್
10-11-20 04:29 pm Headline Karnataka News Network ಕ್ರೈಂ
ವಿಶಾಖಪಟ್ಟಣಂ, ನ.10 : ಪೊಲೀಸರ ಕಿರುಕುಳದಿಂದ ಬೇಸತ್ತ ಕುಟುಂಬವೊಂದು ಇಬ್ಬರು ಮಕ್ಕಳೊಂದಿಗೆ ರೈಲಿನಡಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಆಘಾತಕಾರಿ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ.
ನವೆಂಬರ್ 3 ರಂದು ಕರ್ನೂಲ್‍ನ ಪನ್ಯಂ ರೈಲ್ವೆ ನಿಲ್ದಾಣದ ಬಳಿ ಘಟನೆ ನಡೆದಿದೆ. ಶೇಕ್ ಅಬ್ದುಲ್ ಸಲಾಮ್(45), ಪತ್ನಿ ನೂರ್ ಜಹಾನ್(43), ಮಗ ದಾದಾ ಖಲಂದರ್ (9), ಮತ್ತು ಮಗಳು ಸಲ್ಮಾ (14) ಎಂದು ಸಾವಿಗೆ ಶರಣಾದವರು. ಪೊಲೀಸರ ಕಿರುಕುಳ ಆರೋಪದ ನಂತರ ಕುಟುಂಬ ಆತ್ಮಹತ್ಯೆ ಮಾಡಿಕೊಂಡಿದ್ದು, ಪ್ರಕರಣ ಸಂಬಂಧ ಇಬ್ಬರು ಪೊಲೀಸರನ್ನು ಬಂಧಿಸಲಾಗಿದೆ.
ಘಟನೆಗೇನು ಕಾರಣ?
ನಂದ್ಯಾಲ್ ಎಂಬಲ್ಲಿ ಆಭರಣದ ಅಂಗಡಿಯಲ್ಲಿ ಅಬ್ದುಲ್ ಸಲಾಮ್ ಕೆಲಸ ಮಾಡುತ್ತಿದ್ದರು. ಆಭರಣ ಕಳ್ಳತನದ ಆರೋಪವನ್ನು ಹೊರಿಸಿ ಕೆಲಸದಿಂದ ತೆಗೆದು ಹಾಕಿದ್ದು ಬಳಿಕ ಪೊಲೀಸರು ಶೇಕ್ ಅಬ್ದುಲ್ ಸಲಾಮ್‍ನನ್ನು ಬಂಧಿಸಿದ್ದರು. ಜಾಮೀನು ಪಡೆದು ಹೊರಬಂದ ಶೇಕ್, ಬಾಡಿಗೆ ಆಟೋ ಒಂದನ್ನು ಓಡಿಸುತ್ತಿದ್ದರು. ಆದರೆ, ಆಭರಣ ಅಂಗಡಿ ಮಾಲೀಕ ಮತ್ತು ಪೊಲೀಸರು ಪ್ರಕರಣದ ವಿಚಾರದಲ್ಲಿ ಕಿರುಕುಳ ಮುಂದುವರಿಸಿದ್ದರು. ಆಭರಣ ಕಳವು ಪ್ರಕರಣದಲ್ಲಿ ಶೇಕ್ ಅವರನ್ನು ಬಂಧಿಸಿ ಪೊಲೀಸರು ಮಾರಣಾಂತಿಕ ಹಲ್ಲೆ ನಡೆಸಿದ್ದರು. ಇದರಿಂದ ಮನನೊಂದ ಶೇಕ್ ಕುಟುಂಬ ಆತ್ಮಹತ್ಯೆಗೆ ಶರಣಾಗಿದೆ.
ನಂದ್ಯಾಲ್ ಐ ಟೌನ್ ಪೊಲೀಸರು ಸುಳ್ಳು ಪ್ರಕರಣ ರೂಪಿಸಿದ್ದಾರೆ. ರಕ್ಷಣೆಗೆ ಯಾರೂ ಬರದ ಕಾರಣ ಬುದುಕು ಮುಗಿಸುತ್ತಿದ್ದೇವೆ ಎಂದು ಹೇಳಿ ಕುಟುಂಬ ಲೈವ್ ವಿಡಿಯೋ ಮಾಡಿ ಆತ್ಮಹತ್ಯೆ ಮಾಡಿಕೊಂಡಿದೆ. ಕುಟುಂಬದ ಸಾವಿನ ನಂತರ ವಿಡಿಯೋ ವೈರಲ್ ಆಗಿದೆ. ಠಾಣೆಯ ಸರ್ಕಲ್ ಇನ್ಸ್ ಪೆಕ್ಟರ್ ಮತ್ತು ಮುಖ್ಯ ಪೇದೆಯನ್ನು ಬಂಧಿಸಲಾಗಿದೆ. ಸರ್ಕಲ್ ಇನ್ಸ್ ಪೆಕ್ಟರ್ ಸೋಮಶೇಖರ್ ರೆಡ್ಡಿ ಮತ್ತು ಮುಖ್ಯ ಕಾನ್‍ಸ್ಟೆಬಲ್ ಗಂಗಾಧರ್ ವಿರುದ್ಧ ಸೆಕ್ಷನ್ 306 (ಆತ್ಮಹತ್ಯೆಗೆ ಪ್ರಚೋದನೆ) 323 ಮತ್ತು 324 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಸಮಗ್ರ ತನಿಖೆ ನಡೆಸುವಂತೆ ಆಂಧ್ರಪ್ರದೇಶದ ಸಿಎಂ ವೈ.ಎಸ್.ಜಗನ್ಮೋಹನ್ ರೆಡ್ಡಿ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ.
Four members of a family from Visakhapatnam including two kids were found dead in a lodge under Dwaraka police station limits on Wednesday night in what appears to be a suicide pact. The deceased were identified as Bondam Applaraju (32), his wife Manasa (28), and children Keerthi (6) and Satwik (5).
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
21-04-25 02:13 pm
HK News Desk
No GST on UPI Payments: ಎರಡು ಸಾವಿರಕ್ಕಿಂತ ಮೇಲಿ...
20-04-25 08:42 pm
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
20-04-25 05:42 pm
Mangalore Correspondent
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
21-04-25 01:03 pm
Bangalore Correspondent
Karnataka DGP Om Prakash Murder, wife: ನಿವೃತ್...
20-04-25 10:52 pm
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm