ಬ್ರೇಕಿಂಗ್ ನ್ಯೂಸ್
27-09-23 11:09 pm HK News Desk ಕ್ರೈಂ
ಮಧ್ಯಪ್ರದೇಶ, ಸೆ.27: ಕ್ರೂರಿಗಳಿಂದ ಅತ್ಯಾಚಾರಕ್ಕೆ ಒಳಗಾದ 12 ವರ್ಷದ ಬಾಲೆಯೊಬ್ಬಳು ಸುರಿಯುತ್ತಿರುವ ರಕ್ತದ ನಡುವೆ, ಅರೆ ನಗ್ನ ಸ್ಥಿತಿಯಲ್ಲಿ ಬೀದಿ ಬೀದಿ ಅಲೆಯುತ್ತಾ ಸಹಾಯಕ್ಕಾಗಿ ಯಾಚಿಸುತ್ತಿದ್ದರೆ, ಒಬ್ಬರೇ ಒಬ್ಬರು ಆಕೆಯ ನೆರವಿಗೆ ಧಾವಿಸುವ ಕರುಣೆ ಹೊಂದಲಿಲ್ಲ. ಒಬ್ಬ ವ್ಯಕ್ತಿಯಂತೂ ಸಹಾಯ ಕೋರಿ ಬಂದ ಆಕೆಯನ್ನು ಅಲ್ಲಿಂದ ದೂರ ಹೋಗು ಎಂದು ಓಡಿಸಿದ್ದಾನೆ.
ಆಕೆಯ ಮೇಲೆ ಬರ್ಬರವಾಗಿ ಅತ್ಯಾಚಾರ ಎಸಗಿದ ದುಷ್ಟರಿಗೂ, ಅಸಹಾಯಕಳಾಗಿ ಅಲೆಯುತ್ತಿರುವ ಬಾಲಕಿಗೆ ನೆರವು ನೀಡಲು ಮುಂದಾಗದ ಜನರಿಗೂ ವ್ಯತ್ಯಾಸವಿದೆಯೇ ?
ಉಜ್ಜಯನಿಯಿಂದ ಸುಮಾರು 15 ಕಿಮೀ ದೂರದ ಬದ್ನಾಗರ್ ರಸ್ತೆಯ ಸಿಸಿಟಿವಿ ಕ್ಯಾಮೆರಾವೊಂದರಲ್ಲಿ ಈ ಅಪ್ರಾಪ್ತ ವಯಸ್ಸಿನ ಬಾಲಕಿಯ ಮನಕುವ ಯಾತನೆ ಸೆರೆಯಾಗಿದೆ. ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಬದ್ನಾಗರ್ ರಸ್ತೆಯ ದಂಡಿ ಆಶ್ರಮದ ಬಳಿ ಎಸೆದು ಹೋಗಲಾಗಿತ್ತು.
ಅರೆ ನಗ್ನಾವಸ್ಥೆಯಲ್ಲಿದ್ದ ಬಾಲಕಿ, ತನ್ನ ದೇಹದ ಉಳಿದ ಭಾಗವನ್ನು ಮುಚ್ಚಿಕೊಳ್ಳಲು ಸಾಹಸಪಟ್ಟಿದ್ದಾಳೆ. ಸಹಾಯಕ್ಕಾಗಿ ಕಂಡವರೆನ್ನಲ್ಲಾ ಬೇಡಿಕೊಂಡಿದ್ದಾಳೆ. ದೊಡ್ಡ ಮನೆಯ ಎದುರು ನಿಂತಿದ್ದ ವ್ಯಕ್ತಿ ಬಳಿ ಆಕೆಯ ಮಾನ ಮುಚ್ಚಲು ಸಹಾಯ ಮಾಡುವಷ್ಟೂ ಕರುಣೆ ಇರಲಿಲ್ಲ. ಆಕೆಯನ್ನು ಅಲ್ಲಿಂದ ಓಡಿಸಿದ್ದಾನೆ. ಸಮಾಜದ ಈ ಕ್ರೌರ್ಯ 1.7 ನಿಮಿಷದ ವಿಡಿಯೋದಲ್ಲಿ ಕಾಣಿಸಿದೆ.
ಬಾಲಕಿ ಬೀದಿ ಬೀದಿ ಅಲೆಯುತ್ತಾ ಕೊನೆಗೆ ಆಶ್ರಮವೊಂದನ್ನು ತಲುಪಿದ್ದಾಳೆ. ಅಲ್ಲಿದ್ದ ಅರ್ಚಕರೊಬ್ಬರು ಇದು ಲೈಂಗಿಕ ಹಿಂಸಾಚಾರ ಪ್ರಕರಣ ಎಂದು ಶಂಕಿಸಿ, ಆಕೆ ದೇಹವನ್ನು ಟವೆಲ್‌ನಿಂದ ಮುಚ್ಚಿ ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಆಕೆಯ ಸ್ಥಿತಿ ಗಂಭೀರವಾಗಿದೆ. ಹೀಗಾಗಿ ಹೆಚ್ಚಿನ ಚಿಕಿತ್ಸೆಗಾಗಿ ಇಂದೋರ್‌ಗೆ ಸಾಗಿಸುವಂತೆ ವೈದ್ಯರು ಸೂಚಿಸಿದ್ದರು. ಅದರಂತೆ ಇಂದೋರ್‌ಗೆ ಆಕೆಯನ್ನು ಕರೆದುಕೊಂಡು ಹೋಗಲಾಗಿದೆ. ವಿಪರೀತ ರಕ್ತಸ್ರಾವವಾಗಿರುವ ಆಕೆಗೆ ಪೊಲೀಸ್ ಸಿಬ್ಬಂದಿಯೇ ರಕ್ತದಾನ ಮಾಡಿದ್ದಾರೆ.
ಪೊಲೀಸರು ಅಪರಿಚಿತ ಆರೋಪಿಗಳ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಿದ್ದಾರೆ. ಅವರ ವಿರುದ್ಧ ಕಠಿಣ ಪೋಕ್ಸೋ ಪ್ರಕರಣ ಕೂಡ ದಾಖಲು ಮಾಡಲಾಗಿದೆ.
A 12-year-old girl, semi-naked and bleeding after rape, went door to door asking for help. People stared at her but refused to help. One man was seen shooing her away as she approached him for help. The visuals, which no longer shock a society where violence against women and minors has become chillingly common, were captured by a CCTV camera at Badnagar road, about 15 km from Ujjain in Madhya Pradesh.
11-01-25 09:14 pm
Bangalore Correspondent
CT Ravi,Threat, Lakshmi Hebbalkar; ಬೆಳಗಾವಿ ಅಭ...
11-01-25 02:11 pm
Asha Strick, CM Siddaramaiah ಆಶಾ ಕಾರ್ಯಕರ್ತೆಯರ...
10-01-25 11:01 pm
G Parameshwara: ನಕ್ಸಲರು ತಮ್ಮಲ್ಲಿದ್ದ ಶಸ್ತ್ರಾಸ್...
10-01-25 07:03 pm
NT chairman SN Subrahmanyan: ಇನ್ಫೋಸಿಸ್ ನಾರಾಯಣ...
10-01-25 02:44 pm
09-01-25 12:11 pm
HK News Desk
ತಿರುಪತಿಯಲ್ಲಿ ಕಾಲ್ತುಳಿತಕ್ಕೆ ಏಳು ಸಾವು ; ವೈಕುಂಠ...
09-01-25 11:22 am
StalinCM, Lipi: ಸಿಂಧೂ ನಾಗರಿಕತೆಯ ಲಿಪಿಗಳನ್ನು ಅರ...
08-01-25 11:07 pm
Crime News, Nagpur Couple: ಮಧ್ಯರಾತ್ರಿವರೆಗೆ 26...
08-01-25 10:53 pm
ಹೊಸವರ್ಷದ ಆರಂಭದಲ್ಲೇ ಟಿಬೆಟ್ ಮಂದಿಗೆ ಭಾರಿ ಆಘಾತ ;...
07-01-25 06:32 pm
11-01-25 07:19 pm
Mangaluru Correspondent
DYFI, CM Siddaramaiah, IPS Anupam Agrawal; ಪೊ...
11-01-25 04:57 pm
Lava Kusha Jodukare Kambala, Mangalore; ತೃತೀಯ...
11-01-25 02:25 pm
Mangalore Annamalai, Naxals: ನಕ್ಸಲ್ ಶರಣಾಗತಿ ಬ...
11-01-25 12:44 pm
Mangalore, Missing, Marriage; ಮುಸ್ಲಿಂ ಯುವತಿಯನ...
10-01-25 11:14 pm
10-01-25 11:05 pm
HK News Desk
Bangladeshi national illegal, Mangalore: ಮುಕ್...
10-01-25 09:51 pm
Mangalore Robbery, Crime, Singari Beedi: ಸಿಂಗ...
10-01-25 10:11 am
Share Market Scam, Mangalore: ಷೇರು ಮಾರುಕಟ್ಟೆ...
09-01-25 10:43 pm
Drugs, Mangalore Crime: ಗೋವಾದಿಂದ ಮಂಗಳೂರಿಗೆ ಹೈ...
09-01-25 10:32 pm