ಬ್ರೇಕಿಂಗ್ ನ್ಯೂಸ್
22-10-23 08:26 pm Mangaluru Correspondent ಕ್ರೈಂ
ಮಂಗಳೂರು, ಅ.22: ಲಾಡ್ಜ್ ಒಂದರಲ್ಲಿ ಅಕ್ರಮವಾಗಿ ನೆಲೆಸಿದ್ದ ಇಬ್ಬರು ವಿದೇಶಿ ಪ್ರಜೆಗಳನ್ನು ಮಂಗಳೂರಿನ ಕದ್ರಿ ಪೊಲೀಸರು ಬಂಧಿಸಿದ್ದಾರೆ.
ನೈಜೀರಿಯಾ ಮೂಲದ ಅಂಕಿಟೋಲ ಮತ್ತು ಘಾನಾ ದೇಶದ ಸಲಾಮ್ ಕ್ರಿಸ್ತಿಯನ್ ಬಂಧಿತರು. ಕದ್ರಿ ಠಾಣೆ ವ್ಯಾಪ್ತಿಯ ಫ್ಲಾಟ್ ಒಂದರಲ್ಲಿ ಇವರು ಬೆಂಗಳೂರಿನಿಂದ ಬಂದು ಉಳಿದುಕೊಂಡಿದ್ದರು. ಈ ಬಗ್ಗೆ ಮಾಹಿತಿ ತಿಳಿದ ಕದ್ರಿ ಠಾಣೆ ಎಸ್ಐ ಉಮೇಶ್ ದಾಳಿ ನಡೆಸಿ ಇಬ್ಬರನ್ನೂ ವಶಕ್ಕೆ ಪಡೆದಿದ್ದಾರೆ.
ವೀಸಾ ಬಗ್ಗೆ ಪರಿಶೀಲನೆ ನಡೆಸಿದಾಗ ಇಬ್ಬರು ಕೂಡ 2018ರ ಬಳಿಕ ಸೂಕ್ತ ವೀಸಾ ಇಲ್ಲದೆ ವಾಸ ಇರುವುದು ಕಂಡುಬಂದಿದೆ. ನೈಜೀರಿಯಾದ ವ್ಯಕ್ತಿ ಬೆಂಗಳೂರಿನ ಬಾಣಸವಾಡಿಯಲ್ಲಿ ಸೆಲೂನ್ ನಡೆಸುತ್ತಿದ್ದು ಮಣಿಪುರದ ಯುವತಿಯನ್ನು ಮದುವೆಯಾಗಿ ಒಂದು ಮಗುವನ್ನು ಹೊಂದಿದ್ದಾನೆ. ಈತನ ಗೆಳೆಯ ಸಲಾಮ್ ಕ್ರಿಸ್ತಿಯನ್ ಬೆಂಗಳೂರಿನಲ್ಲಿ ಫುಟ್ಬಾಲ್ ಆಡುತ್ತಿದ್ದು ಕೊತ್ತನೂರಿನಲ್ಲಿ ವಾಸವಿದ್ದ. ಇಬ್ಬರಿಗೂ ಮಂಗಳೂರು ಮೂಲದ ಅನಿಲ್ ಡಿಸಿಲ್ವ ಸಮಾನ ಸ್ನೇಹಿತರಾಗಿದ್ದು ಅವರೊಂದಿಗೆ ಮಂಗಳೂರಿಗೆ ಬಂದಿದ್ದರು.
ಅನಿಲ್ ಡಿಸಿಲ್ವಾ ಬೆಂಗಳೂರಿನಲ್ಲಿ ಉದ್ಯಮ ನಡೆಸುತ್ತಿದ್ದು ಅವರ ಖಾಸಗಿ ಫಂಕ್ಷನ್ ನಲ್ಲಿ ಪಾಲ್ಗೊಳ್ಳಲು ಗೆಳೆಯರು ಬಂದಿದ್ದರು. ಅಕ್ರಮ ನೆಲೆಸಿದ್ದರಿಂದ ಇಬ್ಬರನ್ನೂ ಬಂಧಿಸಿ ಪೊಲೀಸರು ಬೆಂಗಳೂರಿಗೆ ಕಳಿಸಿಕೊಟ್ಟಿದ್ದು ಡಿಟೆನ್ಶನ್ ಸೆಂಟರಿನಲ್ಲಿ ಇರಿಸಲಾಗಿದೆ.
Two foreign nationals living illegally in India on expired visas were detained by police. The two were detained by the city east police station personnel.
22-07-25 03:02 pm
HK News Desk
Dharmasthala Case, SIT, BJP: ಧರ್ಮಸ್ಥಳ ಪ್ರಕರಣ...
21-07-25 10:38 pm
"Divine Drama: Archbishop, Justices Join Hand...
21-07-25 05:56 pm
SIT, Dharmasthala Case, Dk Shivakumar: ಧರ್ಮಸ್...
21-07-25 01:31 pm
Tulu Nadu High Court Advocates, Bangalore; ಯೇ...
21-07-25 04:16 am
22-07-25 03:04 pm
HK News Desk
ಕೇರಳ ನರ್ಸ್ ನಿಮಿಷಾ ಪ್ರಿಯಾ ಗಲ್ಲು ಶಿಕ್ಷೆಗೆ ತಡೆ ;...
22-07-25 12:58 pm
ಕೇರಳ ಮಾಜಿ ಮುಖ್ಯಮಂತ್ರಿ, ಶತಾಯುಷಿ, ಸಿಪಿಎಂ ಸ್ಥಾಪಕ...
21-07-25 11:23 pm
Brijesh Chowta, Mangalore, MP: ಸ್ಟ್ಯಾಂಡ್ ಅಪ್...
21-07-25 11:20 pm
Jagdeep Dhankhar; ಆರೋಗ್ಯ ಸಮಸ್ಯೆ ; 74 ವರ್ಷದ ಉಪ...
21-07-25 10:41 pm
22-07-25 01:27 pm
Mangalore Correspondent
Mangalore Landslide, Permanki: ಕೆತ್ತಿಕಲ್ ರೀತಿ...
22-07-25 11:19 am
High Drama in Dharmasthala, Fake Godman Remar...
21-07-25 06:42 pm
ಉಳ್ಳಾಲಕ್ಕೆ ಎರಡು ಅಲ್ಪಸಂಖ್ಯಾತ ಹೆಣ್ಮಕ್ಕಳ ವಸತಿಯುತ...
21-07-25 03:11 pm
ತನಿಖೆ ಆಗೋ ಸಂದರ್ಭದಲ್ಲಿ ನಿರ್ಣಯಕ್ಕೆ ಬರೋದಲ್ಲ, ಪವಿ...
21-07-25 02:11 pm
22-07-25 12:38 pm
HK News Desk
BJP MLA Prabhu Chauhan Son, Rape; ಮದುವೆ ಆಗ್ತೀ...
21-07-25 11:01 pm
Roshan Saldanha Fraud, CID Case: ಬಿಹಾರ ಉದ್ಯಮಿ...
21-07-25 10:17 pm
S T Srinivas, Ankola Port Scam: ಅಂಕೋಲಾ ಕೇಣಿಯಲ...
20-07-25 08:52 pm
ಅಮೆರಿಕ, ಕೆನಡಾದಿಂದಲೂ ವಿದೇಶಿ ಫಂಡ್, ಯುವತಿಯರೇ ಟಾರ...
20-07-25 12:16 pm