ಬ್ರೇಕಿಂಗ್ ನ್ಯೂಸ್
30-10-23 01:54 pm Mangalore Correspondent ಕ್ರೈಂ
ಮಂಗಳೂರು, ಅ.30: ಬಜ್ಪೆ ಪೊಲೀಸ್ ಠಾಣೆ ವ್ಯಾಪ್ತಿಯ ಕಟೀಲು ಗಿಡಿಗೆರೆ ಎಂಬಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದ ಮಹಿಳೆಯೊಬ್ಬರು ಕೊಲೆಯಾಗಿದ್ದು ಮೂರು ದಿನಗಳ ಬಳಿಕ ಭಾನುವಾರ ಬೆಳಕಿಗೆ ಬಂದಿದೆ. ಗಿಡಿಗೆರೆ ನಿವಾಸಿ ರತ್ನಾ ಶೆಟ್ಟಿ (55) ಕೊಲೆಯಾದವರು. ಮನೆಯಿಂದ ವಾಸನೆ ಬರುತ್ತಿದ್ದುದರಿಂದ ಪಕ್ಕದ ಮನೆಯವರು ಬಜ್ಪೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರು ಬಂದು ತಪಾಸಣೆ ನಡೆಸಿದಾಗ ಕೊಲೆ ನಡೆದಿರುವುದು ಪತ್ತೆಯಾಗಿದೆ.
ಕೈಕಾಲುಗಳನ್ನು ಕಟ್ಟಿದ ಸ್ಥಿತಿಯಲ್ಲಿದ್ದು ಕುತ್ತಿಗೆ ಬಿಗಿದು ಕೊಲೆ ಮಾಡಲಾಗಿದೆ. ಮೈಯಲ್ಲಿ ರಕ್ತದ ಕಲೆಗಳು, ತರಚಿದ ಗಾಯಗಳಿವೆ. ಕೊಲೆಯಾಗಿ ಮೂರು ದಿನ ಆಗಿದ್ದರಿಂದ ಬಾತುಕೊಂಡು ವಾಸನೆ ಬರುತ್ತಿತ್ತು. ಕಟೀಲು ಚರ್ಚ್ ಬಳಿಯ ಹೊಟೇಲ್ ಒಂದರಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆ ರತ್ನಾ ಶೆಟ್ಟಿ ತನ್ನ ಮಗನೊಂದಿಗೆ ವಾಸವಿದ್ದರು. ಕೃತ್ಯ ಬೆಳಕಿಗೆ ಬಂದ ಕೂಡಲೇ ಮಗನಿಗೆ ಫೋನ್ ಮಾಡಿದ್ದರು. ಮೊದಲು ಕಿನ್ನಿಗೋಳಿಯಲ್ಲಿದ್ದೇನೆ ಎಂದಿದ್ದ ಮಗ ರವಿರಾಜ್, ಬಳಿಕ ಫೋನ್ ಸ್ವಿಚ್ ಆಫ್ ಮಾಡಿದ್ದ. ಪೊಲೀಸರು ಬಳಿಕ ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಮಗನಿಂದಲೇ ಕೊಲೆ ಶಂಕೆ
ಮಗ ರವಿರಾಜ್ ಗಾಂಜಾ ವ್ಯಸನಿಯಾಗಿದ್ದು ಕಿನ್ನಿಗೋಳಿಯ ಬಾರ್ ಒಂದರಲ್ಲಿ ಕೆಲಸ ಮಾಡುತ್ತಿದ್ದ. ಎರಡು ದಿನಗಳ ಹಿಂದೆ ಸ್ಥಳೀಯರು ಈತನಲ್ಲಿ ತಾಯಿ ಬಗ್ಗೆ ವಿಚಾರಿಸಿದಾಗ, ಅವರಿಗೆ ಹುಷಾರಿಲ್ಲ. ಸಂಬಂಧಿಕರ ಮನೆಯಲ್ಲಿ ಬಿಟ್ಟಿದ್ದೇನೆ ಎಂದು ತಿಳಿಸಿದ್ದ. ಅ.29 ರಂದು ಬೆಳಗ್ಗೆ ವಾಸನೆ ಬರುತ್ತಿದ್ದ ಕಾರಣ ಕಿಟಕಿಯಲ್ಲಿ ಇಣುಕಿ ನೋಡಿದಾಗ ರತ್ನಾ ಸಾವನ್ನಪ್ಪಿದ ಸ್ಥಿತಿಯಲ್ಲಿ ಕಂಡುಬಂದಿದ್ದರು. ಬಳಿಕ ಪೊಲೀಸರನ್ನು ಕರೆಸಿ, ಬಾಗಿಲು ಒಡೆದು ನೋಡಿದಾಗ ಕೈಕಾಲುಗಳನ್ನು ನೈಲಾನ್ ಹಗ್ಗದಿಂದ ಕಟ್ಟಿರುವುದು ಪತ್ತೆಯಾಗಿದೆ.
ಆರೇಳು ವರ್ಷಗಳ ಹಿಂದೆ ರತ್ನಾ ಶೆಟ್ಟಿ ಗಂಡ ತೀರಿಕೊಂಡಿದ್ದರು. ಆನಂತರ ಬಾಡಿಗೆ ಮನೆಯಲ್ಲಿದ್ದು ಹೊಟೇಲ್ ಕೆಲಸ ಮಾಡುತ್ತ ಜೀವನ ಮಾಡುತ್ತಿದ್ದರು. ಮಗ ಕೆಲವೊಮ್ಮೆ ಮನೆಗೆ ಬಂದು ಇರುತ್ತಿದ್ದ.
Mother killed at Kateel in Mangalore, Ganja Son suspected for killing.
12-09-26 09:40 pm
HK News Staffer
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
ಬಿಜೆಪಿ ಅಧಿಕಾರಕ್ಕೆ ಬರಲು ನನ್ನ ಸ್ಥಾನ ಬಿಟ್ಟುಕೊಟ್ಟ...
12-09-26 05:56 pm
ಐಎಎಸ್ ತೇರ್ಗಡೆಯಾಗಿದ್ದ ಕೇರಳದ ಮೊದಲ ಬುಡಕಟ್ಟು ಮಹಿಳ...
12-09-26 05:53 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
13-09-26 10:11 pm
HK News
ಕುತ್ತಾರು ರಾಜರಾಜೇಶ್ವರಿ ಸಿದ್ಧಿವಿನಾಯಕ ಕ್ಷೇತ್ರದಲ್...
13-09-26 08:10 pm
AI Centre in Madiyala: ಮಡಿಯಾಲದಲ್ಲಿ ಎಐ ಉನ್ನತ ಶ...
13-09-26 07:53 pm
ಬೆಳ್ತಂಗಡಿ ; ಹೆಬ್ಬಾವನ್ನು ನುಂಗಿ ಮನೆಯ ತೋಟದಲ್ಲಿ ಅ...
12-09-26 03:09 pm
ಮಂಗಳೂರಿನಲ್ಲಿ ಸಚಿವ ಸಂಪುಟ ಸಭೆ ; ಮೂಲಸೌಲಭ್ಯ, ಕೈಗಾ...
12-09-26 10:53 am
12-09-26 07:41 pm
HK News Staffer
ಕ್ರಿಪ್ಟೊ ಕರೆನ್ಸಿ ಹೆಸ್ರಲ್ಲಿ ಡಾಕ್ಟರ್ ಗೆ ಮಹಿಳೆಯಿ...
11-09-26 06:38 pm
ಜಾಮೀನು ಪಡೆಯಲು ನಕಲಿ ಆಧಾರ್ ಕಾರ್ಡ್ ಹಾಜರು ; ಉಡು...
11-09-26 01:09 pm
ಬೈಕ್ಗೆ ಡಿಕ್ಕಿ ಹೊಡೆದ ಕಾರು ; ಚಾಮರಾಜನಗರದಲ್ಲಿ ಮೂ...
11-09-26 10:14 am
ಕುಂದಾಪುರದಲ್ಲಿ 8 ಶಾಲಾ ಮಕ್ಕಳ ಬಲಿ ಪಡೆದ ಭೀಕರ ಅಪಘಾ...
10-09-26 08:16 pm