ಬ್ರೇಕಿಂಗ್ ನ್ಯೂಸ್
31-10-23 01:37 pm Hk News Desk ಕ್ರೈಂ
ಕೊಚ್ಚಿ, ಅ.31: ಕ್ರಿಸ್ತಿಯನ್ನರ ಪ್ರಾರ್ಥನಾ ಸಭೆಯಲ್ಲಿ ಸರಣಿ ಸ್ಪೋಟಕ್ಕೆ ಕಾರಣಕರ್ತ ಎನ್ನಲಾದ ಆರೋಪಿ ಡೊಮಿನಿಕ್ ಮಾರ್ಟಿನ್, ತಾನು ಅಂತರ್ಜಾಲದಿಂದ ಬಾಂಬ್ ತಯಾರಿಕೆಯನ್ನು ಕಲಿತು ಕೇವಲ 3 ಸಾವಿರ ರೂ. ಖರ್ಚಿನಲ್ಲಿ ಬಾಂಬ್ ತಯಾರಿಸಿದ್ದಾಗಿ ಹೇಳಿಕೊಂಡಿದ್ದಾನೆ.
ಡೊಮಿನಿಕ್ ಮಾರ್ಟಿನ್ ಹಿಂದೆ ಗಲ್ಫ್ ದೇಶದಲ್ಲಿ ಉದ್ಯೋಗದಲ್ಲಿದ್ದು ಎರಡು ತಿಂಗಳ ಹಿಂದೆ ಊರಿಗೆ ಬಂದಿದ್ದ. ಈತನ ಕುಟುಂಬ ಕೊಚ್ಚಿ ಬಳಿ ಐದು ವರ್ಷಗಳಿಂದ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದೆ. ಇಲೆಕ್ಟ್ರಿಕ್ ಸರ್ಕ್ಯುಟ್‍ನಲ್ಲಿ ಪರಿಣಿತ ಎಂದು ಹೇಳಲಾದ ಮಾರ್ಟಿನ್, ದುಬೈನಲ್ಲಿ ಫೋರ್‍ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದ. ಪ್ರಾಥಮಿಕ ತನಿಖೆಯಲ್ಲಿ ಐಇಡಿಗಳನ್ನು ಪಟಾಕಿಗಳಲ್ಲಿ ಬಳಸುವ ಕಡಿಮೆ ದರ್ಜೆಯ ಸ್ಪೋಟಕಗಳಿಂದ ಬಾಂಬ್ ತಯಾರಿಸಿದ್ದಾನೆ. ಮೂಲಗಳ ಪ್ರಕಾರ, ಮಾರ್ಟಿನ್ ತನ್ನ ಮನೆಯಲ್ಲೇ ಐಇಡಿಗಳನ್ನು ಜೋಡಿಸಿದ್ದು ಯೆಹೋವನ ಸಾಕ್ಷಿಗಳ ಸಮಾವೇಶದಲ್ಲಿ ಭಾಗವಹಿಸಿದವರನ್ನು ಕೊಲ್ಲುವ ಉದ್ದೇಶದಿಂದ ಸ್ಪೋಟಕಗಳನ್ನು ಹಾಲ್‍ನೊಳಗೆ ಇರಿಸಿದ್ದ.
ಸ್ಫೋಟ ಘಟನೆ ನಡೆದ ಬೆನ್ನಲ್ಲೇ, ಮಾರ್ಟಿನ್ ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ವೀಡಿಯೊ ಸಂದೇಶವನ್ನು ಪೋಸ್ಟ್ ಮಾಡಿದ್ದ. ವೀಡಿಯೊದಲ್ಲಿ, ಸಂಘಟನೆಯ ಬೋಧನೆಗಳು ದೇಶದ್ರೋಹಿ ಆಗಿರುವುದರಿಂದ ತಾನು ಈ ನಿರ್ಧಾರವನ್ನು ತೆಗೆದುಕೊಂಡಿದ್ದೇನೆ ಎಂದು ಹೇಳಿಕೊಂಡಿದ್ದ. ಜೆಹೋವಾ ಸಮುದಾಯವು ಜನರಿಗೆ, ಮಕ್ಕಳಿಗೆ ತಪ್ಪು ಮೌಲ್ಯಗಳನ್ನು ಕಲಿಸುತ್ತಿದೆ. ಇಂತಹ ಕೃತ್ಯವನ್ನು ನಿಲ್ಲಿಸಲು ಕೇಳಿಕೊಂಡರೂ ಯಾರೂ ಗಮನಿಸಲಿಲ್ಲ. ಇದು ರಾಷ್ಟ್ರಕ್ಕೆ ಕೆಟ್ಟದು ಎಂದು ಅರ್ಥ ಮಾಡಿಕೊಂಡು, ಅವರ ಸಭೆಯಲ್ಲೇ ಸ್ಪೋಟಗಳನ್ನು ನಡೆಸಲು ನಿರ್ಧರಿಸಿದ್ದಾಗಿ ವಿಡಿಯೋದಲ್ಲಿ ತಿಳಿಸಿದ್ದ.
ಭಾನುವಾರ ಕೊಚ್ಚಿ ಬಳಿಯ ಕಲಮಸ್ಸೇರಿಯ ಕನ್ವೆನ್ಷನ್ ಸೆಂಟರ್‍ನಲ್ಲಿ ನಡೆದ ಸರಣಿ ಸ್ಪೋಟದಲ್ಲಿ ಇಬ್ಬರು ಮಹಿಳೆಯರು ಮತ್ತು 12 ವರ್ಷದ ಬಾಲಕಿ ಸಾವನ್ನಪ್ಪಿದ್ದು, 50 ಜನರು ಗಾಯಗೊಂಡಿದ್ದಾರೆ. ಯೆಹೋವನ ಸಾಕ್ಷಿಗಳ ಅಧಿವೇಶನದಲ್ಲಿ ಸುಮಾರು 2,000 ಜನರು ಹಾಜರಿದ್ದರು.
The main suspect in serial blasts at a Kerala's prayer meeting on Sunday has claimed to have learned bomb-making from the internet. 48-year-old Dominic Martin, who is said to be an expert in electric circuit, says he spent about Rs 3,000 to make bombs.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
21-04-25 02:13 pm
HK News Desk
No GST on UPI Payments: ಎರಡು ಸಾವಿರಕ್ಕಿಂತ ಮೇಲಿ...
20-04-25 08:42 pm
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
20-04-25 05:42 pm
Mangalore Correspondent
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
21-04-25 01:03 pm
Bangalore Correspondent
Karnataka DGP Om Prakash Murder, wife: ನಿವೃತ್...
20-04-25 10:52 pm
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm