ಬ್ರೇಕಿಂಗ್ ನ್ಯೂಸ್
09-11-23 12:51 pm Bengalore Correspondent ಕ್ರೈಂ
ಬೆಂಗಳೂರು, ನ 09: ಜರ್ಮನಿಯ ಫ್ರಾಂಕ್‌ಪರ್ಟ್‌ನಿಂದ ಬೆಂಗಳೂರಿಗೆ ಪ್ರಯಾಣ ಮಾಡುತ್ತಿದ್ದ 32 ವರ್ಷದ ಮಹಿಳೆಯೊಬ್ಬರಿಗೆ ಸಹ ಪ್ರಯಾಣಿಕನೊಬ್ಬ ಲೈಂಗಿಕ ಕಿರುಕುಳ ನೀಡಿದ್ದು ಆರೋಪಿಯನ್ನು ಬಂಧಿಸಲಾಗಿದೆ. ಬೆಂಗಳೂರಿನ ಶಂಕರ ನಾರಾಯಣ ರಂಗನಾಥನ್ (52) ಬಂಧಿತರು.
ಪ್ರಾಂಕ್‍ಫರ್ಟ್‍ನಿಂದ ನಗರಕ್ಕೆ ಬರುತ್ತಿದ್ದ ಲುಪ್ತಾನ್ಸ ಏರ್ಲೈನ್ಸ್ ಎಲ್‍ಹೆಚ್ 0754 ವಿಮಾನದಲ್ಲಿ ಸಹ ಪ್ರಯಾಣಕಿಯಾಗಿದ್ದ ಯುವತಿಗೆ ಅಂಗಾಂಗಗಳನ್ನು ಸ್ಪರ್ಶಿಸಿ ಅಸಭ್ಯವಾಗಿ ವರ್ತಿಸಿದ ರಂಗನಾಥ(50) ಎಂಬುವನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ಕೈಗೊಂಡಿದ್ದಾರೆ.
ವಿಮಾನದಲ್ಲಿ ಆಂಧ್ರಪ್ರದೇಶದ ತಿರುಪತಿ ಮೂಲದ ಯುವತಿಯು ಪ್ರಯಾಣಿಸುತ್ತಿದ್ದು, ಯುವತಿಯು ವಿಮಾನದ ಸೀಟ್ ನಂ.38ಕೆನಲ್ಲಿ ಕುಳಿತು ಪ್ರಯಾಣಿಸುತ್ತಿದ್ದರು. ಪ್ರಯಾಣ ಪ್ರಾರಂಭವಾದ ನಾಲ್ಕು ಗಂಟೆ ನಂತರ ಯುವತಿ ನಿದ್ರೆಗೆ ಜಾರಿದ್ದಾರೆ. ಬಳಿಕ ರಾತ್ರಿ ಸುಮಾರು 11:45ಕ್ಕೆ ಯುವತಿಯು ಎಚ್ಚರಗೊಂಡಾಗ ಸೀಟ್ ನಂ.38ಜೆನಲ್ಲಿ ಕುಳಿತಿದ್ದ ರಂಗನಾಥ್, ಅವರ ಖಾಸಗಿ ಅಂಗವನ್ನು ಮುಟ್ಟುತ್ತಿದ್ದನು.

ಆಗ ಯುವತಿಯು ಆತನ ಕೈಯನ್ನು ತೆಗೆದು ಮತ್ತೆ ನಿದ್ರೆಗೆ ಜಾರಿದರು. ಬಳಿಕ ಮಧ್ಯರಾತ್ರಿ 12 ಗಂಟೆಗೆ ಯುವತಿಗೆ ಎಚ್ಚರವಾದಾಗ ರಂಗನಾಥ ಮತ್ತೆ ಆಕೆಯ ಖಾಸಗಿ ಅಂಗವನ್ನು ಮುಟ್ಟುತ್ತಿದ್ದನು. ಈ ವೇಳೆ ಯುವತಿಯು ರಂಗನಾಥ್ ಕೈಯನ್ನು ಎಳೆದು ವಿಮಾನ ಸಿಬ್ಬಂದಿಗಳನ್ನು ಕರೆದು ವಿಷಯ ತಿಳಿಸಿದ್ದಾರೆ. ಬಳಿಕ ಮಹಿಳೆ ಬೇರೆ ಸೀಟಿನಲ್ಲಿ ಹೋಗಿ ಕುಳಿತರು.
ಘಟನೆ ಸಂಬಂಧ ವಿಮಾನದಲ್ಲಿ ಯುವತಿಯೊಂದಿಗೆ ಅಸಭ್ಯವಾಗಿ ವರ್ತಿಸಿದ ಆರೋಪದಡಿ ಕೆಂಪೇಗೌಡ ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣ ಠಾಣೆಯಲ್ಲಿ ರಂಗನಾಥ್ ನನ್ನ ಬಂಧಿಸಿದ್ದಾರೆ.
An Indian-origin British citizen was arrested on Tuesday by the Bengaluru International Airport police for allegedly touching a woman co-passenger inappropriately on board a Frankfurt-Bengaluru Lufthansa Airlines flight.
10-01-26 10:28 pm
HK News Desk
"ಡ್ಯಾಡಿ ಈಸ್ ಹೋಮ್" ಎಐ ವಿಡಿಯೋ ರಿಲೀಸ್ ; ರಾಜ್ಯ ರಾ...
10-01-26 04:29 pm
ಚಾರ್ಮಾಡಿ ಘಾಟಿಯಲ್ಲಿ ರಸ್ತೆಗೆ ಅಡ್ಡ ನಿಂತ ಒಂಟಿ ಸಲಗ...
10-01-26 03:00 pm
Purushottam Bilimale, Legal Battle Against Ma...
10-01-26 01:17 pm
ಮಲಯಾಳ ಭಾಷಾ ಮಸೂದೆಯಿಂದ ಕಾಸರಗೋಡು ಕನ್ನಡಿಗರಿಗೆ ಧಕ್...
09-01-26 04:42 pm
10-01-26 03:22 pm
HK News Desk
ಶಬರಿಮಲೆ ಚಿನ್ನ ಕಳವು ಪ್ರಕರಣ ; ಪ್ರಧಾನ ತಂತ್ರಿ ಕಂಠ...
09-01-26 11:00 pm
ಟ್ರಂಪ್ ಕೈಗಳು ಸಾವಿರಾರು ಇರಾನಿಗರ ರಕ್ತದಿಂದ ಒದ್ದೆಯ...
09-01-26 08:30 pm
ರಷ್ಯಾ ಹಡಗು ವಶಕ್ಕೆ ಪಡೆದ ಬೆನ್ನಲ್ಲೇ ಅಮೆರಿಕಕ್ಕೆ ತ...
08-01-26 11:21 pm
ರಷ್ಯಾ ತೈಲ ಖರೀದಿ ನಿಲ್ಲಿಸಲು ಅಮೆರಿಕ ಹೊಸ ಮಸೂದೆ ;...
08-01-26 05:11 pm
11-01-26 12:56 pm
Mangaluru Staffer
Cm Siddaramaiah, Mangalore: ಕರಾವಳಿ ಪ್ರವಾಸೋದ್ಯ...
10-01-26 10:45 pm
ಡೀಮ್ಡ್ ಯುನಿವರ್ಸಿಟಿಗಳಲ್ಲಿ ಭಾಷೆಯ ಅವಜ್ಞೆ ; ಸಾಹಿತ...
10-01-26 07:57 pm
Dr Meenakshi Jain at Mangaluru Lit Fest: ಉಪನಿ...
10-01-26 07:21 pm
ಕರಾವಳಿ ಟೂರಿಸಂ ಅಭಿವೃದ್ಧಿಗೆ ಜನಪ್ರನಿಧಿಗಳು, ಉದ್ಯಮ...
10-01-26 06:23 pm
07-01-26 10:45 pm
Bangalore Correspondent
ಸಮಾಧಿಯಲ್ಲಿ ಡ್ರಗ್ಸ್ ಬಚ್ಚಿಟ್ಟು ಮಾರಾಟ ; 3.5 ಕೋಟಿ...
06-01-26 07:04 pm
Kanachur Hospital, POSCO, Doctor: ಚಿಕಿತ್ಸೆಗೆ...
06-01-26 02:24 pm
ಯಲ್ಲಾಪುರ ; ಮದ್ವೆಗೆ ಒಪ್ಪಿಲ್ಲವೆಂದು ನಡುರಸ್ತೆಯಲ್ಲ...
04-01-26 11:02 pm
Ganja from Bihar: ಬಿಹಾರದಿಂದ ರೈಲಿನಲ್ಲಿ ಗಾಂಜಾ ತ...
04-01-26 06:15 pm