Udupi Murder case, Praveen: ನಾಲ್ವರ ಹಂತಕನಿಗೆ ಬದುಕುವ ಹಕ್ಕಿಲ್ಲ, ನಮ್ಮ ಕೈಗೆ ಕೊಡಿ, ಮುಗಿಸಿ ಬಿಡುತ್ತೇವೆ ; ಸ್ಥಳ ಮಹಜರಿಗೆ ಬಂದ ಪೊಲೀಸರಿಗೆ ಸಾರ್ವಜನಿಕರ ಮುತ್ತಿಗೆ, ಆರೋಪಿಗೆ ಹಲ್ಲೆ ಯತ್ನ, ಜನರನ್ನು ಚದುರಿಸಲು ಲಾಠಿಚಾರ್ಜ್ !

16-11-23 09:30 pm       Udupi Correspondent   ಕ್ರೈಂ

ನೇಜಾರಿನ ತಾಯಿ, ಮಕ್ಕಳ ಕೊಲೆಗೈದ ಆರೋಪಿಯನ್ನು ಸ್ಥಳ ಮಹಜರಿಗಾಗಿ ಕೊಲೆ ಘಟನೆ ನಡೆದಿದ್ದ ಮನೆಗೆ ಕರೆತಂದಾಗ ಸ್ಥಳೀಯ ಸಾರ್ವಜನಿಕರು ಉದ್ರಿಕ್ತರಾಗಿ, ಆರೋಪಿಯ ಮೇಲೆ ಹಲ್ಲೆಗೆ ಯತ್ನಿಸಿದ ಘಟನೆ ನಡೆದಿದೆ.

ಉಡುಪಿ, ನ.16: ನೇಜಾರಿನ ತಾಯಿ, ಮಕ್ಕಳ ಕೊಲೆಗೈದ ಆರೋಪಿಯನ್ನು ಸ್ಥಳ ಮಹಜರಿಗಾಗಿ ಕೊಲೆ ಘಟನೆ ನಡೆದಿದ್ದ ಮನೆಗೆ ಕರೆತಂದಾಗ ಸ್ಥಳೀಯ ಸಾರ್ವಜನಿಕರು ಉದ್ರಿಕ್ತರಾಗಿ, ಆರೋಪಿಯ ಮೇಲೆ ಹಲ್ಲೆಗೆ ಯತ್ನಿಸಿದ ಘಟನೆ ನಡೆದಿದೆ.

ನೇಜಾರಿನ ತೃಪ್ತಿ ನಗರಕ್ಕೆ ಸಂಜೆ ವೇಳೆಗೆ ಆರೋಪಿ ಪ್ರವೀಣ್ ಚೌಗುಲೆಯನ್ನು ಕರೆತಂದಾಗ, ಸಾರ್ವಜನಿಕರು ಮತ ಭೇದ ಮರೆತು ಆಕ್ರೋಶಗೊಂಡಿದ್ದಾರೆ. ಆತನನ್ನು ನಮ್ಮ ಕೈಗೆ ಕೊಡಿ, 15 ನಿಮಿಷ ಬೇಡ, ಕೇವಲ 30 ಸೆಕೆಂಡ್ ಸಾಕು ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮನೆಯ ಒಳಗೆ ಮತ್ತು ಹೊರಗೆ ಸ್ಥಳ ಮಹಜರು ಉದ್ದೇಶಕ್ಕೆ ಕರೆದೊಯ್ದಾಗ ಸಾಕಷ್ಟು ಪೊಲೀಸರನ್ನು ನಿಯೋಜಿಸಿದ್ದರೂ, ಅದಕ್ಕಿಂತ ಹೆಚ್ಚು ಸಂಖ್ಯೆಯಲ್ಲಿ ಜನರು ಸೇರಿದ್ದಾರೆ.

ಆರೋಪಿಯನ್ನು ಕರೆತಂದು ಅಲ್ಲಿಂದ ಹೊರಗೆ ಕರೆದೊಯ್ಯುವುದೇ ಪೊಲೀಸರಿಗೆ ಸವಾಲಾಗಿತ್ತು. ಜನರ ಕೈಗೆ ಸಿಕ್ಕರೆ, ಒಂದರೆ ಕ್ಷಣದಲ್ಲಿ ಹೊಡೆದು ಕೊಂದು ಹಾಕುವಷ್ಟು ಆಕ್ರೋಶದಲ್ಲಿ ಜನರಿದ್ದರು. ಹೀಗಾಗಿ ಕೆಲವೇ ಹೊತ್ತಿನಲ್ಲಿ ಸ್ಥಳ ಮಹಜರು ಪ್ರಕ್ರಿಯೆ ಮುಗಿಸಿ ಪೊಲೀಸರು ಆರೋಪಿಯನ್ನು ಹೊರಗೆ ತಂದು ವಾಹನ ಹತ್ತಿಸಲು ಹರಸಾಹಸ ಪಟ್ಟಿದ್ದಾರೆ. ನಾಲ್ವರನ್ನು ಕೊಂದವನಿಗೆ ಬದುಕುವ ಹಕ್ಕೇ ಇಲ್ಲ, ಆತ ಈ ಭೂಮಿಯಲ್ಲಿ ಜೀವಂತ ಉಳಿಯಬಾರದು ಎಂದು ಜನರು ಘೋಷಣೆ ಹಾಕಿದ್ದಾರೆ. ಪೊಲೀಸರ ವಿರುದ್ಧವೂ ಧಿಕ್ಕಾರ ಕೂಗಿದ್ದಾರೆ. ಉದ್ರಿಕ್ತ ಜನರನ್ನು ಚದುರಿಸಲು ಪೊಲೀಸರು ಕೊನೆಗೆ ಲಾಠಿಚಾರ್ಜ್ ನಡೆಸಬೇಕಾಯಿತು.

ಆರೋಪಿಯನ್ನು ಕರೆದೊಯ್ದ ಬಳಿಕ ಸ್ಥಳಕ್ಕೆ ಎಸ್ಪಿ ಅಥವಾ ಜಿಲ್ಲಾಧಿಕಾರಿ ಬರಬೇಕು, ಲಾಠಿಚಾರ್ಜ್ ನಡೆಸಿದ ಬಗ್ಗೆ ಕ್ಷಮೆ ಕೇಳಬೇಕು ಎಂದು ಜನರು ಒಂದಷ್ಟು ಹೊತ್ತು ಪ್ರತಿಭಟನೆಯನ್ನೂ ನಡೆಸಿದ್ದಾರೆ. ಬಳಿಕ ಉದ್ರಿಕ್ತರನ್ನು ಪೊಲೀಸರು ಮನವೊಲಿಸಿ ಸ್ಥಳದಿಂದ ತೆರಳಿದ್ದಾರೆ.

Udupi Murder case, police lathi charges at public as they try to attack accused praveen in Nejaru Murder Case accused outside the crime scene where he was brought for investigation in the afternoon. Udupi Police investigating the case had taken the murder accused Praveen Arun Chowgale (39) for a inquest, during which an angry mob is said to have attempted to assault the Chowgule.