ಬ್ರೇಕಿಂಗ್ ನ್ಯೂಸ್
22-11-23 12:12 pm HK News Desk ಕ್ರೈಂ
ಮಹಾರಾಷ್ಟ್ರ, ನ 22: ಏಕದಿನ ವಿಶ್ವಕಪ್ನಲ್ಲಿ ಭಾರತ ಕ್ರಿಕೆಟ್ ತಂಡ ಮತ್ತು ಅಭಿಮಾನಿಗಳಿಗೆ ನವೆಂಬರ್ 19 ಅತ್ಯಂತ ಕೆಟ್ಟ ದಿನವಾಗಿದೆ. ಟೀಂ ಇಂಡಿಯಾವನ್ನು ಸೋಲಿಸಿದ ಆಸ್ಟ್ರೇಲಿಯಾ ಚಾಂಪಿಯನ್ ಆಗಿದ್ದು ಅಸಾಧ್ಯ ಬೇಸರ ತಂದಿದೆ. ಅಭಿಮಾನಿಗಳಿಗೆ ಬರಸಿಡಿಲು ಬಡಿದಂತಾಗಿದ್ದು, ಕೆಲ ಅನಾಹುತಗಳಿಗೂ ದಾರಿ ಮಾಡಿಕೊಟ್ಟಿದೆ.
ಮಹಾರಾಷ್ಟ್ರದ ಅಮರಾವತಿಯಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಭಾರತ ಫೈನಲ್ನಲ್ಲಿ ಸೋತಿದ್ದರಿಂದ ಹಿರಿಯ ಪುತ್ರನೊಬ್ಬ ತನ್ನ ತಂದೆ ಮತ್ತು ಕಿರಿಯ ಸಹೋದರನ ಮೇಲೆ ಕಬ್ಬಿಣದ ರಾಡ್ನಿಂದ ಹಲ್ಲೆ ನಡೆಸಿದ್ದಾನೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಸಹೋದರ ಅಂಕಿತ್ ಇಂಗೋಲ್ ಮೃತಪಟ್ಟಿದ್ದು, ತಂದೆಯ ಸ್ಥಿತಿ ಚಿಂತಾಜನಕವಾಗಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಆಘಾತಕಾರಿ ಘಟನೆ ಎಲ್ಲೆಡೆ ಸಂಚಲನ ಮೂಡಿಸಿದ್ದು, ಬದನೇರಾ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ.
ಮೃತ ಅಂಕಿತ್ ಇಂಗೋಲ್ ಮತ್ತು ಆರೋಪಿ ಪ್ರವೀಣ್ ಇಂಗೋಲ್, ಈತನ ತಂದೆ ರಮೇಶ ಇಂಗೋಳೆ ಮೂವರೂ ಆಸ್ಟ್ರೇಲಿಯಾ ಮತ್ತು ಭಾರತ ನಡುವಿನ ಫೈನಲ್ ಪಂದ್ಯವನ್ನು ಮನೆಯಲ್ಲಿ ಟಿವಿಯಲ್ಲಿ ವೀಕ್ಷಿಸಿದ್ದಾರೆ. ಪಂದ್ಯದ ನೋಡುತ್ತಿದ್ದಾಗಲೇ ಮೂವರು ಮದ್ಯಪಾನ ಮಾಡಿದ್ದಾರೆ ಎಂದು ಹೇಳಲಾಗಿದೆ.
ಭಾರತ ಪಂದ್ಯ ಸೋತಿದ್ದರಿಂದ ರಾತ್ರಿ ಇಬ್ಬರು ಸಹೋದರರ ಮಧ್ಯೆ ಕಿತ್ತಾಟ ನಡೆದಿದೆ. ನೀನು ಮಟನ್ (ಕುರಿ ಮಾಂಸ) ತಿಂದ ಕಾರಣ ಟೀಂ ಇಂಡಿಯಾ ಸೋಲು ಕಂಡಿತು ಎಂದು ಹಿರಿಯ ಸಹೋದರ ಪ್ರವೀಣ್, ತಮ್ಮನೊಂದಿಗೆ ಜಗಳ ಕಾದಿದ್ದಾನೆ. ಇಬ್ಬರ ಜಗಳ ಬಿಡಿಸಲು ತಂದೆ ರಮೇಶ್ ಮಧ್ಯಪ್ರವೇಶಿಸಿ ಪ್ರವೀಣನ ಮೊಬೈಲ್ ಕಸಿದುಕೊಂಡಿದ್ದಾನೆ. ಇಷ್ಟಕ್ಕೆ ಕುಪಿತನಾದ ಆರೋಪಿ ಮನೆಯಲ್ಲಿದ್ದ ಕಬ್ಬಿಣದ ರಾಡ್ನಿಂದ ಇಬ್ಬರ ಮೇಲೂ ಹಲ್ಲೆ ಮಾಡಿದ್ದಾನೆ.
ತಲೆಗೆ ಗಂಭೀರ ಗಾಯವಾಗಿ ಕಿರಿಯ ಸಹೋದರ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ತಂದೆಗೂ ರಾಡ್ನಿಂದ ಹೊಡೆದಿದ್ದಾನೆ. ಇದರಿಂದ ಅವರ ತೀವ್ರ ಗಾಯಗೊಂಡಿದ್ದಾರೆ. ಬಳಿಕ ಕುಟುಂಬಸ್ಥರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಕುಡಿದ ಮತ್ತಿನಲ್ಲಿ ಇಬ್ಬರ ಮೇಲೆ ದಾಳಿ ಮಾಡಿ ತಮ್ಮನನ್ನು ಬಲಿಪಡೆದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
According to the information received, the elder son attacked his father and younger brother with an iron rod. Ankit Ingole, who was seriously injured in the incident, died, while the father’s condition is still critical. This heart-wrenching incident has spread sensation everywhere. In this case, Badnera police have registered a case of murder and arrested the accused.
11-01-25 10:53 pm
HK News Desk
ಕೊಪ್ಪದ ಮೇಗೂರು ಅರಣ್ಯದಲ್ಲಿ ಶರಣಾಗಿದ್ದ ನಕ್ಸಲರ ಶಸ...
11-01-25 10:27 pm
BBMP Raid, Lokayukta; ಬಿಬಿಎಂಪಿ 50 ಕಡೆಗಳಲ್ಲಿ ಲ...
11-01-25 09:14 pm
CT Ravi,Threat, Lakshmi Hebbalkar; ಬೆಳಗಾವಿ ಅಭ...
11-01-25 02:11 pm
Asha Strick, CM Siddaramaiah ಆಶಾ ಕಾರ್ಯಕರ್ತೆಯರ...
10-01-25 11:01 pm
09-01-25 12:11 pm
HK News Desk
ತಿರುಪತಿಯಲ್ಲಿ ಕಾಲ್ತುಳಿತಕ್ಕೆ ಏಳು ಸಾವು ; ವೈಕುಂಠ...
09-01-25 11:22 am
StalinCM, Lipi: ಸಿಂಧೂ ನಾಗರಿಕತೆಯ ಲಿಪಿಗಳನ್ನು ಅರ...
08-01-25 11:07 pm
Crime News, Nagpur Couple: ಮಧ್ಯರಾತ್ರಿವರೆಗೆ 26...
08-01-25 10:53 pm
ಹೊಸವರ್ಷದ ಆರಂಭದಲ್ಲೇ ಟಿಬೆಟ್ ಮಂದಿಗೆ ಭಾರಿ ಆಘಾತ ;...
07-01-25 06:32 pm
11-01-25 10:34 pm
Mangalore Correspondent
Mangalore Lit Fest 2025, Hardeep Singh Puri;...
11-01-25 07:19 pm
DYFI, CM Siddaramaiah, IPS Anupam Agrawal; ಪೊ...
11-01-25 04:57 pm
Lava Kusha Jodukare Kambala, Mangalore; ತೃತೀಯ...
11-01-25 02:25 pm
Mangalore Annamalai, Naxals: ನಕ್ಸಲ್ ಶರಣಾಗತಿ ಬ...
11-01-25 12:44 pm
11-01-25 10:21 pm
Mangalore Correspondent
Mumbai Crime, Fruad, Torres Ponzi: ಚೈನ್ ಸ್ಕೀಮ...
10-01-25 11:05 pm
Bangladeshi national illegal, Mangalore: ಮುಕ್...
10-01-25 09:51 pm
Mangalore Robbery, Crime, Singari Beedi: ಸಿಂಗ...
10-01-25 10:11 am
Share Market Scam, Mangalore: ಷೇರು ಮಾರುಕಟ್ಟೆ...
09-01-25 10:43 pm