ಬ್ರೇಕಿಂಗ್ ನ್ಯೂಸ್
26-11-23 09:25 pm Mangaluru Correspondent ಕ್ರೈಂ
ಪುತ್ತೂರು, ನ.26: ಸವಣೂರು ಗ್ರಾಮದ ಎಡಪತ್ಯ ಫಾರ್ಮ್ ನಲ್ಲಿ 25 ಗೋಣಿಯಷ್ಟು ಒಣ ಅಡಿಕೆ ಕಳ್ಳತನ ಆಗಿರುವ ಶಂಕೆ ವ್ಯಕ್ತವಾಗಿದೆ. ನ.25ರಂದು ಶನಿವಾರ ನಸುಕಿನಲ್ಲಿ ತಲವಾರು ತೋರಿಸಿ ಪರಾರಿಯಾಗಿದ್ದ ಅಡಿಕೆ ಕಳ್ಳರ ಕೃತ್ಯದ ಹಿನ್ನೆಲೆಯಲ್ಲಿ ಸೋಲಾರ್ ಅಂಗಳದಲ್ಲಿ ಇರಿಸಲಾಗಿದ್ದ ಅಡಿಕೆಯನ್ನು ಪರಿಶೀಲಿಸಿದಾಗ 5 ಲಕ್ಷದಷ್ಟು ಮೊತ್ತದ ಅಡಿಕೆ ಕಳವಾಗಿದೆ ಎನ್ನಲಾಗುತ್ತಿದೆ.
ಈ ಬಗ್ಗೆ ಅಡಿಕೆ ಫಾರ್ಮ್ಸ್ ಮಾಲೀಕ, ಸವಣೂರು ಗ್ರಾಮದ ನಿವಾಸಿ ಚಂದ್ರ ಎಡಪತ್ಯ ಅವರು ಬೆಳ್ಳಾರೆ ಠಾಣೆಗೆ ದೂರು ನೀಡಿದ್ದಾರೆ. ನ.25ರಂದು ನಸುಕಿನ ವೇಳೆಗೆ 3.30ರ ಸುಮಾರಿಗೆ ಚಂದ್ರ ಅವರ ಪುತ್ರ ನಿಷ್ಕಲ್ ರಾಮ, ಮೈಸೂರಿನಿಂದ ಬೈಕಿನಲ್ಲಿ ಮನೆಗೆ ಆಗಮಿಸಿದ್ದರು. ಈ ವೇಳೆ, ಮನೆಯ ಅಂಗಳಕ್ಕೆ ಸ್ಕೂಟರ್ ಮತ್ತು ಇನ್ನೊಂದು ಕಾರಿನಲ್ಲಿ ಬಂದಿದ್ದ ಅಡಿಕೆ ಕಳ್ಳರು ಸುಲಿದಿಟ್ಟ ಅಡಿಕೆ ಮತ್ತು ಒಣಗಲು ಹಾಕಿದ್ದ ಅಡಿಕೆಯನ್ನು ಕಳವು ಮಾಡುತ್ತಿದ್ದರು.
ಅಡಿಕೆಯನ್ನು ತಮ್ಮ ವಾಹನಕ್ಕೆ ತುಂಬಿಸುತ್ತಿದ್ದಾಗ ನಿಷ್ಕಲ್ ರಾಮ ಪ್ರಶ್ನಿಸಿದ್ದು, ಈ ವೇಳೆ ಆರೋಪಿಗಳು ತಲವಾರು ತೋರಿಸಿ ಬೆದರಿಸಿದ್ದಾರೆ. ನಿಷ್ಕಲ್ ಆರೋಪಿಗಳಲ್ಲಿ ಒಬ್ಬನನ್ನು ಹಿಡಿಯಲು ಯತ್ನಿಸಿದಾಗ ಹಲ್ಲೆ ನಡೆಸಿದ್ದಾರೆ. ಎರಡು ಗೋಣಿ ಚೀಲದಲ್ಲಿ ಸುಲಿದಿಟ್ಟ ಅಡಿಕೆಯನ್ನು ಸ್ಕೂಟರಿನಲ್ಲಿಟ್ಟು ಒಬ್ಬಾತ ಪರಾರಿಯಾಗಿದ್ದಾನೆ.
ಇನ್ನೊಬ್ಬ ವ್ಯಕ್ತಿ ಬಶೀರ್ ಎನ್ನುವಾತ ಸುಲಿಯದ ಅಡಿಕೆಯನ್ನು ಎಂಟು ಗೋಣಿ ಚೀಲದಲ್ಲಿ ತುಂಬಿಸಿ ಕಾರಿನಲ್ಲಿ ಹಾಕಿ ಪರಾರಿಯಾಗಲು ಯತ್ನಿಸಿದ್ದಾನೆ. ಅಷ್ಟರಲ್ಲಿ ಬೊಬ್ಬೆ ಕೇಳಿ ಮನೆಯವರು ಬಂದಿದ್ದು ಬಶೀರ್ ನನ್ನು ಹಿಡಿದು ಕೂಡಿ ಹಾಕಿದ್ದಾರೆ. ವಿಚಾರಣೆ ವೇಳೆ ಪರಾರಿಯಾದ ವ್ಯಕ್ತಿಯನ್ನು ಹಕೀಂ ಎಂದು ಬಶೀರ್ ತಿಳಿಸಿದ್ದಾನೆ. ಸದ್ರಿ ಆರೋಪಿಯನ್ನು ಹಿಡಿದು ಮನೆಯವರೇ ಬೆಳ್ಳಾರೆ ಠಾಣೆಗೆ ಕರೆತಂದಿದ್ದು, ದೂರು ನೀಡಿದ್ದಾರೆ. ಪೊಲೀಸ್ ವಿಚಾರಣೆ ವೇಳೆ ಆರೋಪಿ ಬಶೀರ್ ಇದೇ ರೀತಿ ಹಲವು ಸಮಯದಿಂದ ಅಡಿಕೆ ಕಳ್ಳತನ ಮಾಡುತ್ತಿರುವುದಾಗಿ ಹೇಳಿದ್ದಾನೆ.
Two arecanut thieves, who arrived in a vehicle to Edapathya farm of Savanoor, swung a sword at the son of the owner as he caught them red handed.
12-09-26 09:40 pm
HK News Staffer
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
ಬಿಜೆಪಿ ಅಧಿಕಾರಕ್ಕೆ ಬರಲು ನನ್ನ ಸ್ಥಾನ ಬಿಟ್ಟುಕೊಟ್ಟ...
12-09-26 05:56 pm
ಐಎಎಸ್ ತೇರ್ಗಡೆಯಾಗಿದ್ದ ಕೇರಳದ ಮೊದಲ ಬುಡಕಟ್ಟು ಮಹಿಳ...
12-09-26 05:53 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
13-09-26 10:11 pm
HK News
ಕುತ್ತಾರು ರಾಜರಾಜೇಶ್ವರಿ ಸಿದ್ಧಿವಿನಾಯಕ ಕ್ಷೇತ್ರದಲ್...
13-09-26 08:10 pm
AI Centre in Madiyala: ಮಡಿಯಾಲದಲ್ಲಿ ಎಐ ಉನ್ನತ ಶ...
13-09-26 07:53 pm
ಬೆಳ್ತಂಗಡಿ ; ಹೆಬ್ಬಾವನ್ನು ನುಂಗಿ ಮನೆಯ ತೋಟದಲ್ಲಿ ಅ...
12-09-26 03:09 pm
ಮಂಗಳೂರಿನಲ್ಲಿ ಸಚಿವ ಸಂಪುಟ ಸಭೆ ; ಮೂಲಸೌಲಭ್ಯ, ಕೈಗಾ...
12-09-26 10:53 am
12-09-26 07:41 pm
HK News Staffer
ಕ್ರಿಪ್ಟೊ ಕರೆನ್ಸಿ ಹೆಸ್ರಲ್ಲಿ ಡಾಕ್ಟರ್ ಗೆ ಮಹಿಳೆಯಿ...
11-09-26 06:38 pm
ಜಾಮೀನು ಪಡೆಯಲು ನಕಲಿ ಆಧಾರ್ ಕಾರ್ಡ್ ಹಾಜರು ; ಉಡು...
11-09-26 01:09 pm
ಬೈಕ್ಗೆ ಡಿಕ್ಕಿ ಹೊಡೆದ ಕಾರು ; ಚಾಮರಾಜನಗರದಲ್ಲಿ ಮೂ...
11-09-26 10:14 am
ಕುಂದಾಪುರದಲ್ಲಿ 8 ಶಾಲಾ ಮಕ್ಕಳ ಬಲಿ ಪಡೆದ ಭೀಕರ ಅಪಘಾ...
10-09-26 08:16 pm