ಬ್ರೇಕಿಂಗ್ ನ್ಯೂಸ್
30-11-23 03:15 pm Bangalore Correspondent ಕ್ರೈಂ
ಬೆಂಗಳೂರು, ನ.30 : ತನ್ನ ಪ್ರಿಯಕರನ ಮೊಬೈಲ್‌ನಲ್ಲಿ 13 ಸಾವಿರ ಯುವತಿಯರ ನಗ್ನ ಫೋಟೋಗಳನ್ನು ಕಂಡ ಪ್ರೇಯಸಿಯೊಬ್ಬಳು ಶಾಕ್ ಆಗಿದ್ದಾಳೆ. ಈ ಸಂಬಂಧ ಬೆಂಗಳೂರು ಕೇಂದ್ರ ವಿಭಾಗದ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರಿನ ಬಿಪಿಓ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ 22 ವರ್ಷದ ಯುವತಿ, ತನ್ನ ಸಹೋದ್ಯೋಗಿ ಯುವಕನನ್ನು ಪ್ರೀತಿಸುತ್ತಿದ್ದಳು. ಇಬ್ಬರು ಆಗಾಗ್ಗೆ ಖಾಸಗಿ ಕ್ಷಣಗಳನ್ನು ಕಳೆದಿದ್ದಾರೆ. ಅದನ್ನು ಪ್ರಿಯಕರ ತನ್ನ ಮೊಬೈಲ್‌ನಲ್ಲಿ ಸೆರೆ ಹಿಡಿದುಕೊಂಡಿದ್ದ. ಅದನ್ನು ಗಮನಿಸಿದ್ದ ಯುವತಿ, ಹುಡುಗ ಶೌಚಾಲಯಕ್ಕೆ ಹೋದಾಗ ಆತನ ಮೊಬೈಲ್ ತೆಗೆದು ತನ್ನ ಫೋಟೊ ಡಿಲೀಟ್ ಮಾಡಲು ಮುಂದಾಗಿದ್ದಳು. ಆಗ ಆತನ ಮೊಬೈಲ್ ನಲ್ಲಿ ಬರೋಬರಿ 13 ಸಾವಿರ ಯುವತಿಯರ ನಗ್ನ ಫೋಟೋಗಳು, ವಿಡಿಯೋಗಳನ್ನು ಕಂಡು ಬೆಚ್ಚಿ ಬಿದ್ದಿದ್ದಾಳೆ.
ವಿಪರ್ಯಾಸವೆಂದರೆ ಈ ಪೈಕಿ ತನ್ನದೇ ಸಂಸ್ಥೆಯಲ್ಲಿ ಕೆಲಸ ಮಾಡುವ ಹಲವು ಯುವತಿಯರ ಮಾದಕ ಚಿತ್ರಗಳಿದ್ದವು. ಇದನ್ನೆಲ್ಲ ಕಂಡು ಶಾಕ್ ಆದ ಯುವತಿ, ಪ್ರಿಯಕರನ ಜತೆ ಜಗಳ ನಡೆಸಿ ಆತನಿಂದ ದೂರವಾಗಿದ್ದಾಳೆ. ಬಳಿಕ ತನ್ನ ಕಚೇರಿಯ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾಳೆ.
ಅಧಿಕಾರಿ ವರ್ಗ, ಕಚೇರಿಯಲ್ಲಿ ಪರಿಶೀಲನೆ ನಡೆಸಿದ್ದಾರೆ. ಆತ ಮಾತ್ರ ತಾನು ಯಾವ ಯುವತಿಗೂ ತೊಂದರೆ ಕೊಟ್ಟಿಲ್ಲ ಎಂದಿದ್ದಾನೆ. ಇಷ್ಟೊಂದು ಯುವತಿಯರ ಅರೆನಗ್ನ ಫೋಟೋಗಳನ್ನು ಹೇಗೆ ಸಂಗ್ರಹಿಸಿದ್ದಾನೆ ಎಂಬ ಬಗ್ಗೆ ತನಿಖೆ ನಡೆಸಿದ್ದಾರೆ. ಯುವತಿಯರ ಫೋಟೊ ತೆಗೆದು ಮಾರ್ಫ್ ಮಾಡಿರುವ ಸಾಧ್ಯೆತೆಯಿದೆ ಎನ್ನಲಾಗುತ್ತಿದೆ. ಈ ಬಗ್ಗೆ ಕಂಪನಿ ಅಧಿಕಾರಿಗಳೇ ನ.23ರಂದು ಕೇಂದ್ರ ವಿಭಾಗದ ಸೆನ್ ಠಾಣೆಗೆ ದೂರು ನೀಡಿದ್ದರು. ಪೊಲೀಸರು ಬಳಿಕ ಮಂಗಳೂರು ಮೂಲದ ಆದಿತ್ಯ ಸಂತೋಷ್ ಎಂಬ ಟೆಕ್ಕಿಯನ್ನು ಬಂಧಿಸಿದ್ದಾರೆ. ಹುಡುಗಿಯರ ಫೋಟೊ ಮಾರ್ಫ್ ಮಾಡಿಕೊಂಡು ಈ ರೀತಿ ಸಂಗ್ರಹಿಸಿಟ್ಟಿದ್ದಾಗಿ ಯುವಕ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.
Mangalore based BPO staffer arrested for storing 13000 naked photos and videos of women in Bangalore. The accused BPO staffer, identified as Aditya Santhosh, was arrested by the Bengaluru Cyber Crime police.
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
12-05-25 11:23 am
HK News Desk
ಪಾಕಿಸ್ತಾನದ ಉಗ್ರರ ನೆಲೆಗಳ ಧ್ವಂಸ ; ಫೋಟೊ ಸಾಕ್ಷ್ಯ...
11-05-25 11:02 pm
ಭಾರತದ ಮೇಲೆ ದಾಳಿಗೆ ಟರ್ಕಿ ಡ್ರೋಣ್ ಬಳಕೆ ; ಒಂದೇ ರಾ...
11-05-25 06:25 pm
ಆಪರೇಷನ್ ಸಿಂಧೂರ ಇನ್ನೂ ಮುಗಿದಿಲ್ಲ.. ಕದನ ವಿರಾಮ ಘೋ...
11-05-25 06:12 pm
ಜಮ್ಮು ಗಡಿಯಲ್ಲಿ ಪಾಕ್ ಶೆಲ್ ದಾಳಿ ; ಬಿಎಸ್ಎಫ್ ಯೋಧ,...
11-05-25 01:43 pm
12-05-25 11:26 am
HK News Desk
Mangalore, Pilikula, Dr Suryaprakash Shenoy:...
11-05-25 05:01 pm
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
Mangalore University, U T Khader, Syndicate M...
09-05-25 06:22 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm