ಬ್ರೇಕಿಂಗ್ ನ್ಯೂಸ್
07-12-23 05:56 pm HK News Desk ಕ್ರೈಂ
ಗಾಜಿಯಾಬಾದ್, ಡಿ.7: ಮದುವೆ ಸಮಾರಂಭದಲ್ಲಿ ವೈಟರ್ ಒಯ್ಯುತ್ತಿದ್ದ ಊಟದ ತಟ್ಟೆ ಅತಿಥಿಗಳಿಗೆ ತಾಗಿದ ಕಾರಣಕ್ಕೆ ಆತನನ್ನು ಯುವಕರು ಸೇರಿಕೊಂಡು ಹೊಡೆದು ಕೊಲೆಗೈದ ಘಟನೆ ಉತ್ತರ ಪ್ರದೇಶದ ಗಾಜಿಯಾಬಾದ್ ನಗರದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ನವೆಂಬರ್ 17ರಂದು ಘಟನೆ ನಡೆದಿದ್ದು, ಪಂಕಜ್(26) ಕೊಲೆಯಾದ ಯುವಕ. ಘಟನೆಯ ಬೆನ್ನತ್ತಿದ ಪೊಲೀಸರು ಕೊಲೆ ಆರೋಪಿಗಳನ್ನು ಬಂಧಿಸಿದ್ದಾರೆ. ಗಾಜಿಯಾಬಾದ್ ನಗರದ ಸಿಜಿಎಸ್ ವಾಟಿಕಾ ಗೆಸ್ಟ್ ಹೌಸ್ ನಲ್ಲಿ ವೇಟರ್ ಆಗಿ ಕೆಲಸ ಮಾಡಿಕೊಂಡಿದ್ದ ಪಂಕಜ್ ನ.17ರಂದು ಕೆಲಸಕ್ಕೆ ಹೋಗಿದ್ದು ಮರಳಿ ಬಂದಿರಲಿಲ್ಲ. ಈ ಬಗ್ಗೆ ಪಂಕಜ್ ತಾಯಿ ಪೊಲೀಸ್ ದೂರು ನೀಡಿದ್ದರು. ಗೆಸ್ಟ್ ಹೌಸ್ ನಲ್ಲಿ ವೇಟರ್ ಕೆಲಸ ಮಾಡಿಕೊಂಡಿದ್ದ ಬಗ್ಗೆ ಮತ್ತು ನ.17ರಂದು ಮದುವೆ ಸಮಾರಂಭ ಆಯೋಜಿಸಿದ್ದ ಬಗ್ಗೆ ಮಾಹಿತಿ ನೀಡಿದ್ದರು.
ಪೊಲೀಸರ ವಿಚಾರಣೆಯಲ್ಲಿ ಗೆಸ್ಟ್ ಹೌಸ್ ಕಂಟ್ರಾಕ್ಟರ್ ಮನೋಜ್ ಗುಪ್ತಾ ಸೇರಿದಂತೆ ನಾಲ್ವರು ಕೊಲೆಗೈದಿರುವುದು ತಿಳಿದುಬಂದಿದೆ. ಬಳಸಿದ ಊಟದ ತಟ್ಟೆಗಳನ್ನು ಒಯ್ಯುತ್ತಿದ್ದಾಗ ಅತಿಥಿಗಳ ಮೈಗೆ ಮುಟ್ಟಿದ ವಿಚಾರದಲ್ಲಿ ಯುವಕರ ಮಧ್ಯೆ ಮಾತಿಗೆ ಮಾತು ಬೆಳೆದಿತ್ತು. ಆನಂತರ, ವೇಟರ್ ಪಂಕಜ್ ತಲೆಯ ಭಾಗಕ್ಕೆ ಹೊಡೆದಿದ್ದರು. ನೆಲಕ್ಕೆ ಕುಸಿದು ಬಿದ್ದಿದ್ದ ಪಂಕಜ್ ಮೃತಪಟ್ಟಿದ್ದಾನೆಂದು ತಿಳಿದು ಪಕ್ಕದ ಕಾಡಿನಲ್ಲಿ ದೇಹವನ್ನು ಎಸೆದು ಹೋಗಿದ್ದರು. ತನಿಖೆ ನಡೆಸಿದ ಪೊಲೀಸರು ಪಂಕಜ್ ಮೃತದೇಹ ಪತ್ತೆ ಮಾಡಿದ್ದರು. ಪೋಸ್ಟ್ ಮಾರ್ಟಂ ವರದಿಯಲ್ಲಿ ತಲೆಗೆ ಆಳವಾದ ಗಾಯವಾಗಿದ್ದು ತಿಳಿದುಬಂದಿತ್ತು. ಇದರ ಆಧಾರದಲ್ಲಿ ತನಿಖೆ ನಡೆಸಿದ ಪೊಲೀಸರು ಮನೋಜ್ ಗುಪ್ತಾ, ಅಮಿತ್ ಕುಮಾರ್ ಸೇರಿ ಮೂವರನ್ನು ಕಸ್ಟಡಿಗೆ ಪಡೆದಿದ್ದಾರೆ.
An argument over a tray carrying used plates touching the guests at a wedding led to the death of a 26-year-old waiter in Ghaziabad, the police said on Wednesday. The incident took place at the CGS Vatika guest house on Pusta Road in Ghaziabad on the evening of November 17, the police said.
11-01-25 10:53 pm
HK News Desk
ಕೊಪ್ಪದ ಮೇಗೂರು ಅರಣ್ಯದಲ್ಲಿ ಶರಣಾಗಿದ್ದ ನಕ್ಸಲರ ಶಸ...
11-01-25 10:27 pm
BBMP Raid, Lokayukta; ಬಿಬಿಎಂಪಿ 50 ಕಡೆಗಳಲ್ಲಿ ಲ...
11-01-25 09:14 pm
CT Ravi,Threat, Lakshmi Hebbalkar; ಬೆಳಗಾವಿ ಅಭ...
11-01-25 02:11 pm
Asha Strick, CM Siddaramaiah ಆಶಾ ಕಾರ್ಯಕರ್ತೆಯರ...
10-01-25 11:01 pm
09-01-25 12:11 pm
HK News Desk
ತಿರುಪತಿಯಲ್ಲಿ ಕಾಲ್ತುಳಿತಕ್ಕೆ ಏಳು ಸಾವು ; ವೈಕುಂಠ...
09-01-25 11:22 am
StalinCM, Lipi: ಸಿಂಧೂ ನಾಗರಿಕತೆಯ ಲಿಪಿಗಳನ್ನು ಅರ...
08-01-25 11:07 pm
Crime News, Nagpur Couple: ಮಧ್ಯರಾತ್ರಿವರೆಗೆ 26...
08-01-25 10:53 pm
ಹೊಸವರ್ಷದ ಆರಂಭದಲ್ಲೇ ಟಿಬೆಟ್ ಮಂದಿಗೆ ಭಾರಿ ಆಘಾತ ;...
07-01-25 06:32 pm
11-01-25 10:34 pm
Mangalore Correspondent
Mangalore Lit Fest 2025, Hardeep Singh Puri;...
11-01-25 07:19 pm
DYFI, CM Siddaramaiah, IPS Anupam Agrawal; ಪೊ...
11-01-25 04:57 pm
Lava Kusha Jodukare Kambala, Mangalore; ತೃತೀಯ...
11-01-25 02:25 pm
Mangalore Annamalai, Naxals: ನಕ್ಸಲ್ ಶರಣಾಗತಿ ಬ...
11-01-25 12:44 pm
11-01-25 10:21 pm
Mangalore Correspondent
Mumbai Crime, Fruad, Torres Ponzi: ಚೈನ್ ಸ್ಕೀಮ...
10-01-25 11:05 pm
Bangladeshi national illegal, Mangalore: ಮುಕ್...
10-01-25 09:51 pm
Mangalore Robbery, Crime, Singari Beedi: ಸಿಂಗ...
10-01-25 10:11 am
Share Market Scam, Mangalore: ಷೇರು ಮಾರುಕಟ್ಟೆ...
09-01-25 10:43 pm