ಬ್ರೇಕಿಂಗ್ ನ್ಯೂಸ್
17-12-23 06:33 pm HK News Desk ಕ್ರೈಂ
ನವದೆಹಲಿ, ಡಿ 17: 60 ವರ್ಷದ ಮಹಿಳೆಯೊಂದಿಗೆ ಸೆಕ್ಸ್ ಮಾಡಿ, ಆಕೆಯನ್ನೇ ಕೊಂದು ಶವವನ್ನು ಬೆಡ್‌ರೂಮಿನಲ್ಲಿ ಬಚ್ಚಿಟ್ಟಿದ್ದ 31 ವರ್ಷದ ವ್ಯಕ್ತಿಯನ್ನ ಬಂಧಿಸಿರುವ ಘಟನೆ ದೆಹಲಿಯಲ್ಲಿ ನಡೆದಿದೆ
ಆಶಾದೇವಿ ಕೊಲೆಯಾದ ಮಹಿಳೆ, 31 ವರ್ಷದ ದೇವೇಂದ್ರ ಅಲಿಯಾಸ್ ದೇವ್ ಕೊಲೆ ಆರೋಪಿ ಎಂದು ಗುರುತಿಸಲಾಗಿದೆ. 31 ವರ್ಷದ ದೇವೇಂದ್ರ 60 ವರ್ಷದ ಮಹಿಳೆಯೊಂದಿಗೆ ದೈಹಿಕ ಸಂಬಂಧ ಹೊಂದಿದ್ದ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ. ಮೃತ ಮಹಿಳೆಯು ದೇವೇಂದ್ರ ಬೇರೋಬ್ಬಾಕೆ ವಿವಾಹವಾಗುವುದನ್ನು ತಡೆದಿದ್ದಕ್ಕೆ ಕೊಲೆ ಮಾಡಿರುವುದಾಗಿ ತಿಳಿದುಬಂದಿದೆ.
ಡಿಸಿಪಿ ಜಾಯ್ ಟಿರ್ಕಿ ಪ್ರಕಾರ, ಆರೋಪಿಯನ್ನು ಉತ್ತರ ಪ್ರದೇಶದ ಅಲಿಗಢದಲ್ಲಿ ಬಂಧಿಸಲಾಗಿದೆ. ಹತ್ಯೆಯಾದ ಐದು ದಿನಗಳ ನಂತರ ಶುಕ್ರವಾರ ಈಶಾನ್ಯ ದೆಹಲಿಯ ನಂದ ನಗರ ಪ್ರದೇಶದ ಅವರ ಮನೆಯಿಂದ ಆಶಾದೇವಿ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.
ಆರೋಪಿ ದೇವೇಂದ್ರ 2015ರಲ್ಲಿ ಕೆಲಸ ಹುಡುಕಿಕೊಂಡು ಅಲಿಗಢಕ್ಕೆ ಬಂದು, ತಾಮ್ರದ ತಂತಿ ಪ್ಯಾಕಿಂಗ್ ಮಾಡುವ ಬಿಸಿನೆಸ್ ಆರಂಭಿಸಿದ್ದ. ಕೋವಿಡ್ ಕಾಲದಲ್ಲಿ ನಷ್ಟ ಅನುಭವಿಸಿದ್ದರಿಂದ 2 ವರ್ಷಗಳ ಕಾಲ ಉದ್ಯೋಗವಿಲ್ಲದೇ ಕುಳಿತಿದ್ದ. ಆದ್ರೆ ಜರ್ಮನಿಯಲ್ಲಿ ಓದುತ್ತಿರುವುದಾಗಿ ಹೇಳಿ ಅಲಿಗಢದಲ್ಲಿ ನೆಲೆಸಿರುವ ತಂದೆಯಿಂದ ಹಣ ಪಡೆದಿದ್ದ. ಹಣ ಹೊಂದಿಸಲು ಅವನ ತಂದೆ ತನ್ನ ಭೂಮಿಯನ್ನು ಮಾರಬೇಕಾಯಿತು ಎಂದು ಪೊಲೀಸ್ ತನಿಖೆಯಲ್ಲಿ ತಿಳಿದುಬಂದಿದೆ.
ಕೊಲೆ ನಡೆದಿದ್ದು ಹೇಗೆ?
ಪೊಲೀಸರ ಪ್ರಕಾರ, 2019ರಲ್ಲಿ ಆರೋಪಿ ದೇವೇಂದ್ರ ನಂದ ನಗರಲ್ಲಿರುವ ಆಶಾದೇವಿ ಎಂಬಾಕೆಯ ಮನೆಯಲ್ಲಿ ಬಾಡಿಗೆಗಾಗಿ ವಾಸಿಸಲು ಪ್ರಾರಂಭಿಸಿದ್ದ. ಕೆಲ ಸಮಯಗಳಲ್ಲೇ ಆಕೆಯೊಂದಿಗೆ ಸ್ನೇಹ ಬೆಳೆಸಿದ್ದ. ಇಬ್ಬರ ನಡುವೆ ದೈಹಿಕ ಸಂಬಂಧವೂ ಬೆಳೆದಿತ್ತು. ಆದ್ರೆ ದೇವೇಂದ್ರ ಆಶಾದೇವಿ ಮನೆಯಲ್ಲಿ ಬಾಡಿಗೆದಾರನಾಗಿ ವಾಸಿಸುತ್ತಿದ್ದ ದೇವೇಂದ್ರ 2 ವರ್ಷಗಳ ಬಳಿಕ ಮತ್ತೊಬ್ಬಳು ಮಹಿಳೆಯನ್ನೂ ಭೇಟಿ ಮಾಡಿದ್ದ. ಆಕೆಯೊಂದಿಗೂ ದೈಹಿಕ ಸಂಪರ್ಕ ಬೆಳೆದಿದ್ದ. ಕೊನೆಗೆ ಇಬ್ಬರು ಮದುವೆಯಾಗಲು ನಿರ್ಧರಿಸಿ ಇದೇ ಡಿಸೆಂಬರ್ 4ರಂದು ಅಲಿಗಢದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು.’
ಈ ವಿಷಯ ತಿಳಿದ ಮನೆಯೊಡತಿ ಆಶಾದೇವಿ, ದೇವೇಂದ್ರನನ್ನು ಭೇಟಿಯಾಗಲು ಕರೆದಿದ್ದಳು. ದೇವೇಂದ್ರ ನಿಶ್ಚಿತಾರ್ಥ ಗೆಳತಿಯನ್ನೂ ಮನೆಗೆ ಕರೆದುಕೊಂಡು ಬಂದು ತಾವಿಬ್ಬರು ಮದುವೆಯಾಗುತ್ತಿರುವುದಾಗಿ ಹೇಳಿದ್ದಾನೆ. ಆದ್ರೆ ಆಶಾದೇವಿ ದೇವೇಂದ್ರನನ್ನು ಬೇರೆ ಮದುವೆಯಾಗಲು ಬಿಡುವುದಿಲ್ಲ ಎಂದು ಹೇಳಿದ್ದಾಳೆ. ಇದಕ್ಕೆ ಅವನು ವಿರೋಧಿಸಿದಾಗ ಆತನಿಗೆ ಕಪಾಳಮೋಕ್ಷ ಮಾಡಿದಾಳೆ. ಇದರಿಂದ ಕೋಪಗೊಂಡ ಆರೋಪಿ ಮಹಿಳೆಯ ತಲೆಗೆ ಇಟ್ಟಿಗೆಯಿಂದ ಹೊಡೆದಿದ್ದಾನೆ.
ಮಹಿಳೆ ಪ್ರಜ್ಞಾಹೀನಳಾಗಿದ್ದರೂ ಆರೋಪಿ ಆಕೆಯ ತಲೆಗೆ ಹಲವಾರು ಬಾರಿ ಇಟ್ಟಿಗೆಯಿಂದ ಹೊಡೆದು, ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಇದಾದ ಬಳಿಕ ಆಶಾದೇವಿ ಬಳಿಯಿದ್ದ 13 ಸಾವಿರ ಹಣ, ಚಿನ್ನಾಭರಣ ದೋಚಿ ಅಲಿಗಢಕ್ಕೆ ಪರಾರಿಯಾಗಿದ್ದಾರೆ. ಈ ವಿಷಯ ಯಾರಿಗೂ ತಿಳಿದಿರಲಿಲ್ಲ. ಇದೇ ಡಿಸೆಂಬರ್ 5ರಂದು ಆಕೆಯ ಮನೆಯ ಕೊಠಡಿಯಿಂದ ದುರ್ವಾಸನೆ ಬರುತ್ತಿದ್ದುದ್ದನ್ನು ಗಮನಿಸಿ ಜನರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಬೆಡ್‌ರೂಮಿನಲ್ಲಿದ್ದ ಬಾಕ್ಸ್ ತೆರೆದು ನೋಡಿದಾಗ ಆಶಾದೇವಿಯ ಛಿದ್ರಗೊಂಡ ಶವ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
A man was arrested on Saturday for allegedly killing his 60-year-old landlady and then stuffing her body in a bed box, police said on Saturday. Devender alias “Dev” (31) had “physical relations” with the victim, Asha Devi, and he told police that she was against him marrying another woman, they said.
11-01-25 10:53 pm
HK News Desk
ಕೊಪ್ಪದ ಮೇಗೂರು ಅರಣ್ಯದಲ್ಲಿ ಶರಣಾಗಿದ್ದ ನಕ್ಸಲರ ಶಸ...
11-01-25 10:27 pm
BBMP Raid, Lokayukta; ಬಿಬಿಎಂಪಿ 50 ಕಡೆಗಳಲ್ಲಿ ಲ...
11-01-25 09:14 pm
CT Ravi,Threat, Lakshmi Hebbalkar; ಬೆಳಗಾವಿ ಅಭ...
11-01-25 02:11 pm
Asha Strick, CM Siddaramaiah ಆಶಾ ಕಾರ್ಯಕರ್ತೆಯರ...
10-01-25 11:01 pm
09-01-25 12:11 pm
HK News Desk
ತಿರುಪತಿಯಲ್ಲಿ ಕಾಲ್ತುಳಿತಕ್ಕೆ ಏಳು ಸಾವು ; ವೈಕುಂಠ...
09-01-25 11:22 am
StalinCM, Lipi: ಸಿಂಧೂ ನಾಗರಿಕತೆಯ ಲಿಪಿಗಳನ್ನು ಅರ...
08-01-25 11:07 pm
Crime News, Nagpur Couple: ಮಧ್ಯರಾತ್ರಿವರೆಗೆ 26...
08-01-25 10:53 pm
ಹೊಸವರ್ಷದ ಆರಂಭದಲ್ಲೇ ಟಿಬೆಟ್ ಮಂದಿಗೆ ಭಾರಿ ಆಘಾತ ;...
07-01-25 06:32 pm
11-01-25 10:34 pm
Mangalore Correspondent
Mangalore Lit Fest 2025, Hardeep Singh Puri;...
11-01-25 07:19 pm
DYFI, CM Siddaramaiah, IPS Anupam Agrawal; ಪೊ...
11-01-25 04:57 pm
Lava Kusha Jodukare Kambala, Mangalore; ತೃತೀಯ...
11-01-25 02:25 pm
Mangalore Annamalai, Naxals: ನಕ್ಸಲ್ ಶರಣಾಗತಿ ಬ...
11-01-25 12:44 pm
11-01-25 10:21 pm
Mangalore Correspondent
Mumbai Crime, Fruad, Torres Ponzi: ಚೈನ್ ಸ್ಕೀಮ...
10-01-25 11:05 pm
Bangladeshi national illegal, Mangalore: ಮುಕ್...
10-01-25 09:51 pm
Mangalore Robbery, Crime, Singari Beedi: ಸಿಂಗ...
10-01-25 10:11 am
Share Market Scam, Mangalore: ಷೇರು ಮಾರುಕಟ್ಟೆ...
09-01-25 10:43 pm