ಬ್ರೇಕಿಂಗ್ ನ್ಯೂಸ್
19-12-23 07:04 pm Mangalore Correspondent ಕ್ರೈಂ
ಉಳ್ಳಾಲ, ಡಿ.19: ಮನೆಯನ್ನೇ ಅಕ್ರಮ ಸಾರಾಯಿ ಘಟಕವನ್ನಾಗಿಸಿ ಅಂತರಾಜ್ಯ ಸ್ಪಿರಿಟ್ ಧಂದೆಯಲ್ಲಿ ತೊಡಗಿಸಿದ್ದ ಪ್ರಮುಖ ಕಿಂಗ್ ಪಿನ್ ತಲಪಾಡಿ, ಸಾಂತ್ಯದ ಲೋಕಲ್ ಪುಢಾರಿ ನಿತ್ಯಾನಂದ ಭಂಡಾರಿಯನ್ನ ಅಬಕಾರಿ ಪೊಲೀಸರು ವಶಕ್ಕೆ ಪಡೆದಿರುವ ಮಾಹಿತಿ ಲಭಿಸಿದೆ.
ಕಳೆದ ಮಂಗಳವಾರ ಕರ್ನಾಟಕ- ಕೇರಳ ಗಡಿ ಪ್ರದೇಶ ತಲಪಾಡಿ ಸಮೀಪದ ಕಿನ್ಯ ಗ್ರಾಮದ ಸಾಂತ್ಯ ನಿವಾಸಿ ನಿತ್ಯಾನಂದ ಭಂಡಾರಿ ಎಂಬವನ ಮನೆಯಲ್ಲಿ ನಡೆಸಲ್ಪಡುತ್ತಿದ್ದ ಅಕ್ರಮ ಸಾರಾಯಿ ಘಟಕಕ್ಕೆ ದಾಳಿ ಮಾಡಿದ ಅಬಕಾರಿ ಪೊಲೀಸರು 2240 ಲೀಟರ್ ಸ್ಪಿರಿಟ್ ಹಾಗೂ 222 ಲೀಟರ್ ನಕಲಿ ಲಿಕ್ಕರ್ ಅನ್ನು ವಶಪಡಿಸಿಕೊಂಡಿದ್ದರು. ಅಂತಾರಾಜ್ಯ ಸ್ಪಿರಿಟ್ ಮಾರಾಟ ದಂಧೆಯ ಖಚಿತ ಮಾಹಿತಿ ಮೇರೆಗೆ ಅಬಕಾರಿ ಪೊಲೀಸರು ಆರೋಪಿ ಮನೆಗೆ ದಾಳಿ ನಡೆಸಿ ಅಪಾರ ಪ್ರಮಾಣದ ಮದ್ಯ ವಶಪಡಿಸಿಕೊಂಡಿದ್ದರು.


ಅಕ್ರಮ ಮದ್ಯವನ್ನ ನಿತ್ಯಾನಂದ ಕೇರಳಕ್ಕೆ ಸಾಗಿಸುತ್ತಿದ್ದು ಅಬಕಾರಿ ಪೊಲೀಸರ ದಾಳಿ ವೇಳೆ ಪರಾರಿಯಾಗಿ ತಲೆಮರೆಸಿಕೊಂಡಿದ್ದ. ಇದೀಗ ಆರೋಪಿ ನಿತ್ಯಾನಂದನನ್ನ ಪೊಲೀಸರು ವಶಕ್ಕೆ ಪಡೆದಿದ್ದು ವೈದ್ಯಕೀಯ ಪರೀಕ್ಷೆಗೊಳಪಡಿಸಿ ವರ್ಕೌಟ್ ಮಾಡುತ್ತಿರುವುದಾಗಿ ಮಾಹಿತಿ ಲಭಿಸಿದೆ.
ಜನರಿಗೆ ಪ್ರಾಣಕ್ಕೆ ಮಾರಕವಾದ ಸ್ಪಿರಿಟ್ ಕುಡಿಸಿ ತನ್ನ ಜೇಬು ತುಂಬಿಸಿ ಕೋಟಿ ಕುಳವಾಗಿರುವ ನಿತ್ಯಾನಂದ ಈ ಹಿಂದೆ ತನ್ನ ಮುಂಬಯಿ ಧಣಿಗಳ ಕಾಳ ಧನವನ್ನ ಚಕ್ರಬಡ್ಡಿಗೆ ಕೊಟ್ಟು ಧನಿಕನಾಗಿದ್ದ. ಇಷ್ಟಲ್ಲದೆ ಧಾರ್ಮಿಕ ಕಾರ್ಯಕ್ರಮ, ರಾಜಕೀಯ ಪಕ್ಷದಲ್ಲೂ ಗುರುತಿಸಿಕೊಂಡು ತಾನೇ ಡೊನೇಷನ್ ನೀಡಿ ವೇದಿಕೆಯಲ್ಲಿ ಲೋಕಲ್ ಪುಡಾರಿಯಾಗಿ ಮಿಂಚುತ್ತಿದ್ದ ಎಂದು ಸ್ಥಳೀಯರು ತಿಳಿಸಿದ್ದಾರೆ.
Mangalore Inter state illegal liquor sale, King pin Nithyananda Bhandary arrested from Talapady. Few days ago Excise Department officials from Mangaluru unearthed an inter-State illicit liquor racket close to the Karnataka-Kerala border near Talapady on Tuesday night and arrested three persons.
24-01-26 08:31 pm
Mangaluru Staffer
ಸಿದ್ದರಾಮಯ್ಯ ಆಪ್ತ ಮರಿಗೌಡ ಮುಡಾದಿಂದ ಅಕ್ರಮ ನಿವೇಶನ...
23-01-26 03:21 pm
ವಿಧಾನಸಭೆ ಅಧಿವೇಶನ ; ಭಾಷಣ ಅರ್ಧಕ್ಕೆ ಬಿಟ್ಟು ತೆರಳಿ...
22-01-26 10:27 pm
ಕುಕ್ಕೆ ಸುಬ್ರಹ್ಮಣ್ಯ ; 2 ತಿಂಗಳಲ್ಲಿ 14 ಕೋಟಿಗೂ ಹೆ...
22-01-26 05:20 pm
ಚಾಮರಾಜನಗರದಲ್ಲಿ ಚಿರತೆ ದಾಳಿ ; ಪಾದಯಾತ್ರೆಗೆ ಹೊರಟ್...
21-01-26 01:31 pm
24-01-26 08:38 pm
HK staffer
ಮಂಜೇಶ್ವರ ಚೆಕ್ ಪೋಸ್ಟ್ ನಲ್ಲಿ ವಾಹನ ತಪಾಸಣೆ ; ಕೆಎಸ...
23-01-26 06:44 pm
ಗಾಜಾದಲ್ಲಿ ಶಾಂತಿ ಸ್ಥಾಪನೆಗೆ 35 ದೇಶಗಳ ಮಂಡಳಿ ರಚನೆ...
22-01-26 10:16 pm
ರೈಲಿನ ಶೌಚಾಲಯದಲ್ಲಿ ಎರಡು ಗಂಟೆ ಲಾಕ್ ಮಾಡಿಕೊಂಡ ಯುವ...
22-01-26 01:52 pm
ಗ್ರೀನ್ ಲ್ಯಾಂಡ್ ; ಯುರೋಪ್ ರಾಷ್ಟ್ರಗಳ ಮೇಲೆ ಸುಂಕ ಹ...
22-01-26 01:16 pm
24-01-26 11:23 pm
Mangaluru Staffer
ದೇಶದ ಅತಿ ಹಳೆಯ ತಾಂತ್ರಿಕ ಶಿಕ್ಷಣ ಸಂಸ್ಥೆ ಮಂಗಳೂರಿನ...
24-01-26 08:14 pm
ಬಹುಮುಖ ಪ್ರತಿಭೆಯ ಕಲಾವಿದ ಸ್ವಾತಿ ಸತೀಶ್ ಆತ್ಮಹತ್ಯೆ...
24-01-26 08:04 pm
ಯೆನಪೋಯ ವಿವಿಯಲ್ಲಿ ಮಾನಸಿಕ ಆರೋಗ್ಯ ನರ್ಸಿಂಗ್ ವಿಭಾಗ...
23-01-26 09:21 pm
National Conference on Neuropsychiatry Held a...
23-01-26 09:08 pm
25-01-26 10:11 pm
HK staffer
Indias Biggest Robbery in Belagavi: ಇಡೀ ದೇಶದಲ...
25-01-26 09:48 am
ರಾಮಕುಂಜ ; ತಂದೆ - ಮಗನ ಜಗಳ ದುರಂತ ಅಂತ್ಯ, ಚೂರಿ ಇರ...
24-01-26 11:18 pm
ಜನಾರ್ದನ ರೆಡ್ಡಿ ಮಾಡೆಲ್ ಹೌಸ್ ಗೆ ಬೆಂಕಿ ; ಎಂಟು ಮಂ...
24-01-26 08:53 pm
ಅವಧಿ ಮೀರಿದ ಮಾತ್ರೆ ನೀಡಿದ್ದಾಗಿ ವಿಡಿಯೋ ವೈರಲ್ ; ಕ...
24-01-26 02:13 pm