ಬ್ರೇಕಿಂಗ್ ನ್ಯೂಸ್
09-01-24 01:38 pm Bangalore Correspondent ಕ್ರೈಂ
ಬೆಂಗಳೂರು, ಜ.9: ಗೋವಾದ ಹೋಟೆಲ್ ಒಂದರಲ್ಲಿ ಮಗುವಿನ ಹತ್ಯೆ ಮಾಡಿದ ಆರೋಪದಲ್ಲಿ ಬೆಂಗಳೂರಿನ ಉದ್ಯಮಿ, ಸ್ಟಾರ್ಟ್ ಅಪ್ ಫೌಂಡರ್ & ಸಿಇಓ ಆಗಿರುವ ಸುಚನಾ ಸೇಠ್ ಅವರನ್ನು ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಪೊಲೀಸರು ಬಂಧಿಸಿದ್ದಾರೆ. ಗೋವಾಗೆ ತೆರಳಿದ್ದಾಗ ಹೋಟೆಲ್ನಲ್ಲಿ ತಂಗಿದ್ದ ಸುಚನಾ ಸೇಠ್ ಕೊಠಡಿಯಲ್ಲಿ ತನ್ನ ಮಗನ ಹತ್ಯೆ ಮಾಡಿದ್ದಾರೆ ಎನ್ನಲಾಗಿದೆ.
ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಸ್ಟಾರ್ಟ್ ಅಪ್ ಮೈಂಡ್‌ಫುಲ್ (ಎಐ) ಲ್ಯಾಬ್ ಎಂಬ ಸಂಸ್ಥೆಯ ಸಿಇಓ ಆಗಿರುವ ಸುಚನಾ ಸೇಠ್ ಸೋಮವಾರ ರಾತ್ರಿ ಬೆಂಗಳೂರಿಗೆ ವಾಪಸಾಗುತ್ತಿದ್ದಾಗ ಚಿತ್ರದುರ್ಗ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಗೋವಾದಿಂದ ಬೆಂಗಳೂರಿಗೆ ಟ್ಯಾಕ್ಸಿ ಮಾಡಿಕೊಂಡು ಬಂದಿದ್ದ ಆರೋಪಿಯನ್ನು ಗೋವಾ ಪೊಲೀಸರ ಸೂಚನೆ ಮೇರೆಗೆ ಐಮಂಗಲದಲ್ಲಿ ಬಂಧಿಸಲಾಗಿದೆ.

ಹೋಟೆಲ್ನಿಂದ ಬೆಂಗಳೂರಿಗೆ ಹೋಗಲು ತಮ್ಮ ಸೂಟ್ ಕೇಸ್ ಹಿಡಿದು ಟ್ಯಾಕ್ಸಿಯತ್ತ ಹೊರಟಾಗ ಹೋಟೆಲ್ ಸಿಬ್ಬಂದಿ ನಿಮ್ಮ ಜೊತೆ ಬಂದಿದ್ದ ಮಗು ಎಲ್ಲಿ ಎಂದು ವಿಚಾರಿಸಿದ್ದಾರೆ. ಆಗ ಸುಚನಾ ಅವರು ಸಂಬಂಧಿಕರ ಮನೆಗೆ ಕಳಿಸಿದ್ದೇನೆಂದು ಸುಳ್ಳು ಹೇಳಿ ಟ್ಯಾಕ್ಸಿ ಮೂಲಕ ಬೆಂಗಳೂರಿನತ್ತ ತೆರಳಿದ್ದರು. ಈ ವೇಳೆ ಅನುಮಾನಗೊಂಡ ಹೋಟೆಲ್ನವರು ರೂಮ್ ಸ್ವಚ್ಛಗೊಳಿಸಲು ಹೋಗಿದ್ದು ಅಲ್ಲಿ ರಕ್ತದ ಕಲೆಗಳು ಪತ್ತೆಯಾಗಿವೆ. ಇದರಿಂದ ಬೆಚ್ಚಿಬಿದ್ದ ಸಿಬ್ಬಂದಿ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ, ಪೊಲೀಸರು ಟ್ಯಾಕ್ಸಿ ಡ್ರೈವರ್ ಸಂಪರ್ಕ ಮಾಡಿ, ಹೈವೇ ಬಳಿ ಪೊಲೀಸ್ ಠಾಣೆ ಕಂಡಾಕ್ಷಣ ನಿಲ್ಲಿಸುವಂತೆ ಸೂಚನೆ ನೀಡಿದ್ದಾರೆ.
ಇದರಂತೆ, ರಾಷ್ಟ್ರೀಯ ಹೆದ್ದಾರಿ 4ರ ಐಮಂಗಲ ಪೊಲೀಸ್ ಠಾಣೆ ಬಳಿ ಟ್ಯಾಕ್ಸಿ ಚಾಲಕ ಕಾರು ನಿಲ್ಲಿಸಿದ್ದು ಪೊಲೀಸರು ಆರೋಪಿ ಸುಚನಾ ಸೇಠ್ ರನ್ನು ವಶಕ್ಕೆ ಪಡೆದಿದ್ದಾರೆ. ಈ ವೇಳೆ, ಕಾರಿನ ಡಿಕ್ಕಿಯಲ್ಲಿದ್ದ ಸೂಟ್ ಕೇಸ್‌ನಲ್ಲಿ ಮಗುವಿನ ಶವ ಪತ್ತೆಯಾಗಿದೆ. ಸುಚನಾ ಸೇಠ್ ಪತಿ ವೆಂಕಟ ರಾಮನ್ ಚಿತ್ರದುರ್ಗಕ್ಕೆ ಆಗಮಿಸಿದ್ದು, ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಸುಚನಾ ಸೇಠಳನ್ನು ಹೆಚ್ಚಿನ ತನಿಖೆಗಾಗಿ ಗೋವಾಕ್ಕೆ ಕರೆದೊಯ್ಯಲಾಗಿದೆ.
ತನ್ನ ಮಾಜಿ ಪತಿಯ ಮೇಲಿನ ವಿರಸದಿಂದಾಗಿಯೇ ಮಗುವನ್ನು ಕೊಂದಿದ್ದಾಳೆ ಎಂಬ ಶಂಕೆ ವ್ಯಕ್ತವಾಗಿದೆ. ತನ್ನ ಪತಿ ಮಗುವಿನ ಜತೆ ಮಾತನಾಡಬಾರದು ಎಂಬ ಕಾರಣಕ್ಕಾಗಿ ಸುಚನಾ ಸೇಠ್ ಮಗುವನ್ನೇ ಹತ್ಯೆಗೈದಿರುವುದಾಗಿ ತಿಳಿದುಬಂದಿದೆ. 2010ರಲ್ಲಿ ವಿವಾಹವಾಗಿದ್ದ ಸೇಠ್ ದಂಪತಿಗೆ 2019ರಲ್ಲಿ ಗಂಡು ಮಗು ಜನಿಸಿತ್ತು. ಇಬ್ಬರ ನಡುವಿನ ವಿರಸದಿಂದಾಗಿ 2020ರಲ್ಲಿ ವಿವಾಹ ವಿಚ್ಛೇದನ ಪಡೆದಿದ್ದರು. ಆದರೆ ಪ್ರತಿ ಭಾನುವಾರ ಮಗುವನ್ನು ಭೇಟಿಯಾಗಲು ತಂದೆಗೆ ಕೋರ್ಟ್ ಅನುಮತಿ ನೀಡಿದ್ದರಿಂದ ಇದೇ ವಿಚಾರ ಗಲಾಟೆಗೆ ಕಾರಣವಾಗಿತ್ತು.
Bengalore CEO kills 4-year-old son in Goa, carries body in bag to Chitradurga arrested.The CEO of The Mindful AI Lab, Suchana Seth, was arrested in Karnataka's Chitradurga on Monday while transporting her son's body in a bag. The incident happened after she allegedly killed her 4-year-old son in a hotel room in Candolim, North Goa.
24-01-26 08:31 pm
Mangaluru Staffer
ಸಿದ್ದರಾಮಯ್ಯ ಆಪ್ತ ಮರಿಗೌಡ ಮುಡಾದಿಂದ ಅಕ್ರಮ ನಿವೇಶನ...
23-01-26 03:21 pm
ವಿಧಾನಸಭೆ ಅಧಿವೇಶನ ; ಭಾಷಣ ಅರ್ಧಕ್ಕೆ ಬಿಟ್ಟು ತೆರಳಿ...
22-01-26 10:27 pm
ಕುಕ್ಕೆ ಸುಬ್ರಹ್ಮಣ್ಯ ; 2 ತಿಂಗಳಲ್ಲಿ 14 ಕೋಟಿಗೂ ಹೆ...
22-01-26 05:20 pm
ಚಾಮರಾಜನಗರದಲ್ಲಿ ಚಿರತೆ ದಾಳಿ ; ಪಾದಯಾತ್ರೆಗೆ ಹೊರಟ್...
21-01-26 01:31 pm
24-01-26 08:38 pm
HK staffer
ಮಂಜೇಶ್ವರ ಚೆಕ್ ಪೋಸ್ಟ್ ನಲ್ಲಿ ವಾಹನ ತಪಾಸಣೆ ; ಕೆಎಸ...
23-01-26 06:44 pm
ಗಾಜಾದಲ್ಲಿ ಶಾಂತಿ ಸ್ಥಾಪನೆಗೆ 35 ದೇಶಗಳ ಮಂಡಳಿ ರಚನೆ...
22-01-26 10:16 pm
ರೈಲಿನ ಶೌಚಾಲಯದಲ್ಲಿ ಎರಡು ಗಂಟೆ ಲಾಕ್ ಮಾಡಿಕೊಂಡ ಯುವ...
22-01-26 01:52 pm
ಗ್ರೀನ್ ಲ್ಯಾಂಡ್ ; ಯುರೋಪ್ ರಾಷ್ಟ್ರಗಳ ಮೇಲೆ ಸುಂಕ ಹ...
22-01-26 01:16 pm
24-01-26 11:23 pm
Mangaluru Staffer
ದೇಶದ ಅತಿ ಹಳೆಯ ತಾಂತ್ರಿಕ ಶಿಕ್ಷಣ ಸಂಸ್ಥೆ ಮಂಗಳೂರಿನ...
24-01-26 08:14 pm
ಬಹುಮುಖ ಪ್ರತಿಭೆಯ ಕಲಾವಿದ ಸ್ವಾತಿ ಸತೀಶ್ ಆತ್ಮಹತ್ಯೆ...
24-01-26 08:04 pm
ಯೆನಪೋಯ ವಿವಿಯಲ್ಲಿ ಮಾನಸಿಕ ಆರೋಗ್ಯ ನರ್ಸಿಂಗ್ ವಿಭಾಗ...
23-01-26 09:21 pm
National Conference on Neuropsychiatry Held a...
23-01-26 09:08 pm
25-01-26 09:48 am
HK News Desk
ರಾಮಕುಂಜ ; ತಂದೆ - ಮಗನ ಜಗಳ ದುರಂತ ಅಂತ್ಯ, ಚೂರಿ ಇರ...
24-01-26 11:18 pm
ಜನಾರ್ದನ ರೆಡ್ಡಿ ಮಾಡೆಲ್ ಹೌಸ್ ಗೆ ಬೆಂಕಿ ; ಎಂಟು ಮಂ...
24-01-26 08:53 pm
ಅವಧಿ ಮೀರಿದ ಮಾತ್ರೆ ನೀಡಿದ್ದಾಗಿ ವಿಡಿಯೋ ವೈರಲ್ ; ಕ...
24-01-26 02:13 pm
ಬೈಕ್ ಕದ್ದೊಯ್ಯುತ್ತಿದ್ದ ಇಬ್ಬರನ್ನು ಮರಕ್ಕೆ ಕಟ್ಟಿ...
23-01-26 09:36 pm