ಬ್ರೇಕಿಂಗ್ ನ್ಯೂಸ್
22-11-20 11:11 am Mangalore Correspondent ಕ್ರೈಂ
ಮಂಗಳೂರು, ನವೆಂಬರ್ 21 : ಕೊರೊನಾ ಹಿನ್ನೆಲೆಯಲ್ಲಿ ಆಸ್ಪತ್ರೆಯಿಂದ ಎರಡು ಲಕ್ಷ ರೂ. ಹಣ ಸಿಗುವುದೆಂದು ನಂಬಿಸಿ ಮಹಿಳೆಯ ಕರಿಮಣಿ ಸರ ಮತ್ತು 20 ಸಾವಿರ ನಗದನ್ನು ಲಪಟಾಯಿಸಿದ ಘಟನೆ ತೊಕ್ಕೊಟ್ಟಿನಲ್ಲಿ ನಡೆದಿದೆ.
ಮಹಿಳೆಯೊಬ್ಬರು ತೊಕ್ಕೊಟ್ಟು ಜಂಕ್ಷನ್ನಲ್ಲಿರುವ ರೇಷನ್ ಅಂಗಡಿಯ ಬಳಿ ನಿಂತಿದ್ದರು. ಈ ವೇಳೆ ಸ್ಥಳಕ್ಕೆ ಬಂದ ವ್ಯಕ್ತಿಯೊಬ್ಬ ತನ್ನನ್ನು ರಾಕೇಶ್ ಎಂದು ಪರಿಚಯಿಸಿದ್ದು ಬ್ಯಾಂಕ್ ಅಧಿಕಾರಿಯೆಂದು ಹೇಳಿಕೊಂಡಿದ್ದಾನೆ. ಕೊರೊನಾ ಕಾರಣದಿಂದ ಸರಕಾರದಿಂದ ಹಣ ಬಂದಿದೆ. ಅದಕ್ಕಾಗಿ ಆಸ್ಪತ್ರೆಗೆ ಹೋಗಿ ಟೆಸ್ಟ್ ಮಾಡಬೇಕು. ಟೆಸ್ಟಿಂಗ್ ಮಾಡಿ ರಿಪೋರ್ಟ್ ನೀಡಲು ವೈದ್ಯರಿಗೆ 20 ಸಾವಿರ ರೂ. ಕೊಡಬೇಕಾಗುತ್ತದೆ ಎಂದು ಹೇಳಿದ್ದಾನೆ. ಮಹಿಳೆಗೆ ನಂಬಿಕೆ ಬರಲು ತೊಕ್ಕೊಟ್ಟಿನಲ್ಲಿ ಆಸ್ಪತ್ರೆಗೂ ಕರೆದೊಯ್ದಿದ್ದಾನೆ. ಆದರೆ, ಆಸ್ಪತ್ರೆಯ ಹೊರಗೆ ನಿಂತು ಇಲ್ಲಿ ಟೆಸ್ಟ್ ಮಾಡಿ ಓಕೆ ಆದರೆ ಎರಡು ಲಕ್ಷ ಸಿಗುತ್ತೆ ಅಂತ ನಂಬಿಸಿದ್ದಾನೆ.
ಕೊನೆಗೆ, ಮಹಿಳೆಯು ತನ್ನಲ್ಲಿರುವ ಕರಿಮಣಿ ಸರವನ್ನು ಒಮ್ಮೆಗೆ ಅಡ ಇಟ್ಟು ಹಣ ತರುವ ಉಪಾಯ ಹೇಳಿದ್ದಾನೆ. ಮಹಿಳೆ ಅದಕ್ಕೆ ಒಪ್ಪಿದ್ದಲ್ಲದೆ, ಸರವನ್ನು ತೆಗೆದು ಯುವಕನ ಕೈಗೆ ಕೊಟ್ಟಿದ್ದಾರೆ. ಈ ವೇಳೆ, ನಿಮ್ಮ ಕುತ್ತಿಗೆ ಖಾಲಿಯಾಗುವುದು ಬೇಡ, ಇದು ತನ್ನ ತಾಯಿಯ ಸರವೆಂದು ಹೇಳಿ ಬೇರೊಂದು ಸರವನ್ನು ಮಹಿಳೆಯ ಕೈಗಿತ್ತಿದ್ದಾನೆ. ಮಹಿಳೆಯ ನಂಬಿಕೆ ಗಳಿಸಲು ನಕಲಿ ಸರವನ್ನು ಕೊಟ್ಟು ಆಕೆಯ ಚಿನ್ನದ ಸರ ಪಡೆದು ಆಸ್ಪತ್ರೆಯ ಒಳ ಹೋದವ ಮತ್ತೆ ಬರಲಿಲ್ಲ. ಅಲ್ಲಿಂದಲೇ ಪರಾರಿಯಾಗಿದ್ದಾನೆ. ಮಹಿಳೆ ಕಾದು ಸುಸ್ತಾಗಿ ಆಸ್ಪತ್ರೆಯ ಸಿಬಂದಿ ಬಳಿ ವಿಚಾರಿಸಿದಾಗ ತಾನು ಮೋಸ ಹೋಗಿದ್ದು ಅರಿವಾಗಿದೆ. ಅಲ್ಲದೆ, ಆತ ನೀಡಿದ್ದು ನಕಲಿ ಚಿನ್ನ ಎನ್ನುವುದು ಗೊತ್ತಾಗಿದೆ. ಮಹಿಳೆ ಬಳಿಕ ಉಳ್ಳಾಲ ಠಾಣೆಯಲ್ಲಿ ಕೇಸು ದಾಖಲಿಸಿದ್ದಾರೆ.
ಕೊರೊನಾ ಹಿನ್ನೆಲೆಯಲ್ಲಿ ಆಸ್ಪತ್ರೆಯಿಂದ ಎರಡು ಲಕ್ಷ ರೂ. ಹಣ ಸಿಗುವುದೆಂದು ನಂಬಿಸಿ ಮಹಿಳೆಯ ಕರಿಮಣಿ ಸರ ಮತ್ತು 20 ಸಾವಿರ ನಗದನ್ನು ಲಪಟಾಯಿಸಿದ ಘಟನೆ ತೊಕ್ಕೊಟ್ಟಿನಲ್ಲಿ ನಡೆದಿದೆ.
ಮಹಿಳೆಯೊಬ್ಬರು ತೊಕ್ಕೊಟ್ಟು ಜಂಕ್ಷನ್ನಲ್ಲಿರುವ ರೇಷನ್ ಅಂಗಡಿಯ ಬಳಿ ನಿಂತಿದ್ದರು. ಈ ವೇಳೆ ಸ್ಥಳಕ್ಕೆ ಬಂದ ವ್ಯಕ್ತಿಯೊಬ್ಬ ತನ್ನನ್ನು ರಾಕೇಶ್ ಎಂದು ಪರಿಚಯಿಸಿದ್ದು ಬ್ಯಾಂಕ್ ಅಧಿಕಾರಿಯೆಂದು ಹೇಳಿಕೊಂಡಿದ್ದಾನೆ. ಕೊರೊನಾ ಕಾರಣದಿಂದ ಸರಕಾರದಿಂದ ಹಣ ಬಂದಿದೆ. ಅದಕ್ಕಾಗಿ ಆಸ್ಪತ್ರೆಗೆ ಹೋಗಿ ಟೆಸ್ಟ್ ಮಾಡಬೇಕು. ಟೆಸ್ಟಿಂಗ್ ಮಾಡಿ ರಿಪೋರ್ಟ್ ನೀಡಲು ವೈದ್ಯರಿಗೆ 20 ಸಾವಿರ ರೂ. ಕೊಡಬೇಕಾಗುತ್ತದೆ ಎಂದು ಹೇಳಿದ್ದಾನೆ. ಮಹಿಳೆಗೆ ನಂಬಿಕೆ ಬರಲು ತೊಕ್ಕೊಟ್ಟಿನಲ್ಲಿ ಆಸ್ಪತ್ರೆಗೂ ಕರೆದೊಯ್ದಿದ್ದಾನೆ. ಆದರೆ, ಆಸ್ಪತ್ರೆಯ ಹೊರಗೆ ನಿಂತು ಇಲ್ಲಿ ಟೆಸ್ಟ್ ಮಾಡಿ ಓಕೆ ಆದರೆ ಎರಡು ಲಕ್ಷ ಸಿಗುತ್ತೆ ಅಂತ ನಂಬಿಸಿದ್ದಾನೆ.
ಕೊನೆಗೆ, ಮಹಿಳೆಯು ತನ್ನಲ್ಲಿರುವ ಕರಿಮಣಿ ಸರವನ್ನು ಒಮ್ಮೆಗೆ ಅಡ ಇಟ್ಟು ಹಣ ತರುವ ಉಪಾಯ ಹೇಳಿದ್ದಾನೆ. ಮಹಿಳೆ ಅದಕ್ಕೆ ಒಪ್ಪಿದ್ದಲ್ಲದೆ, ಸರವನ್ನು ತೆಗೆದು ಯುವಕನ ಕೈಗೆ ಕೊಟ್ಟಿದ್ದಾರೆ. ಈ ವೇಳೆ, ನಿಮ್ಮ ಕುತ್ತಿಗೆ ಖಾಲಿಯಾಗುವುದು ಬೇಡ, ಇದು ತನ್ನ ತಾಯಿಯ ಸರವೆಂದು ಹೇಳಿ ಬೇರೊಂದು ಸರವನ್ನು ಮಹಿಳೆಯ ಕೈಗಿತ್ತಿದ್ದಾನೆ. ಮಹಿಳೆಯ ನಂಬಿಕೆ ಗಳಿಸಲು ನಕಲಿ ಸರವನ್ನು ಕೊಟ್ಟು ಆಕೆಯ ಚಿನ್ನದ ಸರ ಪಡೆದು ಆಸ್ಪತ್ರೆಯ ಒಳ ಹೋದವ ಮತ್ತೆ ಬರಲಿಲ್ಲ. ಅಲ್ಲಿಂದಲೇ ಪರಾರಿಯಾಗಿದ್ದಾನೆ. ಮಹಿಳೆ ಕಾದು ಸುಸ್ತಾಗಿ ಆಸ್ಪತ್ರೆಯ ಸಿಬಂದಿ ಬಳಿ ವಿಚಾರಿಸಿದಾಗ ತಾನು ಮೋಸ ಹೋಗಿದ್ದು ಅರಿವಾಗಿದೆ. ಅಲ್ಲದೆ, ಆತ ನೀಡಿದ್ದು ನಕಲಿ ಚಿನ್ನ ಎನ್ನುವುದು ಗೊತ್ತಾಗಿದೆ. ಮಹಿಳೆ ಬಳಿಕ ಉಳ್ಳಾಲ ಠಾಣೆಯಲ್ಲಿ ಕೇಸು ದಾಖಲಿಸಿದ್ದಾರೆ.
A case was filed at Ullal police station after a woman lost her mangal sutra worth Rs 60,000 and cash Rs 20,000. The woman was duped by a man who assured her that hospitals are providing money for corona.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
21-04-25 02:13 pm
HK News Desk
No GST on UPI Payments: ಎರಡು ಸಾವಿರಕ್ಕಿಂತ ಮೇಲಿ...
20-04-25 08:42 pm
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
20-04-25 05:42 pm
Mangalore Correspondent
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
21-04-25 01:03 pm
Bangalore Correspondent
Karnataka DGP Om Prakash Murder, wife: ನಿವೃತ್...
20-04-25 10:52 pm
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm