ಬ್ರೇಕಿಂಗ್ ನ್ಯೂಸ್
04-02-24 06:50 pm Mangalore Correspondent ಕ್ರೈಂ
ಬೆಳ್ತಂಗಡಿ, ಫೆ.4: ಆನ್ಲೈನ್ ಮೋಸದ ಉದ್ದೇಶದಲ್ಲಿ ಅಕ್ರಮವಾಗಿ ಅಪರಿಮಿತ ಸಿಮ್ ಗಳನ್ನು ಸಾಗಿಸುತ್ತಿದ್ದ ನಾಲ್ವರು ಯುವಕರನ್ನು ಧರ್ಮಸ್ಥಳ ಪೊಲೀಸರು ಸೆರೆಹಿಡಿದಿದ್ದಾರೆ. ಧರ್ಮಸ್ಥಳದಿಂದ ಬೆಂಗಳೂರಿಗೆ ಹೊರಟಿದ್ದ ಯುವಕರ ತಂಡವನ್ನು ಪೊಲೀಸರು ಸುಳಿವು ಆಧರಿಸಿ ಬಂಧಿಸಿದ್ದಾರೆ.
ಒಬ್ಬ ಅಪ್ರಾಪ್ತ ಸೇರಿ ಐವರು ಯುವಕರಲ್ಲಿ 42 ಅಕ್ರಮ ಸಿಮ್ಗಳು ಪತ್ತೆಯಾಗಿದ್ದು ಫೆಬ್ರವರಿ 1 ರಂದು ನೆರಿಯ ಗ್ರಾಮದಲ್ಲಿ ಯುವಕರನ್ನು ಬಂಧಿಸಿ ಸಿಮ್ಗಳನ್ನು ಜಪ್ತಿ ಮಾಡಲಾಗಿದೆ. ರಮೀಝ್ (20), ಅಕ್ಬರ್ ಅಲಿ (24), ಮೊಹಮ್ಮದ್ ಮುಸ್ತಫಾ (22), ಮೊಹಮ್ಮದ್ ಸಾದಿಕ್ (27) ಬಂಧಿತರು. ಇವರ ಜೊತೆ 17 ವರ್ಷದ ಅಪ್ರಾಪ್ತ ಬಾಲಕನೂ ಇದ್ದಾನೆ.
ಆರೋಪಿ ಅಕ್ಬರ್ ಅಲಿ ದುಬೈನಲ್ಲಿ ಇದ್ದಾಗ ಬೇರೆಯವರ ಹೆಸರಿನಲ್ಲಿ ನಕಲಿ ದಾಖಲೆ ಕೊಟ್ಟು ಸಿಮ್ ಖರೀದಿ ಮಾಡುತ್ತಿದ್ದ. ನಾಲ್ಕು ತಿಂಗಳ ಹಿಂದೆ ಊರಿಗೆ ಮರಳಿದ್ದು ವಿದೇಶದ ನಂಟು ಇರುವುದರಿಂದ ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.
ಅಕ್ಬರ್ ಆಲಿ ತನ್ನ ಸ್ನೇಹಿತ ಮೊಹಮ್ಮದ್ ಮುಸ್ತಫಾನಲ್ಲಿ ಹೇಳಿ ಸಿಮ್ ಖರೀದಿಸುತ್ತಿದ್ದ. ಮುಸ್ತಫಾಗೆ ರಮೀಜ್ ಮತ್ತು ಸಾದಿಕ್ ನೆರವು ನೀಡಿದ್ದು ಬೇರೆ ಬೇರೆ ಕಡೆಗಳಲ್ಲಿ ತಮ್ಮ ಆತ್ಮೀಯರಿಂದ ಕಮಿಷನ್ ಕೊಟ್ಟು ಸಿಮ್ ಖರೀದಿಸಿ ಕೊಡುತ್ತಿದ್ದರು. ನಂತರ ಅಕ್ಬರ್ ಆಲಿ ಸೂಚನೆಯಂತೆ ಇವರು ಸಿಮ್ ಕಾರ್ಡ್‌ಗಳನ್ನು ಬೆಂಗಳೂರಿನ ವ್ಯಕ್ತಿಗಳಿಗೆ ಪೂರೈಸುವ ಕೆಲಸ ಮಾಡುತ್ತಿದ್ದರು. ಪ್ರಾಥಮಿಕ ತನಿಖೆಯಲ್ಲಿ ನಕಲಿ ಸಿಮ್ ಪೂರೈಕೆ ಜಾಲ ಪತ್ತೆಯಾಗಿದ್ದು ಇದರ ಹಿಂದಿನ ಅಜೆಂಡಾ ಬಗ್ಗೆ ಕುತೂಹಲ ಉಂಟಾಗಿದೆ.
The Dharmasthala police at Dakshina Kannada in Karnataka have successfully dismantled an illegal operation involving the purchase of 42 SIM cards, suspected to be linked to a foreign currency transfer business. The accused, allegedly part of a clandestine network, were reportedly engaged in converting foreign currency into Indian rupees through online channels with the help of foreign intermediaries.
17-05-25 01:44 pm
Bangalore Correspondent
Santosh Lad, Modi, Pak, War: ಮೋದಿ ತಾವೇ ಸುಪ್ರೀ...
16-05-25 10:04 am
Davanagere Sp, Constable Accident: ದಾವಣಗೆರೆಯಲ...
15-05-25 10:16 pm
Yatnal FIR, Mahatma Gandhi; ಮಹಾತ್ಮ ಗಾಂಧಿ ಪಾಕಿ...
15-05-25 11:59 am
Pro Pakistan slogan, Arrest, Bangalore: ಬೆಂಗಳ...
14-05-25 05:16 pm
17-05-25 10:51 pm
HK News Desk
Donald Trump, Asim Munir: ಡೊನಾಲ್ಡ್ ಟ್ರಂಪ್ ಕುಟ...
17-05-25 03:42 pm
ಡೊನಾಲ್ಡ್ ಟ್ರಂಪ್ ಟೀಕಿಸಿದ್ದ ಪೋಸ್ಟ್ ಡಿಲೀಟ್ ಮಾಡಿದ...
16-05-25 04:45 pm
ಮುಸ್ಲಿಂ ವ್ಯಕ್ತಿಗೆ ಕುರಾನ್ ಪ್ರಕಾರ ನಾಲ್ಕು ಮದುವೆ...
15-05-25 09:09 pm
Donald Trump: ನಾನೇನೂ ಮಧ್ಯಸ್ಥಿಕೆ ವಹಿಸಿರಲಿಲ್ಲ,...
15-05-25 08:38 pm
17-05-25 10:09 pm
Mangalore Correspondent
Mangalore Balmatta Accident, Bus, Video: ನಿಂತ...
17-05-25 08:52 pm
Sakleshpur Subrahmanya Railway Electrificatio...
17-05-25 01:01 pm
CM Siddaramaiah, New Dc Office Mangalore Inau...
16-05-25 10:27 pm
Siddaramaiah, Cm Mangalore, BJP black flag: ಸ...
16-05-25 06:05 pm
17-05-25 05:00 pm
Bangalore Correspondent
Mangalore Stabbing, Panemangalore, Crime, Att...
16-05-25 11:06 pm
Belagavi Protest, Quran Burnt, Police, Crime:...
16-05-25 09:20 pm
Davanagere Crime, Gold Robbery: ಆನ್ಲೈನ್ ಗೇಮಿಂ...
15-05-25 11:06 pm
Bangalore Crime, Mobile showroom: ಮೊಬೈಲ್ ಅಂಗಡ...
15-05-25 06:02 pm