ಬ್ರೇಕಿಂಗ್ ನ್ಯೂಸ್
11-03-24 05:21 pm Mangaluru Correspondent ಕ್ರೈಂ
ಬಂಟ್ವಾಳ, ಮಾ.11: ವಿಟ್ಲ ಬಳಿಯ ಅಡ್ಯನಡ್ಕದ ಕರ್ಣಾಟಕ ಬ್ಯಾಂಕ್ ಶಾಖೆಗೆ ನುಗ್ಗಿ ಲಾಕರ್ ಒಡೆದು ಕೋಟ್ಯಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಮತ್ತು ನಗದು ಲೂಟಿಗೈದ ಪ್ರಕರಣದಲ್ಲಿ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಬಿಸಿ ರೋಡ್, ಗೂಡಿನಬಳಿ ನಿವಾಸಿ ಮಹಮ್ಮದ್ ರಫೀಕ್ (35), ಉಪ್ಪಳ ಮೊಗ್ರಾಲ್ ನಿವಾಸಿ ಇಬ್ರಾಹಿಂ ಖಲಂದರ್ (41), ಬಾಯಾರು ಗಾಳಿಯಡ್ಕ ನಿವಾಸಿ ದಯಾನಂದ(41) ಬಂಧಿತರು. ಕಳೆದ ಫೆ.7ರಂದು ಬ್ಯಾಂಕ್ ಶಾಖೆಗೆ ನುಗ್ಗಿ ಕೇಜಿಗಟ್ಟಲೆ ಚಿನ್ನಾಭರಣ ಕಳವು ಮಾಡಲಾಗಿದೆ ಎಂಬ ಸುದ್ದಿ ಭಾರೀ ಸಂಚಲನ ಮೂಡಿಸಿತ್ತು. ವಿಟ್ಲ ಮತ್ತು ಬಂಟ್ವಾಳ ಪೊಲೀಸರು ಸಿಸಿಟಿವಿ ಪರಿಶೀಲನೆ ನಡೆಸಿದ್ದರೂ, ಖಚಿತ ಮಾಹಿತಿ ಸಿಕ್ಕಿರಲಿಲ್ಲ. ಹೀಗಾಗಿ ಘಟನೆ ನಡೆದು ಒಂದು ತಿಂಗಳಾಗುತ್ತಾ ಬಂದರೂ ಪೊಲೀಸರಿಗೆ ಪ್ರಕರಣ ಭೇದಿಸುವುದು ಸವಾಲಾಗಿ ಪರಿಣಮಿಸಿತ್ತು.
ಕುಡಿದ ಮತ್ತಿನಲ್ಲಿ ಬಾಯಿಬಿಟ್ಟಿದ್ದ ವೆಲ್ಡರ್
ಈ ನಡುವೆ, ವೃತ್ತಿಯಲ್ಲಿ ವೆಲ್ಡರ್ ಆಗಿದ್ದ ವ್ಯಕ್ತಿಯೊಬ್ಬ ಇತ್ತೀಚೆಗೆ ಕುಡಿದ ಮತ್ತಿನಲ್ಲಿ ಬ್ಯಾಂಕ್ ಕಳವಿನ ಬಗ್ಗೆ ತನ್ನ ಸ್ನೇಹಿತರಲ್ಲಿ ಹೇಳಿಕೊಂಡಿದ್ದ. ಕೈಯಲ್ಲಿ ಅಷ್ಟೇನೂ ಹಣ ಇಲ್ಲದೇ ಇದ್ದ ಆ ವ್ಯಕ್ತಿ ಜಾಗ ಖರೀದಿಯ ಬಗ್ಗೆಯೂ ಮಾತನಾಡಿದ್ದ. ಬ್ಯಾಂಕಿನಿಂದ ಹಣ ಎಗರಿಸಿದ್ದು ಯಾರಿಗೂ ಗೊತ್ತೇ ಆಗಿಲ್ಲ ಎಂದು ಕೊಚ್ಚಿಕೊಂಡಿದ್ದ ವಿಚಾರವನ್ನು ಅಲ್ಲಿ ಕೇಳಿಸಿಕೊಂಡಿದ್ದವರು ಪೊಲೀಸರ ಗಮನಕ್ಕೆ ತಂದಿದ್ದರು. ಆ ವ್ಯಕ್ತಿಯನ್ನು ಪೊಲೀಸರು ಕರೆದು ಬೆಂಡೆತ್ತಿದಾಗ ಕಳವು ಕೃತ್ಯದ ಸುಳಿವು ಸಿಕ್ಕಿತ್ತು.
ಲಾಕರ್ ಒಡೆಯಲು ಗ್ಯಾಸ್ ಕಟ್ಟರ್ ಬಳಕೆ
ವೆಲ್ಡಿಂಗ್ ವೃತ್ತಿಯಲ್ಲಿ ಪಳಗಿದ್ದ ದಯಾನಂದ ಈ ಹಿಂದೆ ಯಾವತ್ತೂ ಅಪರಾಧ ಚಟುವಟಿಕೆಯಲ್ಲಿ ಭಾಗಿಯಾದವನಲ್ಲ. ಆದರೆ, ಕತರ್ನಾಕ್ ಕಳ್ಳರಾಗಿದ್ದ ಉಳಿದ ನಾಲ್ವರು ದಯಾನಂದ್ ನನ್ನು ಬ್ಯಾಂಕ್ ಲಾಕರ್ ಒಡೆಯಲು ಕರೆದೊಯ್ದಿದ್ದರು. ಬ್ಯಾಂಕ್ ಶಾಖೆಯ ಹಿಂಭಾಗದಲ್ಲಿ ಪೊದೆಗಳು ತುಂಬಿರುವುದು ಮತ್ತು ಕಬ್ಬಿಣದ ಸರಳುಗಳಿದ್ದ ಕಿಟಕಿಯ ಮೂಲಕ ಒಳಹೊಕ್ಕಲು ಪ್ಲಾನ್ ಹಾಕಿದ್ದರು. ವಾರದ ಮೊದಲೇ ಈ ಬಗ್ಗೆ ಪ್ಲಾನ್ ಹಾಕಿದ್ದ ಆರೋಪಿಗಳು ಅದಕ್ಕಾಗಿ ವೆಲ್ಡರ್ ದಯಾನಂದನನ್ನು ಪುಸಲಾಯಿಸಿ ಕರೆದೊಯ್ದು ಕೃತ್ಯ ಎಸಗಿದ್ದರು.
ಕಿಟಕಿಯ ಸರಳುಗಳನ್ನು ಕತ್ತರಿಸಿ ಒಳನುಗ್ಗಿದ್ದ ಕಳ್ಳರು ಬಳಿಕ ಭದ್ರವಾಗಿದ್ದ ಲಾಕರನ್ನು ಗ್ಯಾಸ್ ಕಟ್ಟರ್ ಮೂಲಕ ಒಡೆದಿದ್ದಾರೆ. ಲಾಕರಿನಲ್ಲಿದ್ದ ಎರಡು ಕೋಟಿಗೂ ಹೆಚ್ಚು ಮೌಲ್ಯದ ಚಿನ್ನಾಭರಣ ಮತ್ತು 15 ಲಕ್ಷದಷ್ಟು ನಗದನ್ನು ಕಳ್ಳರು ಸದ್ದಿಲ್ಲದೆ, ಹೊತ್ತೊಯ್ದಿದ್ದರು. ಮರುದಿನ ಬ್ಯಾಂಕ್ ಶಾಖೆಯನ್ನು ತೆರೆದಾಗಲೇ ಕಳವು ಕೃತ್ಯ ಬೆಳಕಿಗೆ ಬಂದಿತ್ತು. ಪೊಲೀಸರು ಆರೋಪಿಗಳನ್ನು ಟ್ರೇಸ್ ಮಾಡಿದಾಗ, ಮೂವರು ಸಿಕ್ಕಿಬಿದ್ದಿದ್ದಾರೆ. ಅವರನ್ನು ಕಳವು ಕೃತ್ಯ ನಡೆದ ಅಡ್ಯನಡ್ಕಕ್ಕೆ ಸೋಮವಾರ ಬೆಳಗ್ಗೆ ಕರೆತಂದು ಮಹಜರು ನಡೆಸಿದ್ದಾರೆ. ಈ ನಡುವೆ, ಉಪ್ಪಳ ಬಳಿಯ ಪೊಸಡಿಗುಂಪೆ ಬೆಟ್ಟದಲ್ಲಿ ಆರೋಪಿಗಳು ಹೂತಿಟ್ಟಿದ್ದ ಚಿನ್ನಾಭರಣವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿತ್ತು. ಈ ಬಗ್ಗೆ ಪೊಲೀಸರು ಇನ್ನೂ ಮಾಹಿತಿ ಖಚಿತ ಪಡಿಸಿಲ್ಲ. ಅಲ್ಲದೆ, ಎಷ್ಟು ಮೌಲ್ಯದ ಚಿನ್ನಾಭರಣ ಕಳವಾಗಿದೆ ಎನ್ನುವ ಬಗ್ಗೆಯೂ ಮಾಹಿತಿ ನೀಡಿಲ್ಲ.
ಮೂಲಗಳ ಪ್ರಕಾರ, ಎರಡು ಕೋಟಿಗೂ ಹೆಚ್ಚು ಮೌಲ್ಯದ ಕೇಜಿಗಟ್ಟಲೆ ಚಿನ್ನಾಭರಣ ಕಳವಾಗಿತ್ತು ಎನ್ನಲಾಗಿದೆ. ಪ್ರಕರಣದಲ್ಲಿ ಇನ್ನೂ ಮೂವರ ಪತ್ತೆಗೆ ಬಾಕಿಯಿದ್ದು, ಅವರಿಗಾಗಿ ಪೊಲೀಸರು ಶೋಧ ನಡೆಸಿದ್ದಾರೆ. ಕೇರಳದ ಗಡಿಭಾಗಕ್ಕೆ ಹೊಂದಿಕೊಂಡ ಬಂಟ್ವಾಳ ತಾಲೂಕು ವ್ಯಾಪ್ತಿಯ ಅಡ್ಯನಡ್ಕದ ಬ್ಯಾಂಕ್ ಶಾಖೆಯಲ್ಲಿ ಭದ್ರತಾ ಲೋಪ ಆಗಿದ್ದೇ ಕಳವು ಕೃತ್ಯಕ್ಕೆ ಕಾರಣ ಎಂಬ ಆರೋಪ ಕೇಳಿಬಂದಿತ್ತು. ಲಾಕರ್, ಎಟಿಎನಂತಹ ಸೌಲಭ್ಯಗಳಿದ್ದಾಗ ಭದ್ರತಾ ಸಿಬಂದಿ, ಸಿಸಿಟಿವಿ ಇರಬೇಕಿತ್ತು. ಅಲ್ಲದೆ, ಬ್ಯಾಂಕ್ ಕಟ್ಟಡವೂ ಸುಸಜ್ಜಿತವಾಗಿರಬೇಕಿತ್ತು. ಸಿಸಿಟಿವಿ ಇಲ್ಲದಿರುವುದು ಮತ್ತು ಬ್ಯಾಂಕ್ ಕಟ್ಟಡದ ಆವರಣದಲ್ಲಿ ಪೊದೆಗಳು ಬೆಳೆದಿದ್ದು ಆರೋಪಿಗಳಿಗೆ ಒಳಹೊಕ್ಕಲು ರಹದಾರಿ ಮಾಡಿಕೊಟ್ಟಂತಿತ್ತು. ಆರೋಪಿಗಳ ಪೈಕಿ ಖಲಂದರ್ ಮತ್ತು ರಫೀಕ್ ಮಂಗಳೂರು, ಬಂಟ್ವಾಳ ಸೇರಿ ಹಲವು ಕಡೆ ಮನೆ ಕಳ್ಳತನದ ಕೇಸುಗಳನ್ನು ಹೊಂದಿದ್ದಾರೆ.
A special team investigating the theft of cash and jewellery at a private bank in Adyanadka, Kepu village under Vittal police station limits, has registered a case against three individuals and subsequently arrested them. The arrested suspects have been identified as Mohammed Rafik, also known as Goodinabali Rafik (35), from Bantwal, along with Ibrahim Kalandar (41) and Dayananda S (37) from Manjeshwar.
17-05-25 01:44 pm
Bangalore Correspondent
Santosh Lad, Modi, Pak, War: ಮೋದಿ ತಾವೇ ಸುಪ್ರೀ...
16-05-25 10:04 am
Davanagere Sp, Constable Accident: ದಾವಣಗೆರೆಯಲ...
15-05-25 10:16 pm
Yatnal FIR, Mahatma Gandhi; ಮಹಾತ್ಮ ಗಾಂಧಿ ಪಾಕಿ...
15-05-25 11:59 am
Pro Pakistan slogan, Arrest, Bangalore: ಬೆಂಗಳ...
14-05-25 05:16 pm
17-05-25 03:42 pm
HK News Desk
ಡೊನಾಲ್ಡ್ ಟ್ರಂಪ್ ಟೀಕಿಸಿದ್ದ ಪೋಸ್ಟ್ ಡಿಲೀಟ್ ಮಾಡಿದ...
16-05-25 04:45 pm
ಮುಸ್ಲಿಂ ವ್ಯಕ್ತಿಗೆ ಕುರಾನ್ ಪ್ರಕಾರ ನಾಲ್ಕು ಮದುವೆ...
15-05-25 09:09 pm
Donald Trump: ನಾನೇನೂ ಮಧ್ಯಸ್ಥಿಕೆ ವಹಿಸಿರಲಿಲ್ಲ,...
15-05-25 08:38 pm
Sofia Qureshi, BJP leader, FIR: ಸೋಫಿಯಾ ಭಯೋತ್ಪ...
14-05-25 11:08 pm
17-05-25 01:01 pm
Mangalore Correspondent
CM Siddaramaiah, New Dc Office Mangalore Inau...
16-05-25 10:27 pm
Siddaramaiah, Cm Mangalore, BJP black flag: ಸ...
16-05-25 06:05 pm
Mangalore, Dinesh Gundurao: ಇಡಿ ದೇಶದಲ್ಲಿ ಅತೀ...
16-05-25 02:47 pm
Mangalore Cargo Ship, Lakshadweep: ಲಕ್ಷದ್ವೀಪಕ...
16-05-25 10:06 am
17-05-25 05:00 pm
Bangalore Correspondent
Mangalore Stabbing, Panemangalore, Crime, Att...
16-05-25 11:06 pm
Belagavi Protest, Quran Burnt, Police, Crime:...
16-05-25 09:20 pm
Davanagere Crime, Gold Robbery: ಆನ್ಲೈನ್ ಗೇಮಿಂ...
15-05-25 11:06 pm
Bangalore Crime, Mobile showroom: ಮೊಬೈಲ್ ಅಂಗಡ...
15-05-25 06:02 pm