ಬ್ರೇಕಿಂಗ್ ನ್ಯೂಸ್
23-03-24 04:15 pm HK News Desk ಕ್ರೈಂ
ವಿಜಯಪುರ, ಮಾ 23: ಅನೈತಿಕ ಸಂಬಂಧ ಶಂಕೆ ಹಿನ್ನೆಲೆ ಜೋಡಿ ಕೊಲೆ ನಡೆದಿರುವ ಘಟನೆ ನಿಡಗುಂದಿ ತಾಲೂಕಿನ ಮಾರಡಗಿ ತಾಂಡಾ ಬಳಿ ನಡೆದಿದೆ. ತಾಲೂಕಿನ ಗಣಿ ಗ್ರಾಮದ ನಿವಾಸಿಗಳಾದ ಕಲ್ಲಪ್ಪ ಕುಂಬಾರ(35) ಪಾರ್ವತಿ ತಳವಾರ(38) ಕೊಲೆಯಾದವರು.
ವಿವಾಹಿತೆ ಪಾರ್ವತಿ ಹಾಗೂ ಕಲ್ಲಪ್ಪ ಮಧ್ಯೆ ಅಕ್ರಮ ಸಂಬಂಧವಿತ್ತು ಎನ್ನಲಾಗಿದ್ದು, ಮಾರಡಗಿ ತಾಂಡಾದ ಬಳಿಯ ಜಮೀನೊಂದರಲ್ಲಿ ಪಾರ್ವತಿ ಹಾಗೂ ಕಲ್ಲಪ್ಪ ಇಬ್ಬರೂ ಒಟ್ಟಿಗೆ ಇದ್ದಾಗ ಕೊಲೆ ನಡೆದಿದೆ. ಕೊಲೆ ಮಾಡಿದ ಬಳಿಕ ಶವದ ಮೇಲೆ ಮುಳ್ಳುಕಂಟಿ ಹಾಕಿ ಕೊಲೆಗಾರರು ಪರಾರಿಯಾಗಿದ್ರು ಆದ್ರೆ ಪೊಲೀಸರು ಈಗ ಮೂವರನ್ನು ಬಂಧಿಸಿದ್ದಾರೆ. ಬಂಧಿತರಲ್ಲಿ ಹತ್ಯೆಯಾದ ಮಹಿಳೆಯ ಮಗನೂ ಸೇರಿದ್ದಾನೆ.
ಬಂಧಿತರನ್ನು ನಿಡಗುಂದಿ ತಾಲೂಕಿನ ಗಣಿ ಗ್ರಾಮದ ಹತ್ಯೆಯಾಗಿದ್ದ ಪಾರ್ವತಿ ತಳವಾರ ಮಗ ಲಕ್ಷ್ಮಣ ಭೀಮಪ್ಪ, ಆತನ ಸ್ನೇಹಿತರಾದ ಶಶಿಕುಮಾರ ರಂಗಪ್ಪ ಹಾಗೂ ಬಸವರಾಜ ಪರಪ್ಪ ಹಡಪದ ಎಂದು ಗುರುತಿಸಲಾಗಿದೆ.
ಲಕ್ಷ್ಮಣ ತಳವಾರ ಹತ್ಯೆಯಾಗಿರುವ ಪಾರ್ವತಿಯ ಮಗ. ಪಾರ್ವತಿ ಗಣಿ ಗ್ರಾಮದ ಸೋಮನಿಂಗಪ್ಪ ಕುಂಬಾರ ಎಂಬಾತನೊಂದಿಗೆ ಅನೈತಿಕ ಸಬಂಧ ಹೊಂದಿದ್ಲು. ತಾಯಿಯ ಅನೈತಿಕ ಸಂಬಂಧದಿಂದ ರೋಸಿ ಹೋಗಿದ್ದ ಮಗ ಲಕ್ಷ್ಮಣ ತನ್ನ ಇನ್ನಿಬ್ಬರು ಸ್ನೇಹಿತರೊಂದಿಗೆ ಸೇರಿಕೊಂಡು ಹತ್ಯೆಯ ಸಂಚು ರೂಪಿಸಿದ್ದ.
ಮಾ.18 ರಂದು ರಾತ್ರಿ ಆಕಳವಾಡಿ-ಮಾರಡಗಿ ಬಳಿ ಲಕ್ಷ್ಮಣನ ತಾಯಿ ಹಾಗೂ ಆಕೆಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ವ್ಯಕ್ತಿ ಸೇರಿದಂತೆ ಜೋಡಿ ಕೊಲೆ ಮಾಡಿ, ಬಳಿಕ ಆರೋಪಿಗಳು ಪರಾರಿಯಾಗಿದ್ದರು.
ನಿಡಗುಂದಿ ಸಿಪಿಐ ಶರಣಗೌಡ ಗೌಡರ, ಎಸೈ ಶಿವರಾಜ ಧರಿಗೋಣ ನೇತೃತ್ವದ ತನಿಖಾ ತಂಡ ತಲೆ ಮರೆಸಿಕೊಂಡಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ತನಿಖಾ ತಂಡಕ್ಕೆ ಬಹುಮಾನ ಘೋಷಿಸಿದ್ದಾಗಿ ಎಸ್ಪಿ ಋಷಿಕೇಶ ಭಗವಾನ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
Murder, Illecit affair, son kills own mother and her lover in Vijayapura. The police have arrested three persons in connection to this case including her son.
24-01-26 08:31 pm
Mangaluru Staffer
ಸಿದ್ದರಾಮಯ್ಯ ಆಪ್ತ ಮರಿಗೌಡ ಮುಡಾದಿಂದ ಅಕ್ರಮ ನಿವೇಶನ...
23-01-26 03:21 pm
ವಿಧಾನಸಭೆ ಅಧಿವೇಶನ ; ಭಾಷಣ ಅರ್ಧಕ್ಕೆ ಬಿಟ್ಟು ತೆರಳಿ...
22-01-26 10:27 pm
ಕುಕ್ಕೆ ಸುಬ್ರಹ್ಮಣ್ಯ ; 2 ತಿಂಗಳಲ್ಲಿ 14 ಕೋಟಿಗೂ ಹೆ...
22-01-26 05:20 pm
ಚಾಮರಾಜನಗರದಲ್ಲಿ ಚಿರತೆ ದಾಳಿ ; ಪಾದಯಾತ್ರೆಗೆ ಹೊರಟ್...
21-01-26 01:31 pm
24-01-26 08:38 pm
HK staffer
ಮಂಜೇಶ್ವರ ಚೆಕ್ ಪೋಸ್ಟ್ ನಲ್ಲಿ ವಾಹನ ತಪಾಸಣೆ ; ಕೆಎಸ...
23-01-26 06:44 pm
ಗಾಜಾದಲ್ಲಿ ಶಾಂತಿ ಸ್ಥಾಪನೆಗೆ 35 ದೇಶಗಳ ಮಂಡಳಿ ರಚನೆ...
22-01-26 10:16 pm
ರೈಲಿನ ಶೌಚಾಲಯದಲ್ಲಿ ಎರಡು ಗಂಟೆ ಲಾಕ್ ಮಾಡಿಕೊಂಡ ಯುವ...
22-01-26 01:52 pm
ಗ್ರೀನ್ ಲ್ಯಾಂಡ್ ; ಯುರೋಪ್ ರಾಷ್ಟ್ರಗಳ ಮೇಲೆ ಸುಂಕ ಹ...
22-01-26 01:16 pm
24-01-26 11:23 pm
Mangaluru Staffer
ದೇಶದ ಅತಿ ಹಳೆಯ ತಾಂತ್ರಿಕ ಶಿಕ್ಷಣ ಸಂಸ್ಥೆ ಮಂಗಳೂರಿನ...
24-01-26 08:14 pm
ಬಹುಮುಖ ಪ್ರತಿಭೆಯ ಕಲಾವಿದ ಸ್ವಾತಿ ಸತೀಶ್ ಆತ್ಮಹತ್ಯೆ...
24-01-26 08:04 pm
ಯೆನಪೋಯ ವಿವಿಯಲ್ಲಿ ಮಾನಸಿಕ ಆರೋಗ್ಯ ನರ್ಸಿಂಗ್ ವಿಭಾಗ...
23-01-26 09:21 pm
National Conference on Neuropsychiatry Held a...
23-01-26 09:08 pm
25-01-26 09:48 am
HK News Desk
ರಾಮಕುಂಜ ; ತಂದೆ - ಮಗನ ಜಗಳ ದುರಂತ ಅಂತ್ಯ, ಚೂರಿ ಇರ...
24-01-26 11:18 pm
ಜನಾರ್ದನ ರೆಡ್ಡಿ ಮಾಡೆಲ್ ಹೌಸ್ ಗೆ ಬೆಂಕಿ ; ಎಂಟು ಮಂ...
24-01-26 08:53 pm
ಅವಧಿ ಮೀರಿದ ಮಾತ್ರೆ ನೀಡಿದ್ದಾಗಿ ವಿಡಿಯೋ ವೈರಲ್ ; ಕ...
24-01-26 02:13 pm
ಬೈಕ್ ಕದ್ದೊಯ್ಯುತ್ತಿದ್ದ ಇಬ್ಬರನ್ನು ಮರಕ್ಕೆ ಕಟ್ಟಿ...
23-01-26 09:36 pm