ಬ್ರೇಕಿಂಗ್ ನ್ಯೂಸ್
26-03-24 11:12 am HK News Desk ಕ್ರೈಂ
ಥಾಣೆ, ಮಾ 26: ಹಣಕ್ಕಾಗಿ 9 ವರ್ಷದ ಬಾಲಕನನ್ನು ಅಪಹರಣಗೈದು ಭೀಕರವಾಗಿ ಹತ್ಯೆಗೈದಿರುವ ಘಟನೆ ಮಹಾರಾಷ್ಟ್ರದ ಬದ್ಲಾಪುರದಲ್ಲಿ ನೆಡೆದಿದೆ.
ಥಾಣೆಯ ಬದ್ಲಾಪುರ ಮೂಲದ ಬಾಲಕ ಇಬಾದ್(9) ಕೊಲೆಯಾದ ಬಾಲಕ.
ಭಾನುವಾರ ಸಂಜೆ ಇಬಾದ್ ಮಸೀದಿಗೆ ಹೋಗಿ ತನ್ನ ಮನೆಗೆ ವಾಪಾಸಾಗುತ್ತಿದ್ದ. ಈ ವೇಳೆ ನೆರೆಹೊರೆಯಲ್ಲಿರುವ ಸಲ್ಮಾನ್ ಮೌಲ್ವಿ ಎಂಬಾತ ಇಬಾದ್ ನನ್ನು ಅಪಹರಿಸಿದ್ದಾನೆ. ಮಗ ಸಮಯ ಕಳೆದರೂ ಇನ್ನು ಮನೆಗೆ ವಾಪಾಸ್ ಬರಲಿಲ್ಲ ಎನ್ನುವ ಕಾರಣಕ್ಕೆ ಇಬಾದ್ ಪೋಷಕರು ಅತ್ತಿತ್ತ ಹುಡುಕಾಡಿದ್ದಾರೆ. ಇದೇ ವೇಳೆ ಇಬಾದ್ ಅವರ ತಂದೆ ಮುದ್ದಾಸಿರ್ ಅವರ ಮೊಬೈಲ್ ಗೆ ನಿಮ್ಮ ಮಗನನ್ನು ಸುರಕ್ಷಿತವಾಗಿ ಮನೆಗೆ ಕಳುಹಿಸಬೇಕಾದರೆ 23 ಲಕ್ಷ ನೀಡಬೇಕೆಂದು ಬೆದರಿಕೆಯ ಕರೆಯೊಂದು ಬಂದಿದೆ. ಯಾವುದೇ ಮಾಹಿತಿ ನೀಡದೇ ಕರೆಯನ್ನು ಕಟ್ ಕಟ್ ಮಾಡಲಾಗಿದೆ. ಇದರಿಂದ ಭೀತಿಗೆ ಒಳಗಾದ ಇಬಾದ್ ಪೋಷಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಪೊಲೀಸರು ಬರುವ ಮುನ್ಸೂಚನೆಯಲ್ಲಿದ್ದ ಆರೋಪಿಗಳು ತಮ್ಮ ಸಿಮ್ ಕಾರ್ಡ್ ಬದಲಾಯಿಸುವ ಪ್ರಯತ್ನ ಮಾಡಿದ್ದಾರೆ. ಆದರೆ ಪೊಲೀಸರು ಸೋಮವಾರ ಮಧ್ಯಾಹ್ನದ ವೇಳೆಗೆ ಸಲ್ಮಾನ್ ಮನೆಯನ್ನು ಪತ್ತೆ ಹಚ್ಚಿದ್ದಾರೆ. ಆದರೆ ಬಾಲಕನನ್ನು ಪೊಲೀಸರು ಬರುವ ಮುನ್ನವೇ ಕೊಲೆಗೈದು ಗೋಣಿ ಚೀಲದಲ್ಲಿ ತುಂಬಿ ಮನೆಯ ಹಿಂದೆ ಮುಚ್ಚಿಯಿಟ್ಟಿದ್ದಾನೆ.
ಪೊಲೀಸರು ವೃತ್ತಿಯಲ್ಲಿ ಟೈಲರ್ ಆಗಿರುವ ಸಲ್ಮಾನ್ ಹಾಗೂ ಆತನ ಸಹೋದರ ಸಫುವಾನ್ ಮೌಲ್ವಿಯನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.
ಸಲ್ಮಾನ್ ಹೊಸ ಮನೆ ಕಟ್ಟುವ ಯೋಜನೆಯಲ್ಲಿದ್ದ, ಇದಕ್ಕಾಗಿ 23 ಲಕ್ಷ ರೂ. ಅಗತ್ಯವಿತ್ತು. ಬಾಲಕನನ್ನು ಕಿಡ್ನ್ಯಾಪ್ ಮಾಡಿ ಬೆದರಿಕೆ ಹಾಕಿದರೆ ಅಂದುಕೊಂಡ ದುಡ್ಡು ಸಿಗುತ್ತದೆನ್ನುವ ಕಾರಣದಿಂದ ಈ ಕೃತ್ಯವನ್ನು ಎಸೆದಿರುವುದಾಗಿ ಪೊಲೀಸರ ವಿಚಾರಣೆಯಲ್ಲಿ ಬಾಯ್ಬಿಟ್ಟಿದ್ದಾರೆ.
ಈ ಸಂಬಂಧ ಎಫ್‌ಐಆರ್ ದಾಖಲಾಗಿದ್ದು, ಸಲ್ಮಾನ್ ಪ್ರಮುಖ ಆರೋಪಿ ಎಂದು ಗುರುತಿಸಲಾಗಿದ್ದು, ಈ ಕೃತ್ಯದಲ್ಲಿ ಕುಟುಂಬದ ಸದಸ್ಯರು ಸೇರಿದಂತೆ ಇತರ ವ್ಯಕ್ತಿಗಳು ಭಾಗಿಯಾಗಿರುವ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಬದ್ಲಾಪುರ ಪೊಲೀಸರು ತಿಳಿಸಿದ್ದಾರೆ.
A nine-year-old boy was killed in Maharashtra's Badlapur after he was kidnapped for ransom following his evening prayers at a local mosque, police said on Monday. His body was found hidden in a sack at the accused's house and two people were arrested in connection with the incident.
11-01-25 10:53 pm
HK News Desk
ಕೊಪ್ಪದ ಮೇಗೂರು ಅರಣ್ಯದಲ್ಲಿ ಶರಣಾಗಿದ್ದ ನಕ್ಸಲರ ಶಸ...
11-01-25 10:27 pm
BBMP Raid, Lokayukta; ಬಿಬಿಎಂಪಿ 50 ಕಡೆಗಳಲ್ಲಿ ಲ...
11-01-25 09:14 pm
CT Ravi,Threat, Lakshmi Hebbalkar; ಬೆಳಗಾವಿ ಅಭ...
11-01-25 02:11 pm
Asha Strick, CM Siddaramaiah ಆಶಾ ಕಾರ್ಯಕರ್ತೆಯರ...
10-01-25 11:01 pm
12-01-25 05:07 pm
HK News Desk
Hollywood hills, Los Angeles fires: ಲಾಸ್ ಏಂಜ...
09-01-25 12:11 pm
ತಿರುಪತಿಯಲ್ಲಿ ಕಾಲ್ತುಳಿತಕ್ಕೆ ಏಳು ಸಾವು ; ವೈಕುಂಠ...
09-01-25 11:22 am
StalinCM, Lipi: ಸಿಂಧೂ ನಾಗರಿಕತೆಯ ಲಿಪಿಗಳನ್ನು ಅರ...
08-01-25 11:07 pm
Crime News, Nagpur Couple: ಮಧ್ಯರಾತ್ರಿವರೆಗೆ 26...
08-01-25 10:53 pm
12-01-25 11:03 pm
Mangalore Correspondent
PLD bank election, MLA Ashok Rai, Puttur: ಪಿಎ...
12-01-25 10:06 pm
Hardeep Singh Puri, Brijesh Chowta, Mangalore...
12-01-25 12:33 pm
CM Siddaramaiah, Kambala Mangalore, Naringana...
11-01-25 10:34 pm
Mangalore Lit Fest 2025, Hardeep Singh Puri;...
11-01-25 07:19 pm
11-01-25 10:21 pm
Mangalore Correspondent
Mumbai Crime, Fruad, Torres Ponzi: ಚೈನ್ ಸ್ಕೀಮ...
10-01-25 11:05 pm
Bangladeshi national illegal, Mangalore: ಮುಕ್...
10-01-25 09:51 pm
Mangalore Robbery, Crime, Singari Beedi: ಸಿಂಗ...
10-01-25 10:11 am
Share Market Scam, Mangalore: ಷೇರು ಮಾರುಕಟ್ಟೆ...
09-01-25 10:43 pm