ಬ್ರೇಕಿಂಗ್ ನ್ಯೂಸ್
08-04-24 11:06 am Mangaluru Correspondent ಕ್ರೈಂ
ಉಳ್ಳಾಲ, ಎ.7: ಉಳ್ಳಾಲದಲ್ಲಿ ಗುಜರಿ ವ್ಯಾಪಾರಿಯೋರ್ವನನ್ನ ಇರಿದು ಕೊಲೆ ಮಾಡಲು ಯತ್ನಿಸಿದ್ದ ಕೃತ್ಯದ ಆರೋಪಿ ಜಾವೇದ್ ನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿರುವುದಾಗಿ ತಿಳಿದುಬಂದಿದೆ.
ಉಳ್ಳಾಲ ಪೊಲೀಸ್ ಠಾಣೆಯ ಕೂಗಳತೆ ದೂರದ ಮಹಾತ್ಮ ಗಾಂಧಿ ರಂಗಮಂದಿರದ ಬಳಿಯ ಬಾಡಿಗೆ ಮನೆಯಲ್ಲಿ ನೆಲೆಸಿದ್ದ ತಣ್ಣೀರುಬಾವಿ ನಿವಾಸಿ ಮಹಮ್ಮದ್ ಜಾವೆದ್ ಎಂಬಾತ ಮಂಗಳೂರಿನ ಪಂಜಿಮೊಗರುವಿನ ಗುಜರಿ ವ್ಯಾಪಾರಿ ಹಮೀದ್ ಎಂಬವರಿಗೆ ಚೂರಿಯಿಂದ ಇರಿದು ಕೊಲೆಗೆ ಯತ್ನಿಸಿದ್ದ. ಹಮೀದ್ ಅವರ ಎದೆ ಭಾಗಕ್ಕೆ ಗಂಭೀರ ಗಾಯವಾಗಿದ್ದು ಅವರನ್ನ ಕೂಡಲೇ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿತ್ತು. ಹಮೀದ್ ಆಸ್ಪತ್ರೆಯಲ್ಲಿ ಚೇತರಿಸಿರುವುದಾಗಿ ಮಾಹಿತಿ ಲಭಿಸಿದೆ. ಇತ್ತ ಮಂಗಳೂರು ದಕ್ಷಿಣ ಉಪ ವಿಭಾಗದ ಎಸಿಪಿ ಧನ್ಯಾ ನಾಯಕ್ ನೇತೃತ್ವದ ತಂಡ ಮತ್ತು ಉಳ್ಳಾಲ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಆರೋಪಿ ಜಾವೇದನ್ನು ವಶಕ್ಕೆ ಪಡೆದಿರುವ ಬಗ್ಗೆ ಮಾಹಿತಿ ಸಿಕ್ಕಿದೆ.
ಗುಜರಿ ಫ್ಯಾನ್ ಮಾರಾಟದಲ್ಲಿ ತಗಾದೆ..?
ಜಾವೇದ್ ದೋಣಿಯೊಂದರ ಹಳೆಯ ಗುಜರಿ ಫ್ಯಾನ್ ಒಂದನ್ನ ಮಾರಾಟ ಮಾಡಲಿಕ್ಕಾಗಿ ಗುಜರಿ ವ್ಯಾಪಾರಿ ಹಮೀದ್ ರನ್ನ ತಾನು ನೆಲೆಸಿದ್ದ ಉಳ್ಳಾಲದ ಬಾಡಿಗೆ ಮನೆಗೆ ಶನಿವಾರ ಸಂಜೆ ಕರೆಸಿಕೊಂಡಿದ್ದ ಎನ್ನಲಾಗಿದೆ. ಈ ವೇಳೆ ಇಬ್ಬರ ನಡುವೆ ಹಣಕಾಸಿನ ವಿಚಾರದಲ್ಲಿ ತಗಾದೆ ಶುರುವಾಗಿದೆ ಎನ್ನಲಾಗಿದ್ದು ಆರೋಪಿ ಜಾವೇದ್, ಹಮೀದ್ ಎದೆ ಭಾಗಕ್ಕೆ ಚೂರಿಯಿಂದ ಇರಿದಿದ್ದಾನೆ. ಗಂಭೀರ ಗಾಯಗೊಂಡಿದ್ದ ಹಮೀದ್ ತಪ್ಪಿಸಿಕೊಂಡಿದ್ದು ಆಸ್ಪತ್ರೆಗೆ ದಾಖಲಾಗಿದ್ದರು. ಆರೋಪಿ ಜಾವೇದ್ ಕೃತ್ಯವೆಸಗಿ ಪರಾರಿಯಾಗಿದ್ದ.
ಪಂಜಿಮೊಗರಿನ ಜೋಡಿ ಕೊಲೆ ನೆನಪಿಸಿದ ಘಟನೆ ;
ಶನಿವಾರ ಇರಿತಕ್ಕೊಳಗಾದ ಹಮೀದ್ ಅವರ ಕಾವೂರು ಪಂಜಿಮೊಗರಿನ ಮನೆಯಲ್ಲಿ 2011ರ ಜೂನ್ 28 ರಂದು ಜೋಡಿ ಕೊಲೆ ನಡೆದಿತ್ತು. ಹಮೀದ್ ಪತ್ನಿ ರಝಿಯಾ(35) ಮತ್ತು ಆಕೆಯ ಪುಟ್ಟ ಮಗು ಫಾತಿಮಾ ಜುವಾ(8)ರನ್ನು ಚೂರಿಯಿಂದ ಇರಿದು ಹತ್ಯೆ ಮಾಡಲಾಗಿತ್ತು. ಈ ಜೋಡಿ ಕೊಲೆ ಪ್ರಕರಣದಲ್ಲಿ ಹಮೀದ್ ಬಗ್ಗೆಯೂ ಶಂಕೆ ವ್ಯಕ್ತವಾಗಿತ್ತು. ಆದರೆ ಪೊಲೀಸ್ ತನಿಖೆಯಲ್ಲಿ ಅದು ಸಾಬೀತಾಗಿರಲಿಲ್ಲ. ಕಳೆದ ಹದಿಮೂರು ವರುಷದಿಂದಲೂ ಪಂಜಿಮೊಗರಿನ ಜೋಡಿ ಕೊಲೆ ಆರೋಪಿಗಳು ಪತ್ತೆಯಾಗದೆ ಪ್ರಕರಣವು ಇನ್ನೂ ನಿಗೂಢವಾಗಿ ಉಳಿದಿದೆ.
Ullal murder attempt, accused Javed arrested by police in Mangalore. Hameed, the husband of a murder victim and father of their child, who were killed in Panjimogaru back in 2011, was the target of an attempted stabbing and murder. The incident occurred at a rented house near the Ullal Municipal Council office on Saturday, April 6. Hameed, a resident of Panjimogaru staying at the rented house, sustained serious injuries from the stabbing and has been admitted to a private hospital in Mangaluru.
22-04-25 02:37 pm
HK News Desk
ಜನಿವಾರ ತೆಗೆಸಿರುವ ಕ್ರಮ ನಿಯಮಬಾಹಿರ, ಧಾರ್ಮಿಕ ನಂಬಿ...
22-04-25 01:00 pm
R Ashok, Census Probe: ಜಾತಿಗಣತಿ ವರದಿಯೇ ನಕಲಿ,...
21-04-25 07:27 pm
ನ್ಯಾ.ಕೃಷ್ಣ ದೀಕ್ಷಿತ್, ನ್ಯಾ.ಹೇಮಂತ್ ಚಂದನಗೌಡರ್ ಸೇ...
21-04-25 07:10 pm
Jayaprakash Hegde; ಹಿಂದೂಗಳಂತೆ ಮುಸ್ಲಿಮರಲ್ಲು 93...
19-04-25 03:04 pm
21-04-25 07:46 pm
HK News Desk
Pope Francis Death, Vatican, Catholic: ಕೆಥೋಲಿ...
21-04-25 02:13 pm
No GST on UPI Payments: ಎರಡು ಸಾವಿರಕ್ಕಿಂತ ಮೇಲಿ...
20-04-25 08:42 pm
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
21-04-25 10:32 pm
Mangalore Correspondent
Puttur, Arun Putila: ಬ್ರಾಹ್ಮಣರು ಮತ್ತೆ ಪರಶುರಾಮ...
21-04-25 07:08 pm
Mangalore Chakravarti Sulibele, Ujre; ಸರ್ಕಾರವ...
20-04-25 05:42 pm
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
22-04-25 03:26 pm
Bangalore Correspondent
Om Prakash IPS Murder, Wife arrest: ನಿವೃತ್ತ ಡ...
21-04-25 01:03 pm
Karnataka DGP Om Prakash Murder, wife: ನಿವೃತ್...
20-04-25 10:52 pm
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm