ಬ್ರೇಕಿಂಗ್ ನ್ಯೂಸ್
18-04-24 10:03 pm Bangalore Correspondent ಕ್ರೈಂ
ಬೆಂಗಳೂರು, ಏ 18: ಹಾಡಹಗಲೇ ಬೆಂಗಳೂರಿನಲ್ಲಿ ರಕ್ತದೋಕುಳಿ ನಡೆದಿದೆ. ಜನನಿಬಡ ಪ್ರದೇಶದಲ್ಲಿ ಯುವಕ -ಯುವತಿಯ ಬರ್ಬರ ಹತ್ಯೆ ನಡೆದಿದೆ.
ತನ್ನ ಪ್ರೀತಿಯನ್ನು ಮುಂದುವರಿಸಲು ಒಪ್ಪದ ಯುವತಿಯನ್ನ ವಿವಾಹಿತ ವ್ಯಕ್ತಿ ಸುರೇಶ್ ಬರ್ಬರವಾಗಿ ಹತ್ಯೆಗೈದಿದ್ದಾನೆ. ಈ ವೇಳೆ ತನ್ನ ಕಣ್ಣೆದುರೆ ಮಗಳ ಮೇಲೆ ಹಲ್ಲೆ ತಡೆಯಲು ಬಂದ ಯುವತಿಯ ತಾಯಿ, ಸುರೇಶನ ಮೇಲೆ ಸಿಮೆಂಟ್ ಇಟ್ಟಿಗೆಯಿಂದ ತಲೆಗೆ ಹೊಡೆದಿದ್ದಾಳೆ. ಇದರಿಂದ ಆರೋಪಿ ಕೂಡ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಸಾರಕ್ಕಿ ಮಾರ್ಕೆಟ್ ಬಳಿಯ ಪಾರ್ಕ್ ನಲ್ಲಿ ಈ ಜೋಡಿ ಕೊಲೆ ನಡೆದಿವೆ.
ಅನುಷಾ ಎಂಬ ಯುವತಿಯನ್ನ ಸುರೇಶ್ ಚಾಕುವಿನಿಂದ ಹಿರಿದು ಕೊಂದಿದ್ದಾನೆ. ಗೊರಗುಂಟೆಪಾಳ್ಯ ಮೂಲದ ಸುರೇಶ್ ಸಾರಕ್ಕಿಯ ಶಾಕಾಂಬರಿ ನಗರ ನಿವಾಸಿ ಅನುಷಾಳನ್ನ ಕೊಲೆ ಮಾಡಿದ್ದಾನೆ. ಈ ವೇಳೆ ಸಂತ್ರಸ್ತೆ ತಾಯಿ ಕಲ್ಲಿನಿಂದ ಹೊಡೆದು ಸುರೇಶ್ ಹತ್ಯೆಗೈದಿದ್ದಾಳೆ.
ಸಂಬಂಧ ಮುರಿದುಕೊಳ್ಳಲು ಬಂದಿದ್ದಾಗ ಘಟನೆ ;
ಪೊಲೀಸರ ವರದಿಯ ಪ್ರಕಾರ, ಹಲವಾರು ವರ್ಷಗಳಿಂದ ಇಬ್ಬರಿಗೂ ಪರಿಚಯ ಇತ್ತು ಎಂದು ತಿಳಿದುಬಂದಿದೆ. ಸುರೇಶ್ಗೆ ಮದುವೆಯಾಗಿತ್ತು. ಆದರೂ ಅನುಷಾ ಜೊತೆ ಮದುವೆಯಾಗಿಲ್ಲ ಎಂದು ಸುಳ್ಳು ಹೇಳಿ ಪ್ರೇಮ ಸಂಬಂಧ ಹೊಂದಿದ್ದ. ಆದರೆ ಅನುಷಾಗೆ ಸಂಬಂಧ ಮುಂದುವರೆಸುವುದು ಇಷ್ಟ ಇರಲಿಲ್ಲ. ಇಂದು ಭೇಟಿಯಾಗಿ ಸಂಪರ್ಕ ಕಡಿತ ಮಾಡಿಕೊಳ್ಳುವ ತೀರ್ಮಾನ ಮಾಡಿದ್ದರು. ಆದರೆ ಅನುಷಾ ಕೈ ತಪ್ಪಿ ಹೋಗ್ತಾಳೆ ಎಂದು ಕೋಪಗೊಂಡಿದ್ದ ಸುರೇಶ್, ಕೋಪದಲ್ಲಿ ಚಾಕುವಿನಿಂದ ಇರಿದು ಕೊಂದಿದ್ದಾನೆ.
ಸುರೇಶ್ ಮತ್ತು ಅನುಷಾ ಐದು ವರ್ಷಗಳಿಂದ ಒಟ್ಟಿಗೆ ಕೆಲಸ ಮಾಡ್ತಿದ್ರು. ಸುರೇಶ ನನಗೆ ಮದುವೆಯಾಗಿಲ್ಲಾ ಎಂದು ಅನುಷಾಳನ್ನ ಪ್ರೀತಿಸುತ್ತಿದ್ದ. ಆದರೆ ಒಂದು ವರ್ಷದ ಹಿಂದೆ ಅನುಷಾಗೆ ಸುರೇಶ್ ಬಗ್ಗೆ ಅಸಲಿ ವಿಚಾರ ಗೊತ್ತಾಗಿದೆ. ಸುರೇಶ್ಗೆ ಮದುವೆಯಾಗಿ ಮಕ್ಕಳಿವೆ ಅನ್ನೋ ವಿಚಾರ ಗೊತ್ತಾಗುತ್ತಿದ್ದಂತೆ, ಇವೆಂಟ್ ಮ್ಯಾನೇಜ್ಮೆಂಟ್ ಬಿಟ್ಟು ನರ್ಸಿಂಗ್ ಹೋಮ್ನಲ್ಲಿ ಕೆಲಸಕ್ಕೆ ಸೇರಿದ್ದ ಅನುಷಾ. ಇದಾಗಿಯೂ ಸುರೇಶ್ ಅನುಷಾಳನ್ನ ಬಿಡಲು ಒಪ್ಪಿರಲಿಲ್ಲಾ ಎಂದು ತಿಳಿದುಬಂದಿದೆ.
ಪ್ರೀತಿ ನಿರಾಕರಿಸಿದರೂ ಹಿಂದೆ ಬಿದ್ದು, ಪೀಡಿಸುತ್ತಿದ್ದಾನೆ ಎಂದು ಇಂದು ಬೆಳಗ್ಗೆ ಜೆಪಿ ನಗರ ಪೊಲೀಸ್ ಠಾಣೆಯಲ್ಲಿ ಅನುಷಾ ದೂರು ನೀಡಿದ್ದರು. ಸುರೇಶ್ ಎಂಬಾತ ತನಗೆ ಪರಿಚಯ ಇದ್ದು, ತನ್ನನ್ನ ಪೀಡಿಸುತಿದ್ದಾನೆ ಎಂದು ತಿಳಿಸಿದ್ದಳು. ಪೊಲೀಸರು, ಇಬ್ಬರನ್ನು ಕರೆದು ಸುರೇಶ್ಗೆ ವಾರ್ನ್ ಮಾಡಿದ್ದರು. ಇನ್ಮುಂದೆ ಯುವತಿ ತಂಟೆಗೆ ಬಾರದಂತೆ ಎಚ್ಚರಿಕೆ ನೀಡಿದ್ದರು. ಜೊತೆಗೆ ಸುರೇಶ್ ನಿಂದ ಮುಚ್ಚಳಿಕೆ ಪತ್ರ ಬರೆಸಿಕೊಂಡಿದ್ದರು.
Double murder in Bangalore park, accused killed by daughter mother. Married man was behind a girl asking her to marry but when she denied for marriage he killed her after which her mother took a cement stone and killed the accused in the park.
24-01-26 08:31 pm
Mangaluru Staffer
ಸಿದ್ದರಾಮಯ್ಯ ಆಪ್ತ ಮರಿಗೌಡ ಮುಡಾದಿಂದ ಅಕ್ರಮ ನಿವೇಶನ...
23-01-26 03:21 pm
ವಿಧಾನಸಭೆ ಅಧಿವೇಶನ ; ಭಾಷಣ ಅರ್ಧಕ್ಕೆ ಬಿಟ್ಟು ತೆರಳಿ...
22-01-26 10:27 pm
ಕುಕ್ಕೆ ಸುಬ್ರಹ್ಮಣ್ಯ ; 2 ತಿಂಗಳಲ್ಲಿ 14 ಕೋಟಿಗೂ ಹೆ...
22-01-26 05:20 pm
ಚಾಮರಾಜನಗರದಲ್ಲಿ ಚಿರತೆ ದಾಳಿ ; ಪಾದಯಾತ್ರೆಗೆ ಹೊರಟ್...
21-01-26 01:31 pm
24-01-26 08:38 pm
HK staffer
ಮಂಜೇಶ್ವರ ಚೆಕ್ ಪೋಸ್ಟ್ ನಲ್ಲಿ ವಾಹನ ತಪಾಸಣೆ ; ಕೆಎಸ...
23-01-26 06:44 pm
ಗಾಜಾದಲ್ಲಿ ಶಾಂತಿ ಸ್ಥಾಪನೆಗೆ 35 ದೇಶಗಳ ಮಂಡಳಿ ರಚನೆ...
22-01-26 10:16 pm
ರೈಲಿನ ಶೌಚಾಲಯದಲ್ಲಿ ಎರಡು ಗಂಟೆ ಲಾಕ್ ಮಾಡಿಕೊಂಡ ಯುವ...
22-01-26 01:52 pm
ಗ್ರೀನ್ ಲ್ಯಾಂಡ್ ; ಯುರೋಪ್ ರಾಷ್ಟ್ರಗಳ ಮೇಲೆ ಸುಂಕ ಹ...
22-01-26 01:16 pm
24-01-26 11:23 pm
Mangaluru Staffer
ದೇಶದ ಅತಿ ಹಳೆಯ ತಾಂತ್ರಿಕ ಶಿಕ್ಷಣ ಸಂಸ್ಥೆ ಮಂಗಳೂರಿನ...
24-01-26 08:14 pm
ಬಹುಮುಖ ಪ್ರತಿಭೆಯ ಕಲಾವಿದ ಸ್ವಾತಿ ಸತೀಶ್ ಆತ್ಮಹತ್ಯೆ...
24-01-26 08:04 pm
ಯೆನಪೋಯ ವಿವಿಯಲ್ಲಿ ಮಾನಸಿಕ ಆರೋಗ್ಯ ನರ್ಸಿಂಗ್ ವಿಭಾಗ...
23-01-26 09:21 pm
National Conference on Neuropsychiatry Held a...
23-01-26 09:08 pm
24-01-26 11:18 pm
Mangaluru Staffer
ಜನಾರ್ದನ ರೆಡ್ಡಿ ಮಾಡೆಲ್ ಹೌಸ್ ಗೆ ಬೆಂಕಿ ; ಎಂಟು ಮಂ...
24-01-26 08:53 pm
ಅವಧಿ ಮೀರಿದ ಮಾತ್ರೆ ನೀಡಿದ್ದಾಗಿ ವಿಡಿಯೋ ವೈರಲ್ ; ಕ...
24-01-26 02:13 pm
ಬೈಕ್ ಕದ್ದೊಯ್ಯುತ್ತಿದ್ದ ಇಬ್ಬರನ್ನು ಮರಕ್ಕೆ ಕಟ್ಟಿ...
23-01-26 09:36 pm
ಕಾವೂರು ವ್ಯವಸಾಯ ಸೇವಾ ಸಹಕಾರಿ ಸಂಘಕ್ಕೆ ನಕಲಿ ಚಿನ್ನ...
23-01-26 03:34 pm