ಬ್ರೇಕಿಂಗ್ ನ್ಯೂಸ್
25-04-24 10:18 pm Mangalore Correspondent ಕ್ರೈಂ
ಮಂಗಳೂರು, ಎ.25: ಮಂಗಳೂರಿನಲ್ಲಿ ಷೇರು ಮಾರುಕಟ್ಟೆ ವಹಿವಾಟು ನಡೆಸುತ್ತಿದ್ದು, ಹಲವರಿಂದ ಹಣ ಪಡೆದು ವಂಚಿಸಿದ್ದ ಕೃಷ್ಣಪ್ರಸಾದ್ ಶೆಟ್ಟಿ (42) ಎಂಬ ವ್ಯಕ್ತಿ 2023ರ ನವೆಂಬರ್ ತಿಂಗಳಲ್ಲಿ ನಾಪತ್ತೆಯಾಗಿದ್ದು, ಈವರೆಗೂ ಪತ್ತೆಯಾಗಿಲ್ಲ.
ಕೃಷ್ಣಪ್ರಸಾದ್ ಶೆಟ್ಟಿ ಮೂಲತಃ ಹೆಬ್ರಿ ನಿವಾಸಿಯಾಗಿದ್ದು, ಹಲವು ವರ್ಷಗಳಿಂದ ಮಂಗಳೂರಿನಲ್ಲಿ ಕುಟುಂಬದ ಜೊತೆಗೆ ನೆಲೆಸಿದ್ದರು. ಇದೇ ವೇಳೆ, ಷೇರು ಮಾರುಕಟ್ಟೆಯಲ್ಲಿ ಹಣ ತೊಡಗಿಸಿದರೆ ಡಬಲ್ ಆಗುತ್ತದೆಯೆಂದು ಸ್ನೇಹಿತರು, ಸಂಬಂಧಿಕರನ್ನು ನಂಬಿಸಿ ಹಣ ಪಡೆದಿದ್ದರು. ಎರಡು ಕೋಟಿ ವರೆಗೂ ಹಣ ಪಡೆದು ವಂಚಿಸಿದ್ದಾರೆಂದು ಹಣ ಕಳಕೊಂಡವರು ಮಂಗಳೂರಿನ ಸೈಬರ್ ಠಾಣೆಗೆ ದೂರು ನೀಡಿದ್ದರು.
ಇದರ ಬೆನ್ನಲ್ಲೇ ನವೆಂಬರ್ 16ರಂದು ಪತ್ನಿಯ ಜೊತೆಗೆ ಕಾರಿನಲ್ಲಿ ಬಂಟ್ಸ್ ಹಾಸ್ಟೆಲ್ ಬಳಿಯ ಏಕ್ಸಿಸ್ ಬ್ಯಾಂಕಿಗೆ ಬಂದಿದ್ದರು. ಪತ್ನಿಯನ್ನು ಕಾರಿನಲ್ಲಿ ಕುಳ್ಳಿರಿಸಿ, ಬ್ಯಾಂಕಿಗೆ ಹೋಗಿ ಬರುತ್ತೇನೆಂದು ಹೋದವರು ಮರಳಿರಲಿಲ್ಲ. ಮರುದಿನ ಸ್ನೇಹಿತರಿಗೆ ಬೆಂಗಳೂರಿಗೆ ತೆರಳಿದ್ದೇನೆ ಎಂದು ಹೇಳಿದ್ದರು. ಪತಿ ಬರದೇ ಇರುವುದರಿಂದ ಪತ್ನಿ ಮಂಗಳೂರಿನ ಬಂದರು ಠಾಣೆಗೆ ನಾಪತ್ತೆ ದೂರು ನೀಡಿದ್ದರು.
ಇದಲ್ಲದೆ, ಸೈಬರ್ ಪೊಲೀಸ್ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಾಗಿದ್ದರಿಂದ ಹಣ ವಂಚಿತರು ಪೊಲೀಸರಿಗೆ ಒತ್ತಡ ಹೇರಿ ತನಿಖೆಗೆ ಆಗ್ರಹ ಮಾಡಿದ್ದರು. ಪೊಲೀಸರು ಕೃಷ್ಣಪ್ರಸಾದ್ ಶೆಟ್ಟಿಯ ಬಗ್ಗೆ ಹುಡುಕಾಟವನ್ನೂ ನಡೆಸಿದ್ದರು. ಆರೋಪಿ ಕೃಷ್ಣಪ್ರಸಾದ್ ತಲೆಮರೆಸಿಕೊಂಡಿದ್ದಾನೆಯೇ, ಏನಾದ್ರೂ ಮಾಡಿಕೊಂಡಿದ್ದಾನೆಯೇ ತಿಳಿದಿಲ್ಲ. ಈ ವ್ಯಕ್ತಿ ಎಲ್ಲಿಯಾದರೂ ಕಂಡುಬಂದಲ್ಲಿ ಮಂಗಳೂರು ಪೊಲೀಸರಿಗೆ ತಿಳಿಸುವಂತೆ ಕೋರಿದ್ದಾರೆ.
Mangalore Fraud of crores in the name of share market, Krishnaprasad Shetty native of Hebri goes missing since six months. Police have requested to call them if they find him anywhere.
12-09-26 09:40 pm
HK News Staffer
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
ಬಿಜೆಪಿ ಅಧಿಕಾರಕ್ಕೆ ಬರಲು ನನ್ನ ಸ್ಥಾನ ಬಿಟ್ಟುಕೊಟ್ಟ...
12-09-26 05:56 pm
ಐಎಎಸ್ ತೇರ್ಗಡೆಯಾಗಿದ್ದ ಕೇರಳದ ಮೊದಲ ಬುಡಕಟ್ಟು ಮಹಿಳ...
12-09-26 05:53 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
14-09-26 06:02 pm
HK News Staffer
100 ವರ್ಷಗಳ ಬಳಿಕವೂ ಸ್ವಂತ ಸೂರಿಗಾಗಿ ಕರಾವಳಿಯಲ್ಲಿ...
14-09-26 05:00 pm
Konkan Catholic Credit Society Inaugurated in...
14-09-26 04:18 pm
Konkan Catholic Credit Society Mangalore: ಹಣಕ...
13-09-26 10:11 pm
ಕುತ್ತಾರು ರಾಜರಾಜೇಶ್ವರಿ ಸಿದ್ಧಿವಿನಾಯಕ ಕ್ಷೇತ್ರದಲ್...
13-09-26 08:10 pm
12-09-26 07:41 pm
HK News Staffer
ಕ್ರಿಪ್ಟೊ ಕರೆನ್ಸಿ ಹೆಸ್ರಲ್ಲಿ ಡಾಕ್ಟರ್ ಗೆ ಮಹಿಳೆಯಿ...
11-09-26 06:38 pm
ಜಾಮೀನು ಪಡೆಯಲು ನಕಲಿ ಆಧಾರ್ ಕಾರ್ಡ್ ಹಾಜರು ; ಉಡು...
11-09-26 01:09 pm
ಬೈಕ್ಗೆ ಡಿಕ್ಕಿ ಹೊಡೆದ ಕಾರು ; ಚಾಮರಾಜನಗರದಲ್ಲಿ ಮೂ...
11-09-26 10:14 am
ಕುಂದಾಪುರದಲ್ಲಿ 8 ಶಾಲಾ ಮಕ್ಕಳ ಬಲಿ ಪಡೆದ ಭೀಕರ ಅಪಘಾ...
10-09-26 08:16 pm