ಸೋಷಿಯಲ್ ಮೀಡಿಯಾದಲ್ಲಿ ಅಶ್ಲೀಲ ಪೋಸ್ಟ್ ; ನಿವೃತ್ತ ಹೈಕೋರ್ಟ್ ಜಡ್ಜ್ ಅರೆಸ್ಟ್

03-12-20 12:09 pm       Headline Karnataka News Network   ಕ್ರೈಂ

ಮಹಿಳಾ ನ್ಯಾಯಮೂರ್ತಿಗಳ ಬಗ್ಗೆ ಅಶ್ಲೀಲವಾಗಿ ಮಾತನಾಡಿ ವಿಡಿಯೋವೊಂದನ್ನು ನ್ಯಾ| ಕರ್ಣನ್‌ ಪೋಸ್ಟ್‌ ಮಾಡಿದ್ದರು.

ಚೆನ್ನೈ(ಡಿ.03): ಸೋಷಿಯಲ್‌ ಮೀಡಿಯಾದಲ್ಲಿ ಅಶ್ಲೀಲ ವಿಡಿಯೋ ಪೋಸ್ಟ್‌ ಮಾಡಿದ ಆರೋಪದಡಿ ಕೊಲ್ಕತಾ ಹಾಗೂ ಮದ್ರಾಸ್‌ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಸಿ.ಎಸ್‌.ಕರ್ಣನ್‌ ಅವರನ್ನು ಚೆನ್ನೈನ ಸೈಬರ್‌ ಅಪರಾಧ ವಿಭಾಗದ ಪೊಲೀಸರು ಬುಧವಾರ ಬಂಧಿಸಿದ್ದಾರೆ.

ಸುಪ್ರೀಂಕೋರ್ಟ್‌ನ ಹಾಲಿ ಹಾಗೂ ನಿವೃತ್ತ ನ್ಯಾಯಮೂರ್ತಿಗಳು, ಅವರ ಪತ್ನಿಯರು ಹಾಗೂ ಮಹಿಳಾ ನ್ಯಾಯಮೂರ್ತಿಗಳ ಬಗ್ಗೆ ಅಶ್ಲೀಲವಾಗಿ ಮಾತನಾಡಿ ವಿಡಿಯೋವೊಂದನ್ನು ನ್ಯಾ| ಕರ್ಣನ್‌ ಪೋಸ್ಟ್‌ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಅವರನ್ನು ಬಂಧಿಸಲಾಗಿದೆ.

ಕರ್ಣನ್‌ ವಿರುದ್ಧ ಐಪಿಸಿ ಸೆಕ್ಷನ್‌ 509 (ಮಹಿಳೆಯ ಘನತೆಗೆ ಧಕ್ಕೆ ತರುವುದು, ಅಶ್ಲೀಲ ಮಾತನಾಡುವುದು ಅಥವಾ ಸನ್ನೆ ಮಾಡುವುದು) ಹಾಗೂ ಐಪಿಸಿ ಸೆಕ್ಷನ್‌ 153 (ದಂಗೆಗೆ ಪ್ರಚೋದನೆ ನೀಡುವುದು) ಅಡಿ ಪ್ರಕರಣ ದಾಖಲಿಸಲಾಗಿದೆ. ಅವರನ್ನು ಕೋರ್ಟ್‌ಗೆ ಹಾಜರುಪಡಿಸಿ ಪೊಲೀಸ್‌ ವಶಕ್ಕೆ ಪಡೆಯಲಾಗಿದೆ.

ಸುಪ್ರೀಂಕೋರ್ಟ್‌ ನ್ಯಾಯಮೂರ್ತಿ ಆರ್‌.ಬಾನುಮತಿ ಅವರ ನಿವಾಸಕ್ಕೆ ಅಕ್ರಮವಾಗಿ ನುಗ್ಗಿದ ಆರೋಪದಡಿ ಕಳೆದ ತಿಂಗಳು ಕರ್ಣನ್‌ ಅವರ ಹೆಸರಿಲ್ಲದೆ ಐದು ಮಂದಿಯ ವಿರುದ್ಧ ತಿರುವಣ್ಮಿಯೂರ್‌ ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದರು. ಕರ್ಣನ್‌ ಹೈಕೋರ್ಟ್‌ ನ್ಯಾಯಮೂರ್ತಿಯಾಗಿದ್ದಾಗಲೂ ಸುಪ್ರೀಂಕೋರ್ಟ್‌ನ ಜಡ್ಜ್‌ಗಳ ಬಂಧನಕ್ಕೆ ಆದೇಶ ನೀಡುವ ಮೂಲಕ ತೀವ್ರ ವಿವಾದ ಸೃಷ್ಟಿಸಿದ್ದರು. ನಿವೃತ್ತಿಯ ನಂತರ ಅವರು ನ್ಯಾಯಾಂಗದ ಘನತೆಗೆ ಧಕ್ಕೆ ತರುವ ಹಲವು ಪ್ರಕರಣಗಳಲ್ಲಿ ಅಪಖ್ಯಾತಿ ಪಡೆದಿದ್ದಾರೆ.

CS Karnan, a former judge of the Madras and Calcutta High Courts, was arrested in Chennai on Wednesday following a complaint against him for making vulgar comments against women and remarks against judges, police said. The arrest comes after a video clip surfaced recently in social media, in which, Karnan, allegedly made objectionable remarks against judges and their wives.