ಬ್ರೇಕಿಂಗ್ ನ್ಯೂಸ್
17-05-24 09:52 pm HK News Desk ಕ್ರೈಂ
ಕಾಸರಗೋಡು, ಮೇ 17: ತನ್ನ ಮನೆಯಲ್ಲಿ ಮಲಗಿದ್ದ ಹತ್ತು ವರ್ಷದ ಬಾಲಕಿಯನ್ನು ದುರುಳನೊಬ್ಬ ನಸುಕಿನಲ್ಲಿ ಹೊತ್ತೊಯ್ದು ಲೈಂಗಿಕ ಕಿರುಕುಳ ನೀಡಿದ್ದಲ್ಲದೆ, ಆಕೆಯ ಕಿವಿಯಲ್ಲಿದ್ದ ಚಿನ್ನದ ಓಲೆಯನ್ನು ಕಿತ್ತುಕೊಂಡು ಪರಾರಿಯಾದ ಘಟನೆ ಕೇರಳದ ಕಾಸರಗೋಡು ಜಿಲ್ಲೆಯ ಹೊಸದುರ್ಗದಲ್ಲಿ ನಡೆದಿದೆ.
ಮೇ 15ರಂದು ನಸುಕಿನ ಮೂರು ಗಂಟೆ ವೇಳೆಗೆ ಘಟನೆ ನಡೆದಿದ್ದು ಪೊಲೀಸರು ಆರೋಪಿಗೆ ತಲಾಶ್ ನಡೆಸಿದ್ದಾರೆ. ಬಾಲಕಿ ಪ್ರತಿ ದಿನ ತನ್ನ ಅಜ್ಜಿಯ ಜೊತೆಗೆ ಮಲಗುತ್ತಿದ್ದಳು. ಅಂದು ಅಜ್ಜಿ ಸಂಬಂಧಿಕರ ಮನೆಗೆ ತೆರಳಿದ್ದರಿಂದ ಅಜ್ಜನ ಜೊತೆಗೆ ಮಲಗಿದ್ದಳು. ನಸುಕಿನಲ್ಲಿ ಮೂರು ಗಂಟೆಗೆ ಎಂದಿನಂತೆ ಅಜ್ಜ ದನಗಳನ್ನು ಹಾಲು ಕರೆಯಲೆಂದು ತೆರಳಿದ್ದರು. ಕೋಣೆಯ ಬಾಗಿಲನ್ನು ಎಳೆದುಕೊಂಡು ಹೋಗಿದ್ದರು. ಇದೇ ಹೊತ್ತಿನಲ್ಲಿ ಬಾಲಕಿಯನ್ನು ಹೊತ್ತೊಯ್ಯಲಾಗಿತ್ತು. 3.30ಕ್ಕೆ ಅಜ್ಜ ಮರಳಿ ಬಂದು ನೋಡಿದಾಗ, ಬೆಡ್ ನಲ್ಲಿ ಬಾಲಕಿ ಇರಲಿಲ್ಲ.
ಬಾಲಕಿಯನ್ನು ದುರುಳ ಒಂದು ಕಿಮೀ ದೂರಕ್ಕೆ ಹೊತ್ತೊಯ್ದಿದ್ದು, ಬೊಬ್ಬೆ ಹಾಕದಂತೆ ಬಾಯಿಗೆ ಕೈಯನ್ನು ಗಟ್ಟಿ ಹಿಡಿದುಕೊಂಡಿದ್ದ. ಬೊಬ್ಬೆ ಹಾಕಿದರೆ ಕೊಂದು ಹಾಕುತ್ತೇನೆಂದು ಹೆದರಿಸಿ ರಸ್ತೆಯಲ್ಲೇ ಲೈಂಗಿಕ ದೌರ್ಜನ್ಯ ಎಸಗಿ, ಕಿವಿಯಲ್ಲಿದ್ದ ಚಿನ್ನದ ಓಲೆಗಳನ್ನು ಕಿತ್ತುಕೊಂಡು ಬಾಲಕಿಯನ್ನು ಬಿಟ್ಟು ಹೋಗಿದ್ದ. ಬೆಳಗ್ಗೆ 5 ಗಂಟೆ ವೇಳೆಗೆ ಬಾಲಕಿ ಅಲ್ಲಿನ ಪರಿಸರದ ಮನೆಯೊಂದಕ್ಕೆ ಹೋಗಿ ಬೆಲ್ ಹಾಕಿದ್ದಾಳೆ. ಬಾಗಿಲು ಬಡಿದರೂ ಎಚ್ಚರಗೊಳ್ಳದ ಕಾರಣ ಪಕ್ಕದ ಮನೆಗೂ ಹೋಗಿ ಬಾಗಿಲು ಬಡಿದಿದ್ದಾಳೆ. ಆ ಮನೆಯ ಬಾಗಿಲು ತೆರೆಯುತ್ತಿದ್ದಂತೆ ತನ್ನ ಮನೆಯವರನ್ನು ಕರೆಯುವಂತೆ ತಿಳಿಸಿ, ತಂದೆಯ ಮೊಬೈಲ್ ನಂಬರ್ ಹೇಳಿ ಬರಹೇಳಿದ್ದಾಳೆ.
ತಂದೆ, ತಾಯಿ ಮತ್ತು ಇನ್ನೊಬ್ಬಳು ಸಣ್ಣ ತಂಗಿ ಪಕ್ಕದ ಇನ್ನೊಂದು ಕೋಣೆಯಲ್ಲಿ ಮಲಗಿದ್ದರು. ಮನೆಯ ಹಿಂದಿನ ಬಾಗಿಲು ತೆರೆದುಕೊಂಡಿದ್ದರಿಂದ ಅಲ್ಲಿಂದಲೇ ಬಾಲಕಿಯನ್ನು ಹೊತ್ತೊಯ್ದಿದ್ದಾರೆ ಎನ್ನುವ ಸಂಶಯ ಉಂಟಾಗಿತ್ತು. ಪೊಲೀಸರು ಮೊದಲು ರಾಬರಿ ಕೇಸು ದಾಖಲಿಸಿದ್ದರು. ಬಾಲಕಿಯ ಮೆಡಿಕಲ್ ಚೆಕಪ್ ನಲ್ಲಿ ರೇಪ್ ಆಗಿರುವುದು ಕಂಡುಬಂದಿದ್ದರಿಂದ ಪೋಕ್ಸೋ ಕಾಯ್ದೆ ದಾಖಲು ಮಾಡಿದ್ದು ಆರೋಪಿಗೆ ಹುಡುಕಾಟ ನಡೆಸಿದ್ದಾರೆ. ಬಾಲಕಿಯ ಮುಖ, ಕುತ್ತಿಗೆಯಲ್ಲಿ ಪರಚಿದ ಗಾಯಗಳಾಗಿದ್ದು, ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದ. (ಮನೋರಮಾ ವರದಿ)
A10-year-old girl sleeping in her house at Padannakkad near Kanhangad in Kerala’s Kasargod district was abducted, sexually assaulted and abandoned one kilometre away in the early hours of Wednesday. The incident occurred when her grandfather briefly stepped out to milk the cow. The rest of the members of the family were asleep. It is suspected that the assailant entered the house when the grandfather went out after opening the front door.
15-03-25 09:18 pm
HK News Desk
Mangalore, Tamil actor Prabhu Deva, Kukke Sub...
15-03-25 03:55 pm
Elephant attack, Belur, Hassan: ಕಾಡಾನೆ ದಾಳಿ ;...
15-03-25 12:33 pm
DySP Kanakalakshmi arrested, suicide: ಬೋವಿ ನಿ...
14-03-25 11:11 pm
Swamiji, Bagalkot, Police Video: ದುಡ್ಡು ಪಡೆದು...
14-03-25 08:30 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
15-03-25 10:00 pm
Mangalore Correspondent
Mangalore court, Moral Police, Acquit: ಹಿಂದು...
15-03-25 08:32 pm
Mangalore Mary Hill, Boy Death; ಮೇರಿಹಿಲ್ ; ಏಳ...
15-03-25 04:11 pm
Dr Vamana Nandavar, Mangalore Death: ತುಳು, ಕನ...
15-03-25 01:47 pm
Mangalore Student Missing, ,Kidnap, Hitein Bh...
15-03-25 12:35 pm
14-03-25 05:02 pm
HK News Desk
Ccb Police, Firearms, Mangalore crime: ವಾಮಂಜೂ...
13-03-25 06:44 pm
Kothanur Police, Bangalore crime, Murder: ನಾಲ...
11-03-25 07:34 pm
Tanishq showroom, Bihar Robbery: ಬಿಹಾರದಲ್ಲಿ ಹ...
10-03-25 10:48 pm
Actress Ranya Rao, CBI, Gold case; ನಟಿ ರನ್ಯಾ...
09-03-25 05:06 pm