ಬ್ರೇಕಿಂಗ್ ನ್ಯೂಸ್
29-05-24 07:15 pm Mangalore Correspondent ಕ್ರೈಂ
ಮಂಗಳೂರು, ಮೇ 29: ಕೇರಳದ ಕಾಸರಗೋಡು ಮೂಲದ ವಿವಾಹಿತ ಮಹಿಳೆಯೊಬ್ಬರನ್ನು ಮದುವೆಯಾಗುತ್ತೇನೆಂದು ನಂಬಿಸಿ ಅತ್ಯಾಚಾರ ಎಸಗಿದ ಬಗ್ಗೆ ಮಂಗಳೂರಿನ ಕದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಜಿಮ್ ಟ್ರೈನರ್ ನನ್ನು ಪೊಲೀಸರು ಬಂಧಿಸಿದ್ದಾರೆ.
ಈ ಬಗ್ಗೆ ಕಾಸರಗೋಡು ಮೂಲದ 32 ವರ್ಷದ ಮಹಿಳೆ ಕದ್ರಿ ಠಾಣೆಗೆ ಮೇ 15ರಂದು ದೂರು ನೀಡಿದ್ದಾರೆ. ಮಹಿಳೆ ಎರಡು ಮಕ್ಕಳ ತಾಯಿಯಾಗಿದ್ದು, ತನ್ನ ದೇಹ ಧಡೂತಿಯಾಗಿದೆ ಎಂದು ಜಿಮ್ ಕಸರತ್ತು ಮಾಡಲು ತೆರಳುತ್ತಿದ್ದಳು. ಅಲ್ಲಿ ಜಿಮ್ ತರಬೇತುದಾರ ಸುಜಿತ್ ಎಂಬಾತನ ಜೊತೆಗೆ ಗೆಳೆತನ ಉಂಟಾಗಿತ್ತು. ಆನಂತರ, ಮಹಿಳೆ ಫಿಸ್ತುಲಾ ರೋಗ ಬಾಧೆಗೆ ಒಳಗಾಗಿದ್ದು ಮಾರ್ಚ್ 13ರಂದು ಮಂಗಳೂರಿನ ಎಜೆ ಆಸ್ಪತ್ರೆಗೆ ದಾಖಲಾಗಿದ್ದರು. ಈ ವೇಳೆ, ಗೆಳೆಯನಾಗಿದ್ದ ಸುಜಿತ್ ಬಂದಿದ್ದು, ಜೊತೆಗೆ ಉಳಿದುಕೊಂಡಿದ್ದ. ಈ ವೇಳೆ ತನ್ನ ಮೇಲೆ ಬೇಡ ಎಂದರೂ ಅತ್ಯಾಚಾರ ಎಸಗಿದ್ದಾನೆಂದು ಮಹಿಳೆ ದೂರು ನೀಡಿದ್ದಾರೆ.
ಆನಂತರ, ತನ್ನ ನಗ್ನ ಫೋಟೋಗಳನ್ನು ತೆಗೆದಿಟ್ಟು ಬ್ಲಾಕ್ಮೇಲ್ ಮಾಡಿದ್ದಾನೆಂದು ಮಹಿಳೆ ಆರೋಪಿಸಿದ್ದು ಎಪ್ರಿಲ್ 4ರಿಂದ 8ರ ವರೆಗೆ ಮಹಾರಾಜಾ ರೆಸಿಡೆನ್ಸಿ ಹೊಟೇಲ್ ನಲ್ಲಿ ಇರಿಸಿ ಅತ್ಯಾಚಾರ ಮಾಡಿದ್ದಾನೆ. ಅಲ್ಲಿದ್ದಾಗಲೇ ಮಹಿಳೆಗೆ ಫುಡ್ ಪಾಯಿಸನ್ ಆಗಿದ್ದು ಎಪ್ರಿಲ್ 8ರಿಂದ 10ರ ವರೆಗೆ ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಅಲ್ಲಿಯೂ ಆರೋಪಿ ಸುಜಿತ್ ತನ್ನ ಮೇಲೆ ಅತ್ಯಾಚಾರ ಎಸಗಿದ್ದು, ಈ ಬಗ್ಗೆ ಯಾರಿಗಾದರೂ ಹೇಳಿದರೆ ಕೊಲ್ಲುತ್ತೇನೆಂದು ಬೆದರಿಕೆ ಹಾಕಿದ್ದ ಎಂದು ದೂರಿನಲ್ಲಿ ಮಹಿಳೆ ಆರೋಪಿಸಿದ್ದು ಪೊಲೀಸರು ಸೆಕ್ಷನ್ 376, 506 ಜೊತೆಗೆ 149 ಪ್ರಕಾರ ಕೇಸು ದಾಖಲಿಸಿದ್ದಾರೆ.
ಆರೋಪಿ ಹೊಸದುರ್ಗ ತಾಲೂಕು ಪುಲ್ಲೂರು ಗ್ರಾಮದ ಸುಜಿತ್ ನನ್ನು ಪೊಲೀಸರು ಬಂಧಿಸಿದ್ದಾರೆ. ಮೇಲ್ನೋಟಕ್ಕೆ ಮದುವೆಯಾಗುತ್ತೇನೆಂದು ನಂಬಿಸಿದ್ದಕ್ಕೆ ಇವರು ಗೆಳೆತನ ಹೊಂದಿದ್ದರು ಎನ್ನಲಾಗುತ್ತಿದ್ದು, ಆನಂತರ ಇವರ ನಡುವೆ ವೈಮನಸ್ಸು ಉಂಟಾಗಿ ಮಹಿಳೆ ಪೊಲೀಸ್ ದೂರು ನೀಡಿದ್ದಾರೆ. ಕಾಸರಗೋಡಿನಲ್ಲಿ ಪೊಲೀಸ್ ಠಾಣೆಗೆ ತೆರಳಿದ್ದರೂ, ಅಲ್ಲಿ ದೂರು ಸ್ವೀಕರಿಸದೇ ಇದ್ದುದರಿಂದ ಮಂಗಳೂರಿನಲ್ಲಿ ದೂರು ನೀಡಿದ್ದಾರೆ ಎನ್ನಲಾಗುತ್ತಿದೆ.
In a shocking incident, a Kasargod-based woman admitted initially into a hospital and subsequently into another hospital was raped several times. As per the police complaint filed by the victim dated May 15, 2024 with Mangaluru east police station, she was admitted into a hospital for treatment of fistula on March 13, 2024.
28-05-26 05:31 pm
HK News Desk
ರಾಜ್ಯಸಭೆಗೆ ಹೋಗಲ್ಲ, ರಾಜ್ಯದಲ್ಲೇ ಸಕ್ರಿಯ ರಾಜಕಾರಣದ...
28-05-26 04:34 pm
CM Siddaramaiah resigns: ಸಿಎಂ ಸ್ಥಾನಕ್ಕೆ ಸಿದ್ದ...
28-05-26 03:24 pm
'ಮಹಾನಾಯಕ' ಸಿದ್ದರಾಮಯ್ಯ ಯುಗಾಂತ್ಯ.? ಇಂದೇ ಸಿಎಂ ಸ್...
28-05-26 10:56 am
ನಾಳೆ ರಾಜೀನಾಮೆ ಕೊಡ್ತೀನಿ ಎಂದೇ ಬಂದಿದ್ದಾರೆ..! ಸಿದ...
27-05-26 06:26 pm
27-05-26 09:17 pm
HK News Desk
ಕೇರಳ ರಾಜಕಾರಣದಲ್ಲಿ ಭಾರೀ ಸಂಚಲನ..! ಮಾಜಿ ಸಿಎಂ ಪಿಣ...
27-05-26 08:36 pm
ಜೂನ್, ಜುಲೈನಲ್ಲಿ 12 ಪರಿಷತ್ ಸ್ಥಾನಗಳಿಗೆ ಚುನಾವಣೆ...
26-05-26 12:54 pm
ಗೃಹಲಕ್ಷ್ಮಿ ಪಡೆಯಲು ಬಯೋಮೆಟ್ರಿಕ್ ಕಡ್ಡಾಯ ; ಕೂಡಲೇ...
26-05-26 12:50 pm
ಎಐಎಡಿಎಂಕೆ ಪಕ್ಷದ ಮೂವರು ಶಾಸಕರು ಸ್ಥಾನಕ್ಕೆ ರಾಜಿನಾ...
25-05-26 08:18 pm
28-05-26 02:45 pm
HK News Staffer
ಡಿಸಿಎಂ ಆಗಬೇಕೆಂಬ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಹಾ...
28-05-26 02:28 pm
ಕುದುರೆಮುಖ ಅದಿರು ಕಂಪನಿ ಕಾರ್ಮಿಕರ ಬೇಡಿಕೆ ಈಡೇರಿಸಿ...
27-05-26 12:29 pm
ಕಟೀಲು ಶಿಬರೂರಿನಲ್ಲಿ ಮರಳು ದರೋಡೆ ರಾಜಾರೋಷ ; ಇಲ್ಲಿ...
26-05-26 09:02 pm
ನೌಕಾಪಡೆ ಸಬ್ ಲೆಫ್ಟಿನೆಂಟ್ ಆಗಿ ನೇಮಕಗೊಂಡ ನಿಶೆಲ್ ಡ...
26-05-26 07:52 pm
28-05-26 10:43 am
HK News Staffer
ನಿಲ್ಲಿಸಿದ್ದ ಬೈಕ್ ಕದ್ದು ಪರಾರಿಯಾಗಿದ್ದ ಇಬ್ಬರು ನಟ...
27-05-26 08:34 pm
ಉರ್ವ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಿ ಕೇರಳಕ್ಕೆ...
27-05-26 07:56 pm
ಬೈಜುಸ್ ಸಂಸ್ಥಾಪಕ ರವೀಂದ್ರನ್ಗೆ ಭಾರೀ ಆಘಾತ ; ಜೈಲ...
27-05-26 01:30 pm
ಪ್ರಿಯಕರನ ಕಿರುಕುಳ ; ಮುಂಬೈನಲ್ಲಿ ರೇಡಿಯೋ ಜಾಕಿಯಾಗಿ...
27-05-26 12:42 pm