ಬ್ರೇಕಿಂಗ್ ನ್ಯೂಸ್
07-08-20 12:45 pm Headline Karnataka News Network ಕ್ರೈಂ
ಬಂಟ್ವಾಳ, ಆಗಸ್ಟ್ 07: ಬೈಕ್ ಅಪಘಾತವನ್ನು ಮುಂದಿಟ್ಟು ಆರೆಸ್ಸೆಸ್ ಕಾರ್ಯಕರ್ತ ಶರತ್ ಮಡಿವಾಳ ಕೊಲೆಗೆ ಪ್ರತೀಕಾರಕ್ಕೆ ಯತ್ನಿಸಲಾಗಿದೆ ಎಂದು ಸ್ಥಾಪಿತ ಹಿತಾಸಕ್ತಿಗಳು ಬಿಂಬಿಸಲು ಹೊರಟ ವಿಚಾರ ಬೆಳಕಿಗೆ ಬಂದಿದೆ.
ಮಧ್ಯಾಹ್ನ 12.30ರ ಸುಮಾರಿಗೆ ಶರತ್ ಮಡಿವಾಳ ಕೊಲೆ ಆರೋಪಿ ಶರೀಫ್ ತನ್ನ ಬೈಕ್ ನಲ್ಲಿ ಮಸೀದಿಗೆ ತೆರಳುತ್ತಿದ್ದ ಸಂದರ್ಭ ಎದುರಿನಿಂದ ಬಂದ ಬೈಕ್ ಒಂದಕ್ಕೆ ಅಪಘಾತ ವಾಗಿತ್ತು. ಈ ವೇಳೆ, ಶರೀಫ್ ಮತ್ತು ಬೈಕ್ ನವರಿಗೆ ಗಲಾಟೆ ನಡೆದು ನವೀನ್ ಎಂಬಾತನ ಮೇಲೆ ಹಲ್ಲೆ ನಡೆಸಿದ್ದೂ ಆಗಿತ್ತು. ಇದೇ ಘಟನೆ ಹಿನ್ನೆಲೆಯಲಿ ನವೀನ್ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದ. ಈಗ ಅದೇ ಚಿಕ್ಕ ಅಪಘಾತ ಘಟನೆಯನ್ನು ಕೆಲವು ಸ್ವಹಿತಾಸಕ್ತಿ ಆಧರಿತ ಸಂಘಟನೆಗಳು ಕೊಲೆ ಯತ್ನ ಎಂಬುದಾಗಿ ಬಿಂಬಿಸುತ್ತಿವೆ. ಅಲ್ಲದೆ, ಆರೋಪಿ ಶರೀಫ್ ನನ್ನು ಕೂಡ ಆಸ್ಪತ್ರೆಗೆ ದಾಖಲಿಸಿ, ಆರೋಪಿ ಮೂಲಕ ಅದೇ ರೀತಿಯ ಹೇಳಿಕೆ ಕೊಡುವಂತೆ ಮಾಡಿದ್ದಾರೆ.

ಸಜಿಪ ಮುಡ್ನೂರು ಬಳಿಯ ಆಲಾಡಿ ಎಂಬಲ್ಲಿ ಈ ಘಟನೆ ನಡೆದಿದ್ದು ಅದು ಮುಸ್ಲಿಂ ಜನಸಂಖ್ಯೆ ಹೆಚ್ಚಿರುವ ಪ್ರದೇಶವಾಗಿದೆ. ಅಲ್ಲದೆ, ಯಾವಾಗಲೂ ಜನ ಓಡಾಡುವ ರಸ್ತೆಯಲ್ಲಿಯೇ ಈ ಅಪಘಾತ ನಡೆದಿತ್ತು. ಆದರೆ ಇದೇ ಬೈಕ್ ಅಪಘಾತವನ್ನೇ ಮುಂದಿಟ್ಟು ಕೆಲವರು ಉದ್ದೇಶಪೂರ್ವಕ ಕೋಮುಭಾವನೆ ಕೆರಳಿಸಲು ಯತ್ನಿಸುತ್ತಿದ್ದಾರೆ ಅನ್ನುವ ಮಾತು ಕೇಳಿಬರುತ್ತಿದೆ.
ಇಷ್ಟಕ್ಕೂ ಶರೀಫ್ ಕಾಲಿಗೆ ತರಚಿದ ಗಾಯ ಮಾತ್ರ ಆಗಿರುವುದು ಆತನ ಹೇಳಿಕೆ ಪೊಲೀಸರಿಗೂ ಸಂಶಯ ಹುಟ್ಟಿಸಿದೆ. ಮುಸ್ಲಿಂ ಬಾಹುಳ್ಯ ಇರುವ ಪ್ರದೇಶದಲ್ಲಿ ಶರೀಫ್ ಮೇಲೆ ಕೊಲೆಗೆ ಯತ್ನ ನಡೆದಿರಬಹುದಾ ಎನ್ನುವ ಪ್ರಶ್ನೆಯೂ ಮೂಡುತ್ತಿದೆ. ಈ ಬಗ್ಗೆ ಬಂಟ್ವಾಳ ಪೊಲೀಸರು ಕೂಡ ಎಚ್ಚತ್ತುಕೊಂಡಿದ್ದು ಸ್ಥಾಪಿತ ಹಿತಾಸಕ್ತಿಯ ಸುದ್ದಿಯ ಬೆನ್ನತ್ತಿದ್ದಾರೆ.
26-12-25 01:35 pm
HK News Desk
ಸದ್ಯಕ್ಕಿಲ್ಲ ಸಿಎಂ ಬದಲಾವಣೆ ! ರಾಜ್ಯದಿಂದ ಕೇಂದ್ರ ನ...
25-12-25 08:00 pm
Chitradurga Seabird Bus accident: ಚಿತ್ರದುರ್ಗ...
25-12-25 06:26 pm
SeaBird Bus Fire Accident, Chitradurga: ಕಂಟೈನ...
25-12-25 12:12 pm
ತಡರಾತ್ರಿ ವರೆಗೂ ವಹಿವಾಟು ; ಹೊಟೇಲ್ ವ್ಯವಸ್ಥಾಪಕರಿಂ...
24-12-25 11:20 pm
26-12-25 03:04 pm
HK News Desk
ಹೆತ್ತವರು ಮನೆಯಲ್ಲಿ ಆತ್ಮಹತ್ಯೆ ; ಬೆಳೆದು ನಿಂತ ಪುತ...
26-12-25 02:50 pm
ಜಗತ್ತಿನ ಅತಿ ದೊಡ್ಡ ಮುಸ್ಲಿಂ ದೇಶದಲ್ಲಿ 4500 ವರ್ಷ...
24-12-25 11:13 pm
ಅಯೋಧ್ಯೆ ಮಂದಿರಕ್ಕೆ ಚಿನ್ನ, ವಜ್ರ, ಪಚ್ಚೆ ಕಲ್ಲುಗಳಿ...
24-12-25 07:38 pm
ಹಿಂಸೆಗೆ ನಲುಗಿದ ಬಾಂಗ್ಲಾ ; ಹಿಂದುಗಳನ್ನು ಗುರಿಯಾಗಿ...
23-12-25 03:28 pm
25-12-25 10:54 pm
Mangalore Correspondent
ಡಿ.27ರಂದು 9ನೇ ವರ್ಷದ ಮಂಗಳೂರು ಕಂಬಳ ; ನವ ವರ್ಷ- ನ...
24-12-25 10:30 pm
ಬಜಪೆಯಲ್ಲಿ ಕಾಂಗ್ರೆಸ್ ಓಟಕ್ಕೆ ಎಸ್ಡಿಪಿಐ ಅಡ್ಡಗಾಲು...
24-12-25 06:07 pm
ವಿದ್ಯಾರ್ಥಿಗಳ ಕುಸಿತ, ಅಸ್ತಿತ್ವ ಕಳಕೊಂಡ ಸಣ್ಣ ಕಾಲೇ...
24-12-25 12:23 pm
ಬಜಪೆ ಪಟ್ಟಣ ಪಂಚಾಯತ್ ಚುನಾವಣೆ ; ಬಿಜೆಪಿಗೆ ಸ್ಪಷ್ಟ...
24-12-25 12:02 pm
26-12-25 03:31 pm
HK News Desk
ಶಂಕಿತ ಬಾಂಗ್ಲಾ ವ್ಯಕ್ತಿಗೆ ಪಾಸ್ಪೋರ್ಟ್ ; ಸಹೋದ್ಯೋಗ...
23-12-25 01:41 pm
ನೀವು 24 ಸಾವಿರ ಕಟ್ಟಿದರೆ ತಿಂಗಳಿಗೆ 20 ಲಕ್ಷ, ಕೇಂದ...
22-12-25 04:00 pm
ಹುಬ್ಬಳ್ಳಿಯಲ್ಲಿ ಮರ್ಯಾದಾ ಹತ್ಯೆ ; 19 ವರ್ಷದ ಗರ್ಭಿ...
22-12-25 02:18 pm
Udupi Arrest, Pakistan: ಕೊಚ್ಚಿನ್ ಶಿಪ್ ಯಾರ್ಡ್...
22-12-25 01:06 pm