ಬ್ರೇಕಿಂಗ್ ನ್ಯೂಸ್
19-06-24 11:04 am Mangalore Correspondent ಕ್ರೈಂ
ಪುತ್ತೂರು, ಜೂನ್.19: ಉಪ್ಪಿನಂಗಡಿ ಬಳಿಯ ಪೆರ್ನೆಯಲ್ಲಿ ವಿವಾಹಿತ ಮಹಿಳೆಯೊಬ್ಬರು ರಾತ್ರಿ ಮಲಗಿದಲ್ಲೇ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಎಸ್ಸೆಸ್ಸೆಲ್ಸಿ ಓದುತ್ತಿದ್ದ ಬಾಲಕನನ್ನು ಬಂಧಿಸಿದ್ದಾರೆ.
ಜೂನ್ 16ರಂದು ಭಾನುವಾರ ರಾತ್ರಿ ಪೆರ್ನೆ ಗ್ರಾಮದ ಬಿಳಿಯೂರು ದರ್ಕಾಸು ಮನೆಯ ನಿವಾಸಿ ಹೇಮಾವತಿ (37) ಸಂಶಯಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದರು. ರಾತ್ರಿ ಊಟ ಮಾಡಿ, ತನ್ನ ತಾಯಿ ಮತ್ತು ಅಕ್ಕನ ಮಗನ ಜೊತೆಗೆ ಹೇಮಾವತಿ ಮಲಗಿದ್ದರು. ಮಧ್ಯರಾತ್ರಿ ಹೇಮಾವತಿ ಕತ್ತು ಹಿಸುಕಿ ಕೊಲೆಯಾದ ರೀತಿಯಲ್ಲಿ ಸಾವನ್ನಪ್ಪಿದ್ದು ಸ್ಥಳೀಯವಾಗಿ ಕುತೂಹಲಕ್ಕೆ ಕಾರಣವಾಗಿತ್ತು. ಘಟನೆ ಸಂದರ್ಭದಲ್ಲಿ ಹೇಮಾವತಿ ಅವರ ಪತಿ ವಿಠಲ ಪೈ ಇರಲಿಲ್ಲ. ಪತ್ನಿಯ ಮೃತದೇಹದಲ್ಲಿ ಗಾಯದ ಗುರುತು ಕಂಡುಬಂದಿದ್ದರಿಂದ ಸಾವಿನಲ್ಲಿ ಸಂಶಯಿಸಿ ಉಪ್ಪಿನಂಗಡಿ ಠಾಣೆಗೆ ದೂರು ನೀಡಿದ್ದರು.
ಪೊಲೀಸರು ತನಿಖೆ ನಡೆಸುವ ಸಲುವಾಗಿ ಅಪ್ರಾಪ್ತ ಬಾಲಕ ಮತ್ತು ಆತನ ತಂದೆಯನ್ನು ವಶಕ್ಕೆ ಪಡೆದಿದ್ದರು. ಹೇಮಾವತಿ ಅವರ ಅಕ್ಕ ಈ ಹಿಂದೆಯೇ ಅಕಾಲಿಕ ಸಾವನ್ನಪ್ಪಿದ್ದು, ಇಬ್ಬರು ಮಕ್ಕಳೊಂದಿಗೆ ಆಕೆಯ ಗಂಡ ಅಲ್ಲಿಯೇ ಸಮೀಪದಲ್ಲಿ ಬಾಡಿಗೆ ಮನೆಯಲ್ಲಿ ನೆಲೆಸಿದ್ದರು. ಮೊನ್ನೆ ಭಾನುವಾರ ಬಾಲಕ ಅಜ್ಜಿ ಮನೆಗೆ ಬಂದಿದ್ದು, ಚಿಕ್ಕಮ್ಮ ಹೇಮಾವತಿ ಜೊತೆಯಲ್ಲಿ ಮಲಗಿದ್ದ. ಹೇಮಾವತಿ ಮದುವೆಯಾದ ಬಳಿಕ ತಾಯಿ ಮನೆಯಲ್ಲೇ ಉಳಿದುಕೊಂಡಿದ್ದರು. ಗಂಡ ವಿಠಲ ಪೈ ಬೇರೆ ಕಡೆ ಕೆಲಸದಲ್ಲಿದ್ದು, ಕೆಲವೊಮ್ಮೆ ಮನೆಗೆ ಬಂದು ಹೋಗುತ್ತಿದ್ದರು.
ಹೇಮಾವತಿ ಕೊಲೆಯಾಗಿದ್ದಾರೆಂಬ ಶಂಕೆಯಲ್ಲಿ ಪೊಲೀಸರು ತನಿಖೆ ನಡೆಸಿದ್ದು, ತಂದೆ, ಮಗನ ಕೈವಾಡದ ಸಂಶಯದಲ್ಲಿ ವಿಚಾರಣೆ ನಡೆಸಿದ್ದರು. ಈ ವೇಳೆ, ಎಸ್ಸೆಸ್ಸೆಲ್ಸಿ ಓದುವ ಬಾಲಕ ತನ್ನ ಕೃತ್ಯ ಒಪ್ಪಿಕೊಂಡಿದ್ದು, ತನ್ನ ಚಿಕ್ಕಮ್ಮ ಹೇಮಾವತಿ ಜೊತೆಗೆ ದೈಹಿಕ ಸಂಪರ್ಕಕ್ಕೆ ಯತ್ನಿಸಿದ್ದು ಅದಕ್ಕೆ ಒಪ್ಪದೇ ಇದ್ದಾಗ ಕುತ್ತಿಗೆಯನ್ನು ಹಿಸುಕಿ ಕೊಲೆ ಮಾಡಿದ್ದಾಗಿ ತಿಳಿಸಿದ್ದಾನೆ. ಉಪ್ಪಿನಂಗಡಿ ಪೊಲೀಸರು ಅಪ್ರಾಪ್ತ ಬಾಲಕನನ್ನು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ.
Mangalore Puttur perne Woman found dead, Minor relative boy arrested for murder following sexually trouble. Police have ruled the death of Hemavati (37), a resident of Darkhasu in Bilinuru village near Perne, as a murder and have arrested a minor in connection with the case. The incident occurred on June 16 night. The accused is a class 10 student, the nephew of the deceased, who was staying at Hemavati’s house for the night.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
21-04-25 02:13 pm
HK News Desk
No GST on UPI Payments: ಎರಡು ಸಾವಿರಕ್ಕಿಂತ ಮೇಲಿ...
20-04-25 08:42 pm
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
21-04-25 07:08 pm
Mangalore Correspondent
Mangalore Chakravarti Sulibele, Ujre; ಸರ್ಕಾರವ...
20-04-25 05:42 pm
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
Mangalore Waqf protest, Traffic ACP Najma Far...
19-04-25 04:24 pm
21-04-25 01:03 pm
Bangalore Correspondent
Karnataka DGP Om Prakash Murder, wife: ನಿವೃತ್...
20-04-25 10:52 pm
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm