ಬ್ರೇಕಿಂಗ್ ನ್ಯೂಸ್
01-07-24 09:38 pm Mangaluru Correspondent ಕ್ರೈಂ
ಮಂಗಳೂರು, ಜುಲೈ 1: ಮಂಗಳೂರಿನ ಸಬ್ ಜೈಲಿನ ಒಳಗಡೆ ಉಳ್ಳಾಲದ ಇಬ್ಬರು ರೌಡಿಗಳ ಮೇಲೆ ಹತ್ತು ಮಂದಿ ಕೈದಿಗಳು ಗಂಪು ಕಟ್ಟಿಕೊಂಡು ಹಲ್ಲೆ ನಡೆಸಿದ್ದಾರೆ. ಇತ್ತೀಚೆಗೆ ಬಂಧಿತರಾಗಿ ಜೈಲು ಪಾಲಾಗಿದ್ದ ಉಳ್ಳಾಲದ ಮಹಮ್ಮದ್ ಸಮೀರ್ ಅಲಿಯಾಸ್ ಕಡಪ್ಪರ ಸಮೀರ್ (33) ಮತ್ತು ಮಹಮ್ಮದ್ ಮನ್ಸೂರ್ ಅಲಿಯಾಸ್ ಬೋಳಿಯಾರ್ ಮನ್ಸೂರ್ ಹಲ್ಲೆಗೀಡಾದವರು.
ಕೊಡಿಯಾಲಬೈಲಿನ ಸಬ್ ಜೈಲಿನಲ್ಲಿ ಇಂದು ಸಂಜೆ 6.30ರಿಂದ 6.45ರ ನಡುವೆ ಹಲ್ಲೆ ಕೃತ್ಯ ನಡೆದಿದೆ. ಟೋಪಿ ನೌಫಾಲ್ ಎಂಬಾತನ ನೇತೃತ್ವದ ತಂಡದ ಸದಸ್ಯರು ಕಿಚನ್ ರೂಮಲ್ಲಿದ್ದ ಚಮಚ ಇನ್ನಿತರ ಹರಿತ ಸಾಮಗ್ರಿಗಳನ್ನು ಬಳಸಿ ಇಬ್ಬರ ಮೇಲೆ ಹಲ್ಲೆ ನಡೆಸಿದ್ದು, ತಲೆ, ಭುಜ, ಮುಖದ ಮೇಲೆ ಗುದ್ದಿ ಹಲ್ಲೆ ನಡೆಸಿದ್ದಾರೆ. ಕೂಡಲೇ ಜೈಲಿನ ಅಧಿಕಾರಿಗಳು ಅವರಿಬ್ಬರನ್ನು ರಕ್ಷಣೆ ಮಾಡಿದ್ದು, ಅಪಾಯದಿಂದ ಪಾರಾಗಿದ್ದಾರೆ.
ಹಲ್ಲೆಗೀಡಾದ ಮಹಮ್ಮದ್ ಸಮೀರ್ ಮತ್ತು ಮನ್ಸೂರ್ ಉಳ್ಳಾಲ ಠಾಣೆಯಲ್ಲಿ ನಟೋರಿಯಸ್ ರೌಡಿಗಳಾಗಿದ್ದು ದರೋಡೆ, ಟಾರ್ಗೆಟ್ ಇಲ್ಯಾಸ್ ಕೊಲೆ, ಫಳ್ನೀರ್ ಶಾಪ್ ಶೂಟೌಟ್ ಪ್ರಕರಣ ಸೇರಿದಂತೆ ಹಲವು ಕೇಸುಗಳನ್ನು ಎದುರಿಸುತ್ತಿದ್ದಾರೆ. ಇತ್ತೀಚೆಗೆ ದರೋಡೆ ಸಂಚು ಪ್ರಕರಣದಲ್ಲಿ ಬಂಧಿತರಾಗಿದ್ದು, ನ್ಯಾಯಾಂಗ ಬಂಧನಕ್ಕೊಳಗಾಗಿ ಜೈಲು ಸೇರಿದ್ದರು.
ಟೋಪಿ ನೌಫಾಲ್, ಮುಫಾದ್ ರಿಫಾತ್, ಮುಹಮ್ಮದ್ ರಿಜ್ವಾನ್, ಇಬ್ರಾಹಿಂ ಖಲೀಲ್, ಉಮರ್ ಫಾರೂಕ್ ಇರ್ಫಾನ್, ಅಲ್ತಾಫ್, ಜೈನುದ್ದೀನ್ ಮತ್ತಿತರರು ಸೇರಿಕೊಂಡು ಜೈಲಿನಲ್ಲಿ ಹಳೆ ದ್ವೇಷದಲ್ಲಿ ಹಲ್ಲೆ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ ಇವರ ನಡುವೆ ಪೂರ್ವ ದ್ವೇಷ ಏನಿತ್ತು ಅನ್ನೋದು ತಿಳಿದುಬಂದಿಲ್ಲ. ಹಲ್ಲೆ ಘಟನೆ ಜೈಲಿನ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದ್ದು, ಘಟನೆ ಸಂಬಂಧ ಬರ್ಕೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಹಮ್ಮದ್ ಸಮೀರ್ ಉಳ್ಳಾಲದ ನಟೋರಿಯಸ್ ರೌಡಿ ಟಾರ್ಗೆಟ್ ಇಲ್ಯಾಸ್ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿದ್ದು, ಆತನ ತಂಡದಲ್ಲಿದ್ದವರು ಹಲ್ಲೆ ನಡೆಸಿದ್ದಾರೆಯೇ ಎನ್ನುವ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
A violent clash broke out between rival gang members inside the Mangaluru jail on Monday, July 1, resulting in injuries to two inmates. Muhammad Sameer alias Kadapar Sameer (33), a resident of Ullal, and Muhammad Mansoor alias Boliyar Mansoor (30), a resident of Boliyar, were attacked by a group of ten rival gang members, including Topi Naufal and others.
16-05-25 10:04 am
Bangalore Correspondent
Davanagere Sp, Constable Accident: ದಾವಣಗೆರೆಯಲ...
15-05-25 10:16 pm
Yatnal FIR, Mahatma Gandhi; ಮಹಾತ್ಮ ಗಾಂಧಿ ಪಾಕಿ...
15-05-25 11:59 am
Pro Pakistan slogan, Arrest, Bangalore: ಬೆಂಗಳ...
14-05-25 05:16 pm
Hassan Kidnap: ಅಪ್ಪನ ಎದುರೇ ಮಗಳ ಅಪಹರಣ ; ಬೇಲೂರಿ...
13-05-25 09:50 pm
15-05-25 09:09 pm
HK News Desk
Donald Trump: ನಾನೇನೂ ಮಧ್ಯಸ್ಥಿಕೆ ವಹಿಸಿರಲಿಲ್ಲ,...
15-05-25 08:38 pm
Sofia Qureshi, BJP leader, FIR: ಸೋಫಿಯಾ ಭಯೋತ್ಪ...
14-05-25 11:08 pm
Masood Azhar; ಐಎಂಎಫ್ ಸಾಲದ ಹಣವನ್ನೂ ಉಗ್ರರಿಗೆ ಹಂ...
14-05-25 11:08 pm
ಪಾಕ್ ವಶದಲ್ಲಿದ್ದ ಬಿಎಸ್ಎಫ್ ಯೋಧ ಕೊನೆಗೂ ಬಿಡುಗಡೆ ;...
14-05-25 07:33 pm
16-05-25 10:06 am
Mangalore Correspondent
Capt Brijesh Chowta, Mangalore Mp, CM Siddara...
15-05-25 08:04 pm
Lashkar Terror HQ, Pakistan: ಧ್ವಂಸಗೊಂಡ ಲಷ್ಕರ್...
15-05-25 06:36 pm
Lokayukta raid, Mangalore: ಸರ್ವೆ ಇಲಾಖೆ ಮೇಲ್ವಿ...
15-05-25 03:33 pm
Kundapur Suicide: ಸಾಲಬಾಧೆ, ತಂದೆ- ಮಗ ಬಾವಿಗೆ ಹಾ...
15-05-25 01:34 pm
15-05-25 11:06 pm
HK News Desk
Bangalore Crime, Mobile showroom: ಮೊಬೈಲ್ ಅಂಗಡ...
15-05-25 06:02 pm
Bangalore Job Fraud, Crime; ಮೆಕ್ರೋಸಾಪ್ಟ್ , ಬ...
15-05-25 12:14 pm
ಕೊಲ್ಕತ್ತಾದಲ್ಲಿ ಕಾರು ಅಡ್ಡಗಟ್ಟಿ 2.66 ಕೋಟಿ ದರೋಡೆ...
14-05-25 10:22 pm
Suhas Shetty Murder, Arrest, CCB Police: ಸುಹಾ...
14-05-25 09:23 pm