ಬ್ರೇಕಿಂಗ್ ನ್ಯೂಸ್
13-07-24 01:05 pm Mangalore Correspondent ಕ್ರೈಂ
ಬೆಂಗಳೂರು, ಜುಲೈ 13: ವಿವಾಹಿತೆ ಜತೆಗೆ ಅನೈತಿಕ ಸಂಬಂಧ ಹೊಂದಿದ್ದ ದುಷ್ಟನೊಬ್ಬ ತನ್ನ ಖಾಸಗಿ ಕ್ಷಣಗಳಿಗೆ ಮಗು (3) ಅಡ್ಡಿಯಾಗಿದ್ದಕ್ಕೆ ಕೊಂದು ಹಾಕಿದ್ದಾನೆ. ಮಗುವನ್ನು ಹತ್ಯೆ ಮಾಡಿದ್ದಕ್ಕೇ ಪ್ರಿಯಕರನ ವಿರುದ್ಧವೇ ಪ್ರಿಯತಮೆ ದೂರು ನೀಡಿದ್ದಾಳೆ. ಬೆಂಗಳೂರಿನ ಬೊಮ್ಮನಹಳ್ಳಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಮೂರು ವರ್ಷದ ಅಶ್ವಿನ್ ಕೊಲೆಯಾದ ದುರ್ದೈವಿ ಮಗು. ಅಶ್ವಿನ್ ತಾಯಿ ರಮ್ಯಾ ಎಂಬಾಕೆ ನೀಡಿದ ದೂರಿನ ಮೇರೆಗೆ ಪ್ರಿಯಕರ ಮೈಕೆಲ್ ರಾಜ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಅವಿವಾಹಿತನಾಗಿದ್ದ ಮೈಕೆಲ್ ರಾಜ್ ಬೊಮ್ಮನಹಳ್ಳಿಯ ವಿರಾಟ್ ನಗರದ ನಿವಾಸಿ ಆಗಿದ್ದು, ಗ್ಯಾರೇಜ್ ಅಂಗಡಿಯನ್ನು ಇಟ್ಟುಕೊಂಡಿದ್ದ.
ಇದೇ ಏರಿಯಾ ಸಮೀಪದಲ್ಲಿ ರಮ್ಯ ಬಾಡಿಗೆ ಮನೆಯೊಂದರಲ್ಲಿ ವಾಸಿವಿದ್ದಳು. ರಮ್ಯಾ ಆರು ವರ್ಷಗಳ ಹಿಂದೆ ಪ್ರೇಮ ವಿವಾಹವಾಗಿದ್ದಳು. ಆದರೆ ಒಂದು ವರ್ಷದ ಹಿಂದೆ ದಂಪತಿ ಮಧ್ಯೆ ವೈಮನಸ್ಸು ಉಂಟಾಗಿತ್ತು. ಹೀಗಾಗಿ ಪತಿಯಿಂದ ರಮ್ಯ ದೂರವಾಗಿದ್ದಳು. ಈ ವೇಳೆ ಆರೋಪಿ ಮೈಕೆಲ್ ರಾಜ್‌ನ ಪರಿಚಯವಾಗಿತ್ತು.
ಪರಿಚಯವು ಕ್ರಮೇಣ ಇಬ್ಬರ ಸಂಬಂಧ ಆತ್ಮೀಯತೆಗೆ ತಿರುಗಿತ್ತು. ಸ್ನೇಹವು ಪ್ರೀತಿಗೆ ತಿರುಗಿತ್ತು. ಕಳೆದ ಆರೇಳು ತಿಂಗಳಿಂದ ರಮ್ಯಾಳ ಮನೆಗೆ ಮೈಕಲ್ ಬಂದು ಹೋಗುತ್ತಿದ್ದ. ಕಳೆದ ಜುಲೈ 6ರಂದು ಮನೆಗೆ ಬಂದಾಗ ಅಶ್ವಿನ್‌ನನ್ನು ಕಂಡು ಕೋಪಗೊಂಡಿದ್ದ. ತಮ್ಮಿಬ್ಬರ ಸಂಬಂಧಕ್ಕೆ ಮಗು ಅಡ್ಡಿಯಾಗಲಿದೆ ಎಂದು ಭಾವಿಸಿ ಕೆನ್ನೆಗೆ ಹೊಡೆದು, ನಂತರ ಬಾತ್ ರೂಮಿನ ಗೋಡೆಗೆ ತಲೆಯನ್ನು ಗುದ್ದಿ ಊತ ಬರುವಂತೆ ಮಾಡಿದ್ದ.
ಇದನ್ನು ರಮ್ಯಳಿಗೆ ಹೇಳದೆ ಮಾರೆ ಮಾಚಿ ಕಾಲ್ಕಿತ್ತಿದ್ದ. ಇತ್ತ ಮಗುವಿನ ಮೇಲೆ ಹಲ್ಲೆ ಆಗಿರುವ ವಿಷಯ ರಮ್ಯಾಗೆ ತಿಳಿದಿರಲಿಲ್ಲ. ಅದೇ ದಿನ ರಾತ್ರಿ ಮಗುವಿನ ಆರೋಗ್ಯದಲ್ಲಿ ಸಮಸ್ಯೆ ಕಾಣಿಸಿಕೊಂಡಿತ್ತು. ಕೂಡಲೇ ಸಮೀಪದ ಖಾಸಗಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ನಿಮ್ಹಾನ್ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಆದರೆ ತಲೆಯಲ್ಲಿ ರಕ್ತ ಹೆಪ್ಪುಗಟ್ಟಿದ್ದರಿಂದ ಚಿಕಿತ್ಸೆ ಫಲಕಾರಿಯಾಗದೆ ಮಗು ಅಶ್ವಿನ್ ಮೃತಪಟ್ಟಿದೆ.
The Bengalore police arrested a 30-year-old man after he pushed his girlfriend’s three-year-old child, which allegedly led to a blood clot, causing his death. The baby's 27-year-old mother was away during the incident.
24-01-26 08:31 pm
Mangaluru Staffer
ಸಿದ್ದರಾಮಯ್ಯ ಆಪ್ತ ಮರಿಗೌಡ ಮುಡಾದಿಂದ ಅಕ್ರಮ ನಿವೇಶನ...
23-01-26 03:21 pm
ವಿಧಾನಸಭೆ ಅಧಿವೇಶನ ; ಭಾಷಣ ಅರ್ಧಕ್ಕೆ ಬಿಟ್ಟು ತೆರಳಿ...
22-01-26 10:27 pm
ಕುಕ್ಕೆ ಸುಬ್ರಹ್ಮಣ್ಯ ; 2 ತಿಂಗಳಲ್ಲಿ 14 ಕೋಟಿಗೂ ಹೆ...
22-01-26 05:20 pm
ಚಾಮರಾಜನಗರದಲ್ಲಿ ಚಿರತೆ ದಾಳಿ ; ಪಾದಯಾತ್ರೆಗೆ ಹೊರಟ್...
21-01-26 01:31 pm
24-01-26 08:38 pm
HK staffer
ಮಂಜೇಶ್ವರ ಚೆಕ್ ಪೋಸ್ಟ್ ನಲ್ಲಿ ವಾಹನ ತಪಾಸಣೆ ; ಕೆಎಸ...
23-01-26 06:44 pm
ಗಾಜಾದಲ್ಲಿ ಶಾಂತಿ ಸ್ಥಾಪನೆಗೆ 35 ದೇಶಗಳ ಮಂಡಳಿ ರಚನೆ...
22-01-26 10:16 pm
ರೈಲಿನ ಶೌಚಾಲಯದಲ್ಲಿ ಎರಡು ಗಂಟೆ ಲಾಕ್ ಮಾಡಿಕೊಂಡ ಯುವ...
22-01-26 01:52 pm
ಗ್ರೀನ್ ಲ್ಯಾಂಡ್ ; ಯುರೋಪ್ ರಾಷ್ಟ್ರಗಳ ಮೇಲೆ ಸುಂಕ ಹ...
22-01-26 01:16 pm
24-01-26 08:14 pm
Mangaluru Staffer
ಬಹುಮುಖ ಪ್ರತಿಭೆಯ ಕಲಾವಿದ ಸ್ವಾತಿ ಸತೀಶ್ ಆತ್ಮಹತ್ಯೆ...
24-01-26 08:04 pm
ಯೆನಪೋಯ ವಿವಿಯಲ್ಲಿ ಮಾನಸಿಕ ಆರೋಗ್ಯ ನರ್ಸಿಂಗ್ ವಿಭಾಗ...
23-01-26 09:21 pm
National Conference on Neuropsychiatry Held a...
23-01-26 09:08 pm
ನಾರ್ಲ ಪಡೀಲಿನಲ್ಲಿ ಒಣ ತ್ಯಾಜ್ಯ ಸಂಸ್ಕರಣಾ ಘಟಕ ನಿರ್...
23-01-26 08:22 pm
24-01-26 08:53 pm
HK Staffer
ಅವಧಿ ಮೀರಿದ ಮಾತ್ರೆ ನೀಡಿದ್ದಾಗಿ ವಿಡಿಯೋ ವೈರಲ್ ; ಕ...
24-01-26 02:13 pm
ಬೈಕ್ ಕದ್ದೊಯ್ಯುತ್ತಿದ್ದ ಇಬ್ಬರನ್ನು ಮರಕ್ಕೆ ಕಟ್ಟಿ...
23-01-26 09:36 pm
ಕಾವೂರು ವ್ಯವಸಾಯ ಸೇವಾ ಸಹಕಾರಿ ಸಂಘಕ್ಕೆ ನಕಲಿ ಚಿನ್ನ...
23-01-26 03:34 pm
29 ವರ್ಷಗಳ ಹಿಂದೆ ತಾಯಿ, ಮಗನನ್ನು ಕೊಲೆಗೈದು ಚಿನ್ನಾ...
22-01-26 10:12 pm