ಬ್ರೇಕಿಂಗ್ ನ್ಯೂಸ್
13-08-24 09:32 pm HK News Desk ಕ್ರೈಂ
ತುಮಕೂರು, ಆ.13: ಅರ್ಜೆಂಟಲ್ಲಿ ಮದುವೆ ಆಗೋರೆ ಹುಷಾರ್.. ಸಿಂಗಲ್ ಹುಡಗರೇ ಈ ಆಂಟಿಯ ಟಾರ್ಗೆಟ್.
ಯಾಕಂದ್ರೆ ನಿಮ್ಮ ಸಿಂಗಲ್ ಲೈಫ್ನಲ್ಲಿ ಮಿಂಗಲ್ ಆಗೋಕೆ ಬಂದವರು ಅದ್ಯಾವಗ ಪಂಗನಾಮ ಹಾಕಿ ಪರಾರಿಯಾಗಿಬಿಡ್ತಾರೋ ಹೇಳೋದಿಕ್ಕೆ ಆಗಲ್ಲ. ಇಂಥಾ ಮೋಸದ ಮದುವೆಯ ಕಂಪ್ಲೀಟ್ ಕಹಾನಿಯನ್ನ ಎಳೆ ಎಳೆಯಾಗಿ ಬಿಚ್ಚಿಡ್ತೀವಿ ನೋಡಿ. ತುಮಕೂರಿನಲ್ಲಿ ಲಕ್ಷ್ಮಿ ಅನ್ನೋ ಹೆಸರಿನವಳು ಮಾಡಿದ ಕೆಲಸದ ಬಗ್ಗೆ ಕೇಳಿದ್ರೆ ನೀವು ಅಲಾ ಇವಳಾ ಅಂತ ನಿಬ್ಬೆರಾಗಾಗ್ತೀರಾ.. ಯಾಕಂದ್ರೆ ಲಕ್ಷ್ಮೀ ಆಂಟಿ ಮಾಡಿದ ಮಹಾ ಮೋಸಕ್ಕೆ ಇಲ್ಲೊಂದು ಕುಟುಂಬ ಅಕ್ಷರಶಃ ತತ್ತರಿಸಿ ಹೋಗಿದೆ. ಈಕೆ ಮಾಡಿದ ನಂಬಿಕೆ ದ್ರೋಹದಿಂದ ಮದುವೆ ಅನ್ನೋ ಪದಕ್ಕೆ ಕಳಂಕ ತಟ್ಟಿದೆ.
ಲಕ್ಷ್ಮೀ ಮಾಡಿದ ಐನಾತಿ ಕೆಲಸಕ್ಕೆ ಪಾಲಾಕ್ಷಯ್ಯ ಅನ್ನುವವರು ಪೊಲೀಸ್ ಠಾಣೆಯ ಮುಂದೆ ಬಂದು ನಿಲ್ಲುವ ಸ್ಥಿತಿ ಬಂದಿದೆ. ಇವರ ಮಗನ ಹೆಸರು ದಯಾನಂದ ಮೂರ್ತಿ ಅಂತ ಮಗನಿಗೆ ಮದುವೆ ಮಾಡ್ಬೇಕು ಅವನಿಗೂ ಒಂದು ಸಂಸಾರ ಅಂತ ಮಾಡ್ಬೇಕು ಅನ್ನೋದು ಪಾಲಾಕ್ಷಯ್ಯನವರ ಕನಸಾಗಿತ್ತು. ಆದ್ರೆ ದಯಾನಂದ ಮೂರ್ತಿಗೆ 37 ವರ್ಷ ದಾಟಿದ್ರೂ ಮದುವೆಗೆ ಹೆಣ್ಣು ಸಿಕ್ಕಿರಲಿಲ್ಲ. ನೂರಾರು ಹೆಣ್ಣು ನೋಡಿದ್ರೂ ಕಂಕಣ ಭಾಗ್ಯ ಕೂಡಿ ಬಂದಿರಲಿಲ್ಲ. ಮದುವೆಯ ಬ್ರೋಕರ್ಗಳು ಹೆಣ್ಣು ಹುಡುಕಿಸಿದ್ರೂ ದಯಾನಂದ ಮೂರ್ತಿಗೆ ಮದುವೆ ಭಾಗ್ಯ ಒಲಿದಿರಲಿಲ್ಲ. ಆಗ ಈ ಪಾಲಾಕ್ಷಯ್ಯನರವಿಗೆ ಪರಿಚಯವಾಗಿದ್ದು ಹುಬ್ಬಳ್ಳಿಯ ಬ್ರೋಕರ್ ಈ ಲಕ್ಷ್ಕೀ.
ಹುಡುಗಿ ಇದ್ದಾಳೆ. ಅಪ್ಪ ಅಮ್ಮ ಯಾರೂ ಇಲ್ಲ ಅಂತ ಕೋಮಲ ಅನ್ನೋ ಹುಡುಗಿಯ ಫೋಟೋವನ್ನ ಕಳಿಸಿದ್ದಾಳೆ. ಇತ್ತ ಪಾಲಾಕ್ಷಯ್ಯನವರಿಗೆ ಮಗನಿಗೆ ಹೆಣ್ಣು ಸಿಕ್ಕಿದ್ರೆ ಸಾಕಿತ್ತು. ಹಾಗಾಗಿ ಕೋಮಲಾಳನ್ನ ಮನೆ ಸೊಸೆ ಮಾಡಿಕೊಳ್ಳೋದಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ರು. ಅದ್ರಂತೆ ಈ ಲಕ್ಷ್ಮಿ ಕೋಮಲಾಳನ್ನ ಪಾಲಾಕ್ಷಯ್ಯನವರ ಮನೆಗೆ ಕರ್ಕೊಂಡು ಬಂದಿದ್ಳು.
ಯಾವಾಗ ಪಾಲಾಕ್ಷಯ್ಯ ಹುಡುಗಿಯನ್ನ ಓಕೆ ಮಾಡಿದ್ರೋ, ಈ ಲಕ್ಷ್ಮಿ ಕೋಮಲಾಳನ್ನ ಗಂಡಿನ ಮನೆಗೆ ಕರ್ಕೊಂಡು ಬಂದಿದ್ಳು. ಜೊತೆಗೆ ಸಂಬಂಧಿಕರು ಅಂತ ಹೇಳಿಕೊಂಡು ಇನ್ನೂ ಐದಾರು ಜನ ಈ ಲಕ್ಷ್ಮಿ ಜೊತೆ ಬಂದಿದ್ರು. ಅವತ್ತೆ ಮದುವೆ ಮಾತುಕತೆ ಕೂಡ ನಡೆದು ಹೋಗಿತ್ತು. ವಿಚಿತ್ರ ಏನಂದ್ರೆ ಮಾತುಕತೆ ನಡೆದ ಮರುದಿನವೇ ದಯಾನಂದ ಮೂರ್ತಿ ಮತ್ತು ಕೋಮಲಾರ ಮದುವೆಯೂ ನಡೆದು ಹೋಗಿತ್ತು. ಗ್ರಾಮದಲ್ಲೇ ಸುಮಾರು 200 ಜನರ ಸಮ್ಮುಖದಲ್ಲಿ ವಿವಾಹ ನಡೆದು ಹೋಗಿತ್ತು.
ಮಗನಿಗೆ ಹೆಣ್ಣು ಸಿಕ್ಕ ಖುಷಿಯಲ್ಲಿ ಪಾಲಾಕ್ಷಯ್ಯ ಸೊಸೆಗೆ ಚಿನ್ನದ ಸರ, ತಾಳಿ, ಕಿವಿಗೆ, ಓಲೆ ಅಂತೆಲ್ಲ ಬರೋಬ್ಬರಿ 25 ಗ್ರಾಮ ಚಿನ್ನ ಕೂಡ ಹಾಕಿದ್ರು. ಅತ್ತ ಮಗನಿಗೆ ಹೆಣ್ಣು ಹುಡುಕಿಕೊಟ್ಟಿದ್ದ ಬ್ರೋಕರ್ ಲಕ್ಷ್ಮಿಗೆ 1.5 ಲಕ್ಷ ಹಣ ಕೂಡ ಕೊಟ್ಟಿದ್ರು.ಮಗನ ಮದುವೆಯಾಯ್ತು ಅಂತ ನೆಮದಿಯ ನಿಟ್ಟುಸಿರು ಬಿಟ್ಟಿದ್ರು. ಸಂಪ್ರದಾಯದಂತೆ ಸೊಸೆಯನ್ನ ಮನೆ ತುಂಬಿಸಿಕೊಂಡಿದ್ರು. ಆದ್ರೆ ಮದುವೆಯಾದ್ಮೇಲೆ ಎರಡು ದಿನ ಹುಡುಗಿಯನ್ನ ಯುವತಿಯನ್ನ ಮನೆಗೆ ಕರ್ಕೊಂಡು ಹೋಗೋದು ಕಾಮನ್. ಬ್ರೋಕರ್ ಲಕ್ಷ್ಮೀ ಕೂಡ ಸಂಪ್ರದಾಯದ ನೆಪ ಹೇಳಿ ದಯಾನಂದ ಮೂರ್ತಿ ಹೆಂಡತಿ ಕೋಮಲ್ಳನ್ನ ಮಾತ್ರ ವಾಪಸ್ ಊರಿಗೆ ಕರ್ಕೊಂಡು ಹೋಗಿದ್ದಾರೆ. ಇಲ್ಲಿಂದಲೇ ನೋಡಿ ಅಸಲಿ ಕಹಾನಿ ಶುರುವಾಗೋದು.
ಅದ್ಯಾವಾಗ ತವರು ಮನೆಗೆ ಹೋಗಿ ಬರ್ತೀನಿ ಹೋದ ಸೊಸೆ ಒಂದು ವಾರ ಕಳೆದ್ರೂ ವಾಪಸ್ ಬಂದಿರಲಿಲ್ಲ. ಕೊನೆಗೆ ಪಾಲಾಕ್ಷಯ್ಯ ಕುಟುಂಬ ಹುಬ್ಬಳ್ಳಿಗೆ ಹೋಗಿ ವಿಚಾರಿಸಿದಾಗ ಗೊತ್ತಾಗಿದ್ದು ನಕಲಿ ಮದುವೆಯ ಕರಾಳ ಸತ್ಯ. ಅಸಲಿಗೆ ಪಾಲಾಕ್ಷಯ್ಯ ಮಗನ ಜೊತೆ ನಡೆದಿದ್ದು ಮದುವೆಯಾಗಿರಲಿಲ್ಲ. ಅದೊಂದು ಪಕ್ಕಾ ಪ್ಲಾನ್ಡ್ ದೋಖ ಆಗಿತ್ತು. ಮದುವ ನೆಪದಲ್ಲಿ ನಡೆದ ಮಹಾ ಮೋಸ ಆಗಿತ್ತು.
ಮೂರು ವರ್ಷದಲ್ಲಿ ನಾಲ್ಕು ಮದುವೆ ;
ಯಾವಾಗ ತವರು ಮನೆಗೆ ಹೋಗಿ ಬರ್ತಿನಿ ಅಂತ ಹೋದ ಸೊಸೆ ತಿಂಗಳಾದ್ರೂ ವಾಪಸ್ ಬಂದಿಲ್ಲ. ಫೋನ್ ಮಾಡಿದ್ರು ಈ ಕೋಮಲಾ ಸರಿಯಾಗಿ ರೆಸ್ಪಾನ್ಸ್ ಮಾಡಿಲ್ಲ. ಅತ್ತ ಬ್ರೋಕರ್ ಲಕ್ಷ್ಮಿ ಕೂಡ ಫೋನ್ ರಿಸೀವ್ ಮಾಡಿಲ್ಲ.. ಬಂದು ಕೋಮಲಾರನ್ನ ಬಿಟ್ಟು ಹೋಗಿ ಅಂದ್ರೂ ಅವರು ಕೇಳಿಲ್ಲ.. ಇವರೇ ಬಂದು ಕರ್ಕೊಂಡು ಹೋಗ್ತೀವಿ ಅಂದ್ರು ಬೇಡ ಅಂದಿದ್ದಾರೆ. ಸಂಪ್ರದಾಯ ಶಾಸ್ತ್ರ ಅಂತ ಹುಡುಗನಿಗೂ ಬರೋದಕ್ಕೆ ಬಿಟ್ಟಿಲ್ಲ.
ಸಂಸಾರ ನೆಟ್ಟಗೆ ಮಾಡ್ಬೇಕು ಅನ್ನೋ ಕಾರಣಕ್ಕೆ ಹುಬ್ಬಳ್ಳಿಗೆ ಬಂದಿದ್ದ ಪಾಲಾಕ್ಷಯ್ಯ ಕೊನೆಗೆ ಗುಬ್ಬಿಗೆ ವಾಪಸ್ ಬಂದು ಪೊಲೀಸ್ ಠಾಣೆಗೆ ದೂರು ಕೊಟ್ಟಿದ್ದಾರೆ. ಆಗ ಪೊಲೀಸರು ಮದುವೆ ಮಾಡಿಸಿದ್ದ ಬ್ರೋಕರ್ ಲಕ್ಷ್ಮಿ ಮತ್ತು ಮದುವೆಯಾಗಿದ್ದ ಕೋಮಲಳನ್ನ ಪತ್ತೆ ಹಚ್ಚು ಕೆಲಸ ಮಾಡಿದ್ದಾರೆ.
ಪೊಲೀಸ್ ಠಾಣೆಗೆ ಕರೆಸಿ ವಿಚಾರಣೆ ಮಾಡಿದಾಗ ಇವರ ಕರಾಳ ಸತ್ಯ ಬಯಲಾಗಿದೆ. ವಯಸ್ಸು ಮೀರಿ ಮದುವೆಯಾಗದೇ ಒದ್ದಾಡುತ್ತಿರುವ ಗಂಡು ಮಕ್ಕಳೇ ಇವರ ಟಾರ್ಗೆಟ್ ಅಂತವರನ್ನು ಹುಡುಕಿ ಹುಡುಕಿ ಗಾಳ ಹಾಕಿ, ಬಾಚಿ ದೋಚಿ ಪರಾರಿಯಾಗೋದೇ ಇವರ ದಂಧೆ. ಈ ಲಕ್ಷ್ಮೀ ಇಲ್ಲಿಯವರೆಗೆ ಒಬ್ಬರಲ್ಲ ಇಬ್ಬರಲ್ಲ, ಒಟ್ಟು ನಾಲ್ಕು ಜನರನ್ನು ಮದುವೆಯ ಹೆಸರಲ್ಲಿ ಮದುವೆಯಾಗಿ ಯಾಮಾರಿಸಿದ್ದಾಳೆ ಎಂಬುದು ತಿಳಿದು ಬಂದಿದೆ.
Tumkur women targets youths unmarried, flees with gold and cash after setting fake girl as wife.
15-01-25 12:19 pm
HK News Desk
Hassan Accident, Mangalore: ಕ್ಯಾಂಟಿನ್ಗೆ ನುಗ್...
14-01-25 03:36 pm
Lakshmi Hebbalkar Car Accident: ಅಡ್ಡ ಬಂದ ನಾಯಿ...
14-01-25 12:32 pm
Vijayapura News: ಕೌಟುಂಬಿಕ ಕಲಹ ; ಮಕ್ಕಳನ್ನ ಕಾಲು...
13-01-25 10:30 pm
Hassan Mangalore Suicide: ಹುಡ್ಗೀರು ಏನ್ಮಾಡಿದ್ರ...
13-01-25 06:21 pm
14-01-25 07:18 pm
HK News Desk
Mahakumbh 2025: ಮಹಾ ಕುಂಭ ಮೇಳದಲ್ಲಿ ಭಾರತ ದರ್ಶನ...
13-01-25 10:49 pm
ನನ್ನ ಹೆಂಡತಿ ಸುಂದರಿಯಾಗಿದ್ದಾಳೆ, ಅವಳನ್ನು ನೋಡಲು ಇ...
13-01-25 09:58 am
ಪಾಕಿಸ್ತಾನ ಪರಮಾಣು ಇಂಧನ ಆಯೋಗದ 18 ವಿಜ್ಞಾನಿಗಳನ್ನು...
12-01-25 05:07 pm
Hollywood hills, Los Angeles fires: ಲಾಸ್ ಏಂಜ...
09-01-25 12:11 pm
15-01-25 12:09 pm
Mangaluru Correspondent
Mangalore News, Savayava Sante: ಫೆಬ್ರವರಿ ತಿಂಗ...
14-01-25 08:36 pm
\MP Brijesh Chowta, Kadaba, Solar Park: ಕಡಬ ತ...
14-01-25 02:27 pm
BJP protest, Mangalore, cow udders row: ಹಸುವ...
13-01-25 09:08 pm
Kadri Kalamele 2025, Mangalore: ಕದ್ರಿ ಕಲಾಮೇಳಕ...
13-01-25 08:43 pm
14-01-25 10:40 pm
HK News Desk
Mangalore crime, Diesel thieves: ಸುರತ್ಕಲ್ ; ಟ...
14-01-25 04:47 pm
Mangalore, Tannirbhavi beach, crime: ತಣ್ಣೀರುಬ...
13-01-25 03:30 pm
Mangalore, crime, rape: ಬ್ಯಾಂಕ್ ಉದ್ಯೋಗಿ ಯುವತಿ...
11-01-25 10:21 pm
Mumbai Crime, Fruad, Torres Ponzi: ಚೈನ್ ಸ್ಕೀಮ...
10-01-25 11:05 pm