ಬ್ರೇಕಿಂಗ್ ನ್ಯೂಸ್
20-08-24 05:33 pm Mangalore Correspondent ಕ್ರೈಂ
ಮಂಗಳೂರು, ಆಗಸ್ಟ್. 20: ಪಿಯುಸಿ ವಿದ್ಯಾರ್ಥಿನಿಯ ಕೈಗೆ ಸಹಪಾಠಿ ಬಾಲಕನೊಬ್ಬ ಬ್ಲೇಡ್ ನಲ್ಲಿ ಹಲ್ಲೆಗೈದು ಪರಾರಿಯಾದ ಘಟನೆ ಪುತ್ತೂರು ಪೇಟೆಯ ಕೊಂಬೆಟ್ಟು ಜೂನಿಯರ್ ಕಾಲೇಜು ಆವರಣದಲ್ಲಿ ನಡೆದಿದೆ.
ಇಬ್ಬರು ಒಂದೇ ಕಾಲೇಜಿನಲ್ಲಿ ಕಲಿಯುವ ಪ್ರಥಮ ಪಿಯುಸಿ ವಿದ್ಯಾರ್ಥಿಗಳಾಗಿದ್ದು ಇಂದು ಬೆಳಗ್ಗೆ ಹುಡುಗ ಹಿಂಬಾಲಿಸುತ್ತ ಬಂದು ಬಾಲಕಿಯೊಂದಿಗೆ ಮಾತನಾಡುತ್ತಿದ್ದಾಗಲೇ ಸಿಟ್ಟಿಗೆದ್ದು ಕೈಯಲ್ಲಿದ್ದ ಚೂಪಾದ ವಸ್ತುವಿನಿಂದ ಗೀರಿದ್ದು ಬಾಲಕಿಯ ಕೈಗೆ ಗಾಯವಾಗಿದೆ. ಹುಡುಗಿ ಮುಸ್ಲಿಂ ಸಮುದಾಯಕ್ಕೆ ಸೇರಿದ್ದು, ಹುಡುಗ ಹಿಂದೂ ಆಗಿದ್ದಾನೆ. ಮಧ್ಯಾಹ್ನ ಕಾಲೇಜು ಬಿಟ್ಟ ಬಳಿಕ ಹುಡುಗಿ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾಳೆ.




ಘಟನೆ ತಿಳಿಯುತ್ತಲೇ ಮುಸ್ಲಿಂ ಸಂಘಟನೆ ಪ್ರಮುಖರು ಮತ್ತು ಯುವಕರು ಆಸ್ಪತ್ರೆ ಆವರಣದಲ್ಲಿ ಜಮಾಯಿಸಿದ್ದಾರೆ. ಬಾಲಕನ ವಿರುದ್ಧ ಕ್ರಮಕ್ಕೆ ಆಗ್ರಹ ಮಾಡಿದ್ದಾರೆ. ಬಾಲಕಿ ಹೇಳುವ ಪ್ರಕಾರ, ನಿನ್ನನ್ನು ಲವ್ ಮಾಡುತ್ತೇನೆ ಎಂದು ಹೇಳಿದ್ದಕ್ಕೆ ವಿದ್ಯಾರ್ಥಿನಿ ಬಾಲಕನಿಗೆ ಬೈದಿದ್ದಾಳಂತೆ. ಇದರಿಂದ ಸಿಟ್ಟಿಗೆದ್ದ ಹುಡುಗ, ತನ್ನ ಕೈಯಲ್ಲಿದ್ದ ಚೂಪಾದ ಬ್ಲೇಡ್ ನಲ್ಲಿ ಬಾಲಕಿಯ ಕೈಗೆ ಇರಿದು ಪರಾರಿಯಾಗಿದ್ದಾನೆ. ಈ ವೇಳೆ ಕಾಲೇಜಿನ ಶಿಕ್ಷಕಿಯೊಬ್ಬರು ಕೈಗೆ ಗಾಜು ತಾಗಿ ಗಾಯವಾಗಿದ್ದಾಗಿ ಹೇಳುವಂತೆ ಸಲಹೆ ನೀಡಿದ್ದರು ಎಂದು ಬಾಲಕಿ ಮಾಧ್ಯಮದ ಮುಂದೆ ಆರೋಪಿಸಿದ್ದಾಳೆ.
ಆಸ್ಪತ್ರೆ ಮುಂದೆ ಜನ ಸೇರಿದ್ದು, ಸ್ಥಳದಲ್ಲಿ ಬಿಗುವಿನ ಸ್ಥಿತಿ ನಿರ್ಮಾಣವಾಗಿದೆ. ನೆರೆದಿದ್ದ ಜನರನ್ನು ಪೊಲೀಸರು ಆಸ್ಪತ್ರೆಯಿಂದ ಹೊರಗೆ ಕಳುಹಿಸಿದ್ದಾರೆ. ಕಾಂಗ್ರೆಸ್ ಮುಖಂಡರು, ಮುಸ್ಲಿಂ ಸಂಘಟನೆ ಮುಖಂಡರು ಸೇರಿದ್ದು ಹುಡುಗ ಚೂರಿ ಇರಿದಿದ್ದಾನೆ, ಆತನನ್ನು ಕೂಡಲೇ ಬಂಧಿಸಬೇಕೆಂದು ಆಗ್ರಹಿಸಿದ್ದಾರೆ.
PUC girl Student attacked by minor boy in blade, turns into Hindu muslim fight at puttur in Mangalore. Both muslim and Hindu organisations have joined in great numbers at the hospital.
12-09-26 09:40 pm
HK News Staffer
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
ಬಿಜೆಪಿ ಅಧಿಕಾರಕ್ಕೆ ಬರಲು ನನ್ನ ಸ್ಥಾನ ಬಿಟ್ಟುಕೊಟ್ಟ...
12-09-26 05:56 pm
ಐಎಎಸ್ ತೇರ್ಗಡೆಯಾಗಿದ್ದ ಕೇರಳದ ಮೊದಲ ಬುಡಕಟ್ಟು ಮಹಿಳ...
12-09-26 05:53 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
14-09-26 10:01 pm
HK News Staffer
ಮಂಗಳೂರಿನಲ್ಲಿ ಎರಡು ದಿನ ಸಿಎಂ ಡಿಕೆಶಿ ವಾಸ್ತವ್ಯ ;...
14-09-26 06:02 pm
100 ವರ್ಷಗಳ ಬಳಿಕವೂ ಸ್ವಂತ ಸೂರಿಗಾಗಿ ಕರಾವಳಿಯಲ್ಲಿ...
14-09-26 05:00 pm
Konkan Catholic Credit Society Inaugurated in...
14-09-26 04:18 pm
Konkan Catholic Credit Society Mangalore: ಹಣಕ...
13-09-26 10:11 pm
12-09-26 07:41 pm
HK News Staffer
ಕ್ರಿಪ್ಟೊ ಕರೆನ್ಸಿ ಹೆಸ್ರಲ್ಲಿ ಡಾಕ್ಟರ್ ಗೆ ಮಹಿಳೆಯಿ...
11-09-26 06:38 pm
ಜಾಮೀನು ಪಡೆಯಲು ನಕಲಿ ಆಧಾರ್ ಕಾರ್ಡ್ ಹಾಜರು ; ಉಡು...
11-09-26 01:09 pm
ಬೈಕ್ಗೆ ಡಿಕ್ಕಿ ಹೊಡೆದ ಕಾರು ; ಚಾಮರಾಜನಗರದಲ್ಲಿ ಮೂ...
11-09-26 10:14 am
ಕುಂದಾಪುರದಲ್ಲಿ 8 ಶಾಲಾ ಮಕ್ಕಳ ಬಲಿ ಪಡೆದ ಭೀಕರ ಅಪಘಾ...
10-09-26 08:16 pm