ಬಳ್ಕುಂಜೆ ; ಅಕ್ರಮ ಮರಳುಗಾರಿಕೆಗೆ ಪೊಲೀಸ್ ದಾಳಿ, ಎರಡು ಟಿಪ್ಪರ್ ವಶಕ್ಕೆ

09-12-20 04:33 pm       Mangalore Correspondent   ಕ್ರೈಂ

ಮುಲ್ಕಿ ಪೊಲೀಸರು ಬಳ್ಕುಂಜೆ ಎಂಬಲ್ಲಿ ನಡೆಯುತ್ತಿದ್ದ ಅಕ್ರಮ ಮರಳುಗಾರಿಕೆಗೆ ದಾಳಿ ನಡೆಸಿದ್ದಾರೆ.

ಮುಲ್ಕಿ, ಡಿ.9: ಮುಲ್ಕಿ ಆಸುಪಾಸಿನಲ್ಲಿ ಭಾರೀ ಅಕ್ರಮ ಮರಳುಗಾರಿಕೆ ನಡೆಯುತ್ತಿದ್ದು ಮುಲ್ಕಿ ಪೊಲೀಸರು ಬಳ್ಕುಂಜೆ ಎಂಬಲ್ಲಿ ನಡೆಯುತ್ತಿದ್ದ ಅಕ್ರಮ ಮರಳುಗಾರಿಕೆಗೆ ದಾಳಿ ನಡೆಸಿದ್ದಾರೆ.

ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದರು. ದಾಳಿ ವೇಳೆ, ಟಿಪ್ಪರನ್ನು ನದಿಗೆ ಇಳಿಸಿ ಮರಳನ್ನು ತುಂಬಿಸಲಾಗುತ್ತಿತ್ತು. ಶಾಂಭವಿ ನದಿಗೆ ಟಿಪ್ಪರನ್ನು ಇಳಿಸಿ ರಾಜಾರೋಷವಾಗಿ ಮರಳು ತೆಗೆಯಲಾಗುತ್ತಿದೆ. ಪೊಲೀಸರು ದಾಳಿ ನಡೆಸಿದಾಗ, ಟಿಪ್ಪರ್ ಚಾಲಕ ಮತ್ತು ದೋಣಿಯಲ್ಲಿ ಮರಳು ತೆಗೆಯುತ್ತಿದ್ದವರು ಪರಾರಿಯಾಗಿದ್ದಾರೆ.

ಎರಡು ಟಿಪ್ಪರ್ ಲಾರಿ ಮತ್ತು ಮೂರು ದೋಣಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಒಬ್ಬ ಟಿಪ್ಪರ್ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಬಳ್ಕುಂಜೆ ವ್ಯಾಪ್ತಿಯಲ್ಲಿ ಹತ್ತಾರು ಕಡೆ ಅಕ್ರಮವಾಗಿ ಮರಳನ್ನು ತೆಗೆಯಲಾಗುತ್ತಿದ್ದು, ಮೂಲ್ಕಿ ಪೊಲೀಸರ ಭಯ ಇಲ್ಲದೆ ಮರಳುಗಾರಿಕೆ ನಡೆಯುತ್ತಿದೆ. 

The Mulki Police raid on illegal sand Mining at Balkunje. Two trucks and three boats have been seized. The owners are said to be absconding.