ಬ್ರೇಕಿಂಗ್ ನ್ಯೂಸ್
12-09-24 05:37 pm HK News Desk ಕ್ರೈಂ
ಉಳ್ಳಾಲ, ಸೆ.12: ಸಿಟಿ ಬಸ್ಸುಗಳ ಫುಟ್ ಬೋರ್ಡಲ್ಲಿ ನೇತಾಡಿಕೊಂಡು ದಿನ ನಿತ್ಯವೂ ಪ್ರಯಾಣಿಕರು ಅಪಾಯಕಾರಿಯಾಗಿ ಪ್ರಯಾಣಿಸುತ್ತಿದ್ದರೂ ಟ್ರಾಫಿಕ್ ಪೊಲೀಸರು ಈ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ತಲಪಾಡಿಯಿಂದ ಮಂಗಳೂರು ಕಡೆಗೆ ಚಲಿಸುತ್ತಿದ್ದ ಖಾಸಗಿ ಸಿಟಿ ಬಸ್ಸೊಂದರಲ್ಲಿ ನೇತಾಡುತ್ತಿದ್ದ ವಿದ್ಯಾರ್ಥಿಯೋರ್ವ ರಸ್ತೆಗೆಸೆಯಲ್ಪಟ್ಟ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಕಿಕ್ಕಿರಿದು ಪ್ರಯಾಣಿಕರನ್ನ ತುಂಬಿಸುತ್ತಿರುವ ಸಿಟಿ ಬಸ್ಸುಗಳ ವಿರುದ್ಧ ಜನಸಾಮಾನ್ಯರು ಕ್ರಮಕ್ಕೆ ಆಗ್ರಹಿಸಿದ್ದಾರೆ.
ತಲಪಾಡಿಯಿಂದ ಮಂಗಳೂರಿಗೆ ಚಲಿಸುತ್ತಿದ್ದ 42 ರೂಟ್ ನಂಬರಿನ ಸೈಂಟ್ ಅಂತೋನಿ ಖಾಸಗಿ ಸಿಟಿ ಬಸ್ಸಲ್ಲಿ ವಿದ್ಯಾರ್ಥಿಗಳು ನೇತಾಡುತ್ತ ಪ್ರಯಾಣಿಸುತ್ತಿರುವುದನ್ನು ಹಿಂಬದಿಯ ಕಾರಿನ ಪ್ರಯಾಣಿಕರು ತಮ್ಮ ಮೊಬೈಲಿನಲ್ಲಿ ಚಿತ್ರೀಕರಿಸಿದ್ದಾರೆ. ಬಸ್ಸು ತೊಕ್ಕೊಟ್ಟು ರೈಲ್ವೇ ಓವರ್ ಬ್ರಿಡ್ಜ್ ತಂಗುದಾಣದಲ್ಲಿ ಬ್ರೇಕ್ ಹೊಡೆದು ನಿಂತಾಗ ಬಸ್ಸಿನ ಫುಟ್ ಬೋರ್ಡಲ್ಲಿ ನೇತಾಡುತ್ತಿದ್ದ ವಿದ್ಯಾರ್ಥಿ ರಸ್ತೆಗೆಸೆಯಲ್ಪಟ್ಟು ಬಿದ್ದಿದ್ದಾನೆ. ಬಸ್ಸಿಂದ ಕೆಳಗೆ ಬಿದ್ದ ವಿದ್ಯಾರ್ಥಿಗೆ ಅದೃಷ್ಟವಶಾತ್ ಏನೂ ಆಗಿಲ್ಲ. ಈ ದೃಶ್ಯವು ಕಾರು ಪ್ರಯಾಣಿಕರ ಮೊಬೈಲಲ್ಲಿ ರೆಕಾರ್ಡ್ ಆಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
Video of overloading students on the St. Antony bus #Talapady route goes viral in #Mangalore. A student is seen falling down the speeding bus on Route 42. Mangalore traffic Police have to take action in this case. @alokkumar6994 @compolmlr #BreakingNews pic.twitter.com/ifVu0gsLde
— Headline Karnataka (@hknewsonline) September 12, 2024
ಕೆಲವು ಪ್ರದೇಶಗಳಿಗೆ ಸಮರ್ಪಕ ಬಸ್ಸುಗಳಿಲ್ಲದೆ ಬೆಳಗ್ಗೆ ಶಾಲೆ, ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು ಕ್ಲಾಸಿಗೆ ತಡವಾಗುವುದರಿಂದ ಸಿಕ್ಕ ಬಸ್ಸಿ ಫುಟ್ ಬೋರ್ಡಲ್ಲೇ ನೇತಾಡಿಕೊಂಡು ಪ್ರಯಾಣಿಸುತ್ತಾರೆ. ಎರಡು ವರುಷಗಳ ಹಿಂದೆ ಉಳ್ಳಾಲ ಬೈದೆರೆಪಾಲು ನಿವಾಸಿ ಪ್ರಥಮ ಪಿಯುಸಿ ವಿದ್ಯಾರ್ಥಿ ಯಶರಾಜ್ ಖಾಯಂ ಬಸ್ಸು ತಪ್ಪಿದ ಹಿನ್ನೆಲೆಯಲ್ಲಿ ಪ್ರಯಾಣಿಕರು ತುಂಬಿ ತುಳುಕುತ್ತಿದ್ದ ಬಸ್ಸಿನಲ್ಲಿ ಪ್ರಯಾಣಿಸಿ ಕಲ್ಲಾಪು ಆಡಂಕುದ್ರು ಎಂಬಲ್ಲಿ ರಸ್ತೆಗೆಸೆಯಲ್ಪಟ್ಟು ಮೆದುಳು ನಿಷ್ಕ್ರಿಯಗೊಂಡು ಮೃತಪಟ್ಟಿದ್ದ. ಈ ಘಟನೆಯ ನಂತರವೂ ಟ್ರಾಫಿಕ್ ಪೊಲೀಸರು ನಿಯಮ ಮೀರಿ ಪ್ರಯಾಣಿಕರನ್ನು ತುಂಬಿಸಿ ಪ್ರಯಾಣಿಸುತ್ತಿರುವ ಖಾಸಗಿ ಬಸ್ಸುಗಳ ವಿರುದ್ಧ ಕ್ರಮ ಕೈಗೊಂಡಿಲ್ಲ. ಬದಲಾಗಿ ಹೆದ್ದಾರಿಗಳಲ್ಲಿ ಅಡ್ಡಲಾಗಿ ನಿಂತು ವಾಹನಗಳನ್ನ ಅಡ್ಡಹಾಕಿ ಹಿರಿಯ ಅಧಿಕಾರಿಗಳು ದಿನಂಪ್ರತಿ ನೀಡುವ "ಟಾರ್ಗೆಟ್ 40" ಕೇಸುಗಳ ಟಾಸ್ಕನ್ನು ಪೂರ್ತಿಗೊಳಿಸುವುದರಲ್ಲೇ ಟ್ರಾಫಿಕ್ ಪೊಲೀಸರು ಬ್ಯುಸಿಯಾಗಿರುತ್ತಾರೆ.
ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಓಡಾಡುವ ಸಿಟಿ ಬಸ್ಸುಗಳಲ್ಲಿ ಬೆಳಗ್ಗಿನ ಹೊತ್ತು ಈ ದೃಶ್ಯ ಎಲ್ಲ ಕಡೆ ಸಾಮಾನ್ಯ ಎನ್ನುವಂತಾಗಿದೆ. ಅಪಘಾತ ನಡೆದ ಸಂದರ್ಭದಲ್ಲಿ ಮಾತ್ರ ಬಸ್ಸಿಗೆ ಬಾಗಿಲು ಅಳವಡಿಸಬೇಕು, ಕಾನೂನು ಉಲ್ಲಂಘಿಸುವ ಬಸ್ಸು ಸಿಬ್ಬಂದಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹ ಬರುತ್ತದೆ. ಕೆಲ ದಿನಗಳ ಬಳಿಕ ಎಲ್ಲರೂ ಎಲ್ಲವನ್ನೂ ಮರೆತು ಸುಮ್ಮನಾಗುತ್ತಾರೆ. ಬರೀ ಹೆಲ್ಮೆಟು ಹಳೆಯ ದಂಡ ವಸೂಲಿಯಲ್ಲೇ ಬ್ಯುಸಿ ಆಗಿರುವ ಟ್ರಾಫಿಕ್ ಪೊಲೀಸರು ಫುಟ್ ಬೋರ್ಡಲ್ಲಿ ಅಪಾಯಕಾರಿ ಪ್ರಯಾಣದಂತಹ ಜ್ವಲಂತ ಸಮಸ್ಯೆಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಮುಂದೆ ನಡೆಯುವ ಅವಘಡಗಳಿಗೆ ಪೊಲೀಸರೆ ನೇರ ಕಾರಣರಾಗುತ್ತಾರೆ. ಅನೇಕ ಬಸ್ಸು ಚಾಲಕರು ನಿರ್ವಾಹಕರಲ್ಲಿ ಲೈಸೆನ್ಸೇ ಇರುವುದಿಲ್ಲ. ಇದನ್ನೆಲ್ಲ ಪೊಲೀಸರು ಪತ್ತೆಹಚ್ಚಬೇಕೆಂದು ಸಾಮಾಜಿಕ ಕಾರ್ಯಕರ್ತ ಯಶು ಪಕ್ಕಳ ಅವರು ಆಗ್ರಹಿಸಿದ್ದಾರೆ.
Video of overloading students on the St. Antony bus Talapady route goes viral in Mangalore. A student is seen falling down the speeding bus on Route 42. Mangalore traffic Police have to take action in this case.
15-05-25 11:59 am
HK News Desk
Pro Pakistan slogan, Arrest, Bangalore: ಬೆಂಗಳ...
14-05-25 05:16 pm
Hassan Kidnap: ಅಪ್ಪನ ಎದುರೇ ಮಗಳ ಅಪಹರಣ ; ಬೇಲೂರಿ...
13-05-25 09:50 pm
Davangere Accident, police constable death: ಲ...
13-05-25 09:37 pm
ಅರ್ಧದಲ್ಲಿ ಕದನ ನಿಲ್ಲಿಸಿದ್ದು ಯಾಕೆ? ಇಷ್ಟಕ್ಕೆ ನಮ್...
13-05-25 01:14 pm
14-05-25 11:08 pm
HK News Desk
Masood Azhar; ಐಎಂಎಫ್ ಸಾಲದ ಹಣವನ್ನೂ ಉಗ್ರರಿಗೆ ಹಂ...
14-05-25 11:08 pm
ಪಾಕ್ ವಶದಲ್ಲಿದ್ದ ಬಿಎಸ್ಎಫ್ ಯೋಧ ಕೊನೆಗೂ ಬಿಡುಗಡೆ ;...
14-05-25 07:33 pm
ಆಪರೇಷನ್ ಸಿಂಧೂರ ಬಗ್ಗೆ ಹೇಳಿಕೆ, ದೇಶವಿರೋಧಿ ಪೋಸ್ಟ್...
14-05-25 04:45 pm
ಆದಂಪುರ ವಾಯುನೆಲೆ ಧ್ವಂಸ ಮಾಡಿದ್ದೇವೆಂದ ಪಾಕಿಗಳಿಗೆ...
13-05-25 08:47 pm
15-05-25 03:33 pm
Mangalore Correspondent
Kundapur Suicide: ಸಾಲಬಾಧೆ, ತಂದೆ- ಮಗ ಬಾವಿಗೆ ಹಾ...
15-05-25 01:34 pm
Manjunath Bhandary, Kukke Temple, Mangalore:...
14-05-25 08:05 pm
Lokayuta, Arrest, Bantwal, Mangalore: ಗಂಡನ ಪಿ...
14-05-25 06:33 pm
Harish Injadi, President of Kukke Subrahmanya...
14-05-25 01:42 pm
15-05-25 06:02 pm
Bangalore Correspondent
Bangalore Job Fraud, Crime; ಮೆಕ್ರೋಸಾಪ್ಟ್ , ಬ...
15-05-25 12:14 pm
ಕೊಲ್ಕತ್ತಾದಲ್ಲಿ ಕಾರು ಅಡ್ಡಗಟ್ಟಿ 2.66 ಕೋಟಿ ದರೋಡೆ...
14-05-25 10:22 pm
Suhas Shetty Murder, Arrest, CCB Police: ಸುಹಾ...
14-05-25 09:23 pm
Hubballi Schoolboy Murder, Crime, Minor: ಹುಬ್...
13-05-25 07:55 pm