ಬ್ರೇಕಿಂಗ್ ನ್ಯೂಸ್
22-09-24 10:40 pm Mangalore Correspondent ಕ್ರೈಂ
ಮಂಗಳೂರು, ಸೆ.22: ಮಹಿಳೆಯೊಬ್ಬರು ಪಾರ್ಟ್ ಟೈಮ್ ಉದ್ಯೋಗದ ಹೆಸರಲ್ಲಿ ಹಣ ಹೂಡಿಕೆ ಮಾಡಿ 28 ಲಕ್ಷ ರೂಪಾಯಿ ಕಳಕೊಂಡಿದ್ದು ಕೊಣಾಜೆ ಠಾಣೆಗೆ ದೂರು ನೀಡಿದ್ದಾರೆ.
ಜುಲೈ 21ರಂದು ಮಹಿಳೆಗೆ ವಾಟ್ಸಪ್ ನಲ್ಲಿ ಪಾರ್ಟ್ ಟೈಮ್ ಉದ್ಯೋಗದ ಬಗ್ಗೆ ಮೆಸೇಜ್ ಬಂದಿತ್ತು. ಟೆಲಿಗ್ರಾಮ್ ಏಪ್ ಡೌನ್ಲೋಡ್ ಮಾಡುವಂತೆ ಮೋಸಗಾರರು ಸೂಚನೆ ನೀಡಿದ್ದರು. ಅದರಂತೆ, ಏಪ್ ನಲ್ಲಿ ವಿಡಿಯೋ ಲಿಂಕ್ ಷೇರ್ ಮಾಡಿದ್ದು, ಉದ್ಯೋಗದ ಬಗ್ಗೆ ಮಾಹಿತಿ ನೀಡಲು 123 ರೂ. ಪಾವತಿ ಮಾಡುವಂತೆ ಹೇಳಿದ್ದರು. ಆನಂತರ, ವಿಡಿಯೋ ಒಂದನ್ನು ಕಳಿಸಿದ್ದು, ಅದನ್ನು ನೋಡಿ ಸ್ಕ್ರೀನ್ ಶಾಟ್ ಶೇರ್ ಮಾಡುವಂತೆ ಕೇಳಿಕೊಂಡಿದ್ದರು. ಮತ್ತೆ 130 ರೂ. ಕಳಿಸುವುದಕ್ಕೆ ಹೇಳಿದ್ದು ಹಾಗೆಯೇ ಮಹಿಳೆ ಅನುಸರಿಸಿದ್ದರು.
ಜುಲೈ 23ರಂದು ಮತ್ತೊಂದು ಲಿಂಕ್ ಕಳಿಸಿದ್ದು, ಮತ್ತೆ ಒಂದು ಸಾವಿರ ರೂ. ಪಾವತಿಸುವಂತೆ ಹೇಳಿದ್ದರು. ಮಹಿಳೆ ಒಂದು ಸಾವಿರ ಪಾವತಿಸಿದ್ದು, ಅವರು ಹೇಳಿದ ಹಾಗೇ ಮಾಡಿದ್ದಕ್ಕಾಗಿ ಈಕೆಗೆ 1300 ರೂ. ಕಳಿಸಿಕೊಟ್ಟು ನಂಬಿಕೆ ಬರುವಂತೆ ಮಾಡಿದ್ದರು.
ಆನಂತರ, ಮತ್ತಷ್ಟು ಲಿಂಕ್ ಗಳನ್ನು ಕಳಿಸಿಕೊಟ್ಟು ವಿಶ್ವಾಸ ಹುಟ್ಟಿಸಿದ್ದರು. ಇದೇ ನಂಬಿಕೆಯಿಂದ ಮಹಿಳೆ 2.85 ಲಕ್ಷ ರೂ.ವನ್ನು ಅವರು ನೀಡಿದ್ದ ಖಾತೆಗೆ ಕಳಿಸಿಕೊಟ್ಟಿದ್ದಾರೆ. ಇನ್ನೊಂದು ಖಾತೆಗೆ 25.32 ಲಕ್ಷ ರೂ.ವನ್ನು ರವಾನೆ ಮಾಡಿದ್ದಾರೆ. ವಂಚಕರು 28.18 ಲಕ್ಷ ರೂ.ಗೆ ಪ್ರತಿಯಾಗಿ ದೊಡ್ಡ ಮೊತ್ತದ ಲಾಭಾಂಶವನ್ನು ನೀಡುವುದಾಗಿ ನಂಬಿಸಿದ್ದರು. ಹಣ ಹಿಂತಿರುಗಿ ಬರುತ್ತೆ ಎಂಬ ನಂಬಿಕೆಯಿಂದ ಮನೆಯಲ್ಲಿ ಯಾರಿಗೂ ಹೇಳದೆ ಮಹಿಳೆ ಕೆಲವು ದಿನಗಳನ್ನು ಕಳೆದಿದ್ದಾರೆ. ಆದರೆ ವಂಚಕರು ಸಂಪರ್ಕವನ್ನು ಕಡಿದುಕೊಂಡಿದ್ದು, ಮಹಿಳೆಗೆ ಪಂಗನಾಮ ಹಾಕಿದ್ದಾರೆ. ಆನಂತರ, ಹಣ ಕಳಕೊಂಡ ಬಗ್ಗೆ ಮನೆಯವರಲ್ಲಿ ಹೇಳಿಕೊಂಡಿದ್ದು ಕೊಣಾಜೆ ಪೊಲೀಸ್ ಠಾಣೆಗೆ ಬಂದು ಮಾಹಿತಿ ನೀಡಿದ್ದಾರೆ.
A woman was allegedly duped of Rs 28.18 lakh in a part-time job scam here, said the police on Sunday. In a complaint to Konaje police, the victim of the job fraud scam said that she received a WhatsApp message offering her a part-time job on July 21. She was asked to download the Telegram app, where she received a link from the fraudsters.
12-09-26 09:40 pm
HK News Staffer
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
ಬಿಜೆಪಿ ಅಧಿಕಾರಕ್ಕೆ ಬರಲು ನನ್ನ ಸ್ಥಾನ ಬಿಟ್ಟುಕೊಟ್ಟ...
12-09-26 05:56 pm
ಐಎಎಸ್ ತೇರ್ಗಡೆಯಾಗಿದ್ದ ಕೇರಳದ ಮೊದಲ ಬುಡಕಟ್ಟು ಮಹಿಳ...
12-09-26 05:53 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
14-09-26 10:01 pm
HK News Staffer
ಮಂಗಳೂರಿನಲ್ಲಿ ಎರಡು ದಿನ ಸಿಎಂ ಡಿಕೆಶಿ ವಾಸ್ತವ್ಯ ;...
14-09-26 06:02 pm
100 ವರ್ಷಗಳ ಬಳಿಕವೂ ಸ್ವಂತ ಸೂರಿಗಾಗಿ ಕರಾವಳಿಯಲ್ಲಿ...
14-09-26 05:00 pm
Konkan Catholic Credit Society Inaugurated in...
14-09-26 04:18 pm
Konkan Catholic Credit Society Mangalore: ಹಣಕ...
13-09-26 10:11 pm
12-09-26 07:41 pm
HK News Staffer
ಕ್ರಿಪ್ಟೊ ಕರೆನ್ಸಿ ಹೆಸ್ರಲ್ಲಿ ಡಾಕ್ಟರ್ ಗೆ ಮಹಿಳೆಯಿ...
11-09-26 06:38 pm
ಜಾಮೀನು ಪಡೆಯಲು ನಕಲಿ ಆಧಾರ್ ಕಾರ್ಡ್ ಹಾಜರು ; ಉಡು...
11-09-26 01:09 pm
ಬೈಕ್ಗೆ ಡಿಕ್ಕಿ ಹೊಡೆದ ಕಾರು ; ಚಾಮರಾಜನಗರದಲ್ಲಿ ಮೂ...
11-09-26 10:14 am
ಕುಂದಾಪುರದಲ್ಲಿ 8 ಶಾಲಾ ಮಕ್ಕಳ ಬಲಿ ಪಡೆದ ಭೀಕರ ಅಪಘಾ...
10-09-26 08:16 pm