ಬ್ರೇಕಿಂಗ್ ನ್ಯೂಸ್
23-09-24 11:42 am HK News Desk ಕ್ರೈಂ
ಬೆಂಗಳೂರು, ಸೆ.23: ರಾಜಧಾನಿ ದೆಹಲಿಯಲ್ಲಿ ಎರಡು ವರ್ಷಗಳ ಹಿಂದೆ ನಡೆದಿದ್ದ ಶ್ರದ್ಧಾ ವಾಲ್ಕರ್ ಹತ್ಯೆ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿತ್ತು. ಆಕೆಯನ್ನು ಕೊಲೆಗೈದು ದೇಹವನ್ನು 33 ತುಂಡುಗಳನ್ನಾಗಿಸಿ ವಿವಿಧ ಕಡೆಗಳಲ್ಲಿ ಎಸೆದು ಹೋಗಿದ್ದ ಮಹಾರಾಷ್ಟ್ರ ಮೂಲದ ಹಂತಕ ಕೊನೆಗೂ ಪೊಲೀಸರಿಗೆ ಸಿಕ್ಕಿಬಿದ್ದಿದ್ದ. ಆತ್ಮೀಯ ಸ್ನೇಹಿತನೇ ಆ ಕೊಲೆಯನ್ನೂ ಮಾಡಿದ್ದ. ಅದೇ ರೀತಿಯ ಘಟನೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದ್ದು, ಗಂಡನನ್ನು ತೊರೆದು ಒಬ್ಬಂಟಿಯಾಗಿದ್ದ ಯುವತಿಯನ್ನು ಆಕೆಯ ಪ್ರಿಯಕರನೇ ಭೀಭತ್ಸವಾಗಿ ಕೊಲೆಗೈದು ದೇಹವನ್ನು 50ಕ್ಕೂ ಹೆಚ್ಚು ತುಂಡುಗಳಾಗಿಸಿ ಫ್ರಿಜ್ ನಲ್ಲಿಟ್ಟಿದ್ದಾನೆಂಬ ಶಂಕೆ ವ್ಯಕ್ತವಾಗಿದೆ.
ನೇಪಾಳ ಮೂಲದ ಮಹಾಲಕ್ಷ್ಮೀ ಕುಟಂಬ ಹತ್ತು ವರ್ಷಗಳ ಹಿಂದೆಯೇ ಬೆಂಗಳೂರಿಗೆ ಬಂದು ನೆಲಮಂಗಲದಲ್ಲಿ ನೆಲೆಸಿತ್ತು. ಐದು ವರ್ಷಗಳ ಹಿಂದೆ ಮಹಾಲಕ್ಷ್ಮೀಯನ್ನು ಹೇಮಂತದಾಸ್ ಎಂಬಾತ ಮದುವೆಯಾಗಿದ್ದು, ಇವರಿಗೆ ನಾಲ್ಕು ವರ್ಷಗಳ ಮಗುವಿತ್ತು. ಈ ನಡುವೆ, ದಾಂಪತ್ಯ ಕಲಹವುಂಟಾಗಿ ಮಹಾಲಕ್ಷ್ಮೀ ತನ್ನ ಪತಿ ಮತ್ತು ಮಗುವನ್ನು ತೊರೆದು ಒಬ್ಬಂಟಿಯಾಗಿ ನೆಲೆಸಿದ್ದರು. ಇವರ ಜಗಳವೂ ಪೊಲೀಸ್ ಠಾಣೆ ಮೆಟ್ಟಿಲೇರಿತ್ತು. ಆನಂತರ, ವೈಯ್ಯಾಲಿಕಾವಲ್ ಠಾಣೆ ವ್ಯಾಪ್ತಿಯ ಪೈಪ್ ಲೈನ್ ರಸ್ತೆಯಲ್ಲಿ ಬಾಡಿಗೆ ಮನೆಯಲ್ಲಿ ಒಂಟಿಯಾಗೇ ಇದ್ದಳು. ಆ ಮನೆಯಲ್ಲಿಯೇ ಮಹಾಲಕ್ಷ್ಮೀ ಶವ ತುಂಡು ತುಂಡಾಗಿ ಫ್ರಿಜ್ ನಲ್ಲಿ ಪತ್ತೆಯಾಗಿದೆ.
ಯುವಕನೊಬ್ಬ ಮಹಾಲಕ್ಷ್ಮೀಯನ್ನು ನಿತ್ಯವೂ ಪಿಕಪ್ ಮತ್ತು ಡ್ರಾಪ್ ಮಾಡುತ್ತಿದ್ದ ಎಂದು ಅಲ್ಲಿನ ಸ್ಥಳೀಯರು ಮಾಹಿತಿ ನೀಡಿದ್ದಾರೆ. ಮತ್ತೊಂದೆಡೆ, ಪತಿ ಹೇಮಂತದಾಸ್ ಮತ್ತು ಕುಟುಂಬಸ್ಥರು ಅಶ್ರಫ್ ಎಂಬಾತನ ಜೊತೆಗೆ ಮಹಾಲಕ್ಷ್ಮೀಗೆ ಗೆಳೆತನ ಇತ್ತು ಎಂದು ತಿಳಿಸಿದ್ದಾರೆ. ಅಲ್ಲದೆ, ಮಹಾಲಕ್ಷ್ಮೀಯ ಸಹೋದ್ಯೋಗಿಗಳಾದ ಮುಕ್ತಾ, ಶಶಿಧರ್ ಹಾಗೂ ಸುನಿಲ್ ಎಂಬವರ ಮೇಲೂ ಅನುಮಾನ ವ್ಯಕ್ತಪಡಿಸಿದ್ದಾರೆ. ನೆಲಮಂಗಲದಲ್ಲಿ ಮೊಬೈಲ್ ಶಾಪ್ ಇಟ್ಟುಕೊಂಡಿರುವ ಹೇಮಂತ್ ದಾಸ್, 9 ತಿಂಗಳ ಹಿಂದೆ ಪತ್ನಿಯ ಕಿರುಕುಳದಿಂದಾಗಿ ಬೇಸತ್ತು ಮಗಳ ಜೊತೆಗೆ ತನ್ನ ಪಾಡಿಗಿದ್ದ. ಮಹಾಲಕ್ಷ್ಮೀಯೇ ಗಂಡನಿಂದ ದೂರವಾಗಿ ಪ್ರತ್ಯೇಕ ನೆಲೆಸಿ, ಅಲ್ಲಿಂದಲೇ ಕೆಲಸಕ್ಕೆ ಹೋಗಿ ಬರುತ್ತಿದಳು.
ಈ ನಡುವೆ, ಉತ್ತರಾಖಂಡ ಮೂಲದ, ನೆಲಮಂಗಲದ ಸೆಲೂನ್ ಶಾಪ್ ಒಂದರಲ್ಲಿ ಕೆಲಸ ಮಾಡುತ್ತಿದ್ದ ಅಶ್ರಫ್ ಆಕೆಗೆ ಗಂಟು ಬಿದ್ದಿದ್ದ. ಮಹಾಲಕ್ಷ್ಮೀ ಆತನ ಜೊತೆಗೆ ಆತ್ಮೀಯವಾಗಿದ್ದಳು. ಈ ನಡುವೆ, ಅಶ್ರಫ್ ಆಕೆಯನ್ನು ಬ್ಲಾಕ್ಮೇಲ್ ಮಾಡುತ್ತಿದ್ದಾನೆಂಬ ಸಂಗತಿಯೂ ಗೊತ್ತಾಗಿತ್ತು. ಮಗಳು ನನ್ನ ಜೊತೆಯಲ್ಲಿದ್ದು ತಿಂಗಳಿಗೊಮ್ಮೆ ಮೊಬೈಲ್ ಶಾಪ್ ಗೆ ಮಗಳನ್ನು ನೋಡಲು ಬರುತ್ತಿದ್ದಳು. ಕೆಲವು ದಿನಗಳ ಹಿಂದೆ ಅಶ್ರಫ್ ಮತ್ತು ಮಹಾಲಕ್ಷ್ಮಿ ನಡುವೆ ಜಗಳವಾಗಿತ್ತು. ಆತನ ವಿರುದ್ಧ ಶೇಷಾದ್ರಿಪುರ ಠಾಣೆಗೆ ದೂರನ್ನೂ ನೀಡಿದ್ದಳು. ಹೀಗಾಗಿ ಆತನೇ ಕೊಲೆ ಮಾಡಿರುವ ಶಂಕೆಯಿದೆ ಎಂದು ಹೇಮಂತದಾಸ್ ಪೊಲೀಸರಿಗೆ ತಿಳಿಸಿದ್ದಾರೆ.
ಸೂಟ್ಕೇಸಲ್ಲಿ ಶವ ಸಾಗಿಸಲು ಯತ್ನಿಸಿದ್ದ ಹಂತಕ
ಹಂತಕ ಮಹಾಲಕ್ಷ್ಮಿಯನ್ನು ಕೊಂದ ಬಳಿಕ ಶವವನ್ನು ಹೊರಗಡೆ ಸಾಗಿಸಲು ಯತ್ನಿಸಿದ ಸಂಗತಿ ತನಿಖೆಯಲ್ಲಿ ಪತ್ತೆಯಾಗಿದೆ. ದೇಹದ ತುಂಡುಗಳನ್ನು ಇರಿಸಿದ್ದ ಫ್ರಿಜ್ ಬಳಿಯೇ ಖಾಲಿ ಸೂಟ್ ಕೇಸ್ ಪತ್ತೆಯಾಗಿದ್ದು, ಹಂತಕ ಅದರಲ್ಲಿ ದೇಹದ ತುಂಡುಗಳನ್ನಿರಿಸಿ ಬೇರೆಡೆ ಸಾಗಿಸಲು ಯೋಜಿಸಿದ್ದ. ಆದರೆ ಅಧು ಸಾಧ್ಯವಾಗದೇ ಇದ್ದಾಗ ಫ್ರಿಜ್ ನಲ್ಲಿಟ್ಟು ಪರಾರಿಯಾಗಿದ್ದಾನೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಮಹಾಲಕ್ಷ್ಮೀ ಅವರೊಂದಿಗೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದ ವ್ಯಕ್ತಿಯೇ ಕೊಲೆ ನಡೆಸಿರುವ ಅನುಮಾನ ವ್ಯಕ್ತವಾಗಿದೆ. ಮೆನ್ಸ್ ಬ್ಯೂಟಿ ಪಾರ್ಲರ್ ನಲ್ಲಿ ಕೆಲಸ ಮಾಡುತ್ತಿದ್ದ ಅಶ್ರಫ್ ಕೃತ್ಯದ ಬಳಿಕ ನಾಪತ್ತೆಯಾಗಿದ್ದಾನೆ. ಕೊಲೆಯಾಗಿ ನಾಲ್ಕು ದಿನಗಳಾಗಿದ್ದರಿಂದ ಫ್ರಿಜ್ ನಲ್ಲಿಟ್ಟ ದೇಹದ ತುಂಡುಗಳಲ್ಲಿ ಹುಳಗಳಾಗಿದ್ದವು. ರಕ್ತ ಒಸರಿ ಫ್ರಿಜ್ ಹೊರಗಡೆ ಬಂದು ವಿಚಿತ್ರ ವಾಸನೆ ಬರತೊಡಗಿತ್ತು. ಇದರಿಂದ ಸ್ಥಳೀಯರಿಗೆ ಅನುಮಾನ ಬಂದು ಪೊಲೀಸರಿಗೆ ಮಾಹಿತಿ ನೀಡಿದ್ದರು. ನಾಲ್ಕೈದು ದಿನಗಳಲ್ಲಿ ಆರೋಪಿ ಮರಳಿ ತನ್ನ ಊರು ಉತ್ತರಾಖಂಡ ತಲುಪಿರಲೂಬಹುದು ಎನ್ನಲಾಗುತ್ತಿದೆ.
As more details regarding the suspected murder of a 29-year-old woman in Bengaluru come to the fore, the police have said they found a blue suitcase near the fridge in which the woman’s body was found in pieces. The police have also revealed they found more than 50 pieces of the woman’s body.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
18-04-25 02:21 pm
HK News Desk
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
14 ಸಾವಿರ ಕೋಟಿ ವಂಚನೆ ಎಸಗಿ ದೇಶ ಬಿಟ್ಟು ಹೋಗಿದ್ದ ಮ...
14-04-25 05:38 pm
19-04-25 06:19 pm
Mangaluru Correspondent
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
Mangalore Waqf protest, Adyar, Police: ವಕ್ಫ್...
18-04-25 10:17 pm
Mangalore Waqf Protest, Adyar, Police, Live:...
18-04-25 12:54 pm
19-04-25 10:46 pm
Mangalore Correspondent
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am
ರಾಣಾ ಬಳಿಕ ಮತ್ತೊಬ್ಬ ಮೋಸ್ಟ್ ವಾಂಟೆಡ್ ಖಲೀಸ್ತಾನಿ ಉ...
19-04-25 10:55 am
Mangalore Kuthar, Ullal Gang Rape, Arrest: ಕು...
18-04-25 10:59 pm