ಬ್ರೇಕಿಂಗ್ ನ್ಯೂಸ್
10-12-20 10:46 pm Mantesh: Mysore Reporter ಕ್ರೈಂ
ಮೈಸೂರು, ಡಿ.10: ಕಾನೂನು ಪಾಲಿಸಿ, ಜನರಿಗೆ ಕಾನೂನಿನ ಪಾಠ ಹೇಳುವ ಪೊಲೀಸ್ ಅಧಿಕಾರಿಗಳೇ ಪ್ರೇಮ ಮತ್ತು ಕಾಮದಾಟ ಹೆಸರಲ್ಲಿ ಈಗ ಖಾಕಿಯ ಮರ್ಯಾದೆ ತೆಗೆಯುತ್ತಿರುವ ಪ್ರಸಂಗ ಬೆಳಕಿಗೆ ಬಂದಿದೆ. ನೊಂದವರಿಗೆ ನ್ಯಾಯ ಒದಗಿಸಬೇಕಾದ ಮಹಿಳಾ ಪೊಲೀಸ್ ಅಧಿಕಾರಿಯೇ ಈಗ ಸಂತ್ರಸ್ತೆಯಾಗಿ ಹಿರಿಯ ಅಧಿಕಾರಿಗಳ ಬಳಿ ನ್ಯಾಯಕ್ಕಾಗಿ ಮೊರೆ ಹೋಗಿದ್ದಾಳೆ.
ಸಾರ್ವಜನಿಕರಿಗೆ ರಕ್ಷಣೆಗಾಗಿ ಖಾಕಿ ತೊಟ್ಟ ಅಧಿಕಾರಿಯಿಂದಲೇ ಮಹಿಳಾ ಪೊಲೀಸ್ ಅಧಿಕಾರಿ ಮೇಲೆ ಅತ್ಯಾಚಾರ, ವಂಚನೆ, ಕೊಲೆ ಬೆದರಿಕೆ ಆರೋಪ ಕೇಳಿಬಂದಿದೆ. ಮೈಸೂರು ನಗರದ ಎನ್‌ಆರ್ ಪುರ ಪೊಲೀಸ್ ಠಾಣೆಯಲ್ಲಿ ಸಬ್ ಇನ್ಸ್‌ಪೆಕ್ಟರ್ ಆಗಿರುವ ಆನಂದ್ ವಿರುದ್ಧ ಈ ಗಂಭೀರ ಆರೋಪ ಕೇಳಿಬಂದಿದೆ. ಸಮಾಜದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಬೇಕಾದ ಈತ ತನ್ನ ಕರ್ತವ್ಯ ಮರೆತು, ಸ್ನೇಹಿತೆಯಾಗಿದ್ದ ವಿವಿ ಪುರಂ ಠಾಣೆಯ ಮಹಿಳಾ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ಜೊತೆ ಪ್ರೇಮ್ ಕಹಾನಿ ಶುರು ಮಾಡಿಕೊಂಡಿದ್ದ. ಈ ಪ್ರೇಮ್ ಕಹಾನಿ ಲವ್ವಿ ಡವ್ವಿ ದೈಹಿಕ ಸಂಪರ್ಕದ ವರೆಗೂ ಬೆಳೆದು ಸ್ವಚ್ಚಂದ ಪ್ರೇಮಿಗಳಂತೆ ಮೈಸೂರು ತುಂಬಾ ವಿಹರಿಸಿದ್ದಾರೆ.
ಆದರೆ, ಮದುವೆ ವಿಚಾರ ಬರುವ ಮುನ್ನವೇ ಮಹಿಳಾ ಅಧಿಕಾರಿ ಗರ್ಭಿಣಿಯಾಗಿದ್ದಳು. ಯುವತಿ ಗರ್ಭಿಣಿಯಾಗಿ ಯಾವಾಗ ಮದುವೆ ಪ್ರಸ್ತಾಪ ಎತ್ತುತ್ತಿದ್ಲೋ ಪ್ರೇಯಸಿ ಅಧಿಕಾರಿಯನ್ನ ಆನಂದ್ ದೂರವಿಡಲು ಶುರು ಮಾಡಿದ್ದಾನೆ. ಅಲ್ಲದೆ, ಗರ್ಭಪಾತ ಮಾಡಿಸಿಕೊಳ್ಳುವಂತೆ ಬೆದರಿಕೆಯನ್ನೂ ಹಾಕಿದ್ದಾನೆ. ಒಪ್ಪದಿದ್ದಾಗ ಹಾರ್ಲಿಕ್ಸ್, ಡ್ರೈಫ್ರೂಟ್ಸ್‌ನಲ್ಲಿ ಮಾತ್ರೆಗಳನ್ನ ಹಾಕಿ ಬಲವಂತವಾಗಿ ಅಬಾರ್ಷನ್ ಮಾಡಿಸಿದ್ದಾನೆ. ಹೀಗೆಂದು ನೊಂದ ಮಹಿಳಾ ಅಧಿಕಾರಿ ಮೈಸೂರಿನ ವಿಜಯನಗರ ಠಾಣೆಗೆ ದೂರು ನೀಡಿ ನ್ಯಾಯ ಕೇಳಿದ್ದಾರೆ.
ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡಿರುವ ವಿಜಯನಗರ ಪೊಲೀಸರು ಐಪಿಸಿ ಸೆಕ್ಷನ್ 306, 406, 313, 354, 417, 504, 506 ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ. ಈ ನಡುವೆ ಆನಂದ್, ಬೇರೊಂದು ಯುವತಿಯ ಜೊತೆ ಮದುವೆಗೆ ಸಿದ್ದತೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಸದ್ಯ ಆನಂದ್ ವಿರುದ್ಧ ಕೊಲೆ ಬೆದರಿಕೆ, ವಂಚನೆ, ಅತ್ಯಾಚಾರದ ಗಂಭೀರ ಆರೋಪ ಮಾಡುತ್ತಿರುವ ಮಹಿಳಾ ಎಸ್‌ಐ ನ್ಯಾಯಕ್ಕಾಗಿ ಹೋರಾಟ ಆರಂಭಿಸಿದ್ದಾರೆ.
ಯುವ ಪೊಲೀಸ್ ಅಧಿಕಾರಿಗಳಿಬ್ಬರ ಪ್ರೇಮದಾಟ ಮೈಸೂರಿನಲ್ಲಿ ಪೊಲೀಸ್ ಇಲಾಖೆಯ ಘನತೆ, ಗೌರವಕ್ಕೆ ಮಸಿ ಬಳಿದಿದೆ. ಪ್ರಕರಣ ಸಂಬಂಧ ಸತ್ಯಾಸತ್ಯತೆಗಳನ್ನ ಅರಿಯಲು ಹಿರಿಯ ಅಧಿಕಾರಿಗಳೇ ಮಧ್ಯ ಪ್ರವೇಶಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.
Mysore N R Nagar Police sub-inspector Anand alleged of love sex and dhoka to V V Puram Police station woman Sub Inspector. A case has been registered aginst Anand at Vijayanagar Police Station.
14-07-25 01:43 pm
HK News Desk
Dr B Saroja Devi Death: 17ನೇ ವಯಸ್ಸಲ್ಲೇ ಚಿತ್ರರ...
14-07-25 12:50 pm
Mantralaya, Tungabhadra River, drowning: ತುಂಬ...
13-07-25 08:37 pm
ಆಧ್ಯಾತ್ಮಿಕ ಸಾಧನೆಯತ್ತ ಚಿತ್ತ ; ಗೋಕರ್ಣ ಬಳಿಯ ದಟ್ಟ...
13-07-25 04:03 pm
Shivamogga Jail News, Mobile phone: ಶಿವಮೊಗ್ಗ...
12-07-25 10:47 pm
14-07-25 03:24 pm
HK News Desk
ಅಹ್ಮದಾಬಾದ್ ವಿಮಾನ ದುರಂತ ; ಭಾರೀ ಅನುಮಾನ ಹುಟ್ಟಿಸಿ...
12-07-25 09:25 pm
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
Coimbatore Serial Blasts, 'Tailor Raja' Arres...
11-07-25 12:08 pm
13-07-25 11:13 pm
Mangalore Correspondent
Mangalore News: ಸಾರಿಗೆ ಕಚೇರಿಗಳಿಗೆ ಸ್ವಂತ ಕಟ್ಟಡ...
13-07-25 11:11 pm
Mangalore, E Bus, MP Chowta: ಕೇಂದ್ರ ಸರ್ಕಾರದಿಂ...
13-07-25 10:12 pm
Mangalore DK Transport, DK Group Alwyn Joel N...
13-07-25 07:00 pm
ಬೆಳ್ತಂಗಡಿ ; ಶಿಕ್ಷಕಿಯಾಗಿದ್ದ ವಿವಾಹಿತ ಮಹಿಳೆ ನೇಣು...
13-07-25 05:56 pm
13-07-25 05:23 pm
Bangalore Correspondent
ಅಪ್ರಾಪ್ತ ಬಾಲಕಿಯನ್ನು ಶಾಲೆಗೆ ಕರೆದೊಯ್ಯುವ ನೆಪದಲ್ಲ...
12-07-25 11:10 pm
Dowry Harassment, Mysuru: ಮದುವೆಯಾದ ಎರಡೇ ತಿಂಗಳ...
12-07-25 01:32 pm
Mangalore Job Fraud, KCOCA, Police: ಫಾರಿನ್ ಉದ...
12-07-25 11:59 am
Robbery, Gold Workshop in Kalaburagi: ಕಲಬುರಗಿ...
11-07-25 10:10 pm