ಬ್ರೇಕಿಂಗ್ ನ್ಯೂಸ್
27-11-24 03:36 pm HK News Desk ಕ್ರೈಂ
ಮುಂಬೈ, ನ.26: ಮಂಗಳೂರಿನ ಮುಲ್ಕಿ ರೈಲು ನಿಲ್ದಾಣದ ಬಳಿ ವ್ಯಕ್ತಿಯೊಬ್ಬನ ಹತ್ಯೆ, ಪುಣೆಯಲ್ಲಿ ಬುದ್ಧಿಮಾಂದ್ಯ ಮಹಿಳೆಯ ಕೊಲೆ, ಸೂರತ್ ನಲ್ಲಿ 19 ವರ್ಷದ ಯುವತಿಯ ಕೊಲೆ ಸೇರಿದಂತೆ ಹಲವಾರು ಕೊಲೆ, ಅತ್ಯಾಚಾರ ಪ್ರಕರಣಗಳಲ್ಲಿ ಭಾಗಿಯಾಗಿ ಹಲವಾರು ರಾಜ್ಯಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ ಹರ್ಯಾಣ ಮೂಲದ ಸೀರಿಯಲ್ ಕಿಲ್ಲರ್ ಒಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.
ರಾಹುಲ್ ಅಲಿಯಾಸ್ ಬೋಲು ಕರ್ಮವೀರ್ ಈಶ್ವರ್ ಜಾಟ್ (30) ಬಂಧಿತ ಆರೋಪಿ. ಈತನ ವಿರುದ್ಧ ಕರ್ನಾಟಕ, ಮಹಾರಾಷ್ಟ್ರ, ಪಶ್ಚಿಮ ಬಂಗಾಲ, ತೆಲಂಗಾಣ ಸೇರಿದಂತೆ ಹಲವಾರು ಕಡೆ ಪ್ರಕರಣಗಳಿವೆ. ಅಕ್ಟೋಬರ್ 25ರಂದು ಬೆಂಗಳೂರಿನಿಂದ ಮುರ್ಡೇಶ್ವರಕ್ಕೆ ಬರುತ್ತಿದ್ದ ರೈಲು ಮೂಲ್ಕಿ ತಲುಪಿದಾಗ, ಚಿಕ್ಕಬಳ್ಳಾಪುರ ಮೂಲದ ವ್ಯಕ್ತಿಯೊಂದಿಗೆ ಬೀಡಿ ಸೇದುವ ವಿಚಾರದಲ್ಲಿ ರಾಹುಲ್ ಜಗಳ ಮಾಡಿದ್ದ. ಆನಂತರ, ಕುತ್ತಿಗೆ ಹಿಸುಕಿ ಕೊಲೆಗೈದು ಆತನ ಜೊತೆಗಿದ್ದ ಬ್ಯಾಗ್ ಮತ್ತು ನಗದು ಹಣದೊಂದಿಗೆ ರಾಹುಲ್ ಪರಾರಿಯಾಗಿದ್ದ. ಈ ಬಗ್ಗೆ ಮಂಗಳೂರಿನ ಮುಲ್ಕಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ನ.19ರಂದು ಪಶ್ಚಿಮ ಬಂಗಾಳದ ಕತಿಹಾರ್ ಎಕ್ಸ್ ಪ್ರೆಸ್ ರೈಲಿನಲ್ಲಿ 60 ವರ್ಷದ ವ್ಯಕ್ತಿಯನ್ನು ಚೂರಿಯಿಂದ ಇರಿದು ಹತ್ಯೆಗೈದ ಪ್ರಕರಣದಲ್ಲಿ ರಾಹುಲ್ ಆರೋಪಿಯಾಗಿದ್ದ. ಮೃತ ವ್ಯಕ್ತಿಯ ಬ್ಯಾಗ್ ಮತ್ತು ಹಣವನ್ನು ಕಿತ್ತುಕೊಂಡು ಆರೋಪಿ ಪರಾರಿಯಾಗಿದ್ದ. ಈ ಬಗ್ಗೆ ಹೌರಾ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಚೂರಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು.
ನ.14ರಂದು ರಾಹುಲ್ ಗುಜರಾತಿನ ವಾಪಿ ಜಿಲ್ಲೆಯ ಉದ್ವಾಡಾ ರೈಲು ನಿಲ್ದಾಣಕ್ಕೆ ತೆರಳಿದ್ದ. ಅಲ್ಲಿ ಹಿಂದೊಮ್ಮೆ ತಾನು ಹೊಟೇಲಿನಲ್ಲಿ ಕೆಲಸ ಮಾಡಿದ್ದ ಕೂಲಿಯನ್ನು ಪಡೆಯಲೆಂದು ತೆರಳಿದ್ದ. ರೈಲು ನಿಲ್ದಾಣದ ಬಳಿಯ ಹಳಿಯ ಬದಿಯಲ್ಲಿ 19 ವರ್ಷದ ಯುವತಿಯೊಬ್ಬಳು ತನ್ನ ಮನೆಯತ್ತ ನಡೆದು ಹೋಗುತ್ತಿದ್ದಳು. ಆಕೆಯನ್ನು ಹಿಂಬಾಲಿಸಿದ ರಾಹುಲ್, ಹಿಂದಿನಿಂದಲೇ ಅಟ್ಯಾಕ್ ಮಾಡಿ ಬಳಿಕ ಅಲ್ಲಿಯೇ ಇದ್ದ ಮಾವಿನ ತೋಟಕ್ಕೆ ಹೊತ್ತೊಯ್ದು ಅತ್ಯಾಚಾರ ಎಸಗಿದ್ದ. ಆನಂತರ, ಆಕೆಯ ಕುತ್ತಿಗೆ ಸೀಳಿ ಕೊಲೆ ಮಾಡಿದ್ದು ಅವಳ ಬ್ಯಾಗ್ ಮತ್ತು ಹಣವನ್ನು ಕಿತ್ತುಕೊಂಡು ಹೋಗಿದ್ದ.
ಸ್ಥಳದಲ್ಲಿ ಬಟ್ಟೆ, ಬ್ಯಾಗ್, ಇನ್ನಿತರ ವಸ್ತುಗಳು ಪತ್ತೆಯಾಗಿದ್ದವು. ಪೊಲೀಸರು ವಾಪಿ, ವಲ್ಸಡ್, ಸೂರತ್, ಉದ್ವಾಡ ಆಸುಪಾಸಿನ ಎರಡು ಸಾವಿರಕ್ಕೂ ಹೆಚ್ಚು ಸಿಸಿಟಿವಿಗಳನ್ನು ಚೆಕ್ ಮಾಡಿದಾಗ, ಒಂದು ಕಡೆಯಲ್ಲಿ ಆರೋಪಿಯ ಸ್ಪಷ್ಟ ಚಿತ್ರಣ ಪತ್ತೆಯಾಗಿದೆ. ಸೂರತ್ ಸೆಂಟ್ರಲ್ ಜೈಲಿನ ಪೊಲೀಸ್ ಅಧಿಕಾರಿಯೊಬ್ಬರು ಆರೋಪಿಯನ್ನು ಗುರುತು ಹಿಡಿದಿದ್ದು, ಈತ ಸೀರಿಯಲ್ ಕಿಲ್ಲರ್ ರಾಹುಲ್ ಜಾಟ್ ಎಂದು ಪತ್ತೆಹಚ್ಚಿದ್ದಾರೆ. ರೈಲ್ವೇ ಪೊಲೀಸರು ಮತ್ತು ಸೂರತ್ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿದ್ದು, ವಾಪಿ ರೈಲು ನಿಲ್ದಾಣದಿಂದ ಆರೋಪಿಯನ್ನು ಸೆರೆಹಿಡಿದ್ದಾರೆ. ವಿಚಾರಣೆ ವೇಳೆ ಒಂದು ದಿನದ ಹಿಂದೆ ತೆಲಂಗಾಣದ ಸಿಕಂದರಾಬಾದ್ ರೈಲು ನಿಲ್ದಾಣದಲ್ಲಿ ಮತ್ತೊಬ್ಬ ಮಹಿಳೆಯನ್ನು ಕೊಂದಿರುವ ವಿಚಾರ ಬೆಳಕಿಗೆ ಬಂದಿದೆ.
ರಾಹುಲ್ ಜಾಟ್ ರೈಲು ಅಥವಾ ಇನ್ನಾವುದೇ ಕಡೆ ಯುವತಿಯರು ಒಬ್ಬಂಟಿಯಾಗಿ ಸಿಕ್ಕಾಗ ಅವರನ್ನು ರೇಪ್ ಮಾಡಿ ಕೊಲ್ಲುವುದನ್ನು ರೂಢಿ ಮಾಡಿದ್ದಾನೆ. ಸ್ಲೀಪರ್ ಕೋಚ್ ಗಳಲ್ಲಿ ಮಹಿಳೆ ಒಬ್ಬಳೇ ಇದ್ದರೆ, ಅವರ ಮೇಲೂ ಅದೇ ರೀತಿ ಎರಗುತ್ತಾನೆ. ಹೆಚ್ಚಾಗಿ ರೈಲು ನಿಲ್ದಾಣ ಅಥವಾ ರೈಲುಗಳಲ್ಲಿ ಮಲಗಿಕೊಂಡೇ ಇರುತ್ತಿದ್ದ. ಹಣಕ್ಕಾಗಿ ಇಂತಹ ಕೃತ್ಯ ಎಸಗುತ್ತಿದ್ದ. ಆದರೆ ಸಾಮಾನ್ಯ ಭಿಕ್ಷುಕರ ರೀತಿ ಇರುತ್ತಿದ್ದುದರಿಂದ ಪತ್ತೆ ಸಾಧ್ಯವಾಗಿರಲಿಲ್ಲ.
2018ರಲ್ಲಿ ಟ್ರಕ್ ನಲ್ಲಿ ಕಳವು ಮತ್ತು ಶಸ್ತ್ರಾಸ್ತ್ರ ಇಟ್ಟುಕೊಂಡಿದ್ದ ಪ್ರಕರಣದಲ್ಲಿ ಅರೆಸ್ಟ್ ಆಗಿ ಜೈಲು ಸೇರಿದ್ದ. ಹೀಗಾಗಿ ಹರ್ಯಾಣದ ರಾಹುಲ್ ಜಾಟ್ ಕ್ರಿಮಿನಲ್ ಹಿಸ್ಟರಿ ದಾಖಲಾಗಿತ್ತು. ರೈಲಿನಲ್ಲಿ ಕೊಲೆ, ಸುಲಿಗೆ ರೀತಿಯ ಹಲವಾರು ಪತ್ತೆಯಾಗದ ಪ್ರಕರಣಗಳಿದ್ದು, ಅವುಗಳಲ್ಲಿ ಈತನ ಶಾಮೀಲಾತಿ ಬಗ್ಗೆ ರೈಲ್ವೇ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
The rape and murder of a 19-year-old college student, whose body was found in a mango orchard at Udvada in Valsad district earlier this month, was the handiwork of a serial killer who robbed and killed at least four other people, including a woman whom he also raped, in a month in various trains passing through different states, Gujarat police said.
05-02-25 06:39 pm
HK News Desk
Santosh Lad, PM Modi: ಪ್ರಧಾನಿ ಮೋದಿ ಒಬ್ಬ ಮನುಷ್...
05-02-25 04:44 pm
ಮೈಕ್ರೋ ಫೈನಾನ್ಸ್ ಕಿರುಕುಳ ; ರಾಜ್ಯದಲ್ಲಿ ಒಂದೇ ದಿನ...
05-02-25 12:29 pm
Haveri Nurse, Feviquick; ಬಾಲಕನ ಕೆನ್ನೆಯ ಗಾಯಕ್ಕ...
04-02-25 11:32 pm
Bangalore RTO, Luxury car tax: ತೆರಿಗೆ ಪಾವತಿಸದ...
04-02-25 11:04 pm
04-02-25 10:49 pm
HK News Desk
Rashtrapati Bhavan, Poonam Gupta; ಜಗತ್ತಿನ ಎರಡ...
04-02-25 05:34 pm
Rail projects, Budget, Karnataka: ರೈಲ್ವೇಗೆ 2....
03-02-25 11:01 pm
Conspiracy, Kumbh stampede: ಮಹಾ ಕುಂಭಮೇಳದಲ್ಲಿ...
03-02-25 02:57 pm
NHAI fined toll tax: ಅಂಗವಿಕಲ ಮಹಿಳೆಗೆ 40 ರೂ. ಟ...
01-02-25 09:51 pm
05-02-25 07:32 pm
Mangalore Correspondent
Puttur News, Demolish, Ashok Rai: ಬಿಜೆಪಿ ಮುಖಂ...
05-02-25 06:46 pm
Mangalore gun misfire, congress, chittaranjan...
04-02-25 07:47 pm
U T Khader, Mangalore: ವಿಧಾನಸೌಧಕ್ಕೆ ನಾಯಿ ಕಾಟ...
03-02-25 07:38 pm
Mangalore coast Gaurd, NMPT: ತಿಳಿನೀಲ ಸಮುದ್ರದಲ...
02-02-25 09:49 pm
05-02-25 04:29 pm
Bangalore Correspondent
Ullal Police Station, Mangalore, Crime: ಪಿಎಸ್...
03-02-25 05:46 pm
Bangalore honeytrap case, Crime: ಮದುವೆಗೆ ವಧು...
02-02-25 09:00 pm
Mangalore Crime, Bantwal Toll, Kodikere Gang:...
01-02-25 10:11 pm
Attack on Bus, Hassan, Crime: ಬೆಂಗಳೂರಿನಿಂದ ಮಂ...
31-01-25 10:22 am