ಬ್ರೇಕಿಂಗ್ ನ್ಯೂಸ್
14-12-20 01:19 pm Headline Karnataka News Network ಕ್ರೈಂ
ಲಕ್ನೋ, ಡಿ.14: 55 ವರ್ಷದ ಮಧ್ಯವಯಸ್ಕ ವ್ಯಕ್ತಿಯನ್ನು ಆತನ ಪತ್ನಿ ಮತ್ತು ಸೊಸೆ ಸೇರಿ ಕಡಿದು ಕೊಂದು ಹಾಕಿರುವ ಘಟನೆ ಉತ್ತರ ಪ್ರದೇಶದ ಭಾದೋಹಿ ಜಿಲ್ಲೆಯಲ್ಲಿ ನಡೆದಿದೆ.
ಭಾದೋಹಿ ಜಿಲ್ಲೆಯ ಕೊಯಿರಾನಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಶನಿವಾರ ರಾತ್ರಿ ಘಟನೆ ನಡೆದಿದೆ. 55 ವರ್ಷದ ವ್ಯಕ್ತಿ ತನ್ನ ಕಿರಿಯ ಸೊಸೆಯ ಜೊತೆ ಸಂಬಂಧ ಇರಿಸಿಕೊಂಡಿದ್ದರು. ಸೊಸೆಯನ್ನು ಲೈಂಗಿಕವಾಗಿ ಶೋಷಣೆ ಮಾಡುತ್ತಿದ್ದ ಬಗ್ಗೆ ಆತನ ಪತ್ನಿ ಮತ್ತು ಹಿರಿಯ ಸೊಸೆ ವಿರೋಧ ವ್ಯಕ್ತಪಡಿಸುತ್ತಿದ್ದರು. ಇದೇ ವಿಚಾರದಲ್ಲಿ ಕೆಲವು ಸಮಯದಿಂದ ಇವರ ನಡುವೆ ಜಗಳ ನಡೆಯುತ್ತಿತ್ತು. ಬಳಿಕ ಕಿರಿಯ ಸೊಸೆಯನ್ನು ಅತ್ತೆ ತವರು ಮನೆಗೆ ಕಳಿಸಿದ್ದಳು. ಇದರಿಂದ ಕ್ರುದ್ಧನಾದ ವ್ಯಕ್ತಿ ಹಿರಿಯ ಸೊಸೆ ಮತ್ತು ಪತ್ನಿಗೆ ಹಲ್ಲೆಗೈದು ಮನೆಯಿಂದ ಹೊರಗೆ ಹಾಕಿದ್ದ. ಅತ್ತೆ ಸೊಸೆ ಬಳಿಕ ಅಲ್ಲಿಯೇ ನೂರು ಮೀಟರ್ ದೂರದಲ್ಲಿ ಬೇರೆ ಮನೆ ಮಾಡಿಕೊಂಡಿದ್ದರು.
ಐದು ದಿನಗಳ ಹಿಂದೆ ವ್ಯಕ್ತಿ, ತನ್ನ ಕಿರಿಯ ಸೊಸೆಯನ್ನು ಮನೆಗೆ ಕರೆದುಕೊಂಡು ಬಂದಿದ್ದು ತನ್ನ ಜೊತೆಗೇ ಬಾಳುವಂತೆ ಹೇಳಿಕೊಂಡಿದ್ದ. ಈ ನಡುವೆ, ಆತನ ಪತ್ನಿ ಮತ್ತು ಹಿರಿಯ ಸೊಸೆ ಶನಿವಾರ ರಾತ್ರಿ ಮನೆಗೆ ದಾಳಿ ನಡೆಸಿದ್ದು, ಮೆಟ್ಟು ಗತ್ತಿಯಿಂದ ವ್ಯಕ್ತಿಯ ಕುತ್ತಿಗೆ ಕಡಿದು ಹಲ್ಲೆ ಮಾಡಿದ್ದಾರೆ. ತೀವ್ರ ಗಾಯಗೊಂಡು ವ್ಯಕ್ತಿ ಸಾವು ಕಂಡಿದ್ದಾನೆ. ಈ ಬಗ್ಗೆ ಕಿರಿಯ ಸೊಸೆ ಪೊಲೀಸರಿಗೆ ದೂರು ನೀಡಿದ್ದು, ತನ್ನ ಅತ್ತೆ ಮತ್ತು ಆಕೆಯ ಸೊಸೆ ಸೇರಿ ನನಗೆ ಮತ್ತು ನನ್ನ ಮಾವನಿಗೆ ಹಲ್ಲೆ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾಳೆ.
ಪೊಲೀಸರು ಮನೆಗೆ ಬಂದಾಗ, ವ್ಯಕ್ತಿ ರಕ್ತದ ಮಡುವಿನಲ್ಲಿ ಬಿದ್ದಿದ್ದ. ಆಸ್ಪತ್ರೆಗೆ ಒಯ್ದಾಗ ಆತ ಮೃತಪಟ್ಟಿದ್ದ. ಪ್ರಾಥಮಿಕ ಮಾಹಿತಿ ಪ್ರಕಾರ, ವ್ಯಕ್ತಿ ಮತ್ತು ಕಿರಿಯ ಸೊಸೆ ನಡುವೆ ಸಂಬಂಧ ಇತ್ತು. ಇದೇ ವಿಚಾರದಲ್ಲಿ ಗಲಾಟೆ ನಡೆದು ಕೊಲೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತ ವ್ಯಕ್ತಿಗೆ ನಾಲ್ವರು ಗಂಡು ಮಕ್ಕಳಿದ್ದು, ಮುಂಬೈನಲ್ಲಿ ವಲಸೆ ಕಾರ್ಮಿಕರಾಗಿದ್ದಾರೆ. ಈ ಪೈಕಿ ಇಬ್ಬರಿಗೆ ಮದುವೆಯಾಗಿದ್ದು , ಪತ್ನಿಯರನ್ನು ಮನೆಯಲ್ಲಿ ಬಿಟ್ಟು ಕೆಲಸಕ್ಕೆ ಹೋಗಿದ್ದಾರೆ.
A 55-year-old man was allegedly killed by his wife and elder daughter-in-law in a village in Bhadohi district of Uttar Pradesh for having an illicit relation with his younger daughter-in-law, police said on Sunday.
15-05-25 10:16 pm
HK News Desk
Yatnal FIR, Mahatma Gandhi; ಮಹಾತ್ಮ ಗಾಂಧಿ ಪಾಕಿ...
15-05-25 11:59 am
Pro Pakistan slogan, Arrest, Bangalore: ಬೆಂಗಳ...
14-05-25 05:16 pm
Hassan Kidnap: ಅಪ್ಪನ ಎದುರೇ ಮಗಳ ಅಪಹರಣ ; ಬೇಲೂರಿ...
13-05-25 09:50 pm
Davangere Accident, police constable death: ಲ...
13-05-25 09:37 pm
15-05-25 09:09 pm
HK News Desk
Donald Trump: ನಾನೇನೂ ಮಧ್ಯಸ್ಥಿಕೆ ವಹಿಸಿರಲಿಲ್ಲ,...
15-05-25 08:38 pm
Sofia Qureshi, BJP leader, FIR: ಸೋಫಿಯಾ ಭಯೋತ್ಪ...
14-05-25 11:08 pm
Masood Azhar; ಐಎಂಎಫ್ ಸಾಲದ ಹಣವನ್ನೂ ಉಗ್ರರಿಗೆ ಹಂ...
14-05-25 11:08 pm
ಪಾಕ್ ವಶದಲ್ಲಿದ್ದ ಬಿಎಸ್ಎಫ್ ಯೋಧ ಕೊನೆಗೂ ಬಿಡುಗಡೆ ;...
14-05-25 07:33 pm
15-05-25 08:04 pm
Mangalore Correspondent
Lashkar Terror HQ, Pakistan: ಧ್ವಂಸಗೊಂಡ ಲಷ್ಕರ್...
15-05-25 06:36 pm
Lokayukta raid, Mangalore: ಸರ್ವೆ ಇಲಾಖೆ ಮೇಲ್ವಿ...
15-05-25 03:33 pm
Kundapur Suicide: ಸಾಲಬಾಧೆ, ತಂದೆ- ಮಗ ಬಾವಿಗೆ ಹಾ...
15-05-25 01:34 pm
Manjunath Bhandary, Kukke Temple, Mangalore:...
14-05-25 08:05 pm
15-05-25 11:06 pm
HK News Desk
Bangalore Crime, Mobile showroom: ಮೊಬೈಲ್ ಅಂಗಡ...
15-05-25 06:02 pm
Bangalore Job Fraud, Crime; ಮೆಕ್ರೋಸಾಪ್ಟ್ , ಬ...
15-05-25 12:14 pm
ಕೊಲ್ಕತ್ತಾದಲ್ಲಿ ಕಾರು ಅಡ್ಡಗಟ್ಟಿ 2.66 ಕೋಟಿ ದರೋಡೆ...
14-05-25 10:22 pm
Suhas Shetty Murder, Arrest, CCB Police: ಸುಹಾ...
14-05-25 09:23 pm