ಬ್ರೇಕಿಂಗ್ ನ್ಯೂಸ್
06-12-24 10:42 pm Mangalore Correspondent ಕ್ರೈಂ
ಉಳ್ಳಾಲ, ಡಿ.6: ಉಳ್ಳಾಲ ಪೊಲೀಸ್ ಠಾಣೆಯೊಳಗಡೆ ಬಜರಂಗದಳ ಮುಖಂಡ ಅರ್ಜುನ್ ಮಾಡೂರು ಮೇಲೆ ಹಲ್ಲೆಗೈದಿದ್ದ ಆರೋಪಿ ಹೊಸಂಗಡಿ ,ಕಡಂಬಾರು ನಿವಾಸಿ ಮಹಮ್ಮದ್ ಆಸಿಫ್ ಜಾಮೀನಿನಲ್ಲಿ ಜೈಲಿನಿಂದ ಹೊರ ಬರುತ್ತಲೇ ಆತನ ಮೇಲೆ ಪ್ರತೀಕಾರ ತೀರಿಸಲು ತಲವಾರು ದಾಳಿಗೆ ಯತ್ನಿಸಿದ್ದರೆನ್ನಲಾದ ನಾಲ್ವರು ಆರೋಪಿಗಳನ್ನ ಉಳ್ಳಾಲ ಪೊಲೀಸರು ಬಂಧಿಸಿದ್ದರು. ಇದೀಗ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಮತ್ತೋರ್ವ ಆರೋಪಿಯೆನ್ನಲಾದ ಅರ್ಜುನ್ ಮಾಡೂರನ್ನು ಉಳ್ಳಾಲ ಪೊಲೀಸರು ಶುಕ್ರವಾರ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ತೊಕ್ಕೊಟ್ಟುವಿನ ಮೇಲ್ಸೇತುವೆಯಲ್ಲಿ ಅ.16 ರ ರಾತ್ರಿ ಕುಂಪಲದ ಶರತ್, ಕೇರಳದ ಇಬ್ರಾಹಿಂ ಖಲೀಲ್ ಅವರ ಕಾರುಗಳ ಮಧ್ಯೆ ನಡೆದಿದ್ದ ಸಣ್ಣ ಅಪಘಾತ ಪ್ರಕರಣವು ಉಳ್ಳಾಲ ಪೊಲೀಸ್ ಠಾಣೆಯ ಮೆಟ್ಟಿಲೇರಿತ್ತು. ಶರತ್ ಅವರ ಸ್ನೇಹಿತ ಅರ್ಜುನ್ ಮಾಡೂರು ಅವರು ಉಳ್ಳಾಲ ಪೊಲೀಸ್ ಠಾಣೆಗೆ ಭೇಟಿ ನೀಡಿ ಇನ್ಸ್ ಪೆಕ್ಟರ್ ಕೊಠಡಿಯೊಳಗೆ ಕಾರು ಚಾಲಕರಾದ ಶರತ್ ,ಖಲೀಲ್ ಜತೆ ರಾಜಿ ಮಾತುಕತೆ ನಡೆಸುತ್ತಿದ್ದ ವೇಳೆ ಖಲೀಲ್ ಸಹೋದರ ಆಸಿಫ್ ಎಂಬಾತ ಅರ್ಜುನ್ ಮಾಡೂರಿಗೆ ಏಕಾಏಕಿ ಹಲ್ಲೆ ನಡೆಸಿದ್ದ.
ಅರ್ಜುನ್ ಮಾಡೂರು ಮೇಲಿನ ಹಲ್ಲೆ ಖಂಡಿಸಿ ಮಧ್ಯರಾತ್ರಿಯೇ ಹಿಂದೂ ಸಂಘಟನೆ ಕಾರ್ಯಕರ್ತರು ಉಳ್ಳಾಲ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದ್ದರು. ಪೊಲೀಸರು ಆರೋಪಿ ಆಸಿಫ್ ನನ್ನ ವಶಕ್ಕೆ ಪಡೆದು ಕೇಸು ಹಾಕಿ ಜೈಲಿಗೆ ತಳ್ಳಿದ್ದರು. ಕಳೆದ ನ.8ರಂದು ಆರೋಪಿ ಮಹಮ್ಮದ್ ಆಸಿಫ್ ಗೆ ಜಾಮೀನು ದೊರೆತಿತ್ತು. ಆಸಿಫ್ ತನ್ನ ಕುಟುಂಬಸ್ಥರ ಜೊತೆ ಕಾರಿನಲ್ಲಿ ಮನೆಗೆ ತೆರಳುತ್ತಿದ್ದ ವೇಳೆ ತಲಪಾಡಿ ಬಳಿಯ ಕೆ.ಸಿ ರೋಡ್ ನಿಂದ ಆಗಂತುಕರು ಮಾರಕಾಯುಧಗಳಿಂದ ಬೆನ್ನಟ್ಟಿದ್ದಾರೆಂದು ಆರೋಪಿಸಿ ಉಳ್ಳಾಲ ಠಾಣೆಗೆ ದೂರು ನೀಡಲಾಗಿತ್ತು.
ತನಿಖೆ ನಡೆಸಿದ್ದ ಉಳ್ಳಾಲ ಪೊಲೀಸರು ಇಡ್ಯ ಈಶ್ವರ ನಗರದ ಅಣ್ಣಪ್ಪ ಸ್ವಾಮಿ ಯಾನೆ ಮನು (24), ಪಡೀಲ್ ನಾರ್ಲದ ಸಚಿನ್ (24), ಪಜೀರು ಪಾದಲ್ ಕೋಡಿಯ ಕುಶಿತ್(18) ಮತ್ತು ಕಾನೂನಿನೊಂದಿಗೆ ಸಂಘರ್ಷಕ್ಕೆ ಒಳಗಾದ ಅಪ್ರಾಪ್ತನನ್ನ ಬಂಧಿಸಿದ್ದರು. ಆರೋಪಿಗಳಲ್ಲಿ ಕುಶಿತ್ ಜಾಮೀನಿನಲ್ಲಿ ಬಿಡುಗಡೆಯಾಗಿದ್ದ. ಇದೀಗ ಪ್ರಕರಣದಲ್ಲಿ ಮತ್ತೋರ್ವ ಆರೋಪಿ ಎನ್ನಲಾದ ಅರ್ಜುನ್ ಮಾಡೂರನ್ನ ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ.
Bajrang dal activist Arjun Madoor arrested over attempt to murder by ullal police in Mangalore. A youth from Kerala assaulted a leader of a Hindu organization inside a police inspector’s room during an inquiry into a car collision, leading to his arrest. Hindu organization workers gathered outside the police station at midnight in protest.
23-01-26 03:21 pm
Bangalore Correspondent
ವಿಧಾನಸಭೆ ಅಧಿವೇಶನ ; ಭಾಷಣ ಅರ್ಧಕ್ಕೆ ಬಿಟ್ಟು ತೆರಳಿ...
22-01-26 10:27 pm
ಕುಕ್ಕೆ ಸುಬ್ರಹ್ಮಣ್ಯ ; 2 ತಿಂಗಳಲ್ಲಿ 14 ಕೋಟಿಗೂ ಹೆ...
22-01-26 05:20 pm
ಚಾಮರಾಜನಗರದಲ್ಲಿ ಚಿರತೆ ದಾಳಿ ; ಪಾದಯಾತ್ರೆಗೆ ಹೊರಟ್...
21-01-26 01:31 pm
ರಾಯಚೂರಿನಲ್ಲಿ ಭೀಕರ ಅಪಘಾತ ; ಬೊಲೆರೋ - ಪಿಕ್ಅ...
21-01-26 12:30 pm
23-01-26 06:44 pm
HK News Desk
ಗಾಜಾದಲ್ಲಿ ಶಾಂತಿ ಸ್ಥಾಪನೆಗೆ 35 ದೇಶಗಳ ಮಂಡಳಿ ರಚನೆ...
22-01-26 10:16 pm
ರೈಲಿನ ಶೌಚಾಲಯದಲ್ಲಿ ಎರಡು ಗಂಟೆ ಲಾಕ್ ಮಾಡಿಕೊಂಡ ಯುವ...
22-01-26 01:52 pm
ಗ್ರೀನ್ ಲ್ಯಾಂಡ್ ; ಯುರೋಪ್ ರಾಷ್ಟ್ರಗಳ ಮೇಲೆ ಸುಂಕ ಹ...
22-01-26 01:16 pm
ಆಂಧ್ರದಲ್ಲಿ ಮತ್ತೆ ಬಸ್ ಬೆಂಕಿ ; ಟೈರ್ ಸ್ಫೋಟಗೊಂಡು...
22-01-26 11:26 am
23-01-26 09:21 pm
Mangaluru Staffer
National Conference on Neuropsychiatry Held a...
23-01-26 09:08 pm
ನಾರ್ಲ ಪಡೀಲಿನಲ್ಲಿ ಒಣ ತ್ಯಾಜ್ಯ ಸಂಸ್ಕರಣಾ ಘಟಕ ನಿರ್...
23-01-26 08:22 pm
Prabhakara Joshi, Vishweshwar Bhat: ಜಾಲತಾಣದಲ್...
23-01-26 06:57 pm
Karkala Accident, Three Killed: ಕಾರ್ಕಳ ಕಂಬಳಕ್...
23-01-26 05:12 pm
23-01-26 09:36 pm
Mangaluru Staffer
ಕಾವೂರು ವ್ಯವಸಾಯ ಸೇವಾ ಸಹಕಾರಿ ಸಂಘಕ್ಕೆ ನಕಲಿ ಚಿನ್ನ...
23-01-26 03:34 pm
29 ವರ್ಷಗಳ ಹಿಂದೆ ತಾಯಿ, ಮಗನನ್ನು ಕೊಲೆಗೈದು ಚಿನ್ನಾ...
22-01-26 10:12 pm
ಸ್ವಾಮೀಜಿಗೆ ಬ್ಲ್ಯಾಕ್ಮೇಲ್ ; ಒಂದು ಕೋಟಿಗೆ ಡಿಮ್ಯಾಂ...
22-01-26 02:40 pm
ಜೂಜಾಡಿ ಸಾಲ ; ಹಣದಾಸೆಗೆ ಇಂಜೆಕ್ಷನ್ ನೀಡಿ ಸ್ವಂತ...
21-01-26 09:35 pm