ಬ್ರೇಕಿಂಗ್ ನ್ಯೂಸ್
22-12-24 04:44 pm Mangalore Correspondent ಕ್ರೈಂ
ಮಂಗಳೂರು, ಡಿ.21: ಷೇರು ಮಾರುಕಟ್ಟೆಯಲ್ಲಿ ಹಣ ತೊಡಗಿಸಿದರೆ ಭಾರೀ ಲಾಭ ತೆಗೆಸಿಕೊಡುತ್ತೇವೆಂದು ವಾಟ್ಸಪ್ ಮೆಸೇಜ್ ಮಾಡಿ ಲಕ್ಷಾಂತರ ರೂಪಾಯಿ ಪಡೆದು ಯಾಮಾರಿಸುವುದು ನಡೆಯುತ್ತಲೇ ಇದೆ. ಸೈಬರ್ ವಂಚಕರು ವ್ಯವಸ್ಥಿತ ರೀತಿಯಲ್ಲಿ ಇಂತಹ ವಂಚನೆಗಳನ್ನು ಮಾಡುತ್ತಿದ್ದಾರೆ. ಇತ್ತೀಚೆಗೆ ಮಂಗಳೂರಿನ ವ್ಯಕ್ತಿಯೊಬ್ಬ 40 ಲಕ್ಷ ರೂ. ನಕಲಿ ಷೇರು ಮಾರುಕಟ್ಟೆಗೆ ಹೂಡಿಕೆ ಮಾಡಿ ಹಣ ಕಳಕೊಂಡಿದ್ದರು. ಪ್ರಕರಣ ಸಂಬಂಧಿಸಿ ಪೊಲೀಸರು ಬ್ಯಾಂಕ್ ಖಾತೆಯ ಬೆನ್ನತ್ತಿ ಕೇರಳದ ವ್ಯಕ್ತಿಯೊಬ್ಬನನ್ನು ಬಂಧಿಸಿದ್ದಾರೆ.
ಕೇರಳದ ಕೋಯಿಕ್ಕೋಡ್ ನಲ್ಲಿ ಜಯಂತ್ ಪಿ. (35) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಈತನ ಖಾತೆಯನ್ನು ದೇಶಾದ್ಯಂತ ಹಲವಾರು ಸೈಬರ್ ವಂಚಕರು ಬಳಸಿಕೊಂಡಿದ್ದಾರೆ ಎನ್ನಲಾಗುತ್ತಿದ್ದು, ಇದಕ್ಕಾಗಿ 90ಕ್ಕೂ ಹೆಚ್ಚು ಕಡೆ ದೂರುಗಳು ದಾಖಲಾಗಿವೆ. ಪೊಲೀಸರು ಹೇಳುವ ಪ್ರಕಾರ, ಸೈಬರ್ ವಂಚಕರು ಹಲವಾರು ಮಂದಿಯನ್ನು ನೆಟ್ವರ್ಕ್ ಆಗಿ ಬಳಸಿಕೊಳ್ಳುತ್ತಿದ್ದು, ಹಲವರ ಬ್ಯಾಂಕ್ ಖಾತೆಯನ್ನು ಕಮಿಷನ್ ಕೊಟ್ಟು ಬಳಸಿಕೊಳ್ಳುತ್ತಿದ್ದಾರೆ.
ಷೇರು ಮಾರುಕಟ್ಟೆ ಹೆಸರಲ್ಲಿ ಹಣ ರವಾನಿಸಲು ಇಂತಹ ಖಾತೆಗಳನ್ನು ಬಳಸಿಕೊಳ್ಳುತ್ತಿದ್ದು, ಅಲ್ಲಿಗೆ ಹಣ ಕ್ರೆಡಿಟ್ ಆದೊಡನೆ ಅದನ್ನು ಇನ್ನೊಂದು ಖಾತೆಗೆ ವರ್ಗಾಯಿಸಲು ಸೂಚಿಸುತ್ತಾರೆ. ಕಮಿಷನ್ ಆಸೆಗೆ ಬಿದ್ದು ಇಂತಹ ಅಕ್ರಮಗಳಿಗೆ ಅವಕಾಶ ಮಾಡಿಕೊಟ್ಟರೆ ಪೊಲೀಸ್ ಕೇಸು ಎದುರಿಸಬೇಕಾಗುತ್ತದೆ. ಮಂಗಳೂರಿನ ವ್ಯಕ್ತಿ ಐಐಎಫ್ಎಲ್ ಸೆಕ್ಯುರಿಟೀಸ್ ಎಂಬ ಸ್ಟಾಕ್ ಗ್ರೂಪ್ ನಲ್ಲಿ ಹಣ ಹೂಡಿಕೆಗೆ ಮುಂದಾಗಿದ್ದರು. ಈ ಲಿಂಕ್ ಕ್ಲಿಕ್ ಮಾಡಿದ ವ್ಯಕ್ತಿ ಸೈಬರ್ ವಂಚಕರು ನೀಡಿದ್ದ ಖಾತೆಗಳಿಗೆ ಹಣವನ್ನು ವರ್ಗಾವಣೆ ಮಾಡಿದ್ದರು. ಆಮೂಲಕ ಹಂತ ಹಂತವಾಗಿ 40.64 ಲಕ್ಷ ರೂಪಾಯಿ ಹಣವನ್ನು ಕಳಕೊಂಡಿದ್ದರು.
ಆರೋಪಿ ಜಯಂತ್ ತನ್ನ ಬ್ಯಾಂಕ್ ಖಾತೆಯನ್ನು ಇಂತಹ ಸೈಬರ್ ಅಪರಾಧಗಳಿಗೆ ಬಳಸಿಕೊಂಡಿದ್ದು ತನಿಖೆಯಲ್ಲಿ ಪತ್ತೆಯಾಗಿದ್ದು ಈ ಹಿನ್ನೆಲೆಯಲ್ಲಿ ಆತನನ್ನು ಬಂಧಿಸಲಾಗಿದೆ. ಆರೋಪಿಯನ್ನು ಕೇರಳದಲ್ಲಿ ಬಂಧಿಸಿ ಅಲ್ಲಿಯೇ ನ್ಯಾಯಾಲಯಕ್ಕೆ ಹಾಜರುಪಡಿಸಿ ಮಂಗಳೂರಿಗೆ ಕರೆತರಲಾಗಿದೆ.
In the second case (Crime No. 02/2024), the accused defrauded the complainant of Rs 40,64,609 through a WhatsApp link titled "IIFL Securities" under the pretext of stock market investments.The investigation revealed that the accused, Jayant P (35), a resident of Pulakkal House, Kozhikode, Kerala, used his bank account for cybercrimes. Over 90 complaints across the country were linked to the same bank account. Jayant was arrested in Kerala, brought to Mangaluru, and presented before the court.
22-12-24 10:23 am
HK News Desk
Bangalore Volvo Car Accident: ಕೋಟಿ ಬೆಲೆಯ ಕಾರಿ...
21-12-24 09:28 pm
CT Ravi Released: ಸಿ.ಟಿ.ರವಿ ಬಂಧನ ಖಂಡಿಸಿ ರಾಜ್ಯ...
20-12-24 10:43 pm
C T Ravi Arrested, Minister Lakshmi Hebbalkar...
19-12-24 08:05 pm
Chikkamagaluru, Elephant Attack: ಚಿಕ್ಕಮಗಳೂರಲ್...
19-12-24 06:36 pm
20-12-24 05:01 pm
HK News Desk
ಅಂಬೇಡ್ಕರ್ ಘೋಷಣೆ ಫ್ಯಾಶನ್ ಆಗಿಬಿಟ್ಟಿದೆ ಎಂದ ಅಮಿತ್...
19-12-24 05:40 pm
ಮುಂಬೈನಲ್ಲಿ ಪ್ರವಾಸಿಗರಿದ್ದ ಫೆರ್ರಿ ಹಡಗಿಗೆ ನೌಕಾಪಡ...
18-12-24 10:37 pm
One Nation, One Election Bill; ವಿಪಕ್ಷಗಳ ಗದ್ದಲ...
17-12-24 05:31 pm
ಹನಿಮೂನ್ ಮುಗಿಸಿ ಹಿಂತಿರುಗುತ್ತಿದ್ದ ವಧೂ- ವರರು ಮನೆ...
16-12-24 04:19 pm
22-12-24 06:04 pm
Udupi Correspondent
Celebrate Christmas and New Year in Style wit...
22-12-24 12:33 am
Mangalore Heli Tourism: ಮಂಗಳೂರು ನಗರ ದರ್ಶನಕ್ಕೆ...
21-12-24 08:16 pm
Praveen Nettaru Murder, NIA Arrest: ಪ್ರವೀಣ್ ನ...
21-12-24 11:30 am
Anil Lobo MCC Bank Arrest, Court: ಬ್ಯಾಂಕ್ ಸಾಲ...
20-12-24 09:48 pm
22-12-24 07:23 pm
Bangalore Correspondent
Mangalore Police, Cyber Fraud: ಕಮಿಷನ್ ಆಸೆಗೆ ಬ...
22-12-24 04:44 pm
Puttur, Gold Robbery, Mangalore Crime: ಪುತ್ತೂ...
21-12-24 07:45 pm
Mangalore, Fraud case, Odisha: ನಕಲಿ ಷೇರು ಮಾರು...
21-12-24 06:24 pm
Kodagu Fake Gold Bank Case; ಕೇರಳದಲ್ಲಿ ನಕಲಿ ಚಿ...
20-12-24 08:20 pm