Drugs, Mangalore Crime: ಗೋವಾದಿಂದ ಮಂಗಳೂರಿಗೆ ಹೈಡ್ರೊವೀಡ್ ಗಾಂಜಾ ಪೂರೈಸುತ್ತಿದ್ದ ಕೇರಳ ಮೂಲದ ಆರೋಪಿ ಮುಲ್ಕಿಯಲ್ಲಿ ಸೆರೆ

09-01-25 10:32 pm       Mangalore Correspondent   ಕ್ರೈಂ

ಡ್ರಗ್ಸ್ ಫ್ರೀ ಮಂಗಳೂರು ಮಾಡುವ ನಿಟ್ಟಿನಲ್ಲಿ ಸಿಸಿಬಿ ಪೊಲೀಸರು ಕಾರ್ಯಾಚರಣೆ ಮುಂದುವರಿಸಿದ್ದು, ಗೋವಾದಿಂದ ಕೇರಳ ಮತ್ತು ಮಂಗಳೂರು ನಗರಕ್ಕೆ ಹೈಡ್ರೋವೀಡ್ ಗಾಂಜಾ ಪೂರೈಕೆ ಮಾಡುತ್ತಿದ್ದ ಆರೋಪಿಯನ್ನು ಬಂಧಿಸಿದ್ದಾರೆ. ಕೇರಳದ ಕೋಜಿಕ್ಕೋಡ್ ಜಿಲ್ಲೆಯ ಉನ್ನಿಕೂಲಂ ನಿವಾಸಿ ಶಮೀರ್ ಪಿಕೆ (42) ಬಂಧಿತ.

ಮಂಗಳೂರು, ಜ.9: ಡ್ರಗ್ಸ್ ಫ್ರೀ ಮಂಗಳೂರು ಮಾಡುವ ನಿಟ್ಟಿನಲ್ಲಿ ಸಿಸಿಬಿ ಪೊಲೀಸರು ಕಾರ್ಯಾಚರಣೆ ಮುಂದುವರಿಸಿದ್ದು, ಗೋವಾದಿಂದ ಕೇರಳ ಮತ್ತು ಮಂಗಳೂರು ನಗರಕ್ಕೆ ಹೈಡ್ರೋವೀಡ್ ಗಾಂಜಾ ಪೂರೈಕೆ ಮಾಡುತ್ತಿದ್ದ ಆರೋಪಿಯನ್ನು ಬಂಧಿಸಿದ್ದಾರೆ. ಕೇರಳದ ಕೋಜಿಕ್ಕೋಡ್ ಜಿಲ್ಲೆಯ ಉನ್ನಿಕೂಲಂ ನಿವಾಸಿ ಶಮೀರ್ ಪಿಕೆ (42) ಬಂಧಿತ.

ಕೆಂಪು ಬಣ್ಣದ ಹುಂಡೈ ಕಾರಿನಲ್ಲಿ 73 ಲಕ್ಷ ಮೌಲ್ಯದ ಹೈಡ್ರೋವೀಡ್ ಗಾಂಜಾವನ್ನು ಗೋವಾದಿಂದ ಮಂಗಳೂರಿಗೆ ತರುತ್ತಿದ್ದಾನೆಂಬ ಖಚಿತ ಮಾಹಿತಿಯೊಂದಿಗೆ ಪೊಲೀಸರು ಮುಲ್ಕಿ ಬಪ್ಪನಾಡು ಬಳಿ ಅಡ್ಡಹಾಕಿದ್ದು ಸೊತ್ತುಗಳನ್ನು ವಶಕ್ಕೆ ಪಡೆದಿದ್ದಾರೆ. 73 ಲಕ್ಷ ಮೌಲ್ಯದ 738 ಗ್ರಾಮ್ ತೂಕದ ಹೈಡ್ರೋವೀಡ್ ಗಾಂಜಾ, ಸಾಗಾಟಕ್ಕೆ ಬಳಸಿದ ಹುಂಡೈ ಕಾರು, ಮೊಬೈಲ್ ಸಹಿತ ಒಟ್ಟು 80 ಲಕ್ಷ ಮೌಲ್ಯದ ಸೊತ್ತು ವಶಕ್ಕೆ ಪಡೆಯಲಾಗಿದೆ.

ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಮಾರ್ಗದರ್ಶನದಲ್ಲಿ ಸಿಸಿಬಿ ಘಟಕದ ಎಸಿಪಿ ಮನೋಜ್ ಕುಮಾರ್ ನೇತೃತ್ವದಲ್ಲಿ ಇನ್ಸ್ ಪೆಕ್ಟರ್ ಶ್ಯಾಮಸುಂದರ್, ಪಿಎಸ್ಐ ಶರಣಪ್ಪ ಭಂಡಾರಿ ಮತ್ತು ಸಿಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

Share marker scam 10.32 lakhs fraud, accused from thrissur arrested by Mangalore police.