ಬ್ರೇಕಿಂಗ್ ನ್ಯೂಸ್
19-01-25 07:52 pm HK News Desk ಕ್ರೈಂ
ಬೀದರ್, ಜ.19: ಬೀದರ್ ಎಟಿಎಂ ಹಣ ದೋಚಿದ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಮಹತ್ವದ ಮಾಹಿತಿ ಕಲೆಹಾಕಿದ್ದಾರೆ. ಕೃತ್ಯ ಎಸಗಿದ ಖದೀಮರನ್ನು ಬಿಹಾರ ಮೂಲದ ಮನೀಶ್ ಹಾಗೂ ಮತ್ತೋರ್ವ ಎಂದು ಗುರುತಿಸಿದ್ದಾರೆ. ಇವರು ಬಿಹಾರ ಮೂಲದ ಗ್ಯಾಂಗ್‌ಸ್ಟರ್ ಅಮಿತ್ ಸಿಂಗ್ ಗ್ಯಾಂಗ್‌ನ ಸದಸ್ಯರು ಎನ್ನಲಾಗಿದೆ.
ಬೀದರಿನಲ್ಲಿ ಹಾಡಹಗಲೇ ಸಿಬ್ಬಂದಿ ಮೇಲೆ ಗುಂಡಿನ ದಾಳಿ ನಡೆಸಿ 83 ಲಕ್ಷ ರೂ. ಹಣ ದೋಚಿದ್ದ ಇಬ್ಬರು ಆಗಂತುಕರು ಹೈದರಾಬಾದ್ ಮೂಲಕ ಎಸ್ಕೇಪ್ ಆಗಿದ್ದಾರೆ. ಮೊದಲೇ ರೂಟ್‌ಮ್ಯಾಪ್ ಮಾಡಿಕೊಂಡಿದ್ದ ಖದೀಮರು ಬೀದರ್ ನಗರದಿಂದ ತೆಲಂಗಾಣದ ಜಹೀರಾಬಾದ್ ಮೂಲಕ ಹೈದರಾಬಾದ್‌ಗೆ ಎಂಟ್ರಿ ಕೊಟ್ಟಿದ್ದನ್ನು ಪತ್ತೆ ಮಾಡಲಾಗಿದೆ. ಬೀದರ್ ನಗರದಿಂದ ಹೊರ ಹೋಗುತ್ತಿದ್ದಂತೆ ಹಣವನ್ನು ಟ್ರ್ಯಾಲಿ ಬ್ಯಾಗ್‌ಗೆ ತುಂಬಿಸಿ ಅಫ್ಜಲ್‌ಪುರದ ಹೋಟೆಲ್ ಒಂದರಲ್ಲಿ ದೋಸೆ ತಿಂದಿದ್ದಾರೆ. ಹೋಟೆಲ್‌ನ ಸಿಸಿಟಿವಿ ದೃಶ್ಯಾವಳಿಗಳಲ್ಲಿ ಬ್ಯಾಗ್ ಜೊತೆಗಿರೋದು ಪತ್ತೆಯಾಗಿದೆ. ಆದರೆ ಅಲ್ಲಿ ತಲುಪಿದಾಗ, ಇಬ್ಬರು ಕೂಡ ಬಟ್ಟೆ ಬದಲಾಯಿಸಿಕೊಂಡಿದ್ದರು.
ಸದ್ಯಕ್ಕೆ ಇಬ್ಬರು ಆರೋಪಿಗಳ ಪೈಕಿ ಓರ್ವನ ಹೆಸರು, ವಿಳಾಸ ಪತ್ತೆಯಾಗಿದ್ದು ಬಿಹಾರದ ಅಮಿತ್ ಸಿಂಗ್ ಗ್ಯಾಂಗ್ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದೆ. ತೆಲಂಗಾಣಕ್ಕೆ ತೆರಳಿ ಸಿಕಂದರಾಬಾದ್ ನಿಂದ ಟ್ರೈನ್ ಮೂಲಕ ಉತ್ತರ ಭಾರಕ್ಕೆ ಹೋಗಿರುವ ಶಂಕೆಯಿದ್ದು ಪೊಲೀಸರ ತಂಡ ಬಿಹಾರ, ಉತ್ತರ ಪ್ರದೇಶಕ್ಕೂ ತೆರಳಿದೆ. ಇದೇ ತಂಡ ಇತ್ತೀಚೆಗೆ ಛತ್ತೀಸ್‌ಗಢದಲ್ಲಿ 70 ಲಕ್ಷ ದರೋಡೆ ಮಾಡಿದ್ದು ಅಲ್ಲಿಂದ ಎಸ್ಕೇಪ್ ಆಗಿತ್ತು.
ಈ ಬಗ್ಗೆ ಅಪರಾಧ ವಿಭಾಗದ ಎಡಿಜಿಪಿ ಹರಿಶೇಖರನ್ ಮಾಹಿತಿ ನೀಡಿದ್ದು, ಕರ್ನಾಟಕ, ತೆಲಂಗಾಣ, ಮಹಾರಾಷ್ಟ್ರದಲ್ಲಿ ಒಟ್ಟು 8 ತಂಡಗಳು ಶೋಧ ಕಾರ್ಯದಲ್ಲಿ ನಿರತವಾಗಿವೆ. ಆರೋಪಿಗಳ ಗುರುತು ಪತ್ತೆಯಾಗಿದ್ದು, ಶೀಘ್ರವೇ ಬಂಧಿಸುತ್ತೇವೆ ಎಂದು ಮಾಹಿತಿ ನೀಡಿದ್ದಾರೆ.
Bidar Bank Robbery, bihar gang behind robbery, escape to North India says sources, karnataka police hunt for notorious thieves. The culprits behind the daring daylight robbery of Rs 93 lac from bank staff in Bidar have finally been identified. The suspects, identified as Manish from Chhattisgarh and an accomplice, are said to be linked to the Amit gang, a notorious gang from Bihar.
08-05-25 11:07 pm
Bangalore Correspondent
U T Khader, Dinesh Gundurao, Suhas Shetty Mur...
08-05-25 07:50 pm
Karwar high alert: ಕಾರವಾರದಲ್ಲಿ ಹೈ ಎಲರ್ಟ್ ; ಸಮ...
08-05-25 12:23 pm
Special Poojas, Indian Army, Minister Ramalin...
07-05-25 04:07 pm
ಭಾರತ - ಪಾಕ್ ಮಧ್ಯೆ ಉದ್ವಿಗ್ನ ಸ್ಥಿತಿ ; ಮೇ 7 ರಂದು...
06-05-25 11:23 pm
09-05-25 12:00 am
HK News Desk
New Pope, Robert Francis Prevost;140 ಕೋಟಿ ಸದಸ...
08-05-25 11:44 pm
Pak drone-missile attack; ಚೈನಾ ಮೇಡ್ ಲಾಹೋರ್ ಏರ...
08-05-25 04:57 pm
ರಾಷ್ಟ್ರಪತಿ ದ್ರೌಪದಿ ಮುರ್ಮು ಮೇ 18ರಂದು ಶಬರಿಮಲೆಗೆ...
08-05-25 12:47 pm
Masood Azhar: ಜೈಶ್ ಮೊಹಮ್ಮದ್ ಉಗ್ರರ ನೆಲೆ ಧ್ವಂಸ...
07-05-25 10:45 pm
08-05-25 10:54 pm
Mangalore Correspondent
Satish Kumapla, Mangalore, U T Khader: ಮೂಡಾ ಅ...
08-05-25 09:06 pm
Mangalore Rohan Corporation, Shah Rukh Khan:...
08-05-25 04:52 pm
Mangalore, Suhas Shetty, NIA, Sunil Kumar: ಸು...
08-05-25 04:14 pm
MLA Harish Poonja, High Court: ಮುಸ್ಲಿಮರ ಬಗ್ಗೆ...
07-05-25 10:30 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm