ಬ್ರೇಕಿಂಗ್ ನ್ಯೂಸ್
20-01-25 05:20 pm HK News Desk ಕ್ರೈಂ
ದಾವಣಗೆರೆ, ಜ.20: ಮಂಗಳೂರು ಬ್ಯಾಂಕ್ ದರೋಡೆಗೂ ದಾವಣಗೆರೆಯಲ್ಲಿ ಮೂರು ತಿಂಗಳ ಹಿಂದೆ ನಡೆದ ದರೋಡೆಗೂ ಲಿಂಕ್ ಇದೆಯೇ ಎನ್ನುವ ಅನುಮಾನ ಬಂದಿದೆ. ನ್ಯಾಮತಿ ಪಟ್ಟಣದಲ್ಲಿ ಎಸ್ ಬಿಐ ಬ್ಯಾಂಕ್ ದರೋಡೆ ನಡೆದು ಮೂರು ತಿಂಗಳಾದರೂ, ಕಳ್ಳರ ಹೆಜ್ಜೆ ಗುರುತು ಪತ್ತೆ ಸಾಧ್ಯವಾಗದೆ ಒಟ್ಟು ಪ್ರಕರಣ ಪೊಲೀಸರಿಗೆ ಕಗ್ಗಂಟಾಗಿ ಪರಿಣಮಿಸಿದೆ.
ಅಕ್ಟೋಬರ್ 28ರಂದು ದಾವಣಗೆರೆ ಜಿಲ್ಲೆಯ ನ್ಯಾಮತಿ ಪಟ್ಟಣದಲ್ಲಿ ಎಸ್ ಬಿ ಐ ಬ್ಯಾಂಕ್ ನುಗ್ಗಿದ್ದ ಆಗಂತುಕರು ಒಟ್ಟು 509 ಗ್ರಾಹಕರಿಗೆ ಸಂಬಂಧಪಟ್ಟ 12.95 ಕೋಟಿ ರೂ. ಮೌಲ್ಯದ ಚಿನ್ನವನ್ನು ಕದ್ದೊಯ್ದಿದ್ದರು. ಗ್ಯಾಸ್ ಕಟರ್ ನಿಂದ ಬ್ಯಾಂಕ್ ಕಿಟಕಿ, ಸರಳು ಕಟ್ ಮಾಡಿ ಲಾಕರಿನಲ್ಲಿಟ್ಟಿದ್ದ ಚಿನ್ನ ಎಗರಿಸಿದ್ದರು. ಬ್ಯಾಂಕ್ ಒಳಗಿದ್ದ ಸಿಸಿಟಿವಿಯ ಡಿವಿಆರ್ ಅನ್ನೂ ಜೊತೆಗೆ ಒಯ್ದಿದ್ದರು. ಪ್ರಕರಣ ಪತ್ತೆಗಾಗಿ ಐದು ಪೊಲೀಸರ ತಂಡಗಳು ಕಾರ್ಯಾಚರಣೆ ನಡೆಸುತ್ತಿವೆ.


ಎಎಸ್ಪಿ ನೇತೃತ್ವದಲ್ಲಿ ಪೊಲೀಸ್ ತಂಡಗಳು ಮೂರು ತಿಂಗಳಿನಿಂದ ಹಗಲು ರಾತ್ರಿ ತನಿಖೆ ನಡೆಸುತ್ತಿದ್ದರೂ, ಯಾವುದೇ ಸುಳಿವು ಸಿಕ್ಕಿಲ್ಲ. ತಮಿಳುನಾಡು ಹಾಗು ಬಿಹಾರ ಮೂಲದ ಗ್ಯಾಂಗ್ ಸೇರಿ ಕಳ್ಳತನ ಮಾಡಿರುವ ಶಂಕೆಯಿದೆ. ಫೋನ್ ಬಳಸದೇ, ಸಿಸಿಟಿವಿಯಲ್ಲಿ ಸಣ್ಣ ಸುಳಿವನ್ನೂ ಬಿಟ್ಟುಕೊಡದೇ ಕಳ್ಳತನ ಮಾಡಿದ್ದರಿಂದ ಪತ್ತೆ ಕಾರ್ಯ ಸವಾಲೆನಿಸಿದೆ.
ನ್ಯಾಮತಿ ಪಟ್ಟಣದಲ್ಲಿ ಪೊಲೀಸರು ಸಾವಿರಾರು ಮೊಬೈಲ್ ಗಳ ಸಿಡಿಆರ್ ಮತ್ತು ಸಿಸಿಟಿವಿ ದೃಶ್ಯಗಳನ್ನು ಚೆಕ್ ಮಾಡಿದ್ದಾರೆ. ಆದರೂ ಪೊಲೀಸರಿಗೆ ಆರೋಪಿಗಳ ಮಾಹಿತಿ ಸಂಗ್ರಹ ಸಾಧ್ಯವಾಗಿಲ್ಲ. ಸಾಲ ಇಟ್ಟು ಚಿನ್ನವನ್ನೇ ಕಳಕೊಂಡಿರುವ ಮಂದಿ ದಿನವೂ ಗೋಳಾಡುತ್ತಿದ್ದಾರೆ.
ಮಂಗಳೂರಿನಲ್ಲಿಯೂ ಇದೇ ರೀತಿ ಬ್ಯಾಂಕ್ ದರೋಡೆಯಾಗಿದ್ದು ಚಿನ್ನಾಭರಣವನ್ನು ಹೊತ್ತುಕೊಂಡು ಪರಾರಿಯಾಗಿದ್ದಾರೆ. ನಾಲ್ಕು ದಿನ ಕಳೆದರೂ ಆರೋಪಿಗಳ ಸುಳಿವು ಪತ್ತೆ ಮಾಡಲು ಸಾಧ್ಯವಾಗಿಲ್ಲ.
Bank robbery link between Davangere and Mangalore Kotekar. Davangere sbi bank robbery was upto Rs 12.95 crore and still on breakthrough in the case so far. Similarly even Mangalore Kotekar case has got no leads so far.
23-01-26 03:21 pm
Bangalore Correspondent
ವಿಧಾನಸಭೆ ಅಧಿವೇಶನ ; ಭಾಷಣ ಅರ್ಧಕ್ಕೆ ಬಿಟ್ಟು ತೆರಳಿ...
22-01-26 10:27 pm
ಕುಕ್ಕೆ ಸುಬ್ರಹ್ಮಣ್ಯ ; 2 ತಿಂಗಳಲ್ಲಿ 14 ಕೋಟಿಗೂ ಹೆ...
22-01-26 05:20 pm
ಚಾಮರಾಜನಗರದಲ್ಲಿ ಚಿರತೆ ದಾಳಿ ; ಪಾದಯಾತ್ರೆಗೆ ಹೊರಟ್...
21-01-26 01:31 pm
ರಾಯಚೂರಿನಲ್ಲಿ ಭೀಕರ ಅಪಘಾತ ; ಬೊಲೆರೋ - ಪಿಕ್ಅ...
21-01-26 12:30 pm
23-01-26 06:44 pm
HK News Desk
ಗಾಜಾದಲ್ಲಿ ಶಾಂತಿ ಸ್ಥಾಪನೆಗೆ 35 ದೇಶಗಳ ಮಂಡಳಿ ರಚನೆ...
22-01-26 10:16 pm
ರೈಲಿನ ಶೌಚಾಲಯದಲ್ಲಿ ಎರಡು ಗಂಟೆ ಲಾಕ್ ಮಾಡಿಕೊಂಡ ಯುವ...
22-01-26 01:52 pm
ಗ್ರೀನ್ ಲ್ಯಾಂಡ್ ; ಯುರೋಪ್ ರಾಷ್ಟ್ರಗಳ ಮೇಲೆ ಸುಂಕ ಹ...
22-01-26 01:16 pm
ಆಂಧ್ರದಲ್ಲಿ ಮತ್ತೆ ಬಸ್ ಬೆಂಕಿ ; ಟೈರ್ ಸ್ಫೋಟಗೊಂಡು...
22-01-26 11:26 am
23-01-26 09:21 pm
Mangaluru Staffer
National Conference on Neuropsychiatry Held a...
23-01-26 09:08 pm
ನಾರ್ಲ ಪಡೀಲಿನಲ್ಲಿ ಒಣ ತ್ಯಾಜ್ಯ ಸಂಸ್ಕರಣಾ ಘಟಕ ನಿರ್...
23-01-26 08:22 pm
Prabhakara Joshi, Vishweshwar Bhat: ಜಾಲತಾಣದಲ್...
23-01-26 06:57 pm
Karkala Accident, Three Killed: ಕಾರ್ಕಳ ಕಂಬಳಕ್...
23-01-26 05:12 pm
23-01-26 09:36 pm
Mangaluru Staffer
ಕಾವೂರು ವ್ಯವಸಾಯ ಸೇವಾ ಸಹಕಾರಿ ಸಂಘಕ್ಕೆ ನಕಲಿ ಚಿನ್ನ...
23-01-26 03:34 pm
29 ವರ್ಷಗಳ ಹಿಂದೆ ತಾಯಿ, ಮಗನನ್ನು ಕೊಲೆಗೈದು ಚಿನ್ನಾ...
22-01-26 10:12 pm
ಸ್ವಾಮೀಜಿಗೆ ಬ್ಲ್ಯಾಕ್ಮೇಲ್ ; ಒಂದು ಕೋಟಿಗೆ ಡಿಮ್ಯಾಂ...
22-01-26 02:40 pm
ಜೂಜಾಡಿ ಸಾಲ ; ಹಣದಾಸೆಗೆ ಇಂಜೆಕ್ಷನ್ ನೀಡಿ ಸ್ವಂತ...
21-01-26 09:35 pm