ಬ್ರೇಕಿಂಗ್ ನ್ಯೂಸ್
22-01-25 11:04 am Mangalore Correspondent ಕ್ರೈಂ
ಮಂಗಳೂರು, ಜ 22: ಹಣ ಡಬಲ್ ಮಾಡುವ ಆಮಿಷವೊಡ್ಡಿ ಸೈಬರ್ ವಂಚಕರು ಮಂಗಳೂರಿನ ವ್ಯಕ್ತಿಯೊಬ್ಬರಿಗೆ 14.31 ಲಕ್ಷ ರೂಪಾಯಿ ವಂಚಿಸಿದ್ದಾರೆ. ಈ ಬಗ್ಗೆ ವಂಚನೆಗೊಳಗಾದ ವ್ಯಕ್ತಿ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.
2024 ಅಕ್ಟೋಬರ್ 26 ರಂದು ಮಂಗಳೂರಿನ ವ್ಯಕ್ತಿ ಶೇರು ಮಾರ್ಕೆಟ್ ನಲ್ಲಿ ಹಣವನ್ನು ಹೂಡಿಕೆ ಮಾಡುವ ಬಗ್ಗೆ ಯೂಟ್ಯೂಬ್ ನಲ್ಲಿ SEBI RGISTRERED FREE TELEGRAM CHANNAL ನ ವಿಡಿಯೋಗಳನ್ನು ನೋಡುತ್ತಿದ್ದರು. ಆಗ Mr. Market Analyst-Mang.By SEBI RA ಚಾನಲ್ ಹೆಸರಿನ ವಿಡಿಯೋ ಬಂದಿದ್ದು, ಆ ಸಂದರ್ಭದಲ್ಲಿ ಈ ವ್ಯಕ್ತಿ ಟೆಲಿಗ್ರಾಂ ಆಪ್ ನಲ್ಲಿ Mr. Market Analyst-Mang.By SEBI RA ಎಂದು ಸರ್ಚ್ ಕೊಟ್ಟಿದ್ದು, ಅದರಲ್ಲಿ Mr.Market Analyst-Mang.By SEBI RA ಎಂಬ ಟೆಲಿಗ್ರಾಂ ಪೇಜ್ ಓಪನ್ ಆಗಿತ್ತು. ಆ ಟೆಲಿಗ್ರಾಂ ಗ್ರೂಪ್ ಗೆ ಜಾಯಿನ್ ಆದಾಗ, ಅದರಲ್ಲಿ Minimum 5K Investment ಎಂಬ ಮೆಸ್ಸೇಜ್ ಇತ್ತು. ಅಂದರೆ ರೂ 5,000/- ಇನ್ವೆಸ್ಟ್ ಮಾಡಿದರೆ 20,000/- ಲಾಭಾಂಶ ಬರುವುದಾಗಿ ಮೆಸ್ಸೇಜ್ ಬಂದಿತ್ತು. ಹಾಗೆಯೇ ಅದರ ಕೆಳಗಡೆ ವಾಟ್ಸಪ್ ಲಿಂಕ್ ಬಂದಿದ್ದು, ಆ ಲಿಂಕ್ ಅನ್ನು ಪ್ರೆಸ್ ಮಾಡಿದಾಗ ವಂಚಕರಿಗೆ ಕನೆಕ್ಟ್ ಆಗಿತ್ತು.
ವಾಟ್ಸಪ್ ನಲ್ಲಿ ಆರೋಪಿಗಳು dolamaniraksa-3@okaxis ಎಂಬ UPI Id ಲಿಂಕ್ ನ್ನು ಕಳುಹಿಸಿದ್ದು, ಅದಕ್ಕೆ ರೂ. 5,000/- ಹಣವನ್ನು ವರ್ಗಾವಣೆ ಮಾಡಿರುತ್ತಾರೆ. ಆರೋಪಿಗಳ ಮಾತನ್ನು ನಂಬಿ, ಅವರು ತಿಳಿಸಿದಂತೆ ಹಣವನ್ನ ಹೂಡಿಕೆ ಮಾಡಿದರೆ. ಹೂಡಿಕೆ ಮಾಡಿದ ಹಣಕ್ಕೆ ಡಬಲ್ ಮಾಡಿಕೊಡುವುದಾಗಿ ಹೇಳಿದ್ದರು. ಹೀಗೆ ಈ ವ್ಯಕ್ತಿ ದಿನಾಂಕ 27-10-2024 ರಿಂದ 19-12-2024ರ ವರೆಗೆ ಅಪರಿಚಿತ ವ್ಯಕ್ತಿಗಳು ತಿಳಿಸಿದಂತೆ ಅವರು ವಾಟ್ಸಪ್ ಮೂಲಕ ಕಳುಹಿಸಿಕೊಟ್ಟ ವಿವಿಧ ಬ್ಯಾಂಕ್ ಖಾತೆ ಹಾಗೂ UPI Id ಗಳಿಗೆ ಒಟ್ಟು ರೂ 14,36,601/- ರೂ. ಹಣವನ್ನು ವರ್ಗಾವಣೆ ಮಾಡಿದ್ದರು ದೂರಿನಲ್ಲಿ ಮೋಸ ಹೋದ ವ್ಯಕ್ತಿ ಉಲ್ಲೇಖಿಸಿದ್ದಾರೆ.
ಇದೀಗ ಆರೋಪಿಗಳು ಮೊದಲೇ ನಂಬಿಸಿದಂತೆ ಪಿರ್ಯಾದುದಾರರು ಇನ್ವೆಸ್ಟ್ ಮಾಡಿದ ಹಣವನ್ನು ಡಬಲ್ ಮಾಡಿಕೊಡದೇ, ಇನ್ವೆಸ್ಟ್ ಮಾಡಿದ ಹಣವನ್ನು ವಾಪಸ್ ಕೊಡದೇ ಮೋಸ ಹಾಗೂ ವಂಚನೆ ಮಾಡಿರುತ್ತಾರೆ ಎಂದು ಸಂತ್ರಸ್ತ ದೂರು ನೀಡಿದ್ದಾರೆ.
Mangalore man looses 14 lakhs falling to online fraud prey of double money scheme. Case has been registered at the cyber police station. Mr. Market analyst manga, by SEBI ra is the fraud company looting people's money online.
24-06-26 05:55 pm
HK News Staffer
ಅಡ್ಡ ಮತದಾನ ; ರಾಜ್ಯ ನಾಯಕತ್ವದ ನಿರ್ಲಕ್ಷ್ಯವೇ ಕಾರಣ...
23-06-26 05:58 pm
ಅಡ್ಡ ಮತದಾನ; ಧರ್ಮಸ್ಥಳದಲ್ಲಿ ಶಾಸಕರು ಬಂದು ಆಣೆ ಮಾಡ...
22-06-26 08:18 pm
ವಿಧಾನ ಪರಿಷತ್ ಚುನಾವಣೆಗೂ ಮುನ್ನ ರಹಸ್ಯ ಸಭೆ ; ಬಿಜೆ...
22-06-26 03:44 pm
ಆಸ್ಪತ್ರೆ ಸಿಬ್ಬಂದಿ ಸ್ಪಂದಿಸದಿದ್ದರೆ ಚಿಂತೆ ಬೇಡ ;...
22-06-26 12:51 pm
25-06-26 12:13 pm
HK News Staffer
ಕೂಲ್ ಸಿಟಿ ಯುರೋಪಿನಲ್ಲೀಗ ಬಿಸಿಲ ಹೊಡೆತ ; ಫ್ರಾನ್ಸ್...
24-06-26 01:51 pm
ಮಾಹಿತಿ ಹಕ್ಕು ನಿಯಮಗಳಿಗೆ ಮಹಾರಾಷ್ಟ್ರ ಸರ್ಕಾರ ತಿದ್...
23-06-26 10:47 pm
ಟಿಎಂಸಿಯಲ್ಲಿ ರಾಜಕೀಯ ಭೂಕಂಪ ; ಮಮತಾ ಬ್ಯಾನರ್ಜಿ ಅಧ...
23-06-26 12:21 pm
ಕತಾರ್ ಕೈಗಾರಿಕಾ ಪ್ರದೇಶದಲ್ಲಿ ಭಾರೀ ಸ್ಫೋಟ ; 54 ಜನ...
22-06-26 12:55 pm
25-06-26 02:39 pm
HK News Staffer
ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್ ನಿಧನ; ‘ಸಮಾಜ ಕಳೆ...
23-06-26 06:02 pm
ಬಸ್ ಚಲಿಸುತ್ತಿದ್ದಾಗಲೇ ಬಿಪಿ ಲೋ ಆಗಿ ಕುಸಿದ ಚಾಲಕ !...
23-06-26 03:18 pm
ಮುಸ್ಲಿಮರಿಗೆ ಸಚಿವ ಸ್ಥಾನ ; ಕಾಂಗ್ರೆಸಿಗೆ ಓಟ್ ಹಾಕದ...
23-06-26 11:49 am
ಉಡುಪಿ ಕೋರ್ಟ್ಗೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ; ಕೆ...
22-06-26 05:23 pm
25-06-26 01:00 pm
HK News Staffer
ಹಸೆಮಣೆ ಏರಬೇಕಿದ್ದವಳೇ ಭಾವಿ ಪತಿಯನ್ನು ಫೋಟೊ ಶೂಟ್ ನ...
24-06-26 09:28 pm
30 ಲಕ್ಷ ಸಾಲ, ಲಿವ್-ಇನ್ ಸಂಬಂಧಕ್ಕೆ ಪೋಷಕರ ವಿರೋಧ ;...
24-06-26 08:53 pm
ರಾಮ ಮಂದಿರವನ್ನ ಸ್ಫೋಟಿಸಲು ಪ್ಲಾನ್ ಮಾಡಿದ್ವಿ ! ;...
24-06-26 07:53 pm
ಅಯೋಧ್ಯೆ ರಾಮ ಮಂದಿರ ಹೆಸರಲ್ಲಿ ದೇಣಿಗೆ ; 200 ಕೋಟಿ...
24-06-26 05:57 pm