Mangalore Crime, Surathkal, Car: ಮದುವೆ ಸಮಾರಂಭಕ್ಕೆ ಫಾರ್ಚುನರ್ ಕಾರು ಕೊಟ್ಟ ದೋಸ್ತ ; ನಕಲಿ ದಾಖಲೆ ಸೃಷ್ಟಿಸಿ ಕಾರನ್ನೇ ಮಾರಿದ ಸ್ನೇಹಿತ, ಸುರತ್ಕಲ್ ಠಾಣೆಗೆ ದೂರು  

18-02-25 12:11 pm       Mangalore Correspondent   ಕ್ರೈಂ

ಮದುವೆ ಸಮಾರಂಭದ ಸಂದರ್ಭದಲ್ಲಿ ಓಡಾಟಕ್ಕೆಂದು ಟೊಯೊಟಾ ಫಾರ್ಚುನರ್ ಕಾರನ್ನು ಪಡೆದು ಅದನ್ನು ಬೇರೊಬ್ಬರಿಗೆ ಮಾರಾಟ ಮಾಡಿದ ಬಗ್ಗೆ ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಂಗಳೂರು, ಫೆ.18: ಮದುವೆ ಸಮಾರಂಭದ ಸಂದರ್ಭದಲ್ಲಿ ಓಡಾಟಕ್ಕೆಂದು ಟೊಯೊಟಾ ಫಾರ್ಚುನರ್ ಕಾರನ್ನು ಪಡೆದು ಅದನ್ನು ಬೇರೊಬ್ಬರಿಗೆ ಮಾರಾಟ ಮಾಡಿದ ಬಗ್ಗೆ ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ನನ್ನ ಸೋದರ ಸಂಬಂಧಿ ಮಹಮ್ಮದ್ ಇಕ್ಬಾಲ್ ಅವರ ಟೊಯೊಟಾ ಫಾರ್ಚುನರ್ ಕಾರನ್ನು ಪರಿಚಯಸ್ಥರಾದ ಉಚ್ಚಿಲ ನಿವಾಸಿ ಮಕ್ಯೂಮ್ ಎಂಬಾತ ತನ್ನ ತಂಗಿಯ ಮದುವೆ ಕಾರ್ಯಕ್ರಮದ ಸಲುವಾಗಿ ಓಡಾಟಕ್ಕೆಂದು ಕೆಲ ಸಮಯದ ಹಿಂದೆ ಕೊಂಡೊಯ್ದಿದ್ದ. 10 ದಿನಗಳಲ್ಲಿ ಕಾರನ್ನು ಮರಳಿಸುವುದಾಗಿ ತಿಳಿಸಿದ್ದ. ಆ ಬಳಿಕವೂ ಕಾರನ್ನು ಮರಳಿಸಿಲ್ಲ ಎಂದು ಇಡ್ಯಾದ ಅಬ್ದುಲ್ ಸಮೀರ್ ದೂರು ನೀಡಿದ್ದಾರೆ' ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

'ಕಾರಿನ ಬಗ್ಗೆ ವಿಚಾರಿಸಿದಾಗ ಅದನ್ನು ಮೈಸೂರಿನ ವ್ಯಕ್ತಿಯೊಬ್ಬರಿಗೆ ಅಕ್ರಮವಾಗಿ ಮಾರಾಟ ಮಾಡಿರುವುದು ಗೊತ್ತಾಗಿದೆ. ಅದನ್ನು ಖರೀದಿಸಿದ ವ್ಯಕ್ತಿ ನಕಲಿ ದಾಖಲಾತಿಗಳನ್ನು ತಯಾರಿಸಿ ಸ್ವಂತಕ್ಕೆ ಬಳಸಿಕೊಂಡಿದ್ದಾನೆ ಎಂದು ಅಬ್ದುಲ್ ಸಮೀರ್ ದೂರಿದ್ದಾರೆ' ಎಂದು ಪೊಲೀಸರು ತಿಳಿಸಿದ್ದಾರೆ.

Friend sells Fortuner car without contest of the owner, case filed in surathkal police station. It has been know that the car has been sold to Mysuru.