ಬ್ರೇಕಿಂಗ್ ನ್ಯೂಸ್
19-02-25 09:26 pm Mangalore Correspondent ಕ್ರೈಂ
ಪುತ್ತೂರು, ಫೆ.19: ಛತ್ತೀಸ್ಗಢ ಮೂಲದ ಲಲಿತ್ ಜೈನ್ ಮತ್ತು ಪ್ರೇಕ್ಷಾ ಜೈನ್ ಮಾಲಿಕತ್ವದ ಕಂಪನಿಯವರು ಅಡಿಕೆ ಖರೀದಿಸಿ 2.76 ಕೋಟಿ ರೂಪಾಯಿ ಹಣ ನೀಡದೆ ವಂಚನೆ ಎಸಗಿದ್ದಾರೆ ಎಂದು ಬೆಟ್ಟಂಪಾಡಿಯ ಪಾರಸ್ ಟ್ರೇಡರ್ಸ್ ಕಂಪನಿಯ ಮಾಲಕ ಕಮಲ್ ಕಾಂತ್ ಶರ್ಮಾ ಎಂಬವರು ದೂರು ನೀಡಿದ್ದು, ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಂಗಳೂರಿನ ಮಣ್ಣಗುಡ್ಡದಲ್ಲಿ ವಾಸವಿರುವ ಕಮಲ್ ಕಾಂತ್ ಶರ್ಮಾ ಪುತ್ತೂರು ತಾಲೂಕಿನ ಬೆಟ್ಟಂಪಾಡಿಯಲ್ಲಿ ಪಾರಸ್ ಟ್ರೇಡಿಂಗ್ ಹೆಸರಲ್ಲಿ ಅಡಿಕೆ ವ್ಯಾಪಾರ ನಡೆಸುತ್ತಿದ್ದು, ಛತ್ತೀಸ್ಗಡ ಮೂಲದ ಕಂಪನಿಯೊಂದಿಗೆ ವ್ಯವಹಾರ ನಡೆಸುತ್ತ ಬಂದಿದ್ದರು. 2024ರ ಡಿ.13ರಂದು 230 ಬ್ಯಾಗ್ ನಲ್ಲಿ 46 ಲಕ್ಷ ಮೌಲ್ಯದ 14,950 ಕೇಜಿ ಅಡಿಕೆಯನ್ನು ಕಳಿಸಿಕೊಟ್ಟಿದ್ದರು. ಡಿ.26ರಂದು 230 ಬ್ಯಾಗ್ ನಲ್ಲಿ 14,950 ಕೇಜಿ ಅಡಿಕೆಯನ್ನು ಮತ್ತೆ ಕಳಿಸಿಕೊಟ್ಟಿದ್ದರು. ಜನವರಿ 4ರಂದು ಮತ್ತೆ 230 ಬ್ಯಾಗ್ ನಲ್ಲಿ 14950 ಕೇಜಿ ಅಡಿಕೆಯನ್ನು ಖರೀದಿಸಿದ್ದರು. ಪ್ರತ್ಯೇಕ ಇನ್ ವಾಯ್ಸ್ ನಲ್ಲಿ ಅಡಿಕೆಯನ್ನು ಖರೀದಿ ಮಾಡಿ ಒಯ್ದಿದ್ದು ಹಣ ಮತ್ತೆ ಕೊಡುವುದಾಗಿ ಹೇಳಿ ಬಾಕಿಯಿಟ್ಟಿದ್ದರು. ಒಟ್ಟು 2.76 ಲಕ್ಷ ಮೌಲ್ಯದ ಅಡಿಕೆಯನ್ನು ಖರೀದಿಸಿ ಒಯ್ದಿದ್ದಾರೆ.
ಹಣವನ್ನು ಕೇಳಿದಾಗ ಇಂದು, ನಾಳೆ ಎಂದು ಸತಾಯಿಸುತ್ತಿದ್ದಾರೆ. ಕೆಲವು ದಿನಗಳಿಂದ ಫೋನ್ ಮಾಡಿದಾಗ, ಸ್ವಿಚ್ ಆಫ್ ಮಾಡಿಕೊಂಡಿದ್ದು ವಂಚನೆ ಮಾಡಿರುತ್ತಾರೆ ಎಂದು ಕಮಲ್ ಕಾಂತ್ ಪುತ್ತೂರು ಗ್ರಾಮಾಂತರ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ. ಪುತ್ತೂರು, ವಿಟ್ಲದಲ್ಲಿ ಹಲವು ಅಡಿಕೆ ವ್ಯಾಪಾರಿಗಳಿಗೆ ಗುಜರಾತ್, ಉತ್ತರ ಭಾರತ ಮೂಲದ ಸೇಟ್ ಗಳು ಹಣ ನೀಡದೆ ವಂಚನೆ ಎಸಗಿದ್ದು ದೂರು ದಾಖಲಾಗಿದೆ. ಇದೀಗ ಮಂಗಳೂರಿನಲ್ಲಿ ನೆಲೆಸಿರುವ ಗುಜರಾತ್ ಮೂಲದ ವ್ಯಾಪಾರಿಯೊಬ್ಬರು ಮತ್ತೊಬ್ಬ ಕಂಪನಿಯ ಮೇಲೆ ದೂರು ದಾಖಲಿಸಿದ್ದಾರೆ.
Puttur Arecanut dealer paras traders cheated of 2.7 crores by Chhattisgarh company, case filed by company owner Kamal Kanth sharma.
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
11-05-25 01:43 pm
HK News Desk
India Pak War: ಪೆಟ್ಟು ತಿಂದರೂ ಬಿಡದ ಪಾಕ್ ನರಿಬುದ...
10-05-25 11:05 pm
ಎಸ್-400 ಏರ್ ಡಿಫೆನ್ಸ್ ಸಿಸ್ಟಮ್ ಮತ್ತು ಬ್ರಹ್ಮೋಸ್...
10-05-25 09:24 pm
India and Pakistan, Ceasefire: ಮೂರೇ ದಿನದಲ್ಲಿ...
10-05-25 08:28 pm
India-Pakistan war: ಭಾರತ - ಪಾಕಿಸ್ತಾನ ತಕ್ಷಣದಿಂ...
10-05-25 07:25 pm
10-05-25 07:10 pm
Mangalore Correspondent
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
Suhas Shetty Murder Case, Speaker UT Khader,...
09-05-25 01:32 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm