ಬ್ರೇಕಿಂಗ್ ನ್ಯೂಸ್
28-02-25 02:37 pm HK News Desk ಕ್ರೈಂ
ಭೋಪಾಲ್, ಫೆ.28: ಐದು ವರ್ಷದ ಹೆಣ್ಣು ಮಗುವನ್ನು 18 ವರ್ಷದ ಯುವಕನೊಬ್ಬ ಕ್ರೂರವಾಗಿ ಹಿಂಸಿಸಿ ಅತ್ಯಾಚಾರಗೈದ ಘಟನೆ ಮಧ್ಯಪ್ರದೇಶದ ಶಿವಪುರಿ ಜಿಲ್ಲೆಯಲ್ಲಿ ನಡೆದಿದ್ದು, ಬಾಲಕಿ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾಳೆ.
ಫೆ.22ರಂದು ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಕೃತ್ಯ ನಡೆಸಿದ ಹುಡುಗ ಪಕ್ಕದ ಮನೆಯಾತನೇ ಆಗಿದ್ದು, ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆತನಿಗಿನ್ನೂ 18 ತುಂಬಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಆಟವಾಡುತ್ತಿದ್ದ ಹೆಣ್ಣು ಮಗುವನ್ನು ಪಕ್ಕದ ನಿರ್ಮಾಣ ಹಂತದ ಕಟ್ಟಡದ ಟೆರೇಸಿಗೆ ಒಯ್ದು ಅಲ್ಲಿ ಕೃತ್ಯ ಎಸಗಿದ್ದಾನೆ. ಬಾಲಕಿಯ ಮುಖ, ಎದೆ ಮತ್ತು ದೇಹದಲ್ಲಿಡೀ ಕಚ್ಚಿದ ಗುರುತುಗಳಿದ್ದು, ರಕ್ತದಿಂದ ತೋಯ್ದು ಹೋಗಿದ್ದಳು. ಮಗು ಅಳುತ್ತಿದ್ದಾಗ ತಲೆಯ ಭಾಗವನ್ನು ಗೋಡೆಗೆ ಬಡಿದು ಒತ್ತಿ ಹಿಡಿದಿದ್ದು, ಇದರಿಂದಾಗಿ ತೀವ್ರ ತೆರನಾದ ಗಾಯಗಳಾಗಿವೆ.
ಬಾಲಕಿ ಅಳುತ್ತಿದ್ದ ಶಬ್ದ ಕೇಳಿ ಇತರ ಮಕ್ಕಳು ಅಲ್ಲಿಗೆ ತೆರಳಿದಾಗ, ರಕ್ತದ ಮಡುವಿನಲ್ಲಿ ಬಿದ್ದುಕೊಂಡಿರುವ ದೃಶ್ಯ ನೋಡಿ ಬೊಬ್ಬೆ ಹಾಕಿದ್ದಾರೆ. ಈ ವೇಳೆ, ಹುಡುಗ ಅಲ್ಲಿಂದ ಓಡಿ ಪರಾರಿಯಾಗಿದ್ದು, ಕೂಡಲೇ ಕೋಮಾ ಸ್ಥಿತಿಗೆ ಹೋಗಿದ್ದ ಬಾಲಕಿಯನ್ನು ಸ್ಥಳೀಯರು ಆಸ್ಪತ್ರೆಗೆ ಒಯ್ದಿದ್ದಾರೆ. ಆದರೆ ಮಗುವಿನ ಸ್ಥಿತಿ ಚಿಂತಾಜನಕವಾಗಿದ್ದು, ರಕ್ತಸ್ರಾವ ಮತ್ತು ತಲೆಗೆ ಬಿದ್ದ ಪೆಟ್ಟಿನಿಂದಾಗಿ ಬದುಕುವ ಸಾಧ್ಯತೆ ಬಗ್ಗೆ ವೈದ್ಯರು ಖಚಿತಪಡಿಸಿಲ್ಲ. ಬಾಲಕಿಯ ಸ್ಥಿತಿಯನ್ನು ನೋಡಿ ವೈದ್ಯರು ಕೂಡ ಶಾಕ್ ಆಗಿದ್ದಾರೆ. ಬಾಲಕಿ ಬೊಬ್ಬೆ ಹಾಕದಂತೆ ದೇಹಕ್ಕೆ ಬ್ಯಾಟರಿ ಶಾಕ್ ನೀಡಿದ್ದು ಈ ವೇಳೆ ಕೃತ್ಯ ಎಸಗಿದ್ದಾನೆ.
ಪೈಶಾಚಿಕ ಕೃತ್ಯದ ಹಿನ್ನೆಲೆಯಲ್ಲಿ ನೂರಾರು ಜನರು, ಕಾಂಗ್ರೆಸ್, ಬಿಜೆಪಿ ನಾಯಕರು ಜಿಲ್ಲಾಡಳಿತದ ಮುಂದೆ ಪ್ರತಿಭಟನೆ ನಡೆಸಿದ್ದು, ಕ್ರೂರ ಹಿಂಸೆ ನೀಡಿರುವ ಆರೋಪಿಯನ್ನು ಗಲ್ಲಿಗೇರಿಸಬೇಕೆಂದು ಒತ್ತಾಯಿಸಿದ್ದಾರೆ.
A five-year-old in Madhya Pradesh is battling for her life after a horrific sexual assault. Doctors at Gwalior's Kamala Raja Hospital said she needed 28 stitches in her private parts, and an operation for colostomy. The accused is a 17-year-old who has been arrested and is being tried as a juvenile, the police said.
28-02-25 06:17 pm
HK News Desk
ಕೆಂಪೇಗೌಡ ಏರ್ಪೋರ್ಟ್ ನಲ್ಲಿ ಸಿಐಎಸ್ಎಫ್ ಭದ್ರತಾ ಸಿಬ...
28-02-25 05:52 pm
Mangalore Shiradi Ghat: ಶಿರಾಡಿ ಘಾಟ್ ಹೆದ್ದಾರಿಯ...
28-02-25 11:51 am
Honnavara Fire: ಹೊನ್ನಾವರದಲ್ಲಿ ಗುಜರಿ ಗೋಡೌನ್ಗೆ...
27-02-25 05:50 pm
Forest Fire, Kanakapura, Bangalore: ಒಣಹುಲ್ಲು...
27-02-25 05:48 pm
26-02-25 05:38 pm
HK News Desk
Corruption, Amit Shah, MK Stalin: ಕ್ಷೇತ್ರ ಪುನ...
26-02-25 05:11 pm
CBI raid, Gain Bitcoin: 6,600 ಕೋಟಿ ರೂ. ಕ್ರಿಸ್...
26-02-25 12:47 pm
Vijay Wardhan, UPSC story: Success story 35 ಬ...
24-02-25 10:14 pm
India Pak Match 2025 Live: ಪಾಕ್ ತಂಡವನ್ನು ಚಾಂಪ...
23-02-25 11:22 pm
28-02-25 06:13 pm
Mangalore Correspondent
Mangalore Heat Wave: ಕರಾವಳಿಗೆ ಇನ್ನೂ ನಾಲ್ಕೈದು...
27-02-25 11:07 pm
Kotekar Robbey case, Bhaskar Belchada, Saheb...
27-02-25 10:48 pm
Talat Gang Mangalore, Ankola Robbery case: ಅಂ...
27-02-25 10:31 pm
Mangalore News; ನಿವೃತ್ತ ಸರಕಾರಿ ನೌಕರರಿಗೆ 7ನೇ ವ...
27-02-25 10:09 pm
28-02-25 02:37 pm
HK News Desk
Bidar Murder, Crime: ಬೀದರ್ ; ಕುಡಿದು ಬಂದು ಕಿರು...
26-02-25 10:48 pm
Sirsi Crime, stabbing: ಶಿವರಾತ್ರಿ ಹಬ್ಬಕ್ಕೆ ಮನೆ...
26-02-25 01:27 pm
Urwa Police, Mangalore Crime, online Fraud: ಕ...
25-02-25 08:10 pm
Mangalore, Kotekar bank robbery, Bhaskar Belc...
25-02-25 05:18 pm