ಬ್ರೇಕಿಂಗ್ ನ್ಯೂಸ್
07-03-25 05:51 pm HK News Desk ಕ್ರೈಂ
ಕಾಸರಗೋಡು, ಮಾ.7 : ಕಾಞಂಗಾಡು ಬಳಿಯ ಮಾವುಂಗಾಲ್ ಎಂಬಲ್ಲಿ ಕ್ರಶರ್ ಮ್ಯಾನೇಜರ್ ಗೆ ಬಂದೂಕು ತೋರಿಸಿ ಬೆದರಿಸಿ 10.20 ಲಕ್ಷ ರೂ. ನಗದನ್ನು ದರೋಡೆಗೈದ ಘಟನೆ ನಡೆದಿದ್ದು, ಕೃತ್ಯದಲ್ಲಿ ಭಾಗಿಯಾದ ನಾಲ್ವರು ಆರೋಪಿಗಳನ್ನು ಕೆಲವೇ ಗಂಟೆಗಳ ಅಂತರದಲ್ಲಿ ಕಾಸರಗೋಡು ಪೊಲೀಸರು ಮಂಗಳೂರಿನಲ್ಲಿ ಬಂಧಿಸಿದ್ದಾರೆ.
ಬಿಹಾರ ಮೂಲದ ಮಹಮ್ಮದ್ ಇಬ್ರಾನ್ ಆಲಂ (21), ಮಹಮ್ಮದ್ ಮಲಿಕ್ (21), ಮಹಮ್ಮದ್ ಫಾರೂಕ್ (30) ಮತ್ತು ಅಸ್ಸಾಂ ಮೂಲದ ಧನಂಜಯ್ ಬೋರಾ (22) ಬಂಧಿತರಾಗಿದ್ದು, ದರೋಡೆಗೈದ ನಗದು ಸಹಿತ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಕಾಸರಗೋಡು ಎಸ್ಪಿ ಡಿ. ಶಿಲ್ಪಾ ಮಾಧ್ಯಮಕ್ಕೆ ತಿಳಿಸಿದ್ದಾರೆ.
ಬುಧವಾರ ಸಂಜೆ ಕಾಞಂಗಾಡು ಕಲ್ಯಾಣ್ ರಸ್ತೆಯ ಜಾಸ್ ಗ್ರಾನೈಟ್ ಅಗ್ರಿಗೇಟ್ ಪ್ರೈವೇಟ್ ಲಿಮಿಟೆಡ್ ಕಂಪನಿಯ ಸ್ಟಾಕ್ ಯಾರ್ಡ್ ಮ್ಯಾನೇಜರ್ ಪಿಪಿ ರವೀಂದ್ರನ್ ಎಂಬವರಿಗೆ ಬಂದೂಕು ತೋರಿಸಿ ಅವರ ಕೈಯಲ್ಲಿದ್ದ ನಗದು ಹಣವನ್ನು ದರೋಡೆ ಮಾಡಲಾಗಿತ್ತು. ಸಂಜೆಯಾಗುತ್ತಲೇ ಕ್ರಶರ್ ಕಡೆಯಿಂದ ತಮ್ಮ ನಿವಾಸಕ್ಕೆ ತೆರಳುತ್ತಿದ್ದಾಗ ಇದರ ಬಗ್ಗೆ ತಿಳಿದಿದ್ದ ತಂಡವೊಂದು ಕಾರನ್ನು ಅಡ್ಡಗಟ್ಟಿ ಹಣವಿದ್ದ ಚೀಲವನ್ನು ಎಗರಿಸಿ ಪರಾರಿಯಾಗಿತ್ತು. 10.20 ಲಕ್ಷ ರೂ. ನಗದು ಹಾಗೂ ರವೀಂದ್ರನ್ ಕೈಯಲ್ಲಿದ್ದ ಮೊಬೈಲನ್ನು ಲೂಟಿ ಮಾಡಲಾಗಿತ್ತು. ಈ ಬಗ್ಗೆ ಕೂಡಲೇ ರವೀಂದ್ರನ್ ಅವರು ಕಂಪನಿ ಅಧಿಕಾರಿಗಳಿಗೆ ಮತ್ತು ಸ್ಥಳೀಯ ಪೊಲೀಸರಿಗೆ ದೂರು ನೀಡಿದ್ದರು. ಹೊಸದುರ್ಗ ಠಾಣೆ ಪೊಲೀಸರು ತನಿಖೆ ಆರಂಭಿಸಿದ್ದು, ಎಲ್ಲ ಕಡೆಗೂ ಪೊಲೀಸರಿಗೆ ಅಲರ್ಟ್ ಮಾಹಿತಿ ನೀಡಲಾಗಿತ್ತು.
ಆರೋಪಿಗಳು ಪ್ರಯಾಣಿಸಿದ್ದ ಕಾರು ತೆಲಂಗಾಣ ನೋಂದಣಿ ಹೊಂದಿರುವುದು ಮತ್ತು ಆ ವಾಹನವನ್ನು ಕೋಜಿಕ್ಕೋಡ್ ಮೂಲದವರಿಗೆ ಬಾಡಿಗೆ ನೀಡಲಾಗಿತ್ತು ಎನ್ನುವುದು ತಿಳಿದುಬಂದಿತ್ತು. ಜಿಪಿಎಸ್ ಮೂಲಕ ಅದರ ಮಾಲೀಕರು ಸರ್ಚ್ ಮಾಡಿದಾಗ, ವಾಹನ ಕಾಞಂಗಾಡ್ ರೈಲು ನಿಲ್ದಾಣದ ಬಳಿ ನಿಂತಿತ್ತು. ಕೂಡಲೇ ಪೊಲೀಸರು ಅಲ್ಲಿ ತಲುಪುವಷ್ಟರಲ್ಲಿ ಆರೋಪಿಗಳು ಪರಾರಿಯಾಗಿದ್ದರು. ಅಲ್ಲಿನ ಸಿಸಿಟಿವಿಯಲ್ಲಿ ಆರೋಪಿಗಳು ಮಂಗಳೂರಿನತ್ತ ತೆರಳಿದ ರೈಲಿನಲ್ಲಿ ಹೋಗಿರುವುದು ಪತ್ತೆಯಾಗಿತ್ತು. ಕಾಸರಗೋಡು ಎಸ್ಪಿ ಶಿಲ್ಪಾ ಅವರ ಸೂಚನೆಯಂತೆ ಮಂಗಳೂರಿನ ಪೊಲೀಸರು ರೈಲು ನಿಲ್ದಾಣದಲ್ಲಿ ಶಂಕಿತ ಮೂವರನ್ನು ವಶಕ್ಕೆ ಪಡೆದಿದ್ದರು.
ಆನಂತರ, ಬುಧವಾರ ರಾತ್ರಿಯೇ ಹೊಸದುರ್ಗ ಪೊಲೀಸರು ಮಂಗಳೂರಿಗೆ ಬಂದು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ನಾಲ್ಕನೇ ಆರೋಪಿ ಅಸ್ಸಾಂ ಮೂಲದ ಧನಂಜಯ್ ಬೋರಾನನ್ನು ಆನಂತರ ಮಂಗಳೂರಿನಲ್ಲಿಯೇ ಬಂಧಿಸಲಾಗಿದೆ. ದೂರು ಬಂದ ಕೂಡಲೇ ಪೊಲೀಸರು ಎಲ್ಲ ಕಡೆ ಅಲರ್ಟ್ ಆಗಿದ್ದಲ್ಲದೆ, ಕಾರನ್ನು ಟ್ರೇಸ್ ಮಾಡಿ ಬೆನ್ನತ್ತಿದ್ದರಿಂದ ಆರೋಪಿಗಳನ್ನು ಸುಲಭದಲ್ಲಿ ಬಲೆಗೆ ಕೆಡವಲು ಸಾಧ್ಯವಾಗಿದೆ. ಕಾಞಂಗಾಡು ಡಿವೈಎಸ್ಪಿ ಬಾಬು ಪೆರಿಂಜೋತ್, ಹೊಸದುರ್ಗ ಇನ್ಸ್ ಪೆಕ್ಟರ್ ಪಿ.ಅಜಿತ್ ಕುಮಾರ್, ಎಸ್ಐಗಳಾದ ಅಖಿಲ್, ಜೋಜೊ ಮತ್ತು ಅಪರಾಧ ವಿಭಾಗದ ಪೊಲೀಸರಾದ ಶೈಜು ಮೋಹನ್, ಸನೋಜ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
The police have arrested four individuals in connection with the alleged armed robbery of ₹10.20 lakh from a crusher manager at Mavungala, Kanhangad, Kasaragod, on Thursday (March 6). The arrested suspects are Bihar natives Muhammed Ebron Alam, 21, Muhammed Malik, 21, and Muhammad Farooq, 30, and Assam native Dhananjan Bora, 22.
28-05-26 06:18 pm
HK News Staffer
CM Siddaramaiah, Supporters crying, Kaveri: ಸ...
28-05-26 05:31 pm
ರಾಜ್ಯಸಭೆಗೆ ಹೋಗಲ್ಲ, ರಾಜ್ಯದಲ್ಲೇ ಸಕ್ರಿಯ ರಾಜಕಾರಣದ...
28-05-26 04:34 pm
CM Siddaramaiah resigns: ಸಿಎಂ ಸ್ಥಾನಕ್ಕೆ ಸಿದ್ದ...
28-05-26 03:24 pm
'ಮಹಾನಾಯಕ' ಸಿದ್ದರಾಮಯ್ಯ ಯುಗಾಂತ್ಯ.? ಇಂದೇ ಸಿಎಂ ಸ್...
28-05-26 10:56 am
27-05-26 09:17 pm
HK News Desk
ಕೇರಳ ರಾಜಕಾರಣದಲ್ಲಿ ಭಾರೀ ಸಂಚಲನ..! ಮಾಜಿ ಸಿಎಂ ಪಿಣ...
27-05-26 08:36 pm
ಜೂನ್, ಜುಲೈನಲ್ಲಿ 12 ಪರಿಷತ್ ಸ್ಥಾನಗಳಿಗೆ ಚುನಾವಣೆ...
26-05-26 12:54 pm
ಗೃಹಲಕ್ಷ್ಮಿ ಪಡೆಯಲು ಬಯೋಮೆಟ್ರಿಕ್ ಕಡ್ಡಾಯ ; ಕೂಡಲೇ...
26-05-26 12:50 pm
ಎಐಎಡಿಎಂಕೆ ಪಕ್ಷದ ಮೂವರು ಶಾಸಕರು ಸ್ಥಾನಕ್ಕೆ ರಾಜಿನಾ...
25-05-26 08:18 pm
28-05-26 02:45 pm
HK News Staffer
ಡಿಸಿಎಂ ಆಗಬೇಕೆಂಬ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಹಾ...
28-05-26 02:28 pm
ಕುದುರೆಮುಖ ಅದಿರು ಕಂಪನಿ ಕಾರ್ಮಿಕರ ಬೇಡಿಕೆ ಈಡೇರಿಸಿ...
27-05-26 12:29 pm
ಕಟೀಲು ಶಿಬರೂರಿನಲ್ಲಿ ಮರಳು ದರೋಡೆ ರಾಜಾರೋಷ ; ಇಲ್ಲಿ...
26-05-26 09:02 pm
ನೌಕಾಪಡೆ ಸಬ್ ಲೆಫ್ಟಿನೆಂಟ್ ಆಗಿ ನೇಮಕಗೊಂಡ ನಿಶೆಲ್ ಡ...
26-05-26 07:52 pm
28-05-26 09:44 pm
HK News Desk
ಕರ್ತವ್ಯದಲ್ಲಿದ್ದ ಟ್ರಾಫಿಕ್ ಪೊಲೀಸರಿಗೆ ಡಿಕ್ಕಿ ಹೊಡ...
28-05-26 10:43 am
ನಿಲ್ಲಿಸಿದ್ದ ಬೈಕ್ ಕದ್ದು ಪರಾರಿಯಾಗಿದ್ದ ಇಬ್ಬರು ನಟ...
27-05-26 08:34 pm
ಉರ್ವ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಿ ಕೇರಳಕ್ಕೆ...
27-05-26 07:56 pm
ಬೈಜುಸ್ ಸಂಸ್ಥಾಪಕ ರವೀಂದ್ರನ್ಗೆ ಭಾರೀ ಆಘಾತ ; ಜೈಲ...
27-05-26 01:30 pm