ಬ್ರೇಕಿಂಗ್ ನ್ಯೂಸ್
18-12-20 03:19 pm Mangalore Correspondent ಕ್ರೈಂ
ಬೆಳ್ತಂಗಡಿ, ಡಿ.18: ಉಜಿರೆಯ ಉದ್ಯಮಿ ಎ.ಕೆ.ಶಿವನ್ ಎಂಬವರ ಮೊಮ್ಮಗನ ಅಪಹರಣ ಪ್ರಕರಣಕ್ಕೆ ಸಂಬಂಧಿಸಿ ದಕ್ಷಿಣ ಕನ್ನಡ ಎಸ್ಪಿ ಲಕ್ಷ್ಮೀಪ್ರಸಾದ್ ಅಪಹೃತ ಬಾಲಕನ ಮನೆಗೆ ಭೇಟಿ ನೀಡಿದ್ದಾರೆ.
ಈ ಬಗ್ಗೆ ಮಾಧ್ಯಮಕ್ಕೆ ಮಾತನಾಡಿದ ಎಸ್ಪಿ, ಬಾಲಕನ ಪತ್ತೆಗಾಗಿ ನಾಲ್ಕು ತಂಡಗಳನ್ನು ರಚನೆ ಮಾಡಿದ್ದೇವೆ. ಬಂಟ್ವಾಳ ಡಿವೈಎಸ್ಪಿ ವೆಲಂಟೈನ್ ಡಿಸೋಜ ನೇತೃತ್ವದಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ನಡುವೆ ಅಪಹರಣಕಾರರು ತಮ್ಮ ಬೇಡಿಕೆಯನ್ನು 60 ಬಿಟ್ ಕಾಯಿನ್ ಗೆ ಇಳಿಸಿದ್ದಾರೆ. ಬಿಟ್ ಕಾಯಿನ್ ಯಾಕೆ ಕೇಳುತ್ತಿದ್ದಾರೆಂದು ತನಿಖೆ ನಡೆಸುತ್ತಿದ್ದೇವೆ ಎಂದಿದ್ದಾರೆ.
ಅಲ್ಲದೆ, ಅಪಹರಣಕಾರರು ಮನೆಯವರಿಗೆ ಪರಿಚಿತರೇ ಆಗಿರುವ ಶಂಕೆಯಿದೆ ಎಂದು ಹೇಳಿರುವ ಎಸ್ಪಿ, ಮನೆಮಂದಿ ಬಳಿ ಮಾಹಿತಿ ಸಂಗ್ರಹ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ.
17ರಿಂದ 10 ಕೋಟಿಗೆ ಇಳಿದ ಬೇಡಿಕೆ
ನಿನ್ನೆ ಬಾಲಕನ ಅಪಹರಿಸಿದ ತಂಡ ತಾಯಿಗೆ ಫೋನ್ ಮಾಡಿದ್ದು 17 ಕೋಟಿ ರೂ. ನೀಡುವಂತೆ ಬೇಡಿಕೆ ಇರಿಸಿತ್ತು. ಅಲ್ಲದೆ, ಬಿಟ್ ಕಾಯಿನ್ ರೂಪದಲ್ಲೇ ನೀಡುವಂತೆ ಕೇಳಿಕೊಂಡಿದ್ದರು. ಅಪಹರಣಕಾರರು ಹಿಂದಿಯಲ್ಲಿ ಮಾತನಾಡಿದ್ದರು ಎಂದು ಪೊಲೀಸರಿಗೆ ಮಾಹಿತಿ ನೀಡಿದ್ದರು. ಆದರೆ, ಇಂದು ತಮ್ಮ ಬೇಡಿಕೆಯನ್ನು ಹತ್ತು ಕೋಟಿ (60 ಬಿಟ್ ಕಾಯಿನ್) ಗೆ ಇಳಿಸಿದ್ದಾರೆ. ಹೀಗಾಗಿ ಮನೆಯವರ ಬಗ್ಗೆ ಮಾಹಿತಿ ಇದ್ದವರೇ ಈ ಕೃತ್ಯದ ಹಿಂದಿರುವ ಶಂಕೆಯಿದೆ.
ಹಾಸನದಲ್ಲಿ ಮೊಬೈಲ್ ಟ್ರೇಸ್ !
ನಿನ್ನೆ ಸಂಜೆ 6.30ರ ಸುಮಾರಿಗೆ ಬಾಲಕನನ್ನು ಆತನ ಮನೆಯ ಮುಂಭಾಗದಿಂದಲೇ ಕಿಡ್ನಾಪ್ ಮಾಡಲಾಗಿತ್ತು. ಆನಂತರ ಅಪಹರಣಕಾರರು ಬಾಲಕನ ತಾಯಿಗೆ ಫೋನ್ ಮಾಡಿದ್ದರು. ಈ ಕರೆ ಬಂದಿರುವ ನಂಬರನ್ನು ಪೊಲೀಸರು ಟ್ರೇಸ್ ಮಾಡಿದ್ದು, ಹಾಸನ ಜಿಲ್ಲೆಯ ತಣ್ಣೀರುಹಳ್ಳ ಎಂಬಲ್ಲಿ ಕೊನೆಯ ಬಾರಿಗೆ ಲೊಕೇಶನ್ ತೋರಿಸಿದ್ದು ಆಬಳಿಕ ಸ್ವಿಚ್ ಆಫ್ ಆಗಿದೆ. ಹೀಗಾಗಿ ಅಪಹರಣಕಾರರು ಹಾಸನ ಮೂಲಕ ತಪ್ಪಿಸಿಕೊಂಡಿದ್ದಾರೆ ಎನ್ನುವ ಶಂಕೆ ಮೂಡಿದೆ.
ಮುಂದುವರಿದ ವಾಟ್ಸಪ್ ಸಂಭಾಷಣೆ
ಅಪಹರಣಕಾರರು ಎಲ್ಲಿದ್ದಾರೆ ಎಂದು ಗೊತ್ತಿಲ್ಲದಿದ್ದರೂ, ವಾಟ್ಸಪ್ ಸಂಭಾಷಣೆ ಮುಂದುವರಿಸಿದ್ದಾರೆ. ವಾಟ್ಸಪ್ ಕರೆಯನ್ನು ಟ್ರೇಸ್ ಮಾಡಲು ಸಾಧ್ಯವಾಗದ ಕಾರಣ, ಕಿಡ್ನಾಪರ್ಸ್ ಈ ಐಡಿಯಾ ಮಾಡಿದ್ದಾರೆ ಎನ್ನಲಾಗುತ್ತಿದೆ. ಅಲ್ಲದೆ, ನೀವು ಯಾಕೆ ಪೊಲೀಸರಿಗೆ ಹೇಳಿದ್ದು ಎಂದು ಪ್ರಶ್ನೆ ಮಾಡಿದ್ದಾರೆ. ನೀವು ಡಿಜಿಟಲ್ ರೂಪದಲ್ಲಿ ಹಣ ಕಳಿಸಿ, ನಾವು ಬಾಲಕನನ್ನು ಬಿಟ್ಟು ಬಿಡುತ್ತೇವೆ ಎಂದು ಹೇಳುತ್ತಿದ್ದಾರಂತೆ.
ವಾರದ ಮೊದಲೇ ಹಾಕಿದ್ದರು ಪ್ಲಾನ್
ವಾರದ ಮೊದಲೇ ಉಜಿರೆ ವ್ಯಾಪ್ತಿಯಲ್ಲಿ ಯೆಲ್ಲೋ ಬೋರ್ಡ್ ಇರುವ ಬಿಳಿ ಕಲರ್ ಇಂಡಿಕಾ ಓಡಾಡುತ್ತಿತ್ತು ಎಂದು ಸ್ಥಳೀಯರು ಹೇಳುತ್ತಾರೆ. ಬಾಲಕನ ಮನೆಯ ಆಸುಪಾಸಿನಲ್ಲಿ ಸುಳಿದಾಡುತ್ತಿದ್ದುದರಿಂದ ವಾರಕ್ಕೆ ಮೊದಲೇ ಈ ಅಪಹರಣಕ್ಕೆ ಸ್ಕೆಚ್ ಹಾಕಿದ್ದರು ಎನ್ನೋ ಶಂಕೆ ಮೂಡುತ್ತಿದೆ.
ಇದನ್ನೂ ಓದಿ: ಉಜಿರೆ ; ಬಾಲಕನ ಅಪಹರಿಸಿ 17 ಕೋಟಿ ಬೇಡಿಕೆ !! ಬಿಟ್ ಕಾಯಿನ್ ದಂಧೆ ಶಂಕೆ
The police have traced the location of kidnappers who have kidnapped an Eight -year-Old Boy from Ujre in Dakshina Kannada. The kidnappers have demanded 60 Bitcoins by WhatsApp messages.
24-02-25 01:36 pm
HK News Desk
Kumar Bangarappa, BJP President: ಬಿಜೆಪಿ ರಾಜ್ಯ...
23-02-25 06:38 pm
Telangana Model, Pramod Muthalik, CM Siddaram...
21-02-25 10:47 pm
Rohini Sindhuri, Roopa moudgil, latest news:...
21-02-25 10:12 pm
Santosh Lad, Modi, Nitin Gadkari: ಬಿಜೆಪಿ ಅಧಿಕ...
21-02-25 04:36 pm
23-02-25 11:22 pm
HK News Desk
ಗಂಗಾ ನದಿಗಿದೆ ಸ್ವಯಂ ಶುದ್ಧೀಕರಣದ ಶಕ್ತಿ ; ಕೋಟ್ಯಂತ...
23-02-25 09:52 pm
ದುಬೈನಲ್ಲಿ ಕ್ರಿಮಿನಲ್ ಇನ್ವೆಸ್ಟಿಗೇಶನ್ ಅಧಿಕಾರಿಗಳ...
22-02-25 09:48 pm
ದುಬೈ ಉದ್ಯಮಿ ಬಿ.ಆರ್ ಶೆಟ್ಟಿಗೆ ದುಬೈ ಕೋರ್ಟಿನಿಂದ ಮ...
22-02-25 07:51 pm
Kerala school teacher suicide, catholic Churc...
22-02-25 03:53 pm
24-02-25 02:50 pm
Mangalore Correspondent
Mangalore accident, Surathkal, Raichur: ಸುರತ್...
23-02-25 03:20 pm
Rani Abbakka, Mamata Ballal, Mangalore: ಐನೂರು...
23-02-25 01:12 pm
Siddaramaiah, Priyank Kharge Mangalore, D K S...
22-02-25 05:21 pm
Singari Beedi Robbery, IPS, crime: ಸಿಂಗಾರಿ ಬೀ...
21-02-25 08:22 pm
23-02-25 03:42 pm
HK News Desk
Visa fraud, Bangalore crime, Arrest: ವಿದೇಶಿ ವ...
22-02-25 10:36 pm
Ankola Car Robbery, Rajendra Pawar, Gold Smug...
20-02-25 01:22 pm
Mangalore, Puttur, Cheating, paras traders: ಲ...
19-02-25 09:26 pm
Mangalore CCB police, 119 kg ganja, Crime: ಮೀ...
18-02-25 07:19 pm