ಬ್ರೇಕಿಂಗ್ ನ್ಯೂಸ್
25-03-25 10:09 pm Giridhar Shetty, Mangalore ಕ್ರೈಂ
ಮಂಗಳೂರು, ಮಾ.21: ಕಳೆದ ಡಿಸೆಂಬರ್ 15ರಂದು ‘’ಬ್ಯಾಂಕ್ ದೋಖಾ ಮುಚ್ಚಿ ಹಾಕಲೆತ್ನಿಸಿದ ಪೊಲೀಸರು, ರಾಶಿ ರಾಶಿ ದಾಖಲೆಯಿದ್ರೂ ಕಳ್ಳ- ಪೊಲೀಸ್ ನೌಟಂಕಿ, ಬ್ಯಾಂಕ್ ಆಸ್ತಿ ಲೂಟಿಗೆ ಅಧಿಕಾರಿಗಳದ್ದೇ ಸಾಥ್ ’’ ಎಂಬ ತಲೆಬರಹದಡಿ ಅಮಾಯಕ ರೈತನೊಬ್ಬನಿಗೆ ಇಬ್ಬರು ಆರೋಪಿಗಳು ಮಾಡಿರುವ ಮೋಸ ಮತ್ತು ಆ ಪ್ರಕರಣದಲ್ಲಿ ಪೊಲೀಸರು ತೋರುತ್ತಿರುವ ನಿರ್ಲಕ್ಷ್ಯ ಬಗ್ಗೆ ಸುದ್ದಿ ಬಿತ್ತರಿಸಿದ್ದು ಮಂಗಳೂರಿನ ಪೊಲೀಸರನ್ನು ದಂಗುಬಡಿಸಿತ್ತು. ದಾಖಲೆಗಳ ರಾಶಿ ಮುಂದಿಟ್ಟೇ ಆ ತನಿಖಾ ವರದಿಯನ್ನು ಸಿದ್ಧಪಡಿಸಲಾಗಿತ್ತು. ಆನಂತರ, ಸ್ವಲ್ಪ ಎಚ್ಚತ್ತುಕೊಂಡಂತೆ ವರ್ತಿಸಿದ್ದ ಪೊಲೀಸರು ಈಗ ಅದೇ ಹಾಡು, ಅದೇ ರಾಗ ಎನ್ನಲು ಶುರು ಮಾಡಿದ್ದಾರೆ.
ದೂರುದಾರ ನೋಯಲ್ ಮೈಕಲ್ ಸಲ್ದಾನ ಎದುರಿಟ್ಟ ನೂರಾರು ಪುಟಗಳ ದಾಖಲೆಗಳನ್ನು ಪರಿಗಣಿಸಿದ್ದ ಈ ಹಿಂದಿನ ಮಂಗಳೂರು ಪೊಲೀಸ್ ಕಮಿಷನರ್ ಕುಲದೀಪ್ ಜೈನ್, ಗೃಹ ಸಚಿವರ ಪರಮೇಶ್ವರ್ ಸೂಚನೆಯಂತೆ ಬಿ ರಿಪೋರ್ಟ್ ಹಾಕಿದ್ದ ಪ್ರಕರಣವನ್ನು ಮರು ತನಿಖೆ ಮಾಡುವಂತೆ 2023ರ ಅಕ್ಟೋಬರ್ 23ರಂದು ಮಂಗಳೂರು ಸಿಸಿಬಿಗೆ ವಹಿಸಿದ್ದರು. ಇದಾಗಿ ಎರಡು ವರ್ಷ ಸಮೀಪಿಸುತ್ತ ಬಂದರೂ, ದಾಖಲೆಗಳನ್ನು ಪರಿಗಣಿಸಿ ಚಾರ್ಜ್ ಶೀಟ್ ಹಾಕುವತ್ತ ಪೊಲೀಸರು ಮನಸ್ಸು ಮಾಡಿಲ್ಲ. ಇದರ ನಡುವೆ, ಸಿಸಿಬಿ ಇನ್ಸ್ ಪೆಕ್ಟರ್ ಆಗಿದ್ದ ಶ್ಯಾಮಸುಂದರ್ ಬದಲಿಗೆ ಈಗ ಮಹಮ್ಮದ್ ರಫೀಕ್ ಬಂದು ಕುಳಿತಿದ್ದಾರೆ. ಕೇಸಿನ ಬಗ್ಗೆ ಕೇಳಿದರೆ, ಎಫ್ಎಸ್ಎಲ್ ವರದಿಗಾಗಿ ಕಾಯುತ್ತಿದ್ದೇವೆ, ತನಿಖೆ ನಡೆಸುತ್ತಿದ್ದೇವೆ ಎಂಬ ಸಿದ್ಧ ಉತ್ತರ ನೀಡಿದ್ದಾರೆ.
ಬಿ ರಿಪೋರ್ಟ್ ಹಾಕಿಯೇ ಎಡವಟ್ಟು
ಇದಕ್ಕೂ ಹಿಂದೆ ಪ್ರಕರಣದಲ್ಲಿ ತನಿಖಾಧಿಕಾರಿಯಾಗಿದ್ದ ಆಗಿನ ಕಂಕನಾಡಿ ನಗರ ಠಾಣೆ ಎಸ್ಐ ರಘು ನಾಯ್ಕ್ ಸಾಕ್ಷ್ಯಾಧಾರ ಕೊರತೆ ನೆಪದಲ್ಲಿ 2023ರ ಜನವರಿಯಲ್ಲಿ ನ್ಯಾಯಾಲಯಕ್ಕೆ ಬಿ ರಿಪೋರ್ಟ್ ಹಾಕಿದ್ದರು. ಇದರ ಬೆನ್ನಲ್ಲೇ ಬ್ಯಾಂಕಿನ ಅಧಿಕಾರಿಗಳು 36 ಲಕ್ಷ ಸಾಲ ವಸೂಲಾತಿಗಾಗಿ ಡಿಆರ್ ಟಿ (ಡೆಬ್ಟ್ ರಿಕವರಿ ಟ್ರಿಬ್ಯುನಲ್, ಬೆಂಗಳೂರು) ಕೋರ್ಟಿಗೆ ಅರ್ಜಿ ಸಲ್ಲಿಸಿ, ಜಾಗವನ್ನು ಏಲಂ ಮಾಡಲು ಅನುಮತಿ ಕೇಳಿದ್ದರು. ಬ್ಯಾಂಕ್ ಅಧಿಕಾರಿಗಳು ಕೋರ್ಟಿಗೆ ಸಲ್ಲಿಸಿರುವ ಅಫಿಡವಿಟ್ ಪ್ರಕಾರ, ಪೊಲೀಸರು ನೀಡಿರುವ ಸರ್ಟಿಫೈಡ್ ಪ್ರತಿಗಳನ್ನು ಮುಂದಿಟ್ಟು ಸಾಕ್ಷ್ಯ ಪರಿಗಣಿಸುವಂತೆ ಕೇಳಿಕೊಂಡಿದ್ದಾರೆ. ಅಂದರೆ, ಸಾಲದ ಕುರಿತ ಒರಿಜಿನಲ್ ದಾಖಲೆಗಳನ್ನು ಪೊಲೀಸರು ಸೀಜ್ ಮಾಡಿದ್ದು, ಸೆಕೆಂಡರಿ ಎವಿಡೆನ್ಸ್ ಆಗಿ ಸರ್ಟಿಫೈಡ್ ಪ್ರತಿಗಳನ್ನು ಒದಗಿಸಿದ್ದಾಗಿ ಪರೋಕ್ಷವಾಗಿ ಹೇಳಿದ್ದಾರೆ. ಇದೇ ಮಾರ್ಚ್ 26ರಂದು ಸಾಕ್ಷ್ಯ ಪರಿಶೀಲನೆಗೆ ಕೋರ್ಟ್ ದಿನಾಂಕ ನಿಗದಿಪಡಿಸಿದ್ದು ಪೊಲೀಸರ ಎಡವಟ್ಟಿನಿಂದ ಇದೇ ದಾಖಲೆ ಪರಿಗಣಿಸಿ ತನಿಖೆಯಲ್ಲಿರುವಾಗಲೇ ಜಾಗ ಹರಾಜಿಗೆ ಹಾಕಿದರೇನು ಗತಿ ಎನ್ನುವ ಆತಂಕದಲ್ಲಿ ದೂರುದಾರರಿದ್ದಾರೆ.
ಜಪ್ತಿ ಮಾಡಿದ ದಾಖಲೆ ಕೋರ್ಟ್ ಸೊತ್ತು
ಯಾವುದೇ ಕ್ರಿಮಿನಲ್ ಪ್ರಕರಣ ತನಿಖೆಯಲ್ಲಿರುವಾಗ, ಪೊಲೀಸರು ಸುಪರ್ದಿಗೆ ಪಡೆದ ದಾಖಲೆಗಳನ್ನು ಕೋರ್ಟ್ ಗಮನಕ್ಕೆ ತಾರದೆ ಸಂಬಂಧಪಟ್ಟವರಿಗೆ ಅದರ ನಕಲಿ ದಾಖಲೆಗಳನ್ನು ನೀಡುವುದು ಕಾನೂನು ಪ್ರಕಾರ ತಪ್ಪು ಎನ್ನುವುದು ದೂರುದಾರ ಪರ ವಕೀಲರ ವಾದ. ಈ ಬಗ್ಗೆ ಹೈಕೋರ್ಟ್ ಹಿರಿಯ ವಕೀಲರಲ್ಲಿ ಕೇಳಿದಾಗಲೂ ಅದೇ ರೀತಿಯ ಅಭಿಪ್ರಾಯ ಪಟ್ಟಿದ್ದಾರೆ. ಪೊಲೀಸರು ಸೀಜ್ ಮಾಡಿದ ದಾಖಲೆ ಬದಲಿಗೆ ಸರ್ಟಿಫೈಡ್ ಪ್ರತಿಗಳನ್ನು ನೀಡಿರುವುದನ್ನು ಪ್ರಶ್ನಿಸಿ, ಮಂಗಳೂರಿನ ಸಿಜೆಎಂ ಕೋರ್ಟಿಗೂ ದೂರು ಸಲ್ಲಿಕೆಯಾಗಿದ್ದು, ಪೊಲೀಸರ ಪರವಾಗಿರುವ ಸರಕಾರಿ ವಕೀಲರನ್ನೇ ಪ್ರತಿವಾದಿ ಮಾಡಲಾಗಿದೆ. ಈ ಬಗ್ಗೆ ಕೋರ್ಟ್ ಇನ್ನೂ ತೀರ್ಪು ಪ್ರಕಟಿಸಿಲ್ಲ. ಇದೇ ವೇಳೆ, ದೂರುದಾರ ಮೈಕಲ್ ನೋಯಲ್ ಸಲ್ದಾನ ಅವರು ಸಿಎಂ ಸಿದ್ದರಾಮಯ್ಯ, ಗೃಹ ಸಚಿವ ಪರಮೇಶ್ವರ್, ರಾಜ್ಯ ಪೊಲೀಸ್ ಮಹಾನಿರ್ದೇಶಕರು, ಮಂಗಳೂರು ಪೊಲೀಸ್ ಕಮಿಷನರ್ ಅವರಿಗೂ ದೂರು ನೀಡಿದ್ದು, ಬ್ಯಾಂಕ್ ಅಧಿಕಾರಿಗಳು ಅಕ್ರಮವಾಗಿ ಪಡೆದ ದಾಖಲೆಗಳನ್ನು ಮುಂದಿಟ್ಟು ಡಿಆರ್ ಟಿ ಕೋರ್ಟಿಗೆ ಹೋಗಿದ್ದಾರೆ, ದಯಮಾಡಿ ಬ್ಯಾಂಕಿಗೆ ನೀಡಿರುವ ದಾಖಲೆಗಳನ್ನು ಹಿಂಪಡೆಯುವಂತೆ ಸಿಸಿಬಿ ಪೊಲೀಸರಿಗೆ ನಿರ್ದೇಶನ ನೀಡುವಂತೆ ಕೇಳಿಕೊಂಡಿದ್ದಾರೆ.
ಏನಿದು ಸಾಲ ಪೋರ್ಜರಿ ಪ್ರಕರಣ ?
ಮಂಗಳೂರಿನ ವಳಚ್ಚಿಲ್ ನಿವಾಸಿ ಜಾನ್ ಸಲ್ದಾನ ಅವರ ಪುತ್ರ ನೋಯಲ್ ಮೈಕಲ್ ಸಲ್ದಾನ 2017ರಲ್ಲಿ ತನ್ನ ಮದುವೆಯ ಉದ್ದೇಶಕ್ಕೆ ಜಾಗ ಅಡವಿಟ್ಟು ಮೂರು ಲಕ್ಷ ಸಾಲ ಪಡೆಯಲು ಮುಂದಾಗಿದ್ದರು. ಈ ವೇಳೆ, ಪರಿಚಯವಾಗಿದ್ದ ಅಂಬ್ರೋಸ್ ಡಿಸೋಜ ಮತ್ತು ಶೇಕ್ ಅಬ್ದುಲ್ಲಾ ಎಂಬವರು ನೋಯಲ್ ಅವರಿಂದ ಜಾಗದ ದಾಖಲಾತಿ ಪಡೆದು ಸಾಲ ಮಾಡಿಕೊಡುತ್ತೇವೆಂದು ನಂಬಿಸಿ ತಾವೇ ಮಾಡಿಕೊಂಡಿದ್ದ ಗೋಲ್ಡನ್ ಎಂಟರ್ಪ್ರೈಸಸ್ ಹೆಸರಿನ ಬೇನಾಮಿ ಕಂಪನಿಯ ಹೆಸರಲ್ಲಿ ಬ್ಯಾಂಕಿನಿಂದ 36 ಲಕ್ಷ ಸಾಲ ಪಡೆದಿದ್ದರು. ಕೆನರಾ ಬ್ಯಾಂಕ್ ನೆಲ್ಲಿಕಾಯಿ ರಸ್ತೆಯ ಶಾಖೆಯಿಂದ 2017ರಲ್ಲಿ ಸಾಲ ಪಡೆಯಲಾಗಿತ್ತು. ಈ ಪೈಕಿ 3.50 ಲಕ್ಷ ರೂ.ವನ್ನು ಗೋಲ್ಡನ್ ಎಂಟರ್ ಪ್ರೈಸಸ್ ಖಾತೆಯಿಂದಲೇ ನೋಯಲ್ ಅವರಿಗೆ ಪಾವತಿಸಲಾಗಿತ್ತು. ಒಂದು ವರ್ಷದ ನಂತರ, ನೋಯಲ್ ಅವರಿಗೆ 36 ಲಕ್ಷ ಸಾಲ ಪಡೆದಿರುವುದು ಮತ್ತು ಅದರ ಕಂತು ಪಾವತಿಸದೆ 40 ಲಕ್ಷ ಆಗಿರುವುದಾಗಿ ಬ್ಯಾಂಕಿನಿಂದ ನೋಟಿಸ್ ಬಂದಿತ್ತು. ಅದನ್ನು ನೋಡಿದಾಗಲೇ ತನ್ನ ಹೆಸರಲ್ಲಿ ಮೋಸ ಆಗಿರುವುದು ತಿಳಿದುಬಂದಿತ್ತು. ನೋಯಲ್ ದೂರಿನಂತೆ 2019ರಲ್ಲಿ ಬಂದರು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆನಂತರ, 25 ಲಕ್ಷಕ್ಕಿಂತ ಹೆಚ್ಚಿನ ಮೋಸ ಆಗಿದೆಯೆಂದು ಪ್ರಕರಣವನ್ನು ಸಿಇಎನ್ ಠಾಣೆಗೆ ವರ್ಗಾಯಿಸಲಾಗಿತ್ತು.
ತಪ್ಪು ಒಪ್ಪಿಕೊಂಡಿದ್ದಾಗಿ ಕೋರ್ಟಿಗೆ ವರದಿ
ಸಿಇಎನ್ ಠಾಣೆಯ ಎಸ್ಐ ಸತೀಶ್ 2021ರ ಜನವರಿ 22ರಂದು ಪ್ರಕರಣದಲ್ಲಿ ಆರೋಪಿಗಳ ಜಾಮೀನು ರದ್ದುಗೊಳಿಸಲು ಕೋರ್ಟಿಗೆ ವರದಿ ಸಲ್ಲಿಸಿದ್ದರು. ಅದರಲ್ಲಿ ಅಂಬ್ರೋಸ್ ಡಿಸೋಜ ಮತ್ತು ಶೇಕ್ ಅಬ್ದುಲ್ಲಾ ಸಾರ್ವಜನಿಕರಿಗೆ ಮೋಸಗೊಳಿಸಿ, ನಂಬಿಕೆ ದ್ರೋಹ ಎಸಗುವ Habitual ಆರೋಪಿಗಳಾಗಿದ್ದು, ಇದೇ ಮಾದರಿಯ ಬೇರೆ ಪ್ರಕರಣದಲ್ಲಿಯೂ ಆರೋಪಿಗಳಿದ್ದಾರೆ. ದೂರುದಾರರಿಗೆ ತಿಳಿಯದಂತೆ 36 ಲಕ್ಷ ಮತ್ತು ಏಳು ಲಕ್ಷ ಸಾಲವನ್ನು ಗೋಲ್ಡನ್ ಎಂಟರ್ ಪ್ರೈಸಸ್ ಹೆಸರಲ್ಲಿ ಪಡೆದು ಅದನ್ನು ತಾವೇ ಬಳಸಿಕೊಂಡಿದ್ದಾರೆ. ತಪ್ಪೆಸಗಿದ್ದನ್ನು ತನಿಖೆ ಸಂದರ್ಭದಲ್ಲಿ ಆರೋಪಿಗಳು ಒಪ್ಪಿಕೊಂಡಿರುವುದಾಗಿ 2ನೇ ಹೆಚ್ಚುವರಿ ಸೀನಿಯರ್ ಸಿಜೆಎಂ ಕೋರ್ಟಿಗೆ ಎಸ್ಐ ಸತೀಶ್ ವರದಿ ಸಲ್ಲಿಸಿದ್ದರು. ಅದರಂತೆ, 2021ರ ಮಾರ್ಚ್ ನಲ್ಲಿ ಇಬ್ಬರು ಆರೋಪಿಗಳ ಜಾಮೀನನ್ನೂ ರದ್ದುಪಡಿಸಲಾಗಿತ್ತು.
ತನಿಖಾಧಿಕಾರಿ ಬದಲು, ಹಾದಿ ತಪ್ಪಿದ ತನಿಖೆ
ಪ್ರಕರಣ ಸಿಇಎನ್ ಠಾಣೆಯಲ್ಲಿ ಇರುವಾಗಲೇ 2021ರ ಜುಲೈ 10ರಂದು ತನಿಖಾಧಿಕಾರಿಯಾಗಿ ಕಂಕನಾಡಿ ಎಸ್ಐ ರಘು ನಾಯ್ಕ್ ಅವರನ್ನು ನೇಮಿಸಲಾಗಿತ್ತು. ಇವರು ತನಿಖೆ ಎತ್ತಿಕೊಂಡ ಬೆನ್ನಲ್ಲೇ ಪ್ರಕರಣವನ್ನು ಹಳ್ಳ ಹಿಡಿಸಲು ಮುಂದಾಗಿರುವುದು ದಾಖಲೆಗಳಲ್ಲಿ ಕಂಡುಬರುತ್ತದೆ. ಪದೇ ಪದೇ ಅರೆಸ್ಟ್ ವಾರೆಂಟ್ ಆಗುತ್ತಿದ್ದರೂ, ಆರೋಪಿಗಳನ್ನು ಬಂಧಿಸದೆ ಕಾಳಹರಣ ಮಾಡಿದ್ದರು. 2021ರ ಡಿ.28ರಂದು ಶೇಖ್ ಅಬ್ದುಲ್ಲಾನನ್ನು ಬಂಧಿಸಿದರೆ, ಪ್ರಕರಣದ ಕಿಂಗ್ ಪಿನ್ ಅಂಬ್ರೋಸ್ ಡಿಸೋಜ ವಿದೇಶಕ್ಕೆ ಪರಾರಿಯಾಗಲು ಅವಕಾಶ ನೀಡಿದ್ದಾರೆ. 2022ರ ಜನವರಿ 30ರಂದು ನ್ಯಾಯಾಲಯಕ್ಕೆ ವರದಿ ಸಲ್ಲಿಸಿ ತನಗೆ ಪಟ್ಟಣ ಪಂಚಾಯ್ತಿ ಚುನಾವಣಾ ಕರ್ತವ್ಯ ಇದ್ದುದರಿಂದ ಅಂಬ್ರೋಸ್ ಡಿಸೋಜ ಬಂಧನ ಸಾಧ್ಯವಾಗಿರಲಿಲ್ಲ. ಪ್ರಸ್ತುತ ಆತ ವಿದೇಶಕ್ಕೆ ಹಾರಿದ್ದಾಗಿ ಯಾವುದೇ ಮುಜುಗರ ಇಲ್ಲದೆ ಕೋರ್ಟಿಗೆ ವರದಿ ಹಾಕಿದ್ದಾರೆ. ಇದಲ್ಲದೆ, ಅದೇ ವರದಿಯಲ್ಲಿ ಸದ್ರಿ ಪ್ರಕರಣದಲ್ಲಿ ಆರೋಪಿಗಳ ವಿರುದ್ಧ ಪುಷ್ಟೀಕರಿಸಬಲ್ಲ ಸಾಕ್ಷ್ಯಗಳಿಲ್ಲ ಎಂದೂ ಕೋರ್ಟಿಗೆ ವರದಿ ಸಲ್ಲಿಸಿ ಬಿ ರಿಪೋರ್ಟ್ ಹಾಕುವ ಮುನ್ಸೂಚನೆ ನೀಡಿದ್ದರು.
ಅರ್ಜಿ ತುಂಬಿಸದೆಯೇ ಅಧಿಕಾರಿಗಳ ಲೋಪ
ಸದ್ರಿ ಪೋರ್ಜರಿ ಪ್ರಕರಣದಲ್ಲಿ ಅಡ್ಯಾರ್ ಪಂಚಾಯತಿನಿಂದ ಅಕ್ರಮವಾಗಿ 9-11 ನೀಡಿರುವುದನ್ನು ಪತ್ತೆಹಚ್ಚಿದ ಜಿಲ್ಲಾಧಿಕಾರಿ, ಅದನ್ನು ರದ್ದುಪಡಿಸಿ ಆದೇಶ ಮಾಡಿದ್ದಾರೆ. ನೋಯಲ್ ಅರ್ಜಿ ಹಾಕದೆಯೇ 9-11 ನೀಡಿದ್ದ ಅಡ್ಯಾರ್ ಪಂಚಾಯತ್ ಪಿಡಿಓ ವಿರುದ್ಧ ಪ್ರತ್ಯೇಕ ಎಫ್ಐಆರ್ ದಾಖಲಾಗಿದೆ. ಉಪ ನೋಂದಣಿ ಕಚೇರಿಯಲ್ಲೂ ಅಕ್ರಮ ಆಗಿರುವ ಬಗ್ಗೆ ಮತ್ತೊಂದು ಎಫ್ಐಆರ್ ಆಗಿದ್ದು, ಇವೆಲ್ಲ ನೋಯಲ್ ಹೆಸರಲ್ಲಿ ಆರೋಪಿಗಳು ಮೋಸ ಎಸಗಿರುವುದನ್ನು ಎತ್ತಿ ತೋರಿಸುತ್ತದೆ. ವಿಚಿತ್ರ ಎಂದರೆ, ಬ್ಯಾಂಕಿನವರು ಡಿಸಿ ಕೋರ್ಟಿಗೆ ಸಲ್ಲಿಸಿರುವ ಸಾಲದ ದಾಖಲಾತಿಯಲ್ಲಿ ಕಾಲಂಗಳನ್ನು ಭರ್ತಿ ಮಾಡದೇ ಹಾಗೆ ಉಳಿಸಿಕೊಂಡಿದ್ದು ದಾಖಲೆಯಲ್ಲಿ ಕಂಡುಬರುತ್ತದೆ. ಇದೇ ದಾಖಲೆಯನ್ನು ಡಿಆರ್ ಟಿ ಕೋರ್ಟಿಗೆ ಬ್ಯಾಂಕ್ ಸಲ್ಲಿಕೆ ಮಾಡಿದ್ದು, ಅದರಲ್ಲಿ ಕೆಲವು ಕಾಲಂಗಳನ್ನು ಹೆಚ್ಚುವರಿ ಭರ್ತಿ ಮಾಡಿ ನೋಟರಿ ಮಾಡಿರುವುದು ಕಂಡುಬರುತ್ತದೆ. ಇದರಿಂದ ಪ್ರಕರಣದಲ್ಲಿ ಬ್ಯಾಂಕಿನ ಅಧಿಕಾರಿಗಳು ಕೂಡ ಮೋಸದಲ್ಲಿ ಶಾಮೀಲಾಗಿದ್ದಾರೆಯೇ ಎನ್ನುವ ಗಂಭೀರ ಶಂಕೆ ಮೂಡುತ್ತದೆ. ಪೊಲೀಸರು ಮಾತ್ರ ಇನ್ನೂ ಬ್ಯಾಂಕಿನ ಅಧಿಕಾರಿಗಳನ್ನು ಪ್ರಕರಣದಲ್ಲಿ ಆರೋಪಿಯಾಗಿಸಿಲ್ಲ.
Bank Fraud case reported on December 15 by Headline Karnataka, two individuals allegedly committed fraud against an innocent farmer, raising serious concerns about police negligence in Mangalore. Despite a mountain of evidence supporting the case, it appears that the police are trying to dismiss the serious allegations as mere theatrics orchestrated by the thieves. Following the initial report, a comprehensive investigation was reportedly prepared, highlighting the fraudulent activities involving bank assets and the alleged collusion of officials. However, it seems that the police, in a stark turn of events, have begun to downplay their previous commitment to addressing the matter seriously, echoing the same old tunes in the investigation.
26-03-25 11:47 am
Bangalore Correspondent
Minister Rajanna, Honeytrap case: ಹನಿಟ್ರ್ಯಾಪ್...
25-03-25 08:37 pm
BJP, Recognition, DK Shivakumar, Muslim Reser...
25-03-25 11:25 am
ಲಕ್ಷ್ಮೇಶ್ವರ ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿ ಸುಟ್ಟಿದ...
24-03-25 11:04 pm
BJP, Phone Tapping, Karnataka, Ashok: ಹನಿಟ್ರ್...
24-03-25 10:42 pm
25-03-25 04:06 pm
HK News Desk
Justice Yashwant Varma: ಭಾರೀ ಪ್ರಮಾಣದ ನೋಟು ಸುಟ...
24-03-25 03:54 pm
Delhi High Court judge Varma: ಹೈಕೋರ್ಟ್ ಜಡ್ಜ್...
23-03-25 02:40 pm
15 ವರ್ಷದ ಹುಡುಗನಿಂದ ಗರ್ಭವತಿ ; ಹರೆಯದಲ್ಲಿ ಮಾಡಿದ...
22-03-25 09:50 pm
ದೆಹಲಿ ಹೈಕೋರ್ಟ್ ಜಡ್ಜ್ ಮನೆಯಲ್ಲಿ ಅಗಣಿತ ನಗದು ಪತ್ತ...
21-03-25 04:46 pm
26-03-25 11:16 am
Mangalore Correspondent
UT Khader, Mangalore: ಕಠಿಣ ಕ್ರಮ ತೆಗೆದುಕೊಂಡರೆ...
24-03-25 03:56 pm
Mangalore, Swimming pool, Death, Madikeri: ಚಿ...
24-03-25 01:35 pm
Mangalore Jyotiraj, Kotiraj: ಕಾರಿಂಜೇಶ್ವರ ಬೆಟ...
23-03-25 10:44 pm
MP Govinda Karajola, Mangalore, Honey Trap: ಸ...
22-03-25 06:48 pm
25-03-25 10:09 pm
Giridhar Shetty, Mangalore
Kiran Kumar Guruji, Case, Bangalore: ವಾಮಾಚಾರ...
25-03-25 06:09 pm
Bangalore Crime, Murder, Loknath Singh: ರಿಯಲ್...
25-03-25 04:40 pm
Gokak Society Fraud Case, Sadashiv Hiremath S...
23-03-25 03:56 pm
Mangalore Fraud, Online, Telagram: ಟೆಲಿಗ್ರಾಂನ...
22-03-25 10:51 pm